Homeಮುಖಪುಟದೈಹಿಕ ತಪಸ್ಸು, ಮನದ ಸಾಧನೆ ಹಾಗೂ ವೈಚಾರಿಕ ಮಂಥನದ ಯಾತ್ರೆ

ದೈಹಿಕ ತಪಸ್ಸು, ಮನದ ಸಾಧನೆ ಹಾಗೂ ವೈಚಾರಿಕ ಮಂಥನದ ಯಾತ್ರೆ

- Advertisement -
- Advertisement -

ಐದು ತಿಂಗಳವರೆಗೆ ದೇಶದ ರಸ್ತೆಗಳಲ್ಲಿ 3700 ಕಿಲೊಮೀಟರ್ ಅಳೆದು ಈ ಭಾರತ್ ಜೋಡೊ ಯಾತ್ರೆ ಸಾಧಿಸುವುದಾದರೂ ಏನು? 7ನೆಯ ಸೆಪ್ಟೆಂಬರ್‌ನಂದು ಕನ್ಯಾಕುಮಾರಿಯಿಂದ ಈ ಯಾತ್ರೆ ಶುರುವಾದಾಗ ಈ ಪ್ರಶ್ನೆ ಎಲ್ಲಾ ಯಾತ್ರಿಗಳ ಎದುರಿಗೆ ಕಾಣಿಸಿಕೊಂಡಿತ್ತು. ಆದರೆ ಗಾಂಧೀಜಿಯ ಪುಣ್ಯತಿಥಿಯ ದಿನದಂದು, ಜೋರಾಗಿ ಸುರಿಯುತ್ತಿರುವ ಹಿಮದ ನಡುವೆಯೇ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯವಾದಾಗ ಅದಕ್ಕೆ ಉತ್ತರ ಸ್ಪಷ್ಟವಾಗಿತ್ತು.

ನಮ್ಮ ಪರಂಪರೆಯಲ್ಲಿ ಯಾವುದೇ ಯಾತ್ರೆ ಕೇವಲ ರಸ್ತೆ ಅಳೆಯಲು ಅಥವಾ ಪಿಕ್ನಿಕ್‌ಗಾಗಿ ಅಥವಾ ಕಸರತ್ತು ಮಾಡಲು ಆಗಿರುವುದಿಲ್ಲ. ಗೌತಮ ಬುದ್ಧನಿಂದ ಹಿಡಿದು ಮಹಾತ್ಮ ಗಾಂಧಿಯ ತನಕ ಎಲ್ಲಾ ಯಾತ್ರೆಗಳು ಶರೀರವನ್ನು ದಂಡಿಸುವುದಕ್ಕಿಂತ ಹೆಚ್ಚಾಗಿ ವಿಚಾರದ ಹಾಗೂ ಮಾನಸ ಯಾತ್ರೆಗಳಾಗಿವೆ. ಶರೀರದ ಚಲನೆಯು ದೇಶ ಮತ್ತು ಸಮಾಜವನ್ನು ಅಲುಗಾಡಿಸುವ ಮಾಧ್ಯಮವಾಗಿರುತ್ತದೆ. ಭಾರತ ಜೋಡೊ ಯಾತ್ರೆಯ ಉದ್ದೇಶವೂ ಇದೇ ಆಗಿತ್ತು. ಇದು ಶಾರೀರಿಕ ತಪಸ್ಸಿನ ಮುಖಾಂತರ ವೈಚಾರಿಕ ಮಂಥನ ಹಾಗೂ ಮನಸ್ಸಿನ ಸಾಧನದ ಯಾತ್ರೆಯಾಗಿದೆ.

ಈ ಯಾತ್ರೆಯ ಶಾರೀರಿಕ ತಪಸ್ಸಿನ ಬಗೆ ಅರ್ಥಮಾಡಿಕೊಳ್ಳಲು ದೇಶಕ್ಕೆ ಇನ್ನೂ ಸಮಯ ಹಿಡಿಯಲಿದೆ. ಜನತೆಗೆ ರಾಹುಲ್ ಗಾಂಧಿಯ ಟಿ-ಶರ್ಟ್ ಅಂತೂ ಕಾಣಿಸಿತು, ಆದರೆ ಈ ಸಂಪೂರ್ಣ ಪರಿಶ್ರಮದ ಹಿಂದೆ ಲಕ್ಷಾಂತರ ಜನರ ತಪಸ್ಸು ಇನ್ನೂ ಕಣ್ಣಿಗೆ ಬಿದ್ದಿಲ್ಲ. ಪ್ರತಿ ದಿನ ಸುಮಾರು 20ರಿಂದ 25 ಕಿಲೋಮೀಟರ್ ಕಾಲ್ನಡಿಗೆ, ಎಲ್ಲಾ ರೀತಿಯ ಹವಾಮಾನವನ್ನು ಎದುರಿಸುವುದು ಹಾಗೂ ಎಲ್ಲಾ ರೀತಿಯ ಮನಸ್ಥಿತಿ ಮತ್ತು ಸನ್ನಿವೇಶಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು, ಇವೆಲ್ಲವೂ ಸಣ್ಣ ವಿಷಯಗಳೇನಲ್ಲ. ಈ ಯಾತ್ರೆಯು ದೇಶದ ಎಲ್ಲಾ ರೀತಿಯ ಪ್ರದೇಶಗಳನ್ನು ಹಾಗೂ ಎಲ್ಲಾ ರೀತಿಯ ಹವಾಮಾನಗಳನ್ನು ನೋಡಿದೆ. ಸುಡು ಬಿಸಿಲು, ಮೈಕೊರೆಯುವ ಚಳಿ, ಧಾರಾಕಾರ ಮಳೆ ಹಾಗೂ ಜೋರಾದ ಹಿಮಪಾತ. ಈ ಯಾತ್ರೆಯ ಒಬ್ಬ ಸಹಯಾತ್ರಿಯಾಗಿ, ಪ್ರತಿಯೊಬ್ಬ ಯಾತ್ರಿಯ ಪಾದಗಳಲ್ಲಿ ಗುಳ್ಳೆಗಳು, ಎಲ್ಲಾ ರೀತಿಯ ರೋಗಗಳು, ಎಲುಬು ಕೊರೆಯುವ ಚಳಿಯ ನಡುವೆ ಉರುಳಿಹೋದ ಟೆಂಟ್‌ಗಳು- ಇವೆಲ್ಲವಕ್ಕೂ ನಾನು ಖುದ್ದು ಸಾಕ್ಷಿಯಾಗಿದ್ದೇನೆ. ಈ ದೈಹಿಕ ತಪಸ್ಸು, ಯಾತ್ರೆಯ ಸಂದೇಶವನ್ನು ಪ್ರಾಮಾಣಿಕವಾಗಿಸಿದೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಕಾಣಿಸದೇ ಇರುವ ಶ್ರದ್ಧೆಯನ್ನು ಸಾಮಾನ್ಯ ಜನರ ಮನಸ್ಸಿನಲ್ಲಿ ತುಂಬಿದೆ. ಪ್ರತಿದಿನ ಕಷ್ಟ ಸಹಿಸುವ ರೂಢಿಯು ಸ್ವತಃ ಯಾತ್ರಿಗಳನ್ನೂ ಒಳಗಿನಿಂದ ಬದಲಿಸಿದೆ, ಅವರನ್ನು ನಿಜವಾದ ಅರ್ಥದಲ್ಲಿ ಭಾರತ್ ಜೋಡೊದ ಸಂದೇಶವಾಹಕರನ್ನಾಗಿಸಿದೆ.

ಕಾಲ್ನಡಿಗೆಯ ಈ ಯಾತ್ರೆಯ ಜೊತೆಜೊತೆಗೇ ಒಂದು ವಿಚಾರದ ಯಾತ್ರೆಯೂ ನಡೆಯುತ್ತಲಿತ್ತು. ಸ್ವತಃ ರಾಹುಲ್ ಗಾಂಧಿ ಈ ವೈಚಾರಿಕ ಮಂಥನದ ಪ್ರಮುಖ ವಾಹಕ ಹಾಗೂ ಉದ್ಘೋಷಕರಾದರು. “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಬಂದಿದ್ದೇನೆ”- ಈ ಮಾತಂತೂ ಒಂದು ಸಿನೆಮಾ ಡಯಲಾಗ್‌ನಷ್ಟು ಜನಪ್ರಿಯವಾಗಿದೆ. ಶ್ರೀನಗರದಲ್ಲಿ ಅವರ ಸಮಾರೋಪ ಮಾತುಗಳು ಈ ಡಯಲಾಗ್‌ನ ತಾತ್ವಿಕತೆಯನ್ನು ಬಹಿರಂಗಪಡಿಸುತ್ತದೆ. ಇದನ್ನು ಗಂಗಾ-ಜಮುನಾ ಶಿಷ್ಟಾಚಾರ ಅಂದುಕೊಳ್ಳಿ ಅಥವಾ ಕಶ್ಮೀರಿಯತ್ ಅನ್ನಿ. ಬೇಕಾದರೆ ಸಂತರ ಪರಂಪರೆಯಿಂದ ನೋಡಿ ಕಲಿತುಕೊಳ್ಳಿ ಅಥವಾ ಮಹಾತ್ಮಾ ಗಾಂಧಿಯ ಪರಂಪರೆಯಿಂದಾಗಲೂ- ನಮ್ಮ ಸಾಂಸ್ಕೃತಿಕ ಪರಂಪರೆ ಜೋಡಿಸುವುದಾಗಿದೆಯೇ ಹೊರತು ಒಡೆಯುವುದಲ್ಲ. ನಮ್ಮ ಸಂವಿಧಾನದ ಪ್ರಸ್ತಾವನೆಯ ’ಬಂಧುತ್ವ’ವು ಇದೇ ತತ್ವವನ್ನು ಬರಹರೂಪದಲ್ಲಿ ಇಳಿಸಿದೆ. ತನ್ನ ಅಜ್ಜಿ ಮತ್ತು ತಂದೆಯ ಹತ್ಯೆ ಆದಾಗ ಬಂದ ದೂರವಾಣಿ ಕರೆಗಳನ್ನು ಉಲ್ಲೇಖಿಸುತ್ತ ರಾಹುಲ್ ಗಾಂಧಿ ಮಾರ್ಮಿಕವಾಗಿ ಈ ಯಾತ್ರೆಯ ಉದ್ದೇಶವನ್ನು ತಿಳಿಸಿದ್ದಾರೆ: ಇನ್ನು ಮುಂದೆ ಯಾವುದೇ ಮಗುವಿಗೆ ಇಂತಹ ದೂರವಾಣಿ ಕರೆಗಳು ಬರದೇ ಇರಲಿ ಎಂಬುದಕ್ಕೇ ಈ ಯಾತ್ರೆ. ದ್ವೇಷ, ಹಿಂಸೆ ಹಾಗೂ ಆತಂಕದ ರಾಜಕೀಯದ ವಿರುದ್ಧದ ಆಳವಾದ ಹೇಳಿಕೆ ಇದಾಗಿದೆ.

ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ?: ಪಾದಯಾತ್ರೆಗಳ ಇತಿಹಾಸ ಏನು ಹೇಳುತ್ತದೆ?

ಸ್ನೇಹದ ಈ ಭಾವನೆಯ ಜೊತೆಜೊತೆಗೆ ಭಾರತ ಜೋಡೊ ಯಾತ್ರೆಯು ಸಮಾನತೆಯ ತತ್ವವನ್ನೂ ಪದೇ ಪದೇ ಸ್ಪಷ್ಟಪಡಿಸಿದೆ. ದೀರ್ಘ ಸಮಯದ ನಂತರ ದೇಶದಲ್ಲಿ ಹೆಚ್ಚುತ್ತಿರುವ ವಿಷಮತೆಯ ಬಗ್ಗೆ ರಾಜಕೀಯ ಮುಖ್ಯವಾಹಿನಿಯಲ್ಲಿ ಕಾಳಜಿ ವ್ಯಕ್ತಪಡಿಸಲಾಗಿದೆ. ಬಹುಶಃ ಮೊದಲ ಬಾರಿ ಒಂದು ದೊಡ್ಡ ಪಕ್ಷದ ನಾಯಕನೊಬ್ಬ ಅದಾನಿ ಹಾಗೂ ಅಂಬಾನಿಯ ಹೆಸರನ್ನು ಎತ್ತುವ ಧೈರ್ಯ ತೋರಿಸಿದ್ದಾರೆ. ದಲಿತ, ಆದಿವಾಸಿ ಹಾಗೂ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾಳಜಿಯು ತೋರಿಕೆಯ ಮಾತು ಅಥವಾ ಜುಮ್ಲೆಬಾಜಿಯನ್ನು ಮೀರಿ ಕೆಲವು ಗಟ್ಟಿಯಾದ ಕಾಂಕ್ರೀಟ್ ಪ್ರಸ್ತಾಪಗಳಲ್ಲಿ ವ್ಯಕ್ತಗೊಂಡಿದೆ. ಮಹಿಳೆಯರ ಮತ್ತು ಲೈಂಗಿಕ ಭೇದಭಾವದ ಬಲಿಪಶುಗಳಾದ ಎಲ್ಲಾ ವರ್ಗಗಳ ನೋವು ಪ್ರತಿಯೊಂದು ಹೆಜ್ಜೆಯಲ್ಲಿ ದಾಖಲಿಸಲಾಗಿದೆ. ನೋವಿನಿಂದ ನೋವಿನ ಸಂಬಂಧ ಬೆಸೆದ ಈ ವಿಚಾರ ಯಾತ್ರೆಯು ಒಂದು ವೈಚಾರಿಕ ದಿಕ್ಕು ನೀಡುವ ಕೆಲಸವನ್ನು ಮಾಡಿದೆ. ಈ ದಿಕ್ಕು ಅತ್ಯಂತ ಹೊಸದು ಅಥವಾ ವಿಶಿಷ್ಟ ಅಂತೇನೂ ಅಲ್ಲ. ಇದು ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಸ್ವಧರ್ಮಕ್ಕೆ ಒಂದು ಹೊಸ ಸಂದರ್ಭ ತೋರಿಸಿದೆ.

ದೇಹ ಮತ್ತು ವಿಚಾರದ ಯಾತ್ರೆಯಿಂದಲೂ ಮುಂದೆ ಹೋಗಿ ಭಾರತ ಜೋಡೊ ಯಾತ್ರೆಯು ಆಧ್ಯಾತ್ಮಿಕ ಯಾತ್ರೆಯೂ ಆಗಿತ್ತು. ಪಾದಯಾತ್ರೆಯು ಮನಸ್ಸಿನ ಸಾಧನೆಯ ಅತ್ಯುತ್ತಮ ಸಹಜ ಮಾರ್ಗವಾಗಿದೆ. ಈ ಯಾತ್ರೆಯು ದೇಶದಲ್ಲಿ ಆವರಿಸಿದ ನಿರಾಸೆ, ಅಸಹಾಯಕತೆ ಮತ್ತು ಒಬ್ಬಂಟಿತನದ ಭಾವನೆಯನ್ನು ಒಡೆದುಹಾಕಿದೆ. ಸುಳ್ಳು ಮತ್ತು ದ್ವೇಷದ ವಿರುದ್ಧ ಶಸ್ತ್ರತ್ಯಾಗ ಮಾಡಿದ ನಾಗರಿಕರಿಗೆ ಇನ್ನೊಮ್ಮೆ ಧೈರ್ಯ ತುಂಬಿದೆ. “ಹೆದರಬೇಡಿ” ಎಂಬ ಸರಳ ಮಂತ್ರವು ಕೋಟ್ಯಂತರ ಭಾರತೀಯರ ಮನದಲ್ಲಿ ಶಕ್ತಿ ತುಂಬಿದೆ. ಕಾಶ್ಮೀರ ಕಣಿವೆಯಲ್ಲಿ ಸಿಕ್ಕ ಅಪಾರ ಸ್ನೇಹವು, ಈ ದೇಶದಲ್ಲಿ ಹೊಸ ಭರವಸೆಯ ಸಂಚಲನವನ್ನು ಸಾಧ್ಯವಾಗಿಸಿತು ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಇದು ಕೇವಲ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷಕ್ಕಲ್ಲದೇ ಭಾರತಕ್ಕೂ ಒಂದು ಒಳ್ಳೆಯ ಸುದ್ದಿ. ನಂಬಿಕೆ, ನಿರೀಕ್ಷೆಯ ಮೇಲೆಯೇ ಈ ಜಗತ್ತು ಉಳಿದುಕೊಂಡಿದೆ ಎನ್ನಲಾಗುತ್ತದೆ; ಯಾವುದೇ ಸಮಾಜಕ್ಕೆ ಈ ನಂಬಿಕೆ ಎಲ್ಲಕ್ಕಿಂತ ದೊಡ್ಡ ಬಂಡವಾಳ.

ನಂಬಿಕೆಯ/ಆಸೆಯ ದೀಪ ಬೆಳಗಿಸುವುದು ದೊಡ್ಡ ಕೆಲಸವೇ ಸರಿ. ಆದರೆ ಅದಕ್ಕಿಂತ ದೊಡ್ಡ ಕೆಲಸ ಆ ನಂಬಿಕೆಯನ್ನು ಜೀವಂತವಾಗಿಟ್ಟುಕೊಳ್ಳುವುದು. ಈ ನಿಟ್ಟಿನಲ್ಲಿ ಭಾರತ ಜೋಡೊದ ಈ ಅಭೂತಪೂರ್ವ ಯಶಸ್ಸು ಈ ಯಾತ್ರೆಯೊಂದಿಗೆ ಸಂಬಂಧಿಸಿದ ಪ್ರತಿಯೊಬ್ಬ ಭಾರತೀಯರ ಹೆಗಲಿನ ಮೇಲೆ ದೊಡ್ಡ ಜವಾಬ್ದಾರಿಯನ್ನು ಹಾಕಿದೆ. ಈ ಯಾತ್ರೆಯು ಬಂಜರು ಭೂಮಿಯಲ್ಲಿ ನೇಗಿಲನ್ನು ಎಳೆದಿದೆ; ಆದರೆ ಈಗ ಜವಾಬ್ದಾರಿ ಇರುವುದು ಇದರಲ್ಲಿ ಬೀಜ ಬಿತ್ತುವುದು ಹಾಗೂ ನೀರು ಗೊಬ್ಬರ ಎರೆಯುವುದು. ದೇಶದ ಪ್ರತಿಯೊಂದು ಬಾಗಿಲ ಮೇಲೆ ಈ ವಿಚಾರ ತಟ್ಟುವವರೆಗೆ, ದೇಶದ ಪ್ರತಿಯೊಂದು ಹೃದಯವನ್ನು ಮುಟ್ಟುವ ತನಕ ಈ ಯಾತ್ರೆಯ ಉದ್ದೇಶ ಸಫಲವಾಗುವುದಿಲ್ಲ. ಯಾವತ್ತು ಪ್ರತಿಯೊಬ್ಬ ಭಾರತೀಯ ಸುಳ್ಳನ್ನು ಸುಳ್ಳು ಎಂದು ಹೇಳಲು ಕಲಿಯುವಳೋ/ನೋ ಹಾಗೂ ದ್ವೇಷವನ್ನು ತಿರಸ್ಕರಿಸುತ್ತಾಳೋ/ನೋ ಅಂದು ಭಾರತ ಜೋಡೊ ಯಾತ್ರೆ ಸಫಲವಾಗುವುದು. ಈ ನಿಟ್ಟಿನಲ್ಲಿ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯಗೊಂಡಿಲ್ಲ, ಬದಲಿಗೆ ನಿಜವಾದ ಅರ್ಥದಲ್ಲಿ ಭಾರತವನ್ನು ತನ್ನ ಸ್ವಧರ್ಮದೊಂದಿಗೆ ಪುನಃ ಜೋಡಿಸುವ ಯಾತ್ರೆಯನ್ನು ಪ್ರಾರಂಭಿಸಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

"ಒಳಮೀಸಲಾತಿ ಇಲ್ಲದೆ ಒಂದೇಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ" ಎಂದು ಆಹಾರ...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...