Homeಅಂಕಣಗಳುಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

ಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

- Advertisement -
- Advertisement -

ನಮ್ಮ ಸಂತೆಶಿವರದ ಲಿಂಗಣ್ಣಯ್ಯ ಭೈರಪ್ಪ ಗೊತ್ತೆ ನಿಮಗೆ? ಅದೆ ಹಿಂದೂ ಧರ್ಮದ ಪುರೋಹಿತಶಾಹಿ ಪುನರುತ್ಥಾನದ ಕಾದಂಬರಿ ಕಾರ್ಖಾನೆ. ಈ ಕಾರ್ಖಾನೆ ಈಗ ಸ್ಥಗಿತಗೊಂಡಿದೆ ಏಕೆಂದರೆ ಅವರ ತೊಂಬತ್ತೆರೆಡು ವರ್ಷದಲ್ಲಿ ಸುಳ್ಳು ಸೃಜನಶೀಲತೆ ಕಷ್ಟವಾದ್ದರಿಂದ; ಬರವಣಿಗೆ ಬತ್ತಿ ಹೋಗಿದೆ. ಇದನ್ನು ಗ್ರಹಿಸಿದ ಮೋದಿ ಗವುರಮೆಂಟು ಭೈರಪ್ಪನವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟಿತು. ಜ್ಞಾನಪೀಠ ಸಿಗಲಿಲ್ಲ ಎಂದು ಕೊರಗುತ್ತಾ ವೃದ್ಧಾಪ್ಯ ಸಮೀಪಿಸಿದ ಭೈರಪ್ಪ ಈ ಸಮಯದಲ್ಲಿ ಧನಕನಕದ ಪ್ರಶಸ್ತಿಯನ್ನೇ ಎಡವಿಬಿದ್ದಂತೆ ಪದ್ಮಭೂಷಣ ದೊರೆತಿದೆ. ಈ ಸುದ್ದಿ ಕೇಳಿ ಬವಳಿ ಬಂದಂತಾದ ಭೈರಪ್ಪ ಈ ಪ್ರಶಸ್ತಿ ಕೊಟ್ಟ ಮೋದಿ 2024ರಲ್ಲಿ ಗೆದ್ದು ಪ್ರಧಾನಿಯಾಗಲಿ ಮತ್ತೆ 2029ರಲ್ಲೂ ಗೆದ್ದು ಪ್ರಧಾನಿಯಾಗಲಿ, ದುರ್ದೈವದಿಂದ ನಾನು ಅಲ್ಲಿಯವರೆಗೂ ಇರಲಾಗುವುದಿಲ್ಲ, ಆದರೂ ಅದೇನೂ ಬಹಳ ದೂರದ ಸಮಯವಲ್ಲ, ಕೇವಲ 8 ವರ್ಷ ಎಂದಿಲ್ಲವಲ್ಲ. ಮೋದಿ ಪರ ಇಂತಹ ವಕಾಲತ್ತು ವಹಿಸಿದ ಭೈರಪ್ಪ ಯಾರಾದರೂ ತಪ್ಪು ತಿಳಿದಾರೆಂದು ನಾನು ಯಾವ ಪಕ್ಷದ ಪಕ್ಷಪಾತಿಯಲ್ಲ, ಮೋದಿ ಭಕ್ತ ಅಷ್ಟೇ; ಇಂತಹ ಪ್ರಧಾನಿ ಈವರೆಗೆ ಬಂದಿರಲಿಲ್ಲ ಎಂದು ತಮ್ಮ ಅಜ್ಞಾನವನ್ನ ಅನಾವರಣ ಮಾಡಿದರಲ್ಲಾ. ಅಜ್ಞಾನ ಏಕೆಂದರೆ ನೆಹರೂ ನಂತರ ಈ ದೇಶದ ಪ್ರಧಾನಿಯಾಗಿದ್ದ ಲಾಲ್‌ಬಹದ್ದೂರ್ ಶಾಸ್ತ್ರಿ ನಿಧನರಾದಾಗ ಶಾಸ್ತ್ರಿ ಕುಟುಂಬ ಬಡತನದಲ್ಲಿತ್ತು. ಅವರಿಗೆ ಏನಾದರೂ ಸಹಾಯ ಮಾಡಬೇಕೆಂಬ ಚರ್ಚೆ ಅಂದಿನ ಸಂಸತ್ತಿನಲ್ಲಿ ನಡೆದಿತ್ತು. ಇದು ಭೈರಪ್ಪನವರ ಮತಾಂಧ ಮೆದುಳಿಗೆ ಹೊಳೆಯದ ಸಂಗತಿಯಂತಲ್ಲಾ, ಥೂತ್ತೇರಿ.

*****

ಸಂತೆಶಿವರ ಎಂಬ ಹಳ್ಳಿಯಲ್ಲಿ ಒಕ್ಕಲಿಗರು ಮತ್ತು ಕುರುಬರ ಮನೆಗಳ ನಡುವೆ ಇದ್ದು ಅವರುಗಳ ಸಹಾಯದಿಂದ ಮೇಲೆ ಬಂದ ಭೈರಪ್ಪ ತನ್ನನ್ನು ಸಾಕಿ ಸಲಹಿದ ಈ ಜನರ ಬಗ್ಗೆ ಎಂದೂ ಮಾತನಾಡದೆ ಶ್ರಮಿಸಿದ್ದೆಲ್ಲಾ ತಮ್ಮ ಕೋಮಿನ ಬ್ರಾಹ್ಮಣರ ಉದ್ಧಾರಕ್ಕೆ ಮತ್ತು ಸಂಘ ಪರಿವಾರದ ಏಳ್ಗೆಗೆ. ಇನ್ನೊಂದು ಐತಿಹಾಸಿಕವಾದ ಸತ್ಯ ಯಾವುದೆಂದರೆ, ನಮ್ಮ ನೆಲದ ಯಾವ ಜಾತಿಗೇ ಆಗಲಿ ಭೈರಪ್ಪನವರ ಪರಿವಾರ ಎಂದೂ ಅಣ್ಣತಮ್ಮಂದಿರಾಗಿ ನಡೆದುಕೊಂಡಿಲ್ಲ, ಆ ಭಾವನೆಯೂ ಅವರಿಗೆ ಬರುವುದಿಲ್ಲ. ಹಾಗಾಗಿ ಸಂತೆಶಿವರದ ಜನಗಳೆಂದೂ ಭೈರಪ್ಪನವರಿಗೆ ಅಣ್ಣ ತಮ್ಮಂದಿರಾಗಿ ಗೋಚರವಾಗಲಿಲ್ಲ. ಬದಲಿಗೆ ಮೈಸೂರಲ್ಲಿ ಬೀಡು

ಭೈರಪ್ಪ

ಬಿಟ್ಟಿದ್ದ ಬ್ರಾಹ್ಮಣ ಸಮುದಾಯದವರಿಗೆ ಬಂಧುವಾದರು; ಅದ್ದರಿಂದ ದೈತ್ಯ ಬರಹಗಾರನಾದರೂ ಮಾನವತಾವಾದಿಯಾಗಲಿಲ್ಲ. ಇನ್ನು ಭೈರಪ್ಪನವರ ಬಾಯಲ್ಲಿ ಮೋದಿ ಜಪ ಆರಂಭವಾಗಿರುವಾಗಲೇ ಬಿಬಿಸಿ ಗುಜರಾತ್ ಗಲಭೆಗೆ ಸಂಬಂಧಿಸಿದ ಸಾಕ್ಷಚಿತ್ರ ಬಿಡುಗಡೆ ಮಾಡಿಬಿಟ್ಟಿದ್ದಾರಲ್ಲಾ. ಭೈರಪ್ಪನವರ ಉತ್ತರಕಾಂಡದ ಮಾತುಗಳನ್ನೇ ಜೋರು ದನಿಯಲ್ಲಿ ಮಾತನಾಡುತ್ತಿರುವ ಭಗವಾನ್ ಮತ್ತೆ ’ರಾಮ ದೇವರಲ್ಲ ನರಮನುಷ್ಯ’ ಇತ್ಯಾದಿ ಮಾತನಾಡಿ ಮಾಧ್ಯಮದ ಮೂರ್ಖರು ಮತ್ತು ಮತಾಂಧರಿಂದ ಉಗ್ರ ಟೀಕೆಗೆ ಒಳಗಾಗಿದ್ದಾರೆ. ಈ ಭಗವಾನ್ ತಮ್ಮ ಅಭಿಪ್ರಾಯ ಅದುಮಿಟ್ಟುಕೊಂಡು ಭೈರಪ್ಪ ಬರೆದ ಉತ್ತರಕಾಂಡ ಓದಲು ಹೇಳಿದರೆ ಎಷ್ಟು ಒಳ್ಳೆಯದಲ್ಲವೆ ಎಂಬುದು ಬುದ್ಧಿಜೀವಿಗಳ ಬುದ್ಧಿವಾದವಾಗಿದೆಯಲ್ಲಾ, ಥೂತ್ತೇರಿ.

*****

ಇತ್ತ ಬಿಜೆಪಿ ರಾಜಕಾರಣದ ಸಂಗತಿಗಳು ಶಾನೆ ದುಃಖಕರವಾಗಿವೆಯಲ್ಲಾ. ಆಸ್ತಿ ಮಾಡಲೆಂದೇ ಹೋರಾಟದ ರಾಜಕಾರಣ ಮಾಡುತ್ತಾ ಬಂದು, ಮಾರಿಕೊಂಡ ಮಾಧ್ಯಮದವರಿಂದ ರಾಜಾಹುಲಿ ಬಿರುದು ಪಡೆದ ಎಡೂರಪ್ಪನವರು ತಮ್ಮ ನಿಲುಗಡೆಯ ನಿಲ್ದಾಣವನ್ನು ಘೋಷಣೆ ಮಾಡಿದ್ದಾರೆ. ಎಡೂರಪ್ಪನನ್ನು ಇಳಿಸಲು ಸಾಕಷ್ಟು ಟೀಕೆ ಸಂಗ್ರಹ ಮಾಡಿಕೊಳ್ಳಲೆಂದೇ ನೇಮಿಸಿದ್ದ ಬಸವನಗೌಡ ಪಾಟೀಲರನ್ನು ಕರೆಸಿಕೊಂಡ ಹೈಕಮಾಂಡು, “ಅಪ್ನಾ ಎಡೂರಪ್ಪಾಕ ಟೀಕೆ ಬಂದ್ ಕರೊ ಬೈಯ್ಯಾ” ಎಂದು ಹೇಳಿ ಕಳಿಸಿರುವುದರಿಂದ ಯತ್ನಾಳ್ ಮುಂದೆ ಯಾರನ್ನು ಟೀಕಿಸಬೇಕೆಂದು ಚಿಂತಿಸುತ್ತಿರುವಾಗಲೇ, ಎಡೂರಪ್ಪ ನನಗೀಗ 80ವರ್ಷ, ಹಾಗೆಂದು ಮನೆಯಲ್ಲಿ ಕೂರಲಾಗುವುದಿಲ್ಲ, ಹಾಗಾಗಿ ಯಾವುದೇ ಸಭೆ ಸಮಾರಂಭ ಇರಲಿ ಅಲ್ಲಿಗೆ ಹೋಗಿ ಬೊಮ್ಮಾಯಿ ಜೊತೆ ನಿಂತುಕೊಳ್ಳುತ್ತೇನೆ ಎಂದಿದ್ದಾರಲ್ಲಾ. ಇದರಿಂದ ಒಳಗೊಳಗೇ ಮುಜುಗರಗೊಂಡಿರುವ ಬೊಮ್ಮಾಯಿ, ತಾನೆ ಮುಂದಾಳತ್ವ ವಹಿಸಲು ಚಿಂತಿಸುತ್ತಿದ್ದಾಗಲೇ, ಎಡೂರಪ್ಪ ಮುಂದಿನ ಚುನಾವಣೆಗೆ 140 ಸೀಟು ಗೆಲ್ಲಿಸುತ್ತೇನೆ ಎಂದುಬಿಟ್ಟಿದ್ದಾರಲ್ಲಾ. ಹಾಗೆ ನೋಡಿದರೆ ಮುಖ್ಯಮಂತ್ರಿಯೊಬ್ಬ ಆ ಪದವಿಯಿಂದ ಕೆಳಗಿಳಿದ ಮೇಲೆ ಹಾಲಿ ಮುಖ್ಯಮಂತ್ರಿ ಜೊತೆ ಕಾಣಿಸಿಕೊಂಡು ತಿರುಗುತ್ತಿರುವ ದಾಖಲೆ ಎಡೂರಪ್ಪನವರಿಗೆ ಮಾತ್ರ ಸೇರುವಂತದ್ದು. ಅಲ್ಲದೆ ಎಡೂರಪ್ಪನವರ ಜೋಳಿಗೆಯಲ್ಲಿ ಹಲವಾರು ಅಳಿಸಲಾಗದ ದಾಖಲೆಗಳಿವೆ; ಅವುಗಳನ್ನ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಆ ವಿಷಯದಲ್ಲವರು ಮಾಧ್ಯಮದವರು ಕೊಟ್ಟ ರಾಜಾಹುಲಿ ಬಿರುದಿಗೆ ಯೋಗ್ಯರಂತಲ್ಲಾ, ಥೂತ್ತೇರಿ.

****

ಇದನ್ನೂ ಓದಿ: ಎರಡು ದುಃಖದ ಸಂಗತಿ ಎದುರಾದವಲ್ಲಾ

ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಪ್ರವೇಶ ಮಾಡಿದ ಬಿಜೆಪಿ ಎಂಬ ಪಾರ್ಟಿ ಪ್ರಜಾಪ್ರಭುತ್ವದ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯಲು ನಾಗಮಂಗಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದೆಯಲ್ಲಾ. ಬಿಜೆಪಿಯಿಂದ ಸ್ಫರ್ಧಿಸಲು ಬಂದಾತ ಫೈಟರ್ ರವಿ ಎಂಬ ರೌಡಿ ಪಟ್ಟದವನು. ಚುನಾವಣೆಗೆ ನಾಗಮಂಗಲದ ಮತದಾರರನ್ನು ಕೊಳ್ಳಲು ತಂದಿರುವ ಹಣ ಎಪ್ಪತ್ತು ಕೋಟಿ ಇದೆಯಂತಲ್ಲಾ. ಇದರಲ್ಲಿ ತಾರತಮ್ಯವಿಲ್ಲದೆ ತಲೆಗೆ ಐದು ಸಾವಿರದಂತೆ ಹಂಚಿದರೆ ಆ ಮೊತ್ತ ಸರಿಯಾಗುತ್ತದಂತೆ. ಇನ್ನ ಹಂಚಲು ಬಿಟ್ಟ ಉಸ್ತುವಾರಿ ಜನರಿಗೆ ಲಕ್ಷವಂತೆ. ಈ ನಡುವೆ ಈಗಾಗಲೇ ಕಷ್ಟ ಹೇಳಿಕೊಂಡ ಜನರ ಕೈಗೆ ಹಣ ಸೇರುತ್ತಿದೆ, ಜೊತೆಗೆ ಈತ ಏರ್ಪಡಿಸುವ ಸಭೆಗೆ ಹೋದರೆ ತಲಾ 200 ರೂ. ಮತ್ತು ಬಿರಿಯಾನಿ ಊಟ. ಈಗಾಗಲೇ ಇಂತಹ ಮಾಂಸದ ಪರಿಶೆ ನೋಡಿದ ಪಕ್ಷೇತರ ಅಭ್ಯರ್ಥಿ

ಶಿವರಾಮೇಗೌಡ

ಶಿವರಾಮೇಗೌಡ ಹಾಗೂ ಜನತಾದಳದ ಸುರೇಶ್‌ಗೌಡ ಮತ್ತು ಕಾಂಗ್ರೆಸ್ಸಿನ ಚಲುವರಾಯಸ್ವಾಮಿ ದಂಗುಬಡಿದುಹೋಗಿದ್ದಾರಲ್ಲಾ. ಈ ಫೈಟರ್ ರವಿಗೆ ಫೈಟ್ ಕೊಡಲು ಈಗಾಗಲೇ ತಯಾರಾಗಿರುವ ಶಿವರಾಮೇಗೌಡ ಕೊಪ್ಪ ಹೋಬಳಿ ಮತ್ತು ಬಂಡಿಗನವಿಲೆ ಹೋಬಳಿಯಲ್ಲಿ ಮೂರು ಕಾರ್ಯಕ್ರಮಗಳನ್ನು ಮಾಡಿ ಬಾಡೂಟದ ಮಟ್ಟಿಗೆ ಫೈಟ್ ಕೊಡುತ್ತಿರಬೇಕಾದರೆ, ಅತ್ತ ಜೆಡಿಎಸ್‌ನ ಸುರೇಶ್‌ಗೌಡ ಕುಮಾರಣ್ಣ ಮತ್ತು ದ್ಯಾವೇಗೌಡರ ಬರುವಿಕೆಗಾಗಿ ಕಾಯುತಿದ್ದಾರಂತಲ್ಲಾ. ಇತ್ತ ಚಲುವರಾಯಸ್ವಾಮಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಕರೆಸಲು ಸಿದ್ಧತೆ ನಡೆಸುತ್ತ ಇರಬೇಕಾದರೆ ಇವರೂ ಮಾಂಸದೂಟವನ್ನೇನಾದರೂ ಏರ್ಪಡಿಸಿದರೇ ಆ ಪ್ರಾಂತ್ಯದ ಆಡು, ಕುರಿ, ಎಮ್ಮೆ, ದನಕರುಗಳು ಕಾಣೆಯಾಗಿ ಎಲ್ಲಿ ನೋಡಿದರೂ ಬರೀ ಮನುಷ್ಯರೆ ಕಾಣುವ ಕಾಲ ಬಹಳ ದೂರವಿಲ್ಲ ಎನ್ನುವಂತಾಗಿದೆಯಲ್ಲಾ, ಥೂ ಥೂ ಥೂತ್ತೇರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...