Homeಅಂತರಾಷ್ಟ್ರೀಯಇಂದು ಟರ್ಕಿಯಲ್ಲಿ ಮತ್ತೆ 5.6 ಭೂಕಂಪನ: 3 ತಿಂಗಳ ತುರ್ತು ಪರಿಸ್ಥಿತಿ ಘೋಷಣೆ

ಇಂದು ಟರ್ಕಿಯಲ್ಲಿ ಮತ್ತೆ 5.6 ಭೂಕಂಪನ: 3 ತಿಂಗಳ ತುರ್ತು ಪರಿಸ್ಥಿತಿ ಘೋಷಣೆ

- Advertisement -
- Advertisement -

ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ಅವಶೇಷಗಳಡಿಯಲ್ಲಿ ಬದುಕುಳಿದ ಸಂತ್ರಸ್ತರಿಗಾಗಿ ಶೋಧ ಮುಂದುವರಿದಿದೆ. ಭಯಾನಕ ಅವಘಡದಲ್ಲಿ ಇದುವರೆಗೆ 5,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಟರ್ಕಿಯಲ್ಲಿನ ವಿನಾಶಕಾರಿ ಭೂಕಂಪಗಳಿಂದ ಪ್ರಭಾವಿತವಾಗಿರುವ 10 ಪ್ರಾಂತ್ಯಗಳನ್ನು ವಿಪತ್ತು ವಲಯವೆಂದು ಘೋಷಿಸಿದ್ದಾರೆ. ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಅವರು 3 ತಿಂಗಳ ತುರ್ತು ಪರಿಸ್ಥಿತಿ  ಮತ್ತು 7 ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ರಕ್ಷಣೆ ಮತ್ತು ಪರಿಹಾರ ತಂಡಗಳು ಪ್ರಪಂಚಾದ್ಯಂತ ಟರ್ಕಿಗೆ ಆಗಮಿಸುತ್ತಿವೆ. ಸಾವು ನೋವಿನ ಹಿನ್ನೆಲೆಯಲ್ಲಿ 70 ದೇಶಗಳು ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯವನ್ನು ನೀಡಿವೆ ಮತ್ತು ಭೂಕಂಪಗಳಿಂದ ಪ್ರಭಾವಿತರಾದ ಜನರಿಗೆ ತಾತ್ಕಾಲಿಕವಾಗಿ ವಸತಿ ಕಲ್ಪಿಸಲು ಪಶ್ಚಿಮಕ್ಕೆ ಪ್ರವಾಸೋದ್ಯಮ ಕೇಂದ್ರವಾದ ಅಂಟಲ್ಯದಲ್ಲಿ ಹೋಟೆಲ್‌ಗಳನ್ನು ತೆರೆಯಲು ಟರ್ಕಿ ಯೋಜಿಸಿದೆ ಎಂದು ಎರ್ಡೊಗನ್ ಹೇಳಿದ್ದಾರೆ.

20,000 ಜನರಿಗೆ ಗಾಯಗಳಾಗಿವೆ. ಕುಸಿದ ಕಟ್ಟಡದಿಂದ ರಕ್ಷಿಸಲ್ಪಟ್ಟವರಲ್ಲಿ ಘಾನಾದ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಕೂಡ ಸೇರಿದ್ದಾರೆ. ಭೂಕಂಪ ಪೀಡಿತ ಪ್ರದೇಶಕ್ಕೆ ಭಾರತ ಸರ್ಕಾರವು ಅಂಕಾರಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಮನ್ವಯದಲ್ಲಿ ಮೊದಲ ಬ್ಯಾಚ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅನೇಕ ಜನರು ಸಾವನ್ನಪ್ಪಿದ್ದಾರೆ, ಜನರು ನಿದ್ದೆಯಲ್ಲಿರುವಾಗಲೇ ಕಟ್ಟಡಗಳು ನೆಲಸಮಗೊಂಡಿವೆ. ಸೈಪ್ರಸ್ ದ್ವೀಪದಷ್ಟು ದೂರದವರೆಗೂ ಭೂಮಿ ಕಂಪಿಸಿದೆ. ಅದರೊಟ್ಟಿಗೆ ಇಂದು ಸಹ ಟರ್ಕಿಯಲ್ಲಿ 5.6 ಕಂಪನ ಸಂಭವಿಸಿದೆ. ಇದರಿಂದಾಗಿ ಜೀವಹಾನಿಗಳು ಹೆಚ್ಚಾಗಿವೆ.

”ಐತಿಹಾಸಿಕವಾಗಿ, ಕೇಂದ್ರದ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಭೂಕಂಪವಿದು” ಎಂದು ಸರ್ಕಾರದ ಪರ ರೇಡಿಯೊಗೆ ಸಿರಿಯಾದ ರಾಷ್ಟ್ರೀಯ ಭೂಕಂಪ ಕೇಂದ್ರದ ಮುಖ್ಯಸ್ಥರಾದ ರೇಡ್ ಅಹ್ಮದ್ ತಿಳಿಸಿದರು.

ಟರ್ಕಿಯ ಅಕಾಡೆಮಿ ಆಫ್ ಸೈನ್ಸಸ್‌ನ ಭೂಕಂಪ ತಜ್ಞ ನಾಸಿ ಗೊರೂರ್ ಅವರು, ಇದರಿಂದ ಮುಂದೆ ಯಾವುದೇ ಪ್ರವಾಹಗಳು ಆಗದಂತೆ ತಪ್ಪಿಸಲು ಆ ಪ್ರದೇಶದ ಅಣೆಕಟ್ಟುಗಳು ಬಿರುಕುಬಿಟ್ಟಿರುವ ಬಗ್ಗೆ ತಕ್ಷಣವೇ ಪರಿಶೀಲಿಸುವಂತೆ ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ; ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ನಗರಗಳು | ಸಂಕ್ಷಿಪ್ತ ವಿವರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

0
2021ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಆಯ್ದ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡಲು ಭಾರತ ಸರ್ಕಾರವು ತನ್ನ ಪ್ರಾಕ್ಸಿ ಏಜೆಂಟ್‌ಗಳ ಮೂಲಕ ಪ್ರಯತ್ನಿಸಿರಬಹುದು ಎಂದು ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಕೆನಡಾದ...