Homeಕರ್ನಾಟಕರೋಹಿತ್ ಚಕ್ರತೀರ್ಥಗೆ ಯಕ್ಷಗಾನ ಸಮ್ಮೇಳನ ಗೋಷ್ಠಿಗಳ ದಿಕ್ಸೂಚಿ ಭಾಷಣದ ಹೊಣೆ ಯಾಕೆ?: ರಂಗಕರ್ಮಿಗಳ ಪ್ರಶ್ನೆ

ರೋಹಿತ್ ಚಕ್ರತೀರ್ಥಗೆ ಯಕ್ಷಗಾನ ಸಮ್ಮೇಳನ ಗೋಷ್ಠಿಗಳ ದಿಕ್ಸೂಚಿ ಭಾಷಣದ ಹೊಣೆ ಯಾಕೆ?: ರಂಗಕರ್ಮಿಗಳ ಪ್ರಶ್ನೆ

- Advertisement -
- Advertisement -

ಯಕ್ಷಗಾನ ಕಲೆ ಪ್ರೋತ್ಸಾಹಿಸುವ ಉದ್ದೇಶದಿಂದ ಉಡುಪಿಯ ಎಂಜಿಎಂ ಕಾಲೇಜಿನ ಎ.ಎಲ್‌.ಎನ್‌. ರಾವ್‌ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಫೆ. 11, 12ರಂದು ಆಯೋಜಿಸಲಾಗಿದ್ದು, ಈ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಗೋಷ್ಠಿಗಳ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣಕ್ಕೆ ಲೇಖಕ ರೋಹಿತ್‌ ಚಕ್ರತೀರ್ಥರಿಗೆ ಅವಕಾಶ ನೀಡಲಾಗಿದೆ. ಇದೀಗ ಈ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

”ಯಾವ ಮಾನದಂಡದ ಆಧಾರದಲ್ಲಿ ರೋಹಿತ್ ಚಕ್ರತೀರ್ಥರಿಗೆ ಗೋಷ್ಠಿಗಳ ದಿಕ್ಸೂಚಿ ಭಾಷಣದ ಹೊಣೆಗಾರಿಕೆ ನೀಡಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಇಲ್ಲವೇ” ಎಂದು ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಹಸರಾಂತ ಕಲಾವಿದರಾದ ಕೊಳ್ಯೂರು ರಾಮಚಂದ್ರ ರಾಯರು, ಶ್ರೀಧರ ಹಂದೆ, ಗೋವಿಂದ ಭಟ್ಟರಂತಹ ದಿಗ್ಗಜರನ್ನು ಬಿಟ್ಟು ರೋಹಿತ್ ಚಕ್ರತೀರ್ಥಗೆ ಅವಕಾಶ ನೀಡಿದ್ದು ಸರಿಯಲ್ಲ. ಇದು ಯಕ್ಷಗಾನ ಸಮ್ಮೇಳನವೇ ಅಥವಾ ರಾಜಕೀಯ ಸಮ್ಮೇಳನವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ: ಕುವೆಂಪು ವರ್ಣಾಶ್ರಮ ಪದ್ಧತಿಯನ್ನು ಒಪ್ಪಿ ಬೆಂಬಲಿಸಿದ್ದರು: ರೋಹಿತ್ ಚಕ್ರತೀರ್ಥ ಭಾಷಣಕ್ಕೆ ವ್ಯಾಪಕ ಖಂಡನೆ

ಇತ್ತೀಚೆಗೆ ನಡೆದ ಮಲ್ಪೆ ಬೀಚ್‌ ಉತ್ಸವ ಹಾಗೂ ಪರಶುರಾಮ ಥೀಂ ಪಾರ್ಕ್ ಉದ್ಘಾಟನಾ ಕಾರ್ಯಕ್ರಮವನ್ನು ಅಟಲ್ ಉತ್ಸವದಂತೆ ಆಚರಿಸಲಾಗಿದೆ. ಬಿಜೆಪಿ ಸರ್ಕಾರಿ ಕಾರ್ಯಕ್ರಮಗಳನ್ನು ತಮ್ಮ ತತ್ವ–ಸಿದ್ಧಾಂತಗಳನ್ನು ಪ್ರಚಾರ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಸಾಂಸ್ಕೃತಿಕ ರಂಗವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರೋಹಿತ್ ಚಕ್ರತೀರ್ಥ ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ, ಹಾಗಾಗಿ ಅವರನ್ನು ಸಮಾಧಾನಗೊಳಿಸಲು ಗೋಷ್ಠಿಯಲ್ಲಿ ದಿಕ್ಸೂಚಿ ಭಾಷಣ ಮಾಡುವ ಅವಕಾಶ ನೀಡಲಾಗಿದೆಯಾ  ಎನ್ನುವ ಸಂಶಯ ಮೂಡುತ್ತಿದೆ.

ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಉಡುಪಿಯಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿಗೆ, ಇದು ಸಾಂಸ್ಕೃತಿಕ ವಲಯದಲ್ಲಿ ಸಂತಸ ತಂದಿದೆ. ಆದರೆ, ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ನೋಡಿದಾಗ ರಾಜಕೀಯ ಸಮ್ಮೇಳನದಂತೆ ಭಾಸವಾಗುತ್ತಿದೆ ಎಂದು ಉದ್ಯಾವರ ನಾಗೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಇತಿಹಾಸವನ್ನು ತಿರುಚುವ ಮೂಲಕ ವಿವಾದಕ್ಕೀಡಾಗಿರುವ ರೋಹಿತ್ ಚಕ್ರತೀರ್ಥಯನ್ನ ದಿಕ್ಸೂಚಿ ಭಾಷಣಕ್ಕೆ ಆಹ್ವಾನಿಸಿರುವುದು ಮತ್ತೊಂದು ಗೊಂದಲ ಸೃಷ್ಟಿಗೆ ಕಾರಣವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಟೀಕಿಸಿದ್ದಾರೆ.

ಪಠ್ಯ ಪರಿಷ್ಕರಣೆಯಲ್ಲಿ ಅನೇಕ ಮಹಾನ್ ವ್ಯಕ್ತಿಗಳ ಪಾಠವನ್ನು ಕೈಬಿಡಲಾಗಿದೆ, ತಿರುಚಲಾಗಿದೆ ಎಂಬ ಆರೋಪಗಳು ಜೋರಾಗಿ ಕೇಳಿಬಂದಿದ್ದವು. ಅಲ್ಲದೆ ಆದಿವಾಸಿಗಳನ್ನು ಅವಮಾನಿಸಿದ್ದಾರೆ ಎಂದೂ ಕುವೆಂಪುರವರ ರಚಿಸಿದ ನಾಡಗೀತೆಯನ್ನು ತಿರುಚಿದ್ದಾರೆಂದು ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲಾಗಿತ್ತು. ಇಂತಹ ನಾಡದ್ರೋಹಿಗೆ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದ ಗೋಷ್ಠಿಗಳ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣಕ್ಕೆ ಅವಕಾಶ ನೀಡುವುದು ಸರಿಯಲ್ಲ ಎಂದು ನಾಡಿನ ಪ್ರಜ್ಞಾವಂತ ಜನರು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...