Homeಕರ್ನಾಟಕಬೇತೋರನಲ್ಲಿರುವ ಕನ್ನಡಿಗರಿಗೆ ನೀರಿನ ಸಂಪರ್ಕ ನೀಡಬೇಡಿ: ಗ್ರಾಮಸ್ಥರ ಒತ್ತಾಯ

ಬೇತೋರನಲ್ಲಿರುವ ಕನ್ನಡಿಗರಿಗೆ ನೀರಿನ ಸಂಪರ್ಕ ನೀಡಬೇಡಿ: ಗ್ರಾಮಸ್ಥರ ಒತ್ತಾಯ

- Advertisement -
- Advertisement -

ಮಹದಾಯಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿಯಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಗೆ ಪೊಂಡಾ ತಾಲೂಕಿನ ಬೇತೋರ-ನಿರಂಕಲ್-ಕಾಂಕ್ಷೆ-ಕೋಡರ್ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪಂಚಾಯತ್ ವ್ಯಾಪ್ತಿಯಲ್ಲಿಯೇ ಕನ್ನಡಿಗರಿಗೆ ನೀರಿನ ಸಂಪರ್ಕ ಕಲ್ಪಿಸುವುದನ್ನು ಸ್ಥಳೀಯರು ವಿರೋಧ ಮಾಡಿದ್ದಾರೆ.

ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅಮಿತ್ ಶಾ ಅವರು, ಗೋವಾ ಸರ್ಕಾರವನ್ನು (ಬಿಜೆಪಿ) ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಕರ್ನಾಟಕಕ್ಕೆ ಕುಡಿಯುವ ಉದ್ದೇಶಕ್ಕೆ ನೀರು ಬಿಡುವ ಮೂಲಕ ಬಿಜೆಪಿಯು ಬಹುಕಾಲದಿಂದ ಬಾಕಿ ಉಳಿದಿರುವ ಮಹದಾಯಿ ಜಲ ವಿವಾದವನ್ನು ಪರಿಹರಿಸಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’ ಭೂಭಾಗಗಳನ್ನು ಕೇಂದ್ರಾಡಳಿತ ಪ್ರವೇಶವಾಗಿ ಘೋಷಿಸಿ: ಉದ್ಧವ್ ಠಾಕ್ರೆ

ಈ ಹೇಳಿಕೆಗೆ ಇದೀಗ ಬೇತೋರ-ನಿರಂಕಲ್-ಕಾಂಕ್ಷೆ-ಕೋಡರ್ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಗ್ರಾಮಸ್ಥರನ್ನು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರನ್ನು ಸಮಾಧಾನಪಡಿಸಲು ಸರಪಂಚ ಉಮೇಶಗೌಡರು ಹಲವು ಬಾರಿ ಪ್ರಯತ್ನಿಸಿದರೂ, ಗ್ರಾಮಸ್ಥರು ಮಾತ್ರ ಕನ್ನಡಿಗರು ನೀರಿನ ಸಂಪರ್ಕಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸುವಂತೆ ಭಾನುವಾರ ಪಂಚಾಯಿತಿಗೆ ಒತ್ತಾಯಿಸಿದರು.

ನೆರೆಯ ರಾಜ್ಯವು ಮಹದಾಯಿ ತಿರುವು ನಿಲ್ಲಿಸುವವರೆಗೆ ಕನ್ನಡಿಗರಿಗೆ ನೀರಿನ ಸಂಪರ್ಕ ನೀಡಬಾರದು ಎಂದು ಗ್ರಾಮಸ್ಥರು ಪಂಚಾಯತಿಗೆ ಒತ್ತಾಯಿಸಿದರು.

ಇದೇ ವಿಷಯದ ಕುರಿತು ಸಭೆಯಲ್ಲಿ ಒಂದು ಗಂಟೆಗಳ ಕಾಲ ಚರ್ಚೆ ನಡೆಯಿತು. ಈ ನಿಮ್ಮ ನಿರ್ಣಯವನ್ನು ಕಾನೂನು ಒಪ್ಪುವುದಿಲ್ಲ ಎಂದು ಜನರನ್ನು ಮನವೊಲಿಸಲು ಸರಪಂಚ ಉಮೇಶಗೌಡರು ಹಲವು ಬಾರಿ ಪ್ರಯತ್ನಿಸಿದರೂ ಗ್ರಾಮಸ್ಥರು ಮಾತ್ರ ತಮ್ಮ ಹಠವನ್ನು ಮುಂದುವರೆಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಮಾರಾಟವಾಗಲು ನಿರಾಕರಿಸಿದ್ದಕ್ಕೆ ಜೈಲಿನಲ್ಲಿ ಹೊಡೆದು, ಚಿತ್ರಹಿಂಸೆ ನೀಡಿದ್ದರು: ಟಿಎಂಸಿ ನಾಯಕ ಸಾಕೇತ್ ಗೋಖಲೆ

0
ಬಿಜೆಪಿಗೆ ಸೇರಲು ಅಥವಾ ಮಾರಾಟವಾಗಲು ನಿರಾಕರಿಸಿದ್ದಕ್ಕಾಗಿ ಜೈಲಿನಲ್ಲಿ ನನಗೆ ಹೊಡೆದು ಚಿತ್ರಹಿಂಸೆ ನೀಡಲಾಗಿತ್ತು ಎಂದು ರಾಜ್ಯಸಭಾ ಸದಸ್ಯ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಹೇಳಿದ್ದಾರೆ. ದಿ ವೈರ್‌ ಪ್ರಕಟಿಸಿದ ಹಿರಿಯ ವಕೀಲ ಕಪಿಲ್ ಸಿಬಲ್...