ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನದಲ್ಲಿರುವ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಲಖ ಅವರನ್ನು ಗೃಹಬಂಧನಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ. ಗೃಹಬಂಧನಕ್ಕೆ ವರ್ಗಾಯಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯ ಆಕ್ಷೇಪಣೆಗಳ ಹೊರತಾಗಿಯೂ ನವಲಖ ಅವರ ಮನವಿಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ನವಲಖ ಅವರ ವಯಸ್ಸು, ಆರೋಗ್ಯ ಸ್ಥಿತಿ, ಅವರು 2020 ರಿಂದ ಜೈಲಿನಲ್ಲಿದ್ದಾರೆ ಎಂಬ ಅಂಶ, ಜೊತೆಗೆ ಈ ಪ್ರಕರಣದಲ್ಲಿ ಆರೋಪಿಯಾಗಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಹಾಗೂ ಮುಂದಿನ ದಿನಗಳಲ್ಲಿ ವಿಚಾರಣೆ ಪ್ರಗತಿ ಕಾಣುವ ಸಾಧ್ಯತೆಯಿಲ್ಲ ಎಂಬ ಅಂಶಗಳನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. 48 ಗಂಟೆಗಳ ಒಳಗೆ ಆದೇಶವನ್ನು ಜಾರಿಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರ ಪೀಠವು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆರಂಭದಲ್ಲಿ ಅವರು ತಿಂಗಳ ಕಾಲ ಗೃಹಬಂಧನದಲ್ಲಿರುತ್ತದೆ, ನಂತರ ಅದನ್ನು ನ್ಯಾಯಾಲಯವು ಪರಿಶೀಲಿಸುತ್ತದೆ ಎಂದು ಪೀಠವು ಹೇಳಿದೆ. ಪೀಠವು ಮುಂಬೈನಲ್ಲಿ ಅವರೊಂದಿಗೆ ವಾಸಿಸಲು ಅನುಮತಿ ನೀಡಿದ ಅವರ ಸಂಗಾತಿ ಸಭಾ ಹುಸೈನ್ ಅವರಿಗೂ ಕಠಿಣ ಷರತ್ತುಗಳನ್ನು ವಿಧಿಸಿದ್ದು, ಈ ಷರತ್ತುಗಳಲ್ಲಿ ಫೋನ್ ಬಳಕೆಯ ಮೇಲಿನ ನಿರ್ಬಂಧಗಳು ಕೂಡಾ ಒಳಗೊಂಡಿವೆ.
ಇದನ್ನೂ ಓದಿ: ಅವರ ಹಾಡಿನೊಂದಿಗೇ ಅವರನ್ನು ಮೆಲ್ಲನೆ ಮುಗಿಸುವುದು; ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶೋಕಗೀತೆ
ನವಲಖಾ ಅವರನ್ನು ಗೃಹ ಬಂಧನಕ್ಕೆ ವರ್ಗಾವಣೆ ಮಾಡುವ ಮೊದಲು ಅವರು ಉಳಿಯಲು ಇರುವ “ಆವರಣದ ಅಗತ್ಯ ಮೌಲ್ಯಮಾಪನವನ್ನು ಕೈಗೊಳ್ಳಲು” ಎನ್ಐಎಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಗೃಹಬಂಧನದ ಯಾವುದೇ ದುರುಪಯೋಗ ನಡೆಯದಂತೆ ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಸಂಸ್ಥೆಯು “ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸ್ವತಂತ್ರವಾಗಿದೆ” ಎಂದು ಸುಪ್ರೀಂಕೋರ್ಟ್ ಆದೇಶವು ಹೇಳಿದ್ದು, ಅವರ ಭದ್ರತೆಗೆ ತಗಲುವ ವೆಚ್ಚ 2.4 ಲಕ್ಷ ರೂ. ಗಳನ್ನು ಠೇವಣಿ ಇಡುವಂತೆ ಕೇಳಿದೆ.
“ಅವರು ಉಳಿಯುವ ಮನೆಯ ಪ್ರವೇಶದ್ವಾರದಲ್ಲಿ ಅವರದೇ ವೆಚ್ಚದಲ್ಲಿ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿ ಕೊಠಡಿಗಳ ಹೊರಗೆ, ಪ್ರವೇಶ, ನಿರ್ಗಮನ ಧ್ವಾರದ ಹೊರಗೆ ಇರಬೇಕು. ಸಿಸಿಟಿವಿಯು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು. ಅವರನ್ನು ಮನೆಗೆ ವರ್ಗಾಯಿಸುವ ಮೊದಲು ಮನೆಯನ್ನು ಪರೀಕ್ಷಿಸಲಾಗುವುದು” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ಗೃಹಬಂಧನದಲ್ಲಿರುವಾಗ ಯಾವುದೇ ಮೊಬೈಲ್ ಫೋನ್, ಇಂಟರ್ನೆಟ್, ಲ್ಯಾಪ್‌ಟಾಪ್ ಅಥವಾ ಯಾವುದೇ ಸಂವಹನ ಸಾಧನವನ್ನು ಬಳಸದಂತೆ ಸುಪ್ರಿಂಕೋರ್ಟ್ ನವಲಾಖಾ ಅವರನ್ನು ಕೇಳಿದ್ದು, ಆದರೆ ದಿನಕ್ಕೊಮ್ಮೆ 10 ನಿಮಿಷಗಳ ಕಾಲ ಪೊಲೀಸ್ ಸಿಬ್ಬಂದಿ ಒದಗಿಸುವ ಮೊಬೈಲ್ ಬಳಸಲು ಅವರಿಗೆ ಅನುಮತಿ ನೀಡಿದೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಸಾಕ್ಷ್ಯ ಸಂಗ್ರಹಿಸಲು ಹೆಣಗುತ್ತಿರುವ NIA!
“ನವಲಖ ಅವರು ಮುಂಬೈನಿಂದ ಹೊರ ಹೋಗುವಂತಿಲ್ಲ, ಆದರೆ ವಾರಕ್ಕೊಮ್ಮೆ ಮೂರು ಗಂಟೆಗಳ ಕಾಲ ಇಬ್ಬರು ಕುಟುಂಬ ಸದಸ್ಯರನ್ನು ಭೇಟಿ ಮಾಡಬಹುದು” ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಹೆಚ್ಚುವರಿಯಾಗಿ, ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ಮಾಡದಂತೆ ಕೇಳಿದೆ.
ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ನಡೆಯಲು ಅವರಿಗೆ ಅನುಮತಿ ನೀಡಲಾಗಿದ್ದರೂ ಯಾರೊಂದಿಗೂ ಯಾವುದೇ ಸಂಭಾಷಣೆಯಲ್ಲಿ ತೊಡಬಾರದು ಎಂದು ಹೇಳಿದೆ. “ಅವರಿಗೆ ವಕೀಲರೊಂದಿಗೆ ಸಂವಹನ ನಡೆಸಲು ಅನುಮತಿ ನೀಡಲಾಗುತ್ತದೆ ಮತ್ತು ಅವರು ವಕೀಲರ ಹೆಸರನ್ನು ನೀಡಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
ಫೋನ್ ಕರೆಗಳನ್ನು ಮಾಡುವ ಸೌಲಭ್ಯವನ್ನು ಹೊಂದಿರುವ ಮೊಬೈಲ್ ಫೋನ್ ಅನ್ನು ಬಳಸಲು ನ್ಯಾಯಾಲಯವು ಅವರನ್ನು ನೋಡಿಕೊಳ್ಳುವ ಅವರ ಸಂಗಾತಿಗೆ ಅನುಮತಿ ನೀಡಿದ್ದು, ಆದರೆ ಅವರು ಮಾಡಿದ ಫೋನ್ ಕರೆಗಳ ಕಣ್ಗಾವಲು ಮತ್ತು ರೆಕಾರ್ಡ್ ಮಾಡಲು ಸುಪ್ರೀಂಕೋರ್ಟ್ ತನಿಖಾ ಸಂಸ್ಥೆಗೆ ಸ್ವಾತಂತ್ರ್ಯ ನೀಡಿದೆ. “ಸಹಚರನೂ ಫೋನ್ ಕರೆ ಅಥವಾ ಸಂದೇಶದ ವಿವರಗಳನ್ನು ಅಳಿಸಬಾರದು” ಎಂದು ನ್ಯಾಯಾಲಯವು ಹೇಳಿದೆ.
ಇದನ್ನೂ ಓದಿ: ‘ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶ ಮಾಡುವ ನಡೆ’: NHRC ಅಧ್ಯಕ್ಷರಾಗಿ ಅರುಣ್ ಮಿಶ್ರಾ ಆಯ್ಕೆಗೆ PUCL ಖಂಡನೆ
ತನ್ನನ್ನು ಗೃಹಬಂಧನಕ್ಕೆ ವರ್ಗಾಯಿಸಲು ನಿರಾಕರಿಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನವಲಖಾ ಅವರು ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ಆದೇಶ ನೀಡಿದೆ. ನವಲಖಾ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಅರ್ಜಿದಾರರು 70 ವರ್ಷ ವಯಸ್ಸಿನವರಾಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ವಾದಿಸಿದ್ದರು.
ಸದ್ಯಕ್ಕೆ ಇದೊಂದು ಸಮಾದಾನಕರ ಸಂಗತಿ. ಯು.ಎ.ಪಿ.ಎ. ಎಂಬ ಕರಾಳ ಕಾನೂನು ರದ್ದಾಗಬೇಕು.