Homeಮುಖಪುಟಬಿಹಾರ: ಕರ್ತವ್ಯದ ವೇಳೆ ಮೊಬೈಲ್, ಸಾಮಾಜಿಕ ಜಾಲತಾಣ ಬಳಸದಂತೆ ಪೊಲೀಸರಿಗೆ ಆದೇಶ

ಬಿಹಾರ: ಕರ್ತವ್ಯದ ವೇಳೆ ಮೊಬೈಲ್, ಸಾಮಾಜಿಕ ಜಾಲತಾಣ ಬಳಸದಂತೆ ಪೊಲೀಸರಿಗೆ ಆದೇಶ

- Advertisement -
- Advertisement -

ಟ್ರಾಫಿಕ್ ಡ್ಯೂಟಿ, ವಿಐಪಿ ಅಥವಾ ವಿವಿಐಪಿ ಕರ್ತವ್ಯದಲ್ಲಿರುವಾಗ ವಿಶೇಷ ಪರಿಸ್ಥಿತಿ ಹೊರತು ಪಡಿಸಿ ಮೊಬೈಲ್ ಫೋನ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಾರದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರಬಾರದು ಎಂದು ಬಿಹಾರದ ಪೊಲೀಸರಿಗೆ ಆದೇಶಿಸಲಾಗಿದೆ.

ಬಿಹಾರ ಡಿಜಿಪಿ (ಪೊಲೀಸ್ ಮಹಾನಿರ್ದೇಶಕ) ಎಸ್.ಕೆ. ಸಿಂಘಾಲ್ ಮಂಗಳವಾರ ಆದೇಶವನ್ನು ಜಾರಿಗೊಳಿಸಿದ್ದಾರೆ. ರಾಜ್ಯದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಇದನ್ನು ತಿಳಿಸಲಾಗಿದೆ. ಆದೇಶವನ್ನು  ಉಲ್ಲಂಘಿಸಿದ ಪೊಲೀಸ್ ಅಧಿಕಾರಿಗಳು ಅಥವಾ ಸಿಬ್ಬಂದಿ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಪೊಲೀಸರು ಕರ್ತವ್ಯದಲ್ಲಿದ್ದಾಗ ತಮ್ಮ ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಪೋನ್‌ಗಳಲ್ಲಿ ಹೆಚ್ಚು ಕಾರ್ಯನಿರತರಾಗಿರುತ್ತಾರೆ ಎಂದು ಪೊಲೀಸ್ ಸಿಬ್ಬಂದಿ ಬಗ್ಗೆ ಹಲವಾರು ದೂರುಗಳು ಮತ್ತು ವರದಿಗಳು ಬಂದಿವೆ ಹಾಗಾಗಿ ಈ ಆದೇಶ ನೀಡಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಸಿದ ಅಲೆಮಾರಿಗಳಿಗೂ ವಿಶೇಷ ಪ್ಯಾಕೇಜ್ ನೀಡಿ: ಮುಖ್ಯಮಂತ್ರಿಗೆ ಸಿ.ಎಸ್.ದ್ವಾರಕಾನಾಥ್ ಆಗ್ರಹ

 

Image“ನಗರದ ವಿವಿಧ ಭಾಗಗಳಲ್ಲಿ ಪೊಲೀಸರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆಟವಾಡುವುದು, ಮಾತನಾಡುವುದು ಅಥವಾ ಪರಸ್ಪರ ಸಂದೇಶ ಕಳುಹಿಸುವುದರಲ್ಲಿ ನಿರತರಾಗಿರುವುದನ್ನು ನಾವು ನೋಡಬಹುದು. ಇದೇ ಅವರ ಪ್ರಧಾನ ಕರ್ತವ್ಯವೆಂಬಂತೆ ಮಾಡುತ್ತಿರುತ್ತಾರೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆಯ ಸಂದರ್ಭಗಳಿಗೆ ಸ್ಪಂದಿಸಲು ಪೊಲೀಸರು ಯಾವಾಗಲು ಸಿದ್ಧರಾಗಿರಬೇಕು. ಕರ್ತವ್ಯದಲ್ಲಿರುವ ಪೊಲೀಸರು ಯಾವಾಗಲು ಜಾಗರುಕರಾಗಿರಬೇಕು. ವಿಶೇಷವಾಗಿ ಕಾರ್ಯನಿರತ ಟ್ರಾಫಿಕ್ ಸಿಗ್ನಲ್‌ಗಳಲ್ಲಿ, ವಿಐಪಿ / ವಿವಿಐಪಿ ಭೇಟಿಗಳಿಗೆ ನಿಯೋಜಿಸಲ್ಪಟ್ಟ ಸಂದರ್ಭ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವಾಗ ಎಚ್ಚರ ಅಗತ್ಯ. ಅಲ್ಲಿ ಮೊಬೈಲ್‌ಗಳನ್ನು ಬಳಸುತ್ತಿರುವುದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಟ್ರಾಫಿಕ್ ಸಿಗ್ನಲ್‌ ಅಥವಾ ವಿಐಪಿ ಡ್ಯೂಟಿಯಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರುವಾಗ, ತಮ್ಮ ಹಿರಿಯ ಅಧಿಕಾರಿಗಳಿಗೆ ತಮ್ಮ ಮೊಬೈಲ್ ಫೋನ್‌ಗಳನ್ನು ನೀಡಿ ನಂತರ ಹಾಜರಾಗಬೇಕು ಎಂದು ಸೆಪ್ಟೆಂಬರ್ 2019 ರಲ್ಲಿ ರಾಜಸ್ಥಾನ ಸರ್ಕಾರ ಆದೇಶಿಸಿದೆ.


ಇದನ್ನೂ ಓದಿ: ಲಾಕ್‌ಡೌನ್‌ ಸಂಕಷ್ಟ – ಮಗನ ಚಿಕಿತ್ಸೆಗಾಗಿ ಪ್ರತಿ ತಿಂಗಳು 400 ಕಿ.ಮಿ. ಸೈಕಲ್‌ ಪ್ರಯಾಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...