ಸ್ಥಳೀಯ ಚುಣಾವಣೆಗೆ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದ ಮಹಿಳೆಯು ಆಕ್ರಮಣಕ್ಕೆ ಒಳಗಾಗಿದ್ದು, ಪ್ರತಿಪಕ್ಷದ ಇಬ್ಬರು ಗಂಡಸರು ಮಹಿಳೆಯ ಸೀರೆಯನ್ನು ಎಳೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ದುಷ್ಕರ್ಮಿಗಳು ಮಹಿಳೆಯ ಮೇಲೆ ಆಕ್ರಮಣ ಮಾಡುತ್ತಿರುವುದು ಕ್ಯಾಮಾರದಲ್ಲಿ ಸೆರೆಯಾಗಿದೆ. ಆಕ್ರಮಣ ಮಾಡಿವರನ್ನು ಬಿಜೆಪಿಯ ಕಾರ್ಯಕರ್ತರು ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಹಲ್ಲೆಗೊಳಗಾದ ಮಹಿಳೆ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಬೆಂಬಲಿಗರಾಗಿದ್ದು, ಅವರು ಬ್ಲಾಕ್ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಭ್ಯರ್ಥಿಯೊಬ್ಬರ ಜೊತೆಗೆ ತೆರಳಿದ್ದರು.
“ಇದು ಉತ್ತರ ಪ್ರದೇಶದ ಬಿಜೆಪಿ ನಾಯಕರ ಗೂಂಡಾಗಿರಿಯಾಗಿದ್ದು, ಜಂಗಲ್ ರಾಜ್ಯದ ವಿಶಿಷ್ಟ ಲಕ್ಷಣವಾಗಿದೆ. ಮಹಿಳಾ ಪಂಚಾಯತ್ ಸದಸ್ಯೆಯ ಸೀರೆಯನ್ನು ಕಿತ್ತುಹಾಕಲು ಸಾರ್ವಜನಿಕ ಪ್ರಯತ್ನ ಮಾಡಲಾಗುತ್ತಿದೆ ಆದರೆ ಆಡಳಿತವು ಮೂಕ ಪ್ರೇಕ್ಷಕವಾಗಿದೆ. ಇದು ಪ್ರಜಾಪ್ರಭುತ್ವವೇ? ಅಥವಾ ಇದು ಬಿಜೆಪಿಯ ನಿಜವಾದ ಗೂಂಡಾಗಿರಿಯೇ?” ಎಂದು ಸಮಾಜವಾಗಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ವಿಡಿಯೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು ಅದರಲ್ಲಿ, “ಅಧಿಕಾರದ ದಾಹ. ಚುನಾವಣೆ ಗೆಲ್ಲಲು ಮಹಿಳಯನ್ನು ಅವಮಾನಿಸಲಾಯಿತು. ಯೋಗಿಯ ಗೂಂಡಾಗಳು” ಎಂದು ಬರೆದಿದ್ದಾರೆ.
— Akhilesh Yadav (@yadavakhilesh) July 8, 2021
ಗುರುವಾರ ರಾಜ್ಯದ ಒಂದು 14 ಸ್ಥಳಗಳಲ್ಲಿ ಘರ್ಷಣೆಗಳು ನಡೆದಿದೆ ಎಂದು ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಬಿಜೆಪಿ ಶಿವಸೇನೆ ಮತ್ತು ಎನ್‌ಸಿಪಿಗೆ ಧನ್ಯವಾದ ಹೇಳಬೇಕು- ಸಂಜಯ್ ರಾವತ್
“825 ಬ್ಲಾಕ್ ಪಂಚಾಯತ್ ಮುಖಂಡರನ್ನು ಆಯ್ಕೆ ಮಾಡುವ ಚುನಾವಣೆಯು ಶನಿವಾರ ನಡೆಯಲಿದೆ. ನಾಮಪತ್ರ ಸಲ್ಲಿಸಲು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದಾಗ್ಯೂ 14 ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿದೆ. ಗುಂಪುಗಳ ನಡುವೆ ನಡೆದಿರುವ ಘರ್ಷಣೆಯ ವರದಿಗಳು ನಮ್ಮಲ್ಲಿವೆ. ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಈ ಚುನಾವಣೆಯು ಸಾಕಷ್ಟು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ ಎನ್ನಲಾಗಿದೆ.
ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದಲ್ಲಿ ಗೆದ್ದಿತ್ತು. ಬ್ಲಾಕ್ ಪ್ರಮುಖ್ ಚುನಾವಣೆಗಳು ವಿಧಾನಸಭಾ ಚುನಾವಣೆಗೂ ಮುಂಚೆ ನಡೆಲಿರುವ ಕೊನೆಯ ಗ್ರಾಮೀಣ ಚುನಾವಣೆಯಾಗಿದೆ.
ಇದನ್ನೂ ಓದಿ: ಬೆಂಗಳೂರು: ಬಾಂಗ್ಲಾ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 12 ಜನರ ಬಂಧನ


