ಭಾರತೀಯ ಜನತಾ ಪಕ್ಷ (ಬಿಜೆಪಿ) ಕಳ್ಳರ ಪಕ್ಷವಾಗಿದ್ದು, ಸಮಾಜದಲ್ಲಿ ವಿವಿಧ ಗುಂಪುಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
“ನಾವು ರಾಜ್ಯದ ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಯಾವಾಗಲೂ ನಮ್ಮನ್ನು ಕಳ್ಳರು ಎಂದು ಆರೋಪಿಸುತ್ತಾರೆ. ಆದರೆ, ಬಿಜೆಪಿಗಿಂತ ದೊಡ್ಡ ಕಳ್ಳ ಯಾರು ಇಲ್ಲ. ಅವರು ದೊಡ್ಡ ದರೋಡೆಕೋರರು. ಇಡೀ ಜಲ್ಪೈಗುರಿ-ಅಲಿಪುರ್ದಾರ್ ಪ್ರದೇಶದಲ್ಲಿ ಅವರು ‘ದಂಗಾ’ ಎಂಬ ಹೊಸ ಧರ್ಮವನ್ನು ಪ್ರಾರಂಭಿಸಿದರು. ಇದು ಸ್ವಾಮಿ ವಿವೇಕಾನಂದ ಅಥವಾ ರಾಮಕೃಷ್ಣ ಪರಮಹಂಸ ಸೂಚಿಸಿದಂತೆ ಹಿಂದೂ ಧರ್ಮವಲ್ಲ” ಎಂದು ಜಲ್ಪೈಗುರಿಯಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
“ಬಿಜೆಪಿಯವರು ಹಿಂದೂ, ಮುಸ್ಲಿಂ, ಸಿಖ್ಖರು ಮತ್ತು ಕ್ರಿಶ್ಚಿಯನ್ನರ ನಡುವೆ ದ್ವೇಷವನರ್‍ನು ಎತ್ತಿಕಟ್ಟುತ್ತಾರೆ. ಬಂಗಾಳಿ-ರಾಜ್‌ಬೋನ್ಶಿ, ಬಂಗಾಳಿ-ಬೋಡೋ ಜನರ ನಡುವೆ, ಬೋಡಿ ಮತ್ತು ಮುಸ್ಲಿಮರ ನಡುವೆ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ನಡುವೆ ಅಥವಾ ಕ್ರಿಶ್ಚಿಯನ್ನರು ಮತ್ತು ಆದಿವಾಸಿಗಳ ನಡುವೆ ದ್ವೇಷ ಬಿತ್ತುವುದೇ ಅವರ ಕೆಲಸವಾಗಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಂಗಾಳವನ್ನು’ಗಲಭೆ ಪೀಡಿತ ಗುಜರಾತ್’ ಮಾಡಲು ಎಂದಿಗೂ ಬಿಡುವುದಿಲ್ಲ- ಮಮತಾ ಬ್ಯಾನರ್ಜಿ
There is no bigger thief than BJP. They are dacoits of Chambal… They had said in 2014, 2016, 2019 elections that seven tea gardens will be reopened & said Centre will take over them. Now they are promising jobs, they are cheating: West Bengal CM in Jalpaiguri, earlier today pic.twitter.com/9k5KdmC9cM
— ANI (@ANI) December 15, 2020
’ಬಿಜೆಪಿಗಿಂತ ದೊಡ್ಡ ಕಳ್ಳರ ಪಕ್ಷ ಯಾವುದು ಇಲ್ಲ. ಅವರು ಚಂಬಲ್‌ನ ದರೋಡೆಕೋರರು ಎಂದಿರುವ ಮಮತಾ ಬ್ಯಾನರ್ಜಿ, ಬಿಜೆಪಿಗರು 2014, 2016, 2019 ರ ಚುನಾವಣೆಗಳಲ್ಲಿ ಜಲ್ಪೈಗುರಿ-ಅಲಿಪುರ್ದಾರ್ ಪ್ರದೇಶದಲ್ಲಿ ಏಳು ಚಹಾ ತೋಟಗಳನ್ನು ಮತ್ತೆ ತೆರೆಯಲಾಗುವುದು, ಕೇಂದ್ರವು ಅವುಗಳನ್ನು ವಹಿಸಿಕೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಅವರು ತಮ್ಮ ಭರವಸೆಯನ್ನು ಪೂರೈಸಿದ್ದಾರೆಯೇ?’ ಎಂದು ಪ್ರಶ್ನೆಸಿದ್ದಾರೆ.
2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಒಂದು ವರ್ಷದಲ್ಲಿ 2 ಕೋಟಿ ಉದ್ಯೋಗಗಳು ನೀಡುವ ಭರವಸೆ ನೀಡಿದ್ದರು, ಆದರೆ ಅವರು ಕೇವಲ 2 ಲಕ್ಷ ಉದ್ಯೋಗಗಳನ್ನಾದರೂ ನೀಡಿದ್ದಾರೆಯೇ..? ಇನ್ನೂ, 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಪ್ರತಿ ಖಾತೆಯಲ್ಲೂ 15 ಲಕ್ಷ ರೂ. ಹಾಕುವ ಭರವಸೆ ನೀಡಿದರು. ಅವರು ಆ ಭರವಸೆಯನ್ನಾದರೂ ಉಳಿಸಿಕೊಂಡಿದ್ದಾರೆಯೇ? ಅವರು ಬರೀ ಸುಳ್ಳು ಭರವಸೆಗಳನ್ನು ಮಾತ್ರ ನೀಡುತ್ತಾರೆ” ಎಂದು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ: ಜನರಿಗೆ ಪ್ರಯೋಜನ ಆಗುವುದಾದರೇ ರಜನಿಕಾಂತ್ ಜೊತೆಗೆ ಮೈತ್ರಿಗೆ ಸಿದ್ಧ- ಕಮಲ್ ಹಾಸನ್
ಗೂರ್ಖಾಲ್ಯಾಂಡ್ ವಿಷಯದ ಕುರಿತು ಮಾತನಾಡಿದ ಮುಖ್ಯಮಂತ್ರಿ, “ಪ್ರತಿ ಚುನಾವಣೆಯಲ್ಲೂ ಅವರು ಗೂರ್ಖಾಲ್ಯಾಂಡ್ ಭರವಸೆ ನೀಡುತ್ತಾರೆ. ಆದರೆ ಈಡೇರಿಸುವುದಿಲ್ಲ. ಈ ವಿಷಯವನ್ನು ಡಾರ್ಜಿಲಿಂಗ್‌ನ ಜನರು ಈಗ ಅರಿತುಕೊಂಡಿದ್ದಾರೆ. ನಾವು ಮಾತ್ರ ಡಾರ್ಜಿಲಿಂಗ್‌ಗೆ ಶಾಶ್ವತ ಪರಿಹಾರವನ್ನು ನೀಡಬಲ್ಲೆವು’ ಎಂದು ಭರವಸೆ ನೀಡಿದ್ದಾರೆ.
ಗೂರ್ಖಾ ಜನಮುಕ್ತಿ ಮೋರ್ಚಾದ (GJM) ಹಿರಿಯ ನಾಯಕ ಬಿಮಲ್ ಗುರುಂಗ್ ಬಣದ ರೋಶನ್ ಗಿರಿ ಕೂಡ ಮುಂದಿನ ವರ್ಷದ ಪಶ್ಚಿಮ ಬಂಗಾಳ ವಿಧಾನಸಭ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.
“ನಾವು ಬಿಜೆಪಿಯನ್ನು ನಂಬುವುದಿಲ್ಲ ಆದರೆ ತೃಣಮೂಲ ಕಾಂಗ್ರೆಸ್ ಮೇಲೆ ನಮಗೆ ನಂಬಿಕೆ ಇದೆ” ಎಂದು ಗೂರ್ಖಾ ಜನಮುಕ್ತಿ ಮೋರ್ಚಾದ ರೋಶನ್ ಗಿರಿ ಹೇಳಿದ್ದರು.


