ವಿಧಾನಸಭಾ ಅಧಿವೇಶನದಲ್ಲಿ ಕಳೆದ ಕೆಲ ದಿನಗಳಿಂದ ಸಿಡಿ ಪ್ರಕರಣದ್ದೇ ಸದ್ದು. ಬೇರೆಲ್ಲಾ ವಿಷಯಗಳ ಚರ್ಚೆಯನ್ನು ಬಿಜೆಪಿಯವರ ಸಿಡಿ ಪ್ರಕರಣ ಹಾಳು ಮಾಡಿದೆ. ಕಾಂಗ್ರೆಸ್ ಸದಸ್ಯರು ಸಿಡಿಗಳನ್ನು ಕೈಯಲ್ಲಿ ಹಿಡಿದು ಇಂದು ಕೂಡ ಧರಣಿ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರು ಕಲಾಪ ನಡೆಯದಂತೆ ಘೋಷಣೆ ಕೂಗಿದ್ದಾರೆ. ಧಿಕ್ಕಾರಗಳ ನಡುವೆಯೇ ಮುಖ್ಯಮಂತ್ರಿಗಳು ತಮ್ಮ ಮಾತು ಮುಂದುವರೆಸಿದ್ದರು.
ರಮೇಶ್ ಜಾರಕಿಹೊಳಿ ಜೊತೆಗೆ, ತಮ್ಮ ವಿರುದ್ಧದ ಸುದ್ದಿ ಪ್ರಕಟಿಸಬಾರದು ಎಂದು ನ್ಯಾಯಾಲಯದಿಂದ ಆದೇಶ ತಂದಿದ್ದ 6 ಮಂದಿ ಸಚಿವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವರಾದ ಸುಧಾಕರ್ ಮತ್ತು ಬಿ.ಸಿ.ಪಾಟೀಲ್ ‘ಬೇರೆಯವರೇನು ಏಕಪತ್ನಿ ವ್ರತಸ್ಥರಾ..?, ‘ಎಲ್ಲರೂ ಶ್ರೀರಾಮಚಂದ್ರರಲ್ಲ’ ಎಂದಿದ್ದರು.
ಇದನ್ನೂ ಓದಿ: ‘ಬಾಂಬೆ ತಂಡ’ದ ಶಾಸಕರ ಕ್ಷೇತ್ರಗಳು ಭೂಲೋಕದ ಸ್ವರ್ಗಗಳಾಗಿವೆಯೇ: ಸಿಎಂಗೆ ಕುಮಾರಸ್ವಾಮಿ ಪ್ರಶ್ನೆ
ಸಚಿವರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಕರ್ನಾಟಕ ಕಾಂಗ್ರೆಸ್, #BJPblueBoys ಬಂಡತನದ ಮೂಲಕ ತಮ್ಮ ನೈತಿಕ ದಿವಾಳಿತನ ಪ್ರದರ್ಶಿಸಿದ್ದಾರೆ ಎಂದು ಟ್ವೀಟ್ ಮಾಡಿದೆ.
“ಬೇರೆಯವರೇನು ಏಕಪತ್ನಿ ವ್ರತಸ್ಥರಾ? ಎಂದಿರುವ ಡಾ.ಕೆ.ಸುಧಾಕರ್, ಎಲ್ಲರೂ ಶ್ರೀರಾಮಚಂದ್ರರಲ್ಲ ಎಂದಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಈ ಸಮರ್ಥನೆಗಳ ಮೂಲಕ ಬಿಜೆಪಿಗರು ತಾವು ಕಂಡವರ ಮನೆಯ ಹೆಣ್ಣುಮಕ್ಕಳನ್ನ ಮಂಚಕ್ಕೆ ಕರೆದು ಅತ್ಯಾಚಾರ ಮಾಡುವವರು ಎನ್ನುವುದನ್ನ ಒಪ್ಪಿಕೊಂಡಿದ್ದಾರೆ” ಎಂದು ಕಿಡಿಕಾರಿದೆ.
ಜೊತೆಗೆ #BJPblueBoys ಬಂಡತನದ ಮೂಲಕ ತಮ್ಮ ನೈತಿಕ ದಿವಾಳಿತನ ಪ್ರದರ್ಶಿಸಿದ್ದಾರೆ ಎಂದು ಹೊಸ ಹ್ಯಾಶ್‌ಟ್ಯಾಗ್ ಬಳಸಿದೆ.
?ಬೇರೆಯವರೇನು ಏಕಪತ್ನಿ ವ್ರತಸ್ಥರಾ?
– @mla_sudhakar?ಎಲ್ಲರೂ ಶ್ರೀರಾಮಚಂದ್ರರಲ್ಲ
– @bcpatilkouravaಈ ಸಮರ್ಥನೆಗಳ ಮೂಲಕ ಬಿಜೆಪಿಗರು ತಾವು ಕಂಡವರ ಮನೆಯ ಹೆಣ್ಣುಮಕ್ಕಳನ್ನ ಮಂಚಕ್ಕೆ ಕರೆದು ಅತ್ಯಾಚಾರ ಮಾಡುವವರು ಎನ್ನುವುದನ್ನ ಒಪ್ಪಿಕೊಂಡಿದ್ದಾರೆ.#BJPblueBoys ಬಂಡತನದ ಮೂಲಕ ತಮ್ಮ ನೈತಿಕ ದಿವಾಳಿತನ ಪ್ರದರ್ಶಿಸಿದ್ದಾರೆ.
— Karnataka Congress (@INCKarnataka) March 24, 2021
ಇದನ್ನೂ ಓದಿ: ಎಲ್ಲೆಲ್ಲೋ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಬಿಜೆಪಿ ನಾಯಕರಿಗಾಗಿ ಬಟ್ಟೆ ಖರೀದಿ- ಸಿದ್ದರಾಮಯ್ಯ
ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು. ಸಂತ್ರಸ್ತ ಯುವತಿಗೆ ನ್ಯಾಯ ನೀಡಬೇಕು ಎಂದಿರುವ ಕಾಂಗ್ರೆಸ್, ಪ್ರಕರಣದ ತನಿಖೆಯನ್ನು ಸ್ವತಂತ್ರ ಸಂಸ್ಥೆ ನಡೆಸಬೇಕು ಎಂದು ಆಗ್ರಹಿಸಿದೆ.
’ರಾಜಕೀಯಕ್ಕೆ ರಾಮನ ಹೆಸರು ಬಳಸುವ ನೀವು, ರಾಮನ ಆದರ್ಶ ಏಕೆ ಪಾಲಿಸುತ್ತಿಲ್ಲ? ಕಳಂಕಿತರಾದ 6 ಸಿಡಿ ಸಚಿವರ ರಾಜೀನಾಮೆ ಪಡೆದು ರಾಮನ ಮೇಲೆ ನಿಮಗಿರುವ ನೈಜ ಗೌರವ ನಿರೂಪಿಸಿ ಎಂದು ಕರ್ನಾಟಕ ಬಿಜೆಪಿಯನ್ನು ಆಗ್ರಹಿಸಿದೆ. ತನಿಖೆ ಎಂಬ “ಅಗ್ನಿಪರೀಕ್ಷೆ”ಯಲ್ಲಿ ಗೆದ್ದು ಪವಿತ್ರರು ಎಂದು ಈ ಆರು ಮಂದಿ ಸಿಡಿ ಸಚಿವರು ಸಾಬೀತುಪಡಿಸಲಿ’ ಎಂದಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೇಲೆ ಯುವತಿಯೊಬ್ಬರಿಗೆ ಕೆಲಸದ ಆಮಿವೊಡ್ಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪವಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿಡಿಯೋ ಸಿ.ಡಿ ಜೊತೆಗೆ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಚಿವರಾದ ಡಾ. ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್, ನಾರಾಯಣ ಗೌಡ, ಶಿವರಾಮ್ ಹೆಬ್ಬಾರ್, ಬಿ.ಸಿ ಪಾಟೀಲ್, ಭೈರತಿ ಬಸವರಾಜ್ ತಮ್ಮ ವಿರುದ್ಧ ಯಾವುದೆ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು.
ಇದನ್ನೂ ಓದಿ: ಜಾರಕಿಹೊಳಿ ಲೈಂಗಿಕ ಪ್ರಕರಣ: ಸದನದಲ್ಲಿ ಸಿಡಿ ಹಿಡಿದು ಕಾಂಗ್ರೆಸ್ ನಾಯಕರ ಪ್ರತಿಭಟನೆ


