ರಾಜ್ಯದಲ್ಲಿ ಕೊರೊನಾ ಜೊತೆ ಜೊತೆಗೆ ಕಪ್ಪು ಶಿಲೀಂದ್ರ ಪ್ರಕರಣಗಳು ಪತ್ತೆಯಾಗುತ್ತಿವೆ. ಇದುವರೆಗೆ 97 ಮಂದಿಯಲ್ಲಿ ಸೋಂಕು ಕಂಡು ಬಂದಿದೆ ಮತ್ತು ನಾಲ್ವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ. ಕಪ್ಪು ಶಿಲೀಂದ್ರ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ ನಾಲ್ವರಲ್ಲಿ ಮೂರು ಬೆಂಗಳೂರಿನವರಾಗಿದ್ದಾರೆ, ಒಬ್ಬರು ಕೋಲಾರ ಜಿಲ್ಲೆಯವರು ಎಂದು ಮಾಹಿತಿ ನೀಡಿದ್ದಾರೆ.
ಸೋಂಕಿನ ಬಗ್ಗೆ ಚರ್ಚಿಸಲು ಆರೋಗ್ಯ ಸೌಧದಲ್ಲಿ ಸಚಿವ ಕೆ. ಸುಧಾಕರ್ ನೇತೃತ್ವದಲ್ಲಿ, ನೇತ್ರ ತಜ್ಞ ಭುಜಂಗಶೆಟ್ಡಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ತಜ್ಞರ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಬೆಂಗಳೂರು ಹೊರತುಪಡಿಸಿ ಮೈಸೂರು ಮೆಡಿಕಲ್ ಕಾಲೇಜು, ಶಿವಮೊಗ್ಗ ಮೆಡಿಕಲ್, ಜಿಮ್ಸ್, ಕಿಮ್ಸ್, ಕೆಎಂಸಿ ಹಾಗೂ ವೆನ್‌ಲಾಕ್ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಬ್ಲಾಕ್ ಫಂಗಸ್‌ಗೆ ಇಬ್ಬರು ಬಲಿ- ಪ್ರಕರಣಗಳ ನಿಖರ ಮಾಹಿತಿಯಿಲ್ಲ ಎಂದ ಆರೋಗ್ಯ ಸಚಿವರು!
?ಕಪ್ಪು ಶಿಲೀಂದ್ರ ಸೋಂಕನ್ನು ಈಗ ಅಧಿಕೃತವಾಗಿ ಸೂಚಿತ ಖಾಯಿಲೆ ಎಂದು ಘೋಷಿಸಲಾಗಿದ್ದು ಎಲ್ಲ ಆಸ್ಪತ್ರೆಗಳು ಪ್ರಕರಣಗಳನ್ನು ವರದಿ ಮಾಡಬೇಕು.
?ಇದರ ಚಿಕಿತ್ಸೆಗೆ ಬಳಸುವ Amphotericin B ಎಂಬ ಔಷಧದ 20,000 ವೈಯಲ್ಸ್ ಗಳನ್ನ ತರಿಸಲು ನಿರ್ಧರಿಸಿದ್ದು, ಆಕ್ಸಿಜನ್ ಕಲುಷಿತಗೊಳ್ಳುತ್ತಿರುವ ಮೂಲಗಳನ್ನು ಅರಿಯಲು ಕ್ರಮ ಕೈಗೊಳ್ಳಲಾಗುವುದು.
3/4 pic.twitter.com/rM4yEdwZcP
— Dr Sudhakar K (@mla_sudhakar) May 17, 2021
ಕಪ್ಪು ಶಿಲೀಂದ್ರ ಸೋಂಕನ್ನು ಈಗ ಅಧಿಕೃತವಾಗಿ ಸೂಚಿತ ಖಾಯಿಲೆ ಎಂದು ಘೋಷಿಸಲಾಗಿದ್ದು ಎಲ್ಲ ಆಸ್ಪತ್ರೆಗಳು ಪ್ರಕರಣಗಳನ್ನು ವರದಿ ಮಾಡಬೇಕು. ಇದರ ಚಿಕಿತ್ಸೆಗೆ ಬಳಸುವ Amphotericin B ಎಂಬ ಔಷಧದ 20,000 ವೈಯಲ್ಸ್ ಗಳನ್ನ ತರಿಸಲು ನಿರ್ಧರಿಸಿದ್ದು, ಆಕ್ಸಿಜನ್ ಕಲುಷಿತಗೊಳ್ಳುತ್ತಿರುವ ಮೂಲಗಳನ್ನು ಅರಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.
ಡಾ.ಎಚ್.ಎಸ್.ಸತೀಶ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿಲಾಗಿದ್ದು ಸೋಂಕಿನ ಕಾರಣ ಮತ್ತು ಚಿಕಿತ್ಸೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಭಾನುವಾರ ಈ ಕುರಿತು ಮಾತನಾಡಿದ್ದ ಸಚಿವರು, “ರಾಜ್ಯದಲ್ಲಿ ಎಷ್ಟು ಜನ ಬ್ಲಾಕ್ ಫಂಗಸ್ ಪ್ರಕರಣ ದಾಖಲಾಗಿದೆ. ಎಷ್ಟು ಜನ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ನಿಖರ ಮಾಹಿತಿಯಿಲ್ಲ. ಖಾಸಗಿ ಆಸ್ಪತ್ರೆಯಲ್ಲಿಯೂ ಅನೇಕರು ದಾಖಲಾಗಿದ್ದಾರೆ, ಹೀಗಾಗಿ ಖಚಿತ ಮಾಹಿತಿ ಲಭ್ಯವಿಲ್ಲ. ಇದಕ್ಕಾಗಿ ನಾವು ತಜ್ಞರ ಸಮಿತಿ ರಚನೆ ಮಾಡ್ತಿದ್ದೇವೆ. ಅಂಕಿ ಅಂಶಗಳು, ಚಿಕಿತ್ಸೆ ವಿಧಾನದ ಬಗ್ಗೆ ಸಮಿತಿ ನಮಗೆ ಮಾರ್ಗದರ್ಶನ ಈ ಸಮಿತಿ ನೀಡುತ್ತೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? – ಕಾಂಗ್ರೆಸ್ ಅಭಿಯಾನ


