Homeಮುಖಪುಟ‘ಆತನ ಮುಖ ನೋಡಿದರೆ ಆತ ಮುಗ್ಧ ಅನಿಸುತ್ತದೆ’: ಸುಶಾಂತ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಹೇಳಿಕೆ

‘ಆತನ ಮುಖ ನೋಡಿದರೆ ಆತ ಮುಗ್ಧ ಅನಿಸುತ್ತದೆ’: ಸುಶಾಂತ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಹೇಳಿಕೆ

- Advertisement -
- Advertisement -

ಬಿಹಾರ್‌ದಿಂದ ಬಂದು ಬಾಲಿವುಡ್‌ನಲ್ಲಿ ಯಾವುದೇ ಗಾಡ್‌ಫಾದರ್‌ಗಳ ‘ಆಶೀರ್ವಾದ’ವಿಲ್ಲದೇ, ಸ್ವ-ಪ್ರತಿಭೆಯಿಂದ ಗಮನ ಸೆಳೆದ ಸುಶಾಂತ್ ಸಿಂಗ್ ಸಾವಿನ ಕುರಿತ ಅನುಮಾನ-ಸಂದೇಹಗಳು ಸಂಪೂರ್ಣ ತನಿಖೆ ಮತ್ತು ಅಂತಿಮ ತೀರ್ಪಿನ ನಂತರವಷ್ಟೇ ಗೊತ್ತಾಗಲಿವೆ. ಆದರೆ ಬಾಂಬೆ ಹೈಕೋರ್ಟ್ ‘ಮುಖ ನೋಡಿದರೆ ಆತ ಮುಗ್ಧ’ ಎಂದು ಹೇಳಿದ್ದು ವಿಚಿತ್ರ ಅಲ್ಲವೇ?

ಗುರುವಾರ ಬಾಂಬೆ ಹೈಕೋರ್ಟ್, ‘ಎಂ.ಎಸ್ ಧೋನಿ: ಆ್ಯನ್ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾದಲ್ಲಿನ ಸುಶಾಂತ್‌ಸಿಂಗ್ ಅಭಿನಯವನ್ನು ಹೊಗಳಿದೆಯಲ್ಲದೇ, ನಟನ ಮುಖ, ಮುಖಭಾವದಿಂದ ಆತ ಒಳ್ಳೆಯ ಮನುಷ್ಯನಾಗಿದ್ದ, ಯಾವುದೇ ವ್ಯಸನವಿರದ ವ್ಯಕ್ತಿಯಾಗಿದ್ದ ಎಂಬುದು ಗೊತ್ತಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ಇಂತಹ ಅಭಿಪ್ರಾಯಗಳಿಗೆ ನ್ಯಾಯ ವ್ಯವಸ್ಥೆಯಲ್ಲಿ ಮಾನ್ಯತೆಯಿದೆಯೇ ಎಂಬ ಬಗ್ಗೆ ನಮ್ಮಂತಹ ಜನಸಾಮಾನ್ಯರಿಗೆ ಗೊತ್ತಿಲ್ಲ. ಮುಖ ಬಿಡಿ, ಅವರ ಜನಪರ ಕಾಳಜಿ, ಸೇವೆ ಪರಿಗಣಿಸಿದ್ದರೆ ಇವತ್ತು ಎಲ್ಗಾರ್ ಸಮಾವೇಶದಲ್ಲಿ ‘ಅಸಂಭವನೀಯ ಆರೋಪಗಳ’ ಅಡಿಯಲ್ಲಿ ಬಂಧಿತರಾದ ಚಿಂತಕರು, ಹೋರಾಟಗಾರರಿಗೆ ಕನಿಷ್ಟ ಜಾಮೀನಾದರೂ ಸಿಗಬೇಕಿತ್ತು ಅಲ್ಲವೆ?

ಈಗ ಗುರುವಾರದ ಕೋರ್ಟ್ ವಿಚಾರಣೆಗೆ ಮತ್ತೆ ಬರೋಣ. ಸುಶಾಂತ್‌ಸಿಂಗ್ ಅವರ ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಮತ್ತು ಮೀತು ಸಿಂಗ್ ಸಲ್ಲಿಸಿದ್ದ ಪಿಟಿಷನ್ ವಿಚಾರಣೆಯ ತೀರ್ಪನ್ನು ಕಾಯ್ದಿರಿಸುವ ಮುನ್ನ ಎಸ್. ಎಸ್ ಶಿಂಧೆ ಮತ್ತು ಎಂ.ಎಸ್ ಕಾರ್ನಿಕ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ಹೊರ ಹಾಕಿದೆ. ‘ತಮ್ಮ ಸಹೋದರನಿಗಾಗಿ ತಾವು ಮೆಡಿಕಲ್ ಪ್ರಿಸ್ಕಿಪ್ಸನ್ ತಿದ್ದಿದ ಮತ್ತು ಫೋರ್ಜರಿ ಮಾಡಿದ ಆರೋಪವನ್ನು ನಮ್ಮ ಮೇಲೆ ಹೊರಿಸುವ ಎಫ್‌ಐಆರ್ ವಜಾ ಮಾಡಬೇಕು’ ಎಂದು ಸಲ್ಲಿಸಿದ್ದ ಪಿಟಿಷನ್ ವಿಚಾರಣೆಯ ವೇಳೆ ಪೀಠ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಬರಹದ ಉದ್ದೇಶ ಗುರುವಾರ ನ್ಯಾಯಾಲಯದಲ್ಲಿ ನಡೆದ ಬೆಳವಣಿಗಗಳನ್ನು ವರದಿ ಮಾಡುವುದಲ್ಲ. ಬದಲಿಗೆ ‘ಮುಖ ನೋಡಿ ಮೊಳ ಹಾಕುವ’ ಸಂಪ್ರದಾಯ ಇದು ಹೊಸದೋ ಅಥವಾ ಮೊದಲಿನಿಂದಲೂ ಇದೆಯೋ?

ಬಿಹಾರ್ ಚುನಾವಣೆಯಲ್ಲೂ ನಟನ ಸಾವಿನ ದುರಂತವನ್ನು ಬಳಸಿಕೊಳ್ಳಲಾಯಿತು. ವ್ಯಾಟ್ಸಾಪ್ ಚಾಟ್‌ಗಳ ಆಧಾರದಲ್ಲಿ ಮಾಧ್ಯಮಗಳು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯೇ ‘ಕೊಲೆಗಾರ್ತಿ’ ಎಂದು ಅಂದೇ ತೀರ್ಪು ಕೊಟ್ಟುಬಿಟ್ಟಿದ್ದವು. ಈ ಪ್ರಕರಣಕ್ಕೆ ಡ್ರಗ್ಸ್ ಆಯಾಮವೂ ಸೇರಿಕೊಂಡಿತು. ಅದರ ತನಿಖೆಯೂ ಈಗ ಸ್ಥಗಿತವಾಗಿದೆ.

‘ಆತನ ಮುಖ ನೋಡಿದರೆ, ಅದರಲ್ಲೂ ಧೋನಿ ಕುರಿತಾದ ಸಿನಿಮಾದಲ್ಲಿ ಆತನ ಮುಖ ನೋಡಿದರೆ ಆತ ಮುಗ್ಧ ಮತ್ತು ವ್ಯಸನಿಯಲ್ಲ ಎಂಬುದು ಗೊತ್ತಾಗುತ್ತದೆ ಎಂಬ ಹೇಳಿಕೆ ಒಂಥರಾ ‘ಸಿನಿಮೀಯ ಡೈಲಾಗ್’ ಅನಿಸುತ್ತಿದೆ ಅಲ್ಲವೇ?

ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಸುಶಾಂತ್ ಸಿಂಗ್ ಕೊಲೆಯಾಗಿಲ್ಲ; ಇದು ಆತ್ಮಹತ್ಯೆ: ಮುಂಬೈ ಪೊಲೀಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...