Homeಮುಖಪುಟಶೇ. 7.7 ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ಅಂದಾಜು: ತೀವ್ರವಾಗಿ ಕುಸಿಯಲಿರುವ 2020-21ರ ಆರ್ಥಿಕತೆ

ಶೇ. 7.7 ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ಅಂದಾಜು: ತೀವ್ರವಾಗಿ ಕುಸಿಯಲಿರುವ 2020-21ರ ಆರ್ಥಿಕತೆ

ನಿರ್ಮಾಣ, ಉತ್ಪಾದನೆ, ಗಣಿಗಾರಿಕೆ ಮತ್ತು ಸೇವಾ ಉದ್ಯಮಗಳು ಹೆಚ್ಚು ಹಾನಿಗೊಳಗಾಗಲಿವೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ಮೊದಲ ಮುಂಗಡ ಜಿಡಿಪಿ ಅಂದಾಜು ಹೇಳಿದೆ.

- Advertisement -
- Advertisement -

2020-21ರಲ್ಲಿ ಭಾರತದ ಆರ್ಥಿಕತೆಯು ತನ್ನ ಅತ್ಯಂತ ಕೆಟ್ಟ ಕುಸಿತವನ್ನು ಕಾಣಲಿದ್ದು, ಶೇ 7.7 ಪ್ರಮಾಣದಲ್ಲಿ ಆರ್ಥಿಕತೆ ಸಂಕುಚಿತಗೊಳ್ಳಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ. (ಸಂಕುಚಿತಗೊಳ್ಳುವಿಕೆ ಋಣಾತ್ಮಕ ಬೆಳವಣಿಗೆ ಸೂಚಿಸುತ್ತದೆ. ಗ್ರಾಫ್ ಗಮನಿಸಿ.)

ಭಾರತದ ಆರ್ಥಿಕ ಬೆಳವಣಿಗೆಯು 2019-20ರಲ್ಲಿ ಶೇ. 4.2 ಪ್ರಮಾಣದಲ್ಲಿತ್ತು. ಆರ್ಥಿಕ ವರ್ಷದ ಮೊದಲರ್ಧ ಭಾಗದಲ್ಲಿ ಹಲವು ಹಣಕಾಸು ಸಂಸ್ಥೆಗಳು ಮತ್ತು ರೇಟಿಂಗ್ ಏಜೆನ್ಸಿಗಳು, ಭಾರತದ ಆರ್ಥಿಕತೆ ಎರಡಂಕಿ ಪ್ರಮಾಣದಲ್ಲಿ ಸಂಕುಚಿತಗೊಳ್ಳಬಹುದು ಎಂದು ಅಂದಾಜಿಸಿದ್ದವು. ಆದರೆ ಎನ್‌ಎಸ್‌ಒ ಈಗ ಬಿಡುಗಡೆ ಮಾಡಿರುವ ಮೊದಲ ಮುಂಗಡ ಅಂದಾಜು ಕೇವಲ ಒಂದಂಕಿ ಸಂಕುಚಿತತೆ (ಶೇ.7.7) ಎಂದು ಸೂಚಿಸಿದೆ. ಆದರೂ ಇದು ದೇಶದ ಅತಿ ಕೆಟ್ಟ ಆರ್ಥಿಕ ಕುಸಿತ ಎನ್ನಲಾಗಿದೆ.

ಮೊದಲಿಗೆ ಆರ್ಥಿಕ ವೃದ್ಧಿ ದರವನ್ನು ಶೇಕಡಾ -9.5  (ಮೈನಸ್ 9.5%) ಎಂದು ಅಂದಾಜಿಸಿದ್ದ ಆರ್‌ಬಿಐ, ಡಿಸೆಂಬರ್‌ನಲ್ಲಿ ಅದನ್ನು ಶೇಕಡಾ -7.5 ಎಂದು ಅಂದಾಜಿಸಿದೆ.

2020-21ರಲ್ಲಿ ಕೃಷಿಯು ಶೇ. 3.4 ದರದ ಬೆಳವಣಿಗೆ ಕಾಣುವ ಅಂದಾಜಿದೆ. ನಿರ್ಮಾಣ ಮತ್ತು ಗಣಿಗಾರಿಕೆಗಳು ಕ್ರಮವಾಗಿ ಶೇ. 9.4 ಮತ್ತು ಶೇ. 12.4 ಪ್ರಮಾಣದಲ್ಲಿ ಸಂಕುಚಿತಗೊಳ್ಳಲಿವೆ, ಅಂದರೆ ಎರಡೂ ಖಣಾತ್ಮಕ ಬೆಳವಣಿಗೆ ಕಾಣಲಿವೆ.

ವ್ಯಾಪಾರ, ಹೋಟೆಲ್ ಸಾರಿಗೆ ಮತ್ತು ಕಮ್ಯುನಿಕೇಷನ್ ಕ್ಷೇತ್ರಗಳು ಅತಿ ಹೆಚ್ಚು ಪ್ರಮಾಣದ ಸಂಕುಚಿತತೆಗೆ (ಶೇ.21.4) ಒಳಗಾಗಲಿದ್ದರೆ, ನಂತರದಲ್ಲಿರುವ ನಿರ್ಮಾಣ ಕ್ಷೇತ್ರವು ಶೇ. 12.6 ರ ಪ್ರಮಾಣದ ಕುಸಿತ ಕಾಣಲಿದೆ.

ನಾಮಿನಲ್ ಜಿಡಿಪಿಯು ಶೇ. 4.2 ದರದಲ್ಲಿ ಸಂಕುಚಿತಗೊಂಡು, 194.82 ಲಕ್ಷ ಕೋಟಿ ರೂ.ಗಳಾಗಲಿದೆ. ವಾಸ್ತವ ಬೆಳವಣಿಗೆ ಜೊತೆಗೆ ಬೆಲೆಯೇರಿಕೆ ಅಂಶವನ್ನೂ ನಾಮಿನಲ್ ಜಿಡಿಪಿ ಒಳಗೊಂಡಿದೆ.

ಸರ್ಕಾರ ಬಜೆಟ್ ಪ್ರಕ್ರಿಯೆ ನಡೆಸಲು ಅನುಕೂಲವಾಗಲೆಂದು ಎನ್‌ಎಸ್‌ಒ ಈ ಅಂದಾಜನ್ನು ಪ್ರಕಟಿಸುತ್ತದೆ.
‘ಜಿಡಿಪಿ ಅಂದಾಜು ಮೂರನೆ ಮತ್ತು ನಾಲ್ಕನೆ ತ್ರೈಮಾಸಿಕದಲ್ಲಿ ಆರ್ಥಿಕತೆಯ ಚೇತರಿಕೆಯನ್ನು ಸೂಚಿಸುತ್ತದೆ’ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಕಾರಣಕ್ಕೆ ಎರಡು ತಿಂಗಳು ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡ ಕಾರಣಕ್ಕೆ ಈ ಹಣಕಾಸು ವರ್ಷವು ಭಾರತಕ್ಕೆ ಸವಾಲಿನ ವರ್ಷವಾಗಿದೆ.

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆ ಶೇ. 23.9 ಕುಸಿತವನ್ನು ಕಂಡಿತ್ತು. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 7.5 ಸಂಕುಚಿತತೆ ಕಂಡಿತ್ತು. ಎನ್‌ಎಸ್‌ಒ ಅಂಕಿಅಂಶದ ಪ್ರಕಾರ ರಫ್ತು ಮತ್ತು ಆಮದುಗಳಲ್ಲೂ ಕುಸಿತ ಸಂಭವಿಸಲಿದೆ.


ಇದನ್ನೂ ಓದಿ: ರಫ್ತಿನಲ್ಲಿ ಶೇ.0.8 ಕುಸಿತ: 15.71 ಬಿಲಿಯನ್ ಡಾಲರ್‌ಗೇರಿದ‌ ಭಾರತದ ವ್ಯಾಪಾರ ಕೊರತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...