Homeಮುಖಪುಟಬೊಮ್ಮಾಯಿಯವರು ಬಯಸುವ ಯುಪಿ ಮಾದರಿಯ ಆಳ-ಅಗಲ ಬಲ್ಲಿರೇನು!?

ಬೊಮ್ಮಾಯಿಯವರು ಬಯಸುವ ಯುಪಿ ಮಾದರಿಯ ಆಳ-ಅಗಲ ಬಲ್ಲಿರೇನು!?

2020 ರಲ್ಲಿ ಅತಿ ಹೆಚ್ಚು ಅಪಹರಣ ಮತ್ತು ಕೊಲೆ ನಡೆದ ರಾಜ್ಯ ಉತ್ತರ ಪ್ರದೇಶವಾಗಿದೆ.

- Advertisement -
- Advertisement -

ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಕಳೆದ ಒಂದು ವಾರದಲ್ಲಿ ಮೂವರು ಯುವಜನರನ್ನು ಕೊಲೆ ಮಾಡಲಾಗಿದೆ. ಮತಾಂಧರ ರಕ್ತದಾಹಕ್ಕೆ ಮಸೂದ್, ಪ್ರವೀಣ್ ನೆಟ್ಟಾರ್ ಮತ್ತು ಫಾಝಿಲ್ ಎಂಬ ಹರೆಯದ ಯುವಕರು ಪ್ರಾಣ ತೆತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ, ಶಾಂತಿ ಸ್ಥಾಪಿಸಬೇಕಾದ ಜವಾಬ್ದಾರಿ ಸಿಎಂ ಬಸವರಾಜ ಬೊಮ್ಮಾಯಿಯವರದಾಗಿದೆ.

ಪ್ರವೀಣ್ ನೆಟ್ಟಾರು ಕೊಲೆ ಹಿನ್ನೆಲೆಯಲ್ಲಿ ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಅವರು, “ಉತ್ತರ ಪ್ರದೇಶದ ಮಾದರಿ ಅನುಸರಿಸಬೇಕು ಎನ್ನುತ್ತಿದ್ದಾರೆ. ಅಗತ್ಯ ಬಿದ್ದರೆ ಯುಪಿ ಮಾಡೆಲ್, ಯೋಗಿ ಮಾಡೆಲ್ ಅನುಸರಿಸಲಾಗುವುದು” ಎಂದು ಹೇಳಿದ್ದಾರೆ. ಹಾಗಾದರೆ ಯುಪಿ ಮಾಡೆಲ್ ಎಂದರೇನು? ಯಾರು ಯಾರಿಗೆ ಮಾದರಿಯಾಗಬೇಕು ಎಂಬುದನ್ನು ನೋಡೋಣ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇನ್ನೋವೇಷನ್ ಇಂಡೆಕ್ಸ್‌

ಕಳೆದ ವಾರ ಬಿಡುಗಡೆಯಾದ ನೀತಿ ಆಯೋಗದ ನಾವೀನ್ಯತೆ ಸೂಚ್ಯಂಕ (ಇನ್ನೋವೇಷನ್ ಇಂಡೆಕ್ಸ್‌) ವರದಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶ 7ನೇ ಸ್ಥಾನದಲ್ಲಿದೆ. ಮಾನವ ಸಂಪನ್ಮೂಲದ ಬಳಕೆ, ಹೂಡಿಕೆಯ ಆಕರ್ಷಣೆ, ಆರೋಗ್ಯ-ಶಿಕ್ಷಣ-ಕೃಷಿ-ಕಾನೂನು ವಲಯಗಳಲ್ಲಿನ ಸಾಧನೆ ಸೇರಿದಂತೆ ಇತ್ಯಾದಿ ಅಂಶಗಳ ಆಧಾರದಲ್ಲಿ ಇದನ್ನು ಅಳೆಯಲಾಗುತ್ತದೆ. ಈ ಸೂಚ್ಯಂಕದಲ್ಲಿ ಕರ್ನಾಟಕ ರಾಜ್ಯವು ಸತತ ಎರಡನೇ ಭಾರಿಗೆ ಮೊದಲ ಸ್ಥಾನ ಕಾಯ್ದುಕೊಂಡಿದೆ.

ಉತ್ತಮ ಆಡಳಿತ ಸೂಚ್ಯಂಕ

ಗುಡ್ ಗರ್ವನೆನ್ಸ್ ಇಂಡೆಕ್ಸ್ ಎಂದು ಕರೆಯಲಾಗುವು ಉತ್ತಮ ಆಡಳಿತದ ಸೂಚ್ಯಂಕದಲ್ಲಿ ಕೇರಳ ರಾಜ್ಯವು ಮೊದಲ ಸ್ಥಾನ ಪಡೆದರೆ, ಕರ್ನಾಟಕ 06 ನೇ ಸ್ಥಾನದಲ್ಲಿದೆ. ಗಮನಿಸಬೇಕಾದ ಅಂಶವೆಂದರೆ ಉತ್ತರ ಪ್ರದೇಶ ರಾಜ್ಯವು ಕೊನೆಯ ಸ್ಥಾನದಲ್ಲಿದ್ದು, ಕಳಪೆ ಆಡಳಿತಕ್ಕೆ ಕುಖ್ಯಾತಿಯಾಗಿದೆ.

ಉದ್ಯೋಗ ಸೃಷ್ಟಿ:

ಸಿಎಂಐಇ ವರದಿ ಪ್ರಕಾರ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ರಾಜ್ಯವು 05ನೇ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶ 15 ನೇ ಸ್ಥಾನದಲ್ಲಿದೆ.

ಬಡತನ:

ಉತ್ತರ ಪ್ರದೇಶದ ಮೂರು ಜಿಲ್ಲೆಗಳು ಸುಮಾರು 70% ಮತ್ತು ಅದಕ್ಕಿಂತ ಹೆಚ್ಚಿನ ಬಡತನದ ಅನುಪಾತವನ್ನು ಹೊಂದಿವೆ. ಶ್ರಾವಸ್ತಿ (74.38%), ಬಹ್ರೈಚ್ (71.88%), ಮತ್ತು ಬಲರಾಂಪುರ (69.45%). ಆದರೆ ಕರ್ನಾಟಕದಲ್ಲಿ ಬಡತನದ ಪ್ರಮಾಣ ತೀರಾ ಕಡಿಮೆ ಇದೆ.

ವಾಸ ಯೋಗ್ಯ ನಗರಗಳ ಪಟ್ಟಿ:

ದೇಶದಲ್ಲಿಯೇ ಅತ್ಯುನ್ನತ ಮೂಲಸೌಕರ್ಯ ಹೊಂದಿರುವ, ಉತ್ತಮ ಪರಿಸರ ಹೊಂದಿರುವ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರು, ಮೈಸೂರು ಸ್ಥಾನ ಪಡೆದಿವೆಯೆ ಹೊರತು ಉತ್ತರ ಪ್ರದೇಶದ ಲಕ್ನೋ, ಕಾನ್ಪುರ ಅಲ್ಲ ಎಂಬುದನ್ನು ಗಮನಿಸಬಹುದಾಗಿದೆ.

ಜಿಎಸ್‌ಟಿ ಸಂಗ್ರಹ:

20 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಯುಪಿ 2022ರ ಏಪ್ರಿಲ್ ತಿಂಗಳಲ್ಲಿ 8,534 ಕೋಟಿ ರೂ ಜಿಎಸ್‌ಟಿ ಪಾವತಿಸಿದೆ. ಆದರೆ ಅದೇ ತಿಂಗಳಿನಲ್ಲಿ ಕೇವಲ 6.5 ಕೋಟಿ ಜನಸಂಖ್ಯೆ ಇರುವ ಕರ್ನಾಟಕ 11,820 ಕೋಟಿ ರೂ ಜಿಎಸ್‌ಟಿ ಪಾವತಿಸಿದೆ. 

ಅಪರಾಧಗಳ ಸೂಚ್ಯಂಕ

NCRB ಪ್ರಕಟಿಸುವ ವರದಿ ಪ್ರಕಾರ ಕ್ರೈಮ್ ರೇಟ್‌ ನಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಕರ್ನಾಟಕ 20ರ ನಂತರದ ಸ್ಥಾನದಲ್ಲಿದೆ. 2020 ರಲ್ಲಿ ಅತಿ ಹೆಚ್ಚು ಅಪಹರಣ ಮತ್ತು ಕೊಲೆ ನಡೆದ ರಾಜ್ಯ ಉತ್ತರ ಪ್ರದೇಶವಾಗಿದೆ.

ಸಾಕ್ಷರತೆ:

ಸಾಕ್ಷರತೆಯಲ್ಲಿ ಕರ್ನಾಟಕ 17ನೇ ಸ್ಥಾನ ಪಡೆದರೆ ಉತ್ತರ ಪ್ರದೇಶ 19ನೇ ಸ್ಥಾನ ಪಡೆದಿದೆ. ಎಂದಿನಂತೆ ಕೇರಳ ಮೊದಲ ಸ್ಥಾನದಲ್ಲಿದೆ.

ಹ್ಯುಮನ್ ಇಂಡೆಕ್ಸ್:

ಜನರ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟವನ್ನು ಆಧರಿಸಿ ಹ್ಯುಮನ್ ಇಂಡೆಕ್ಸ್ ಅನ್ನು ಅಳೆಯಲಾಗುತ್ತದೆ. ಅದರಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ 19ನೇ ಸ್ಥಾನದಲ್ಲಿದೆ ಮತ್ತು ಉತ್ತರ ಪ್ರದೇಶ 35 ಅಂದರೆ ಕೊನೆಯ ಸ್ಥಾನದಲ್ಲಿದೆ. ಅಲ್ಲದೆ

ಮಹಿಳಾ ಸುರಕ್ಷತೆಯ ವಿಚಾರದಲ್ಲಿ – ಕೆಟ್ಟ ರಾಜ್ಯ ಉತ್ತರ ಪ್ರದೇಶ

ಅತಿ ಹೆಚ್ಚು ಅತ್ಯಾಚಾರಗಳು ನಡೆಯುವ ರಾಜ್ಯ ಉತ್ತರ ಪ್ರದೇಶ

ಆರೋಗ್ಯ ಸೂಚ್ಯಂಕದಲ್ಲಿ ಭಾರತದ ಅತ್ಯಂತ ಕೆಟ್ಟ ರಾಜ್ಯ ಉತ್ತರ ಪ್ರದೇಶ

ವಾಯು ಮಾಲಿನ್ಯದಲ್ಲಿ ಭಾರತದ ಅತ್ಯಂತ ಕೆಟ್ಟ ರಾಜ್ಯ ಉತ್ತರ ಪ್ರದೇಶ

ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಭಾರತದ ಅತ್ಯಂತ ಕೆಟ್ಟ ರಾಜ್ಯ ಉತ್ತರ ಪ್ರದೇಶ

ಶಿಕ್ಷಣ ಗುಣಮಟ್ಟ ಸೂಚ್ಯಂಕದಲ್ಲಿ ಭಾರತದ ಅತ್ಯಂತ ಕೆಟ್ಟ ರಾಜ್ಯ ಉತ್ತರ ಪ್ರದೇಶ

ಕೋವಿಡ್ ಸಮಯದಲ್ಲಿ ಗಂಗೆಯಲ್ಲಿ ಹೆಣಗಳು ತೇಲಿಬಂದ ರಾಜ್ಯ ಉತ್ತರ ಪ್ರದೇಶ

ಕರ್ನಾಟಕಕ್ಕೆ ಹೆಚ್ಚು ಉದ್ಯೋಗ ಅರಸಿ ಬರುವವರು, ಸೆಕ್ಯುರಿಟಿ ಕೆಲಸ ಮತ್ತು ಗೋಲ್‌ಗಪ್ಪ, ಪಾನೀಪುರಿ ಮಾರುವ ಹೆಚ್ಚಿನವರು ಉತ್ತರ ಪ್ರದೇಶದವರು

ಇಂತಹ ಕೆಳಮಟ್ಟದಲ್ಲಿರುವ ಉತ್ತರ ಪ್ರದೇಶ ರಾಜ್ಯವು ಕರ್ನಾಟಕಕ್ಕೆ ಮಾದರಿಯಾಗಬಲ್ಲದೆ? ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವ ಗೂಂಡಾ ರಾಜ್ಯ ಎಂದು ಕರೆಸಿಕೊಳ್ಳುವ ಉತ್ತರ ಪ್ರದೇಶವನ್ನು ಯಾವ ಆಧಾರದಲ್ಲಿ ಮಾದರಿಯಾಗಿ ತೆಗೆದುಕೊಳ್ಳಬಹುದು ಎಂಬುದನ್ನು ಸಿಎಂ ಬೊಮ್ಮಾಯಿಯವರು ವಿವರಿಸಬೇಕಿದೆ.

ಸರ್ಕಾರ ನೀತಿ ನಿರ್ಧಾರಗಳನ್ನು ಪ್ರಶ್ನಿಸುವವರ, ಹೋರಾಟಗಾರರ ಮನೆ ಮೇಲೆ ಅಸಾಂವಿಧಾನಿಕವಾಗಿ ಬುಲ್ಡೋಜರ್ ಹರಿಸುವುದಕ್ಕೆ ಉತ್ತರ ಪ್ರದೇಶ ಕುಖ್ಯಾತಿಯಾಗಿದೆ. ಇದು ದೇಶದ ಸಂವಿಧಾನ, ಕಾನೂನು ಮತ್ತು ನ್ಯಾಯವ್ಯವಸ್ಥೆ ಮೇಲೆ ನಂಬಿಕೆ ಇಲ್ಲದವರು ಮಾಡುವ ಕೆಲಸ. ಅದಕ್ಕಾಗಿಯೇ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ತರಾಟೆಗೆ ತೆಗೆದುಕೊಂಡಿವೆ. ಅವರು ನಮಗೆ ಖಂಡಿತ ಮಾದರಿಯಾಗುವುದಿಲ್ಲ.

ಈ ಮೊದಲೇ ಹೇಳಿದಂತೆ ಹ್ಯುಮನ್ ಇಂಡೆಕ್ಸ್, ಶಿಕ್ಷಣ, ಉದ್ಯೋಗ ಸೃಷ್ಟಿ ಇತ್ಯಾದಿ ವಿಚಾರಗಳನ್ನು ಪರಿಗಣಿಸಿದರೆ ನಮಗೆ ನೆರೆಯ ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳು ಮಾದರಿಯಾಗುತ್ತವೆಯೇ ಹೊರತು ಉತ್ತರ ಪ್ರದೇಶವಲ್ಲ.

ಇನ್ನು ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿರುವುದಕ್ಕೆ ನೇರ ಕಾರಣ ಇದೇ ಬಸವರಾಜ ಬೊಮ್ಮಾಯಿಯವರೆ ಆಗಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದಲ್ಲಿ ನಡೆಯುತ್ತಿದ್ದ ಮತೀಯ ಗೂಂಡಾಗಿರಿ ಪ್ರಕರಣಗಳನ್ನು ತಡೆಯುವ ಬದಲು ಕ್ರಿಯೆಗೆ ಪ್ರತಿಕ್ರಿಯೆ ಇದ್ದೆ ಇರುತ್ತದೆ ಎಂದು ಹೇಳುವ ಮೂಲಕ ಅವುಗಳನ್ನು ಸಮರ್ಥಿಸಿಕೊಂಡರು. ತಮ್ಮ ಪ್ರತಿ ನಡೆಯಲ್ಲಿಯೂ ಕೋಮವಾದವನ್ನು ಉದ್ದೀಪನಗೊಳಿಸಿದರು. ಅದರ ಫಲವಾಗಿ ಇಂದು ಕ್ರಿಯೆಗೆ ಪ್ರತಿಕ್ರಿಯೆ, ಪ್ರತಿಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಸಾಲು ಸಾಲು ಹೆಣಗಳು ಬೀಳುತ್ತಿವೆ. ಕರ್ನಾಟಕದ ಗೌರವ ರಾಷ್ಟ್ರಮಟ್ಟದಲ್ಲಿ ಮಣ್ಣು ಪಾಲಾಗುತ್ತಿದೆ. ಸಿಎಂ ಬೊಮ್ಮಾಯಿಯವರೆ ದ್ವೇಷದಿಂದ, ಮತಾಂಧತೆಯಿಂದ ರಾಜ್ಯವನ್ನು, ದೇಶವನ್ನು ಮುನ್ನಡೆಸಲಾಗದು ಎಂದು ಈಗಲಾದರೂ ಅರಿಯಿರಿ. ಶಾಂತಿ, ಪ್ರೀತಿ, ಸರ್ವಧರ್ಮ ಸಮಾನತೆ, ಸೌಹಾರ್ದತೆ ಮಾತ್ರವೇ ನಮ್ಮನ್ನು ಉಳಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನರರಾಕ್ಷ SDPI,PFI ಬಗ್ಗೆ ವರದಿಮಾಡಲು ಆಗದ ನಾಮಾರ್ಧ ಶಂಡರ ಪತ್ರಿಕೆ ಎಂದರೆ ಇದೇ ಅನಿಸುತ್ತೇ

  2. Up ಮಾಡೆಲ್ ಮಾಡಿ ರಾಜ್ಯದ ಮರ್ಯಾದೆ ವಿದೇಶಗಳಲ್ಲೂ ಹರಾಜು ಮಾಡಬೇಕು ಅನ್ನೋದು ಇವರ ತುಷ್ಟ ಮನಸ್ಥಿತಿ, ದೇಶಕ್ಕೆ ಒಂದು ಒಳ್ಳೆ ಕಾರ್ಯ ಮಾಡದಿದ್ರೂ ಕೂಡ ಇಂತಹ ರಾಜಕಾರಣಿಗಳಿಗೆ ಅಭಿಮಾನಿಗಳು ಇದಾರೆ ಅಂದ್ರೆ ಅವು ಎಂಥ ಹೇಸಿಗೆ ಮನಸ್ಥಿತಿ ಹೊಂದಿರಬೇಕು ಥೂ.. ಇವರನ್ನು ಅಭಿನಂದಿಸೋ ನರಹೇಡಿಗಳಿಗೆ 😡😡😡

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...