Homeಕರ್ನಾಟಕಕೊರೋನಾ ಹೆಸರಿನಲ್ಲಿ ಕಾರ್ಮಿಕರ ಹಣಕ್ಕೆ ಕೈ ಹಾಕಿದ ಬಿಎಸ್‍ವೈ ಸರ್ಕಾರ

ಕೊರೋನಾ ಹೆಸರಿನಲ್ಲಿ ಕಾರ್ಮಿಕರ ಹಣಕ್ಕೆ ಕೈ ಹಾಕಿದ ಬಿಎಸ್‍ವೈ ಸರ್ಕಾರ

- Advertisement -
- Advertisement -

ಕಟ್ಟಡ ಕಾರ್ಮಿಕರ ನಿಧಿಯನ್ನು ಕಾರ್ಮಿಕರ ಯೋಗಕ್ಷೇಮವಲ್ಲದೆ ಬೇರೆ ಯಾವುದೇ ಕೆಲಸಕ್ಕೆ ಬಳಸಿಕೊಳ್ಳಬಾರದು ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಆದರೂ ಕರ್ನಾಟಕದಲ್ಲಿ ಈ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಅನರ್ಹ ಶಾಸಕರಿಂದ ಅಸ್ಥಿತ್ವಕ್ಕೆ ಬಂದ ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳಿಗೆ ಅನ್ಯಾಯವೆಸಗುತ್ತಿದೆ. ಸ್ವತಃ ಸಿಎಂ ಯಡಿಯೂರಪ್ಪನವರೇ ಇಂತಹ ಅಮಾನವೀಯ ಭ್ರಷ್ಟಾಚಾರಕ್ಕೆ ಅಂಕಿತ ಹಾಕಿರುವುದು ದುರಾದೃಷ್ಟಕರ.
ಟಿ ಉಮೇಶ್, ಸಿಐಟಿಯು

ಭಾರತ ಮತ್ತು ಕರ್ನಾಟಕದಲ್ಲಿ ಕೊರೋನಾ ಕೈಮೀರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಪರಿಣಾಮ ನೆರೆಯ ಕೇರಳದಿಂದ ಹರಿಯಾಣದವರೆಗೆ ಎಲ್ಲಾ ಸರ್ಕಾರಗಳೂ ಜನಪರ ಯೋಜನೆಗಳ ಕಡೆಗೆ ಗಮನ ನೀಡುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ಸ್ವತಃ ರಾಜ್ಯ ಸರ್ಕಾರವೇ ಕಾರ್ಮಿಕರ ನಿಧಿಗೆ ಸದ್ದಿಲ್ಲದೆ ಕನ್ನ ಹಾಕುವ ಕೆಲಸಕ್ಕೆ ಮುಂದಾಗಿದೆ. ಪರಿಣಾಮ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ವಲಯ ಕೊರೋನಾಗಿಂತ ಮುಂಚಿತವಾಗಿಯೇ ಹಸಿವಿಗೆ ಬಲಿಯಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ಕಳೆದ ತಿಂಗಳು ಪತ್ರಿಕಾಗೋಷ್ಠಿ ನಡೆಸಿ ವಿಶೇಷ ಕೊರೋನಾ ಪ್ಯಾಕೇಜ್ ಘೋಷಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಲ್ಲಾ ರಾಜ್ಯಗಳಲ್ಲೂ ಕಟ್ಟಡ ಕಾರ್ಮಿಕರ ನಿಧಿಯಲ್ಲಿ ಅಪಾರ ಪ್ರಮಾಣದ ಹಣ ಇದ್ದು ಈ ಹಣವನ್ನು ಕಾರ್ಮಿಕರ ಯೋಗಕ್ಷೇಮಕ್ಕೆ ಬಳಸಬೇಕು ಎಂದು ಸೂಚನೆ ನೀಡಿದ್ದರು. ಆದರೆ ಕರ್ನಾಟಕದಲ್ಲಿ ಮಾತ್ರ ಈ ಹಣ ಕೆಲವು ರಾಜಕಾರಣಿಗಳ ಯೋಗಕ್ಷೇಮಕ್ಕೆ ಬಳಕೆಯಾಗುತ್ತಿರುವುದು ವಿಷಾಧಕರ ಸಂಗತಿ. ಅಸಲಿಗೆ ಕರ್ನಾಟಕದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಸಂಗ್ರಹವಾಗಿರುವ ಹಣದ ಪ್ರಮಾಣ ಎಷ್ಟು? ರಾಜ್ಯದಲ್ಲಿರುವ ಕಾರ್ಮಿಕರ ಸಂಖ್ಯೆ ಎಷ್ಟು? ಕಾರ್ಮಿಕರ ಹಣವನ್ನು ಹೇಗೆಲ್ಲಾ ಲೂಟಿ ಮಾಡಲಾಗುತ್ತಿದೆ? ಲೂಟಿ ಮಾಡಲು ಸ್ವತಃ ಸಿಎಂ ಅನುವು ಮಾಡಿಕೊಟ್ಟರೇ? ಹೀಗೆ ಎಲ್ಲಾ ಪ್ರಶ್ನೆಗಳಿಗೂ ಇಲ್ಲದೆ ಉತ್ತರ!

ಕಟ್ಟಡ ಕಾರ್ಮಿಕರ ಸಂಖ್ಯೆ-ಸಂಗ್ರಹವಾಗಿರುವ ನಿಧಿ ಎಷ್ಟು?

2017ರ ವರೆಗೆ ಕಳೆದ 13 ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಕಟ್ಟಡ ಕಾರ್ಮಿಕರ ಸಂಖ್ಯೆ ಬರೋಬ್ಬರಿ 21 ಲಕ್ಷ. ಆದರೆ, 2018ರಲ್ಲಿ ನವೀಕರಿಸಿಕೊಂಡ ಕಾರ್ಮಿಕರ ಸಂಖ್ಯೆ ಕೇವಲ 1.3 ಲಕ್ಷ ಮಾತ್ರ. ಇನ್ನೂ ಬೆಂಗಳೂರಿನಲ್ಲೇ 3 ರಿಂದ 5 ಲಕ್ಷದ ವರೆಗೆ ಕಟ್ಟಡ ಕಾರ್ಮಿಕರಿದ್ದು ಈ ಪೈಕಿ ಬಹುಪಾಲು ಜನ ತಮ್ಮ ಹೆಸರನ್ನು ಸಂಘಟನೆಯಲ್ಲಿ ನೋಂದಾಯಿಸಿಕೊಂಡಿಲ್ಲ. ಕಾರಣ 2018ರಲ್ಲಿ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಗುರುತನ್ನು ನೋಂದಾಯಿಸಲು ಆನ್ಲೈನ್ ವ್ಯವಸ್ಥೆಯನ್ನು ಪರಿಚಯಿಸಿತ್ತು. ಹೀಗಾಗಿ ಆನ್ಲೈನ್ ಬಳಸಲು ಬಾರದ ಅನೇಕರು ತಮ್ಮ ಹೆಸರನ್ನು ನೋಂದಾಯಿಸಲು ಸಾಧ್ಯವಾಗಿಲ್ಲ.

ಈ 21 ಲಕ್ಷ ಅಲ್ಲದೆ, ವಲಸೆ ಕಟ್ಟಡ ಕಾರ್ಮಿಕರೂ ಸೇರಿದಂತೆ ರಾಜ್ಯದಲ್ಲಿ ಈವರೆಗೆ ನೋಂದಾವಣೆಯಾಗದ ಕಾರ್ಮಿಕರ ಸಂಖ್ಯೆಯೇ ಸುಮಾರು ಅಂದಾಜು 12 ಲಕ್ಷ ಇದೆ. ಹೇಗೆ ನೋಡಿದರೂ ರಾಜ್ಯದಲ್ಲಿ ಒಟ್ಟು 33 ರಿಂದ 35 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ ಎಂದು ಲೆಕ್ಕ ನೀಡುತ್ತಾರೆ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಮಹಾಂತೇಶ್.

ಕಾರ್ಮಿಕರ ಯೋಗಕ್ಷೇಮವನ್ನು ನೋಡಿಕೊಳ್ಳುವ ಸಲುವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಇದೆ. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಈ ಮಂಡಳಿಯ ಅಧ್ಯಕ್ಷರು. ಇನ್ನೂ ಕಟ್ಟಡ ಮಾಲೀಕರು ಕಟ್ಟುವ ಶೇ.1 ರಷ್ಟು ಸೆಸ್ ಹಣ ಈ ಮಂಡಳಿಗೆ ಸಂದಾಯವಾಗುತ್ತದೆ. ಹೀಗೆ ಕಟ್ಟಡ ಕಾರ್ಮಿಕರ ನಿಧಿಯಲ್ಲಿ ಸಂಗ್ರಹವಾಗಿರುವ ಹಣವೇ ರಾಜ್ಯದಲ್ಲಿ ಬರೋಬ್ಬರಿ 8,500 ಕೋಟಿ ಇದೆ.

ಕೊರೋನಾ ಹೆಸರಲ್ಲಿ ಕಾರ್ಮಿಕರ ನಿಧಿಗೂ ಕನ್ನ!

ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡುತ್ತಿದ್ದಂತೆ ಊಟಕ್ಕಿಲ್ಲದೆ ಸಾವಿರಾರು ಜನ ಬೆಂಗಳೂರು, ಮಂಗಳೂರಿನಂತಹ ಮಹಾ ನಗರಗಳಿಂದ ತಮ್ಮ ಊರಿಗೆ ಕಾಲ್ನಡಿಗೆಯಲ್ಲೇ ಹೊರಟಿದ್ದರು. ಈ ವೇಳೆ ನೂರಾರು ಕಿಮೀ ನಡೆದಿದ್ದ ಗಂಗಮ್ಮ ಎಂಬ ಮಹಿಳೆ ಬಳ್ಳಾರಿ ಬಳಿ ಮೃತರಾಗಿದ್ದ ದುರಂತವನ್ನು ಭಾಗಶಃ ಕನ್ನಡಿಗರು ಮರೆತಿರಲಿಕ್ಕಿಲ್ಲ.

ಉತ್ತರ ಕರ್ನಾಟಕ ಮಾತ್ರವಲ್ಲ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಿಂದ ಅಪಾರ ಸಂಖ್ಯೆಯ ಕಟ್ಟಡ ಕಾರ್ಮಿಕರು ಕೆಲಸಕ್ಕೆಂದು ವಲಸೆ ಬಂದು ಬೆಂಗಳೂರಿನಂತಹ ಮಹಾನಗರದ ಗೂಡು ಸೇರಿದ್ದಾರೆ. ಇನ್ನೂ ರಾಜ್ಯದ ನಾನಾ ಮೂಲೆಗಳಲ್ಲಿ ನೆಲೆಸಿರುವ ಕಟ್ಟಡ ಕಾರ್ಮಿಕರ ಸಂಖ್ಯೆಯೂ ಅಪಾರ. ಈ ಎಲ್ಲರೂ ದಿನನಿತ್ಯ ಕೂಲಿ ಮಾಡಿ ಬದುಕುವವರು. ಹೀಗಾಗಿ ಸರ್ಕಾರದ ಲಾಕ್‍ಡೌನ್ ನಿರ್ಧಾರ ಮೊದಲ ಪರಿಣಾಮ ಬೀರುವುದೇ ಇಂತಹ ಜನರ ಮೇಲೆ. ಇದೇ ಕಾರಣಕ್ಕೆ ಕಾರ್ಮಿಕರ ಸಂಘಟನೆಗಳು ಒಂದಾಗಿ ಕಲ್ಯಾಣ ಮಂಡಳಿ ಹಣ ಬಳಸಿ ಆರಂಭದ ದಿನದಲ್ಲೇ ಎಲ್ಲಾ ಕಾರ್ಮಿಕರಿಗೂ ಮನೆ ಮನೆಗೆ ಊಟ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದವು.

ನಂತರ ಊಟದ ಬದಲು ಕಾರ್ಮಿಕರ ಮನೆಗಳಿಗೆ ಆಹಾರ ಧಾನ್ಯಗಳ ಕಿಟ್ ನೀಡಿದರೆ ಅವರೇ ಅಡುಗೆ ಮಾಡಿ ಊಟ ಮಾಡುತ್ತಾರೆ ಎಂದು ಉದ್ದೇಶಿಸಲಾಗಿತ್ತು. ಇಸ್ಕಾನ್ ಅವರ ಅಕ್ಷಯ ಪಾತ್ರೆ ಸಂಸ್ಥೆಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಎಲ್ಲಾ ಅವಶ್ಯಕ ವಸ್ತುಗಳನ್ನೂ ಹೊಂದಿರುವ 750 ರೂ. ಮುಖ ಬೆಲೆಯ 1 ಲಕ್ಷ ಆಹಾರ ಕಿಟ್ ತಯಾರಿಸಿ ನೀಡಲು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಆದೇಶಿಸಿತ್ತು.
ಇದೊಂದು ಆದೇಶ ಸರಿಯಾಗಿ ಪಾಲನೆಯಾಗಿದ್ದರೆ ಭಾಗಶಃ ಇಂದು ಕಾರ್ಮಿಕರು ಹಸಿದ ರಾತ್ರಿಗಳನ್ನು ಕಾಣುತ್ತಿರಲಿಲ್ಲವೇನೋ? ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊರಡಿಸಿದ ಆ ಒಂದು ಆದೇಶ ಇಂದು ಕಾರ್ಮಿಕರ ಅನ್ನವನ್ನು ಕಸಿದುಬಿಟ್ಟಿದೆ.

ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟರಾ ಬಿಎಸ್‍ವೈ?

ಅಸಲಿಗೆ ಕಾರ್ಮಿಕರಿಗೆ ಬೇಕಾದ ಸವಲತ್ತುಗಳನ್ನು ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಸಲುವಾಗಿಯೇ ಕಾರ್ಮಿಕ ಸಂಘಟನೆಗಳು ಇವೆ. ಇನ್ನೂ ಸರ್ಕಾರದ ಅಧೀನದಲ್ಲೇ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಇದೆ. ಯಾವುದೇ ಕಾರ್ಯಕ್ರಮವನ್ನು ಈ ಮಂಡಳಿ ಅಥವಾ ಕಾರ್ಮಿಕರ ಸಂಘಟನೆಯಿಂದ ಕಾರ್ಮಿಕರಿಗೆ ಯಶಸ್ವಿಯಾಗಿ ತಲುಪಿಸಲು ಸಾಧ್ಯ. ಹೀಗಾಗಿ ಆಹಾರದ ಕಿಟ್‍ಗಳನ್ನು ಮಂಡಳಿಯೇ ಕಾರ್ಮಿಕರಿಗೆ ನೀಡಲು ಮುಂದಾಗಿತ್ತು. ಆದರೆ, ಏಪ್ರಿಲ್ 06 ರಂದು ಆದೇಶ ಹೊರಡಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಲ್ಲಾ ಆಹಾರದ ಕಿಟ್‍ಗಳನ್ನು ಪಾಲಿಕೆ ಸದಸ್ಯರು ಮತ್ತು ಶಾಸಕರಿಂದಲೇ ಕಾರ್ಮಿಕರಿಗೆ ತಲುಪಿಸಬೇಕು ಎಂದು ಸುತ್ತೋಲೆಯೊಂದನ್ನು ಹೊರಡಿಸಿಬಿಟ್ಟಿದ್ದರು.

ಈ ಸುತ್ತೋಲೆ ಹೊರಡಿಸಿದ್ದೇ ತಡ ಎಲ್ಲಾ ಆಹಾರದ ಕಿಟ್‍ಗಳನ್ನು ಪ್ರತಿ ವಾರ್ಡ್‍ಗೆ ಇಷ್ಟು ಎಂದು ಲೆಕ್ಕ ಹಾಕಿ ಈಗಾಗಲೇ ಪಾಲಿಕೆ ಸದಸ್ಯರು ಮತ್ತು ಶಾಸಕರಿಗೆ ನೀಡಲಾಗಿದೆ. ಮತ್ತು ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಖರೀದಿಸಲಾಗಿರುವ ಈ ಆಹಾರದ ಕಿಟ್‍ಗಳನ್ನು ಕಾರ್ಮಿಕರಿಗೆ ನೀಡಬೇಕು ಎಂದು ಸೂಚಿಸಲಾಗಿದೆ.

ಆದರೆ, ಶಾಸಕರು ಹಾಗೂ ಪಾಲಿಕೆ ಸದಸ್ಯರು ಮಾತ್ರ ಈ ಆಹಾರದ ಕಿಟ್‍ಗಳನ್ನು ಕಾರ್ಮಿಕರಿಗೆ ನೀಡುತ್ತಿಲ್ಲ, ಬದಲಾಗಿ ತಮ್ಮ ಕ್ಷೇತ್ರದ ಮತದಾರರಿಗೆ ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ.

ಬೆಂಗಳೂರಿನಲ್ಲಿರುವ ಬಹುಪಾಲು ಕಟ್ಟಡ ಕಾರ್ಮಿಕರು ಇಲ್ಲಿನ ಮೂಲದವರಲ್ಲ. ಕೆಲಸಕ್ಕಾಗಿ ಹಳ್ಳಿಗಳಿಂದ ಇಲ್ಲಿಗೆ ವಲಸೆ ಬಂದವರು. ಹೀಗಾಗಿ ಇವರಿಗೆ ಸಾಮಾನ್ಯವಾಗಿ ಇಲ್ಲಿ ಮತದಾರ ಚೀಟಿ ಹಾಗೂ ಯಾವುದೇ ಗುರುತು ಇರುವುದಿಲ್ಲ. ಇಂತವರಿಗೆ ಕಿಟ್ ನೀಡುವ ಮೂಲಕ ರಾಜಕಾರಣಿಗಳಿಗೆ ಆಗುವ ಲಾಭವಾದರೂ ಏನು? ಹೀಗಾಗಿಯೇ ಅವರು ಆಹಾರದ ಕಿಟ್‍ಗಳನ್ನು ಕಾರ್ಮಿಕರಿಗೆ ನೀಡುವ ಮೂಲಕ ತಮ್ಮ ಕ್ಷೇತ್ರದ ಮತದಾರರಿಗೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಬೆಂಗಳೂರಿನಲ್ಲಿ ಈವರೆಗೆ ಅಂದಾಜು 60,000 ಕಾರ್ಮಿಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಕಾಪೆರ್Çೀಟರ್‍ಗಳು ಹಾಗೂ ಶಾಸಕರು ಹೇಳುತ್ತಿದ್ದಾರೆ. ಆದರೆ, ಯಾವ ವಾರ್ಡ್‍ನಲ್ಲಿ ಎಷ್ಟು? ಮತ್ತು ಯಾರಿಗೆ ವಿತರಿಸಲಾಗಿದೆ ಎಂಬ ಕುರಿತು ಯಾವುದೇ ಲೆಕ್ಕಾಚಾರ ಇಲ್ಲದಂತಾಗಿದೆ. ಪರಿಣಾಮ ಅತ್ತ ಕೆಲಸವೂ ಇಲ್ಲದೆ, ಕೂಲಿಯೂ ಇಲ್ಲದೆ ಇತ್ತ ಊಟವೂ ಇಲ್ಲದೆ ಬಡ ಕಾರ್ಮಿಕರು ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆ ಹಾಕಿಕೊಂಡು ಮಲಗುವಂತಾಗಿದೆ.

ಕಾರ್ಮಿಕರ ನಿಧಿಯಲ್ಲಿ ಶಾಸಕರ ಶೋಕಿ ಪ್ರಚಾರ

ರಾಜ್ಯ ಕಟ್ಟಡ ಕಾರ್ಮಿಕರ ಹಣವನ್ನು ಕೊರೋನಾ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಕಾರ್ಮಿಕರ ಕಲ್ಯಾಣ ನಿಧಿಯಲ್ಲೇ ಖರೀದಿಸಿದ ಆಹಾರದ ಕಿಟ್‍ಗಳಿಗೆ ರಾಜಕಾರಣಿಗಳು ತಮ್ಮ ಫೋಟೋಗಳನ್ನು ಹಾಕಿಕೊಂಡು ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಇತ್ತೀಚೆಗೆ ಜನರಿಗೆ ವಿತರಿಸಲು ತಂದಿದ್ದ ಆಹಾರದ ಕಿಟ್‍ಗಳ ಮೇಲೆ ತಮ್ಮ ಭಾವಚಿತ್ರವನ್ನು ಮುದ್ರಿಸಿ ವಿತರಣೆ ಮಾಡುವ ಮೂಲಕ ವಿರೋಧ ಪಕ್ಷದ ನಾಯಕರ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಅಲ್ಲದೆ, ಇತ್ತೀಚೆಗೆ ಚಿತ್ರನಟಿ ಬಿಜೆಪಿ ನಾಯಕಿ ಮಾಳವಿಕ ಆರ್‍ಎಸ್‍ಎಸ್ ಮುಖಂಡರ ಜೊತೆಗೂಡಿ ಬಡವರಿಗೆ ಆಹಾರ ವಿತರಣೆ ಮಾಡುವ ಕಾರ್ಯಕ್ರಮದ ಫೋಟೊವನ್ನು ಹಂಚಿಕೊಂಡಿದ್ದರು. ಆದರೆ, ಶಾಸಕ ಲಿಂಬಾವಳಿ ಮತ್ತು ಚಿತ್ರನಟಿ ಮಾಳವಿಕ ವಿತರಣೆ ಮಾಡಿದ್ದ ಎಲ್ಲಾ ಆಹಾರದ ಕಿಟ್‍ಗಳನ್ನೂ ಕಾರ್ಮಿಕರ ನಿಧಿಯಿಂದಲೇ ಖರೀದಿಸಲಾಗಿತ್ತು ಎಂಬುದು ಉಲ್ಲೇಖಾರ್ಹ. ಆದರೆ, ಕಾರ್ಮಿಕರ ನಿಧಿ ಹೀಗೆಲ್ಲಾ ದುರುಪಯೋಗವಾಗುತ್ತಿದ್ದರೂ, ಕಾರ್ಮಿಕರು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದರೂ ಸಹ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರದ್ದು ಮಾತ್ರ ಜಾಣ ಮೌನ.

ಇನ್ನಾದರೂ ಕಾರ್ಮಿಕರಿಗೆ ನ್ಯಾಯ ಒದಗಿಸಿ:

ರಾಜ್ಯದಲ್ಲಿ ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಕಟ್ಟಡ ಕಾರ್ಮಿಕರಿಗೆ ಒಟ್ಟಾರೆ 2,000 ಹಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರಲ್ಲೂ ಮಂಡಳಿಯಲ್ಲಿ ತಮ್ಮ ಹೆಸರನ್ನು ನವೀಕರಿಸಿರುವ 1.3 ಲಕ್ಷ ಜನರಿಗೆ ಮಾತ್ರ ಸರ್ಕಾರ ಈ ಹಣವನ್ನು ನೀಡಲಿದೆ. ಆದರೆ, ಕೇವಲ 2000 ರೂಪಾಯಿಯಲ್ಲಿ ಬಡ ಕಾರ್ಮಿಕರ ಬದುಕು ನಡೆಯುವುದಾದರೂ ಹೇಗೆ? ಹೀಗಾಗಿ ಹರಿಯಾಣ ಸರ್ಕಾರದ ಮಾದರಿಯಲ್ಲಿ ಎಲ್ಲಾ ಕುಟುಂಬಕ್ಕೂ ವಾರಕ್ಕೆ ಒಂದು ಸಾವಿರದಂತೆ ರಾಜ್ಯ ಸರ್ಕಾರ ಪರಿಹಾರ ನೀಡಲಿ.

ಅಲ್ಲದೆ, ರಾಜ್ಯದಲ್ಲಿ ಕೇವಲ ಶೇ.5 ರಷ್ಟು ಜನ ಮಾತ್ರ ಮಂಡಳಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಕಾನೂನನ್ನೂ ಮೀರಿ ಎಲ್ಲರಿಗೂ ಸಹಾಯ ಹಸ್ತ ಚಾಚಬೇಕು ಎಂಬುದು ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಮಹಾಂತೇಶ್ ಅವರ ಅಭಿಮತ. ಆದರೆ, ರಾಜ್ಯ ಸರ್ಕಾರ ಈ ಕುರಿತು ಯಾವ ನಿರ್ಧಾರಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕಾರ್ಮಿಕರ ನಿದಿಯ ಹಣವನ್ನು ಕಾರ್ಮಿಕರ ಏಳಿಗೆಗೆ ಮಾತ್ರ ಕರ್ಚು ಮಾಡಬೇಕು.

  2. ಕಾರ್ಮಿಕರ ಹಣ ಕಾರ್ಮಿಕರಿಗಾಗಿ ಖರ್ಚು ಮಾಡಲಾಗಿದೆ, ಇದು ಏನು ಆಧಾರ್ ಇಲ್ಲದೆ ಆರೋಪ ಮಾಡಿದ್ದಾರೆ ಕಾರ್ಮಿಕ ಹಣ ಯಾವ ಅದ್ಯಾದೆಶ ಯಾವ ಜಿ ಓ ಮೂಲಕ ತಗೆದಿದ್ದರೆ ಈ ಬಂಡಲ್ ಬಡಾಯಿ ಗಳು ಆಧಾರ್ ಇಲ್ಲದೆ ಆರೋಪಅಡುವುಫು ಒಂದು ಫ್ಯಾಶನ್

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...