ಮಧ್ಯಪ್ರದೇಶದಲ್ಲಿ ನಡೆದ 28 ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಮತ ಏಣಿಕೆ ನಡೆಯುತ್ತಿದ್ದು, ಬಿಜೆಪಿ ಬಹುಮತ ಕಾಯ್ದುಕೊಂಡಿದೆ. ಸದ್ಯ ಬಿಜೆಪಿ 18 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 9 ಸ್ಥಾನಗಳಲ್ಲಿ ಮುನ್ನೆಡೆ ಸಾಧಿಸಿವೆ. ಈ ಚುನಾವಣೆ ಮಾಜಿ ಸಿಎಂ ಕಮಲನಾಥ್ ಮತ್ತು ಸರ್ಕಾರ ಪಥನಕ್ಕೆ ಕಾರಣವಾದ ಜ್ಯೋತಿರಾಧಿತ್ಯ ಸಿಂಧಿಯಾಗೆ ಪ್ರತಿಷ್ಠೆಯೆ ಚುನಾವಣೆಯಾಗಿದೆ.
ಜ್ಯೋತಿರಾಧಿತ್ಯ ಸಿಂಧಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ 25 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾರ್ಚ್ 2020 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು, ಕಮಲ್ ನಾಥ್ ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಇನ್ನು ಮೂವರು ಶಾಸಕರ ಸಾವಿನ ನಂತರ ಮೂರು ಸ್ಥಾನಗಳು ಖಾಲಿ ಉಳಿದಿದ್ದವು.
ಇದನ್ನೂ ಓದಿ: 11 ರಾಜ್ಯಗಳಲ್ಲಿ ಉಪಚುನಾವಣೆ: 58 ಕ್ಷೇತ್ರಗಳಲ್ಲಿ 28 ರಲ್ಲಿ ಮುನ್ನಡೆಯಲ್ಲಿರುವ ಬಿಜೆಪಿ
ಪ್ರಸ್ತುತ, ಬಿಜೆಪಿ ವಿಧಾನಸಭೆಯಲ್ಲಿ 107 ಶಾಸಕರನ್ನು ಹೊಂದಿದ್ದು, ಅಧಿಕಾರದಲ್ಲಿರಲು ಕನಿಷ್ಠ ಒಂಬತ್ತು ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಸದ್ಯ ಉಪಚುನಾವಣೆ ಫಲಿತಾಂಶದಲ್ಲಿ 18 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನೆಡೆ ಸಾಧಿಸುತ್ತಿದೆ.
ಮತ್ತೊಂದೆಡೆ, ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಬಯಸಿದರೆ ಎಲ್ಲಾ 28 ಸ್ಥಾನಗಳನ್ನು ಗೆಲ್ಲಬೇಕು. ಬಿಎಸ್ಪಿ, ಎಸ್ಪಿ ಮತ್ತು ಸ್ವತಂತ್ರ ಶಾಸಕರೊಂದಿಗೆ ಸೇರಿ ಸರ್ಕಾರ ರಚಿಸುತ್ತೇವೆ ಎಂದರೂ ಸಹ ಕನಿಷ್ಠ 21 ಸ್ಥಾನಗಳನ್ನು ಗೆಲ್ಲಬೇಕಿದೆ. ಅದರೆ ಅದು 9 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಇದು ಬಿಜೆಪಿ ಸರ್ಕಾರ ಸುರಕ್ಷಿತ ಎಂಬ ಸೂಚನೆ ನೀಡುತ್ತಿದೆ.


