Homeಮುಖಪುಟಬಿಹಾರ ಫಲಿತಾಂಶ: ಮಹಾಘಟಬಂಧನ್ ಹಿಂದಿಕ್ಕಿದ ಎನ್‌ಡಿಎ- ನೇರಾನೇರ ಪೈಪೋಟಿ

ಬಿಹಾರ ಫಲಿತಾಂಶ: ಮಹಾಘಟಬಂಧನ್ ಹಿಂದಿಕ್ಕಿದ ಎನ್‌ಡಿಎ- ನೇರಾನೇರ ಪೈಪೋಟಿ

- Advertisement -
- Advertisement -

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಅಚ್ಚರಿ, ಕುತೂಹಲಗಳಿಗೆ ಕಾರಣವಾಗಿದೆ. ಮತ ಎಣಿಕೆ ಆರಂಭದಿಂದಲೂ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದ ಮಹಾಘಟಬಂಧನ್‌ಗೆ ಹಿನ್ನೆಡೆ ಶುರುವಾಗಿದೆ. ಎನ್‌ಡಿಎ ಪ್ರಬಲ ಪೈಪೋಟಿ ನೀಡುತ್ತಿದ್ದು ಸದ್ಯದ ವರದಿಗಳ ಪ್ರಕಾರ ಎನ್‌ಡಿಎ 119 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಮಹಾಘಟಬಂಧನ್ 115 ಸ್ಥಾನಗಳಿಗೆ ಕುಸಿದಿದೆ.

ಚಿರಾಗ್ ಪಾಸ್ವನ್ ನೇತೃತ್ವದ ಎಲ್‌ಜೆಪಿ ಪಕ್ಷವು ಸಹ ಗಮರ್ನಾಹ ಸಾಧನೆ ಮಾಡಿದ್ದು 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಕಿಂಗ್ ಮೇಕರ್ ಆಗಲು ಹೊರಟಿದೆ. ಎನ್‌ಡಿಎ ಅಥವಾ ಮಹಾಘಟಬಂಧನ್ ಎರಡೂ ಸ್ಪಷ್ಟ ಸರಳ ಬಹುಮತ ಪಡೆಯಲು ವಿಫಲರಾದಲ್ಲಿ ಎಲ್‌ಜೆಪಿ ಬೆಂಬಲ ಯಾರಿಗೆ ಎಂಬುದು ಮಹತ್ವದ ವಿಷಯವಾಗಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಜೆಪಿ ಕೇವಲ 02 ಸ್ಥಾನಗಳಲ್ಲಿ ಮಾತ್ರ ಜಯಿಸಿತ್ತು. ಆದರೆ ಈ ಬಾರಿ ಮತ್ತೆ 06 ಕ್ಷೇತ್ರಗಳಲ್ಲಿ ಮುನ್ನಡೆ ಹೆಚ್ಚಿಸಿಕೊಂಡಿದೆ. ಎನ್‌ಡಿಎ ಮುನ್ನಡೆ ಕಾಯ್ದುಕೊಂಡರು ಸಹ ಸಿಎಂ ನಿತೀಶ್ ಕುಮಾರ್‌ರವರ ಜೆಡಿಯು ಕಳೆದ ಬಾರಿಗಿಂತ 30 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಬಿಜೆಪಿಯು ಕಳೆದ ಸಾರಿಗಿಂತ 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆರ್‌ಜೆಡಿ ಸಹ ಕಳೆದ ಬಾರಿಗಿಂತ 6 ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಕಾಂಗ್ರೆಸ್ 1 ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ.


ಇದನ್ನೂ ಓದಿ: ಬಿಹಾರ ಫಲಿತಾಂಶ: ಗಮನಾರ್ಹ ಸಾಧನೆಗೈದ ಎಡಪಕ್ಷಗಳು – 13 ಸ್ಥಾನಗಳಲ್ಲಿ ಮುನ್ನಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...