Homeಮುಖಪುಟಪೌರತ್ವ ಕಾಯ್ದೆ ತಿದ್ದುಪಡಿಯ ಅಗತ್ಯವಿತ್ತೆ?

ಪೌರತ್ವ ಕಾಯ್ದೆ ತಿದ್ದುಪಡಿಯ ಅಗತ್ಯವಿತ್ತೆ?

- Advertisement -
- Advertisement -

ಇಂತಹ ಸಂಘರ್ಷದ ದಿನಗಳಲ್ಲಿ ಲೋಕ ಕಲ್ಯಾಣ ಮಾಡಲೆಂದೇ ಕಾವಿತೊಟ್ಟ ಮಹಾಸ್ವಾಮಿಗಳೇಕೋ ಮೌನಕ್ಕೆ ಶರಣಾಗಿದ್ದಾರೆ. ಮಠಗಳಿಗೆ ಹೆಚ್ಚು ಅನುದಾನ ಬೇಡುವ, ತಮ್ಮ ಜಾತಿಗಳಿಗೆ ಹೆಚ್ಚು ಮೀಸಲಾತಿ ನೀಡಬೇಕೆಂದು ರಾಜಕಾರಣಿಗಳೆದುರು ಬಾಯಿ ಬಾಯಿ ಬಿಡುವ ಇವರೇಕೋ ಬಾಯೇ ಬಿಡುತ್ತಿಲ್ಲ!

ನನಗೂ ಒಬ್ಬ ಹಿರಿಯ ಕವಯತ್ರಿ ಪ್ರಶ್ನೆ ಕೇಳಿದರು. ಮೋದಿ ಪರವೋ? ವಿರೋಧವೋ? ನಾನು ಹೇಳಿದೆ ಅವರ ಪರವೂ ಅಲ್ಲ ವಿರೋಧವೂ ಅಲ್ಲ. ನಾನು ನನ್ನಂಥವರು ಸಂವಿಧಾನದ ಪರ. ಆದರೆ ಮೋದಿಯವರ ಬಗ್ಗೆ ಗೌರವವಿದೆ. ಏಕೆಂದರೆ ಅವರು ಬಿಜೆಪಿ ಪ್ರಧಾನಿಯಲ್ಲ-ದೇಶದ ಪ್ರಧಾನಿ. ಹಾಗಂತ ಅವರು ತರುವ ಕಾಯ್ದೆ ತಿದ್ದುಪಡಿಗಳನ್ನೆಲ್ಲಾ ಒಪ್ಪಿಕೊಳ್ಳಬೇಕಿಲ್ಲ. ರಾಷ್ಟ್ರೀಯತೆಯ ಸೋಗಿನಲ್ಲಿ ಹುಸಿದೇಶಭಕ್ತಿ ತೋರುವ ಬಹುಮತವಿದೆ ಎಂಬ ಅಹಂಕಾರದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬೇರನ್ನೇ ಅಲ್ಲಾಡಿಸಬಹುದೆ. ಪೌರತ್ವ ಕಾಯ್ದೆ ತಿದ್ದುಪಡಿ ಮೂಲಕ ಸಿಎಎ ಮತ್ತು ಎನ್‍ಆರ್‍ಸಿ ತರುವ ತುರ್ತು ಏನಿತು? ಇದು ಸಂವಿಧಾನದ 14, 15ರ ನಿಯಮದ ಉಲ್ಲಂಘನೆಯಲ್ಲವೆ. ಪಾಕಿಸ್ತಾನ, ಬಾಂಗ್ಲಾ, ಆಫ್ಘಾನಿಸ್ಥಾನದಿಂದ ಧರ್ಮದ ಹಿಂಸೆಗೆ ಒಳಗಾಗಿ ಬಂದ ಹಿಂದೂ, ಜೈನ್, ಬೌದ್ಧ, ಸಿಖ್, ಪಾರ್ಸಿ, ಕ್ರೈಸ್ತ ಎಲ್ಲರಿಗೂ ಪೌರತ್ವ ಕೊಡುತ್ತ್ತದೆ, ಮುಸ್ಲಿಮರನ್ನು ಬಿಟ್ಟು. ಇದು ಧರ್ಮಾಧಾರಿತ ತಾರತಮ್ಯ ಹಾಗೂ ಅಸಂವಿಧಾನಿಕ. ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂಗಳ ಜೊತೆ ಮುಸಲ್ಮಾನರೂ ಹೋರಾಟ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ, ಜೈಲು ಸೇರಿದರೂ ಕ್ಷಮಾಪಣೆ ಕೇಳಿ ಆಚೆ ಬಂದವರಿಗೆಲ್ಲಾ ದೇಶದಲ್ಲಿ ಜಾಗವಿದೆ. ಇವರಿಗಿಲ್ಲವೆ? ಈ ದೇಶದ ಮುಸ್ಲಿಮರಿಗೆ ಇದು ಅನ್ವಯಿಸಿಲ್ಲವಂತೆ 1987 ರ ಮೊದಲು ಹುಟ್ಟಿದವರೆಲ್ಲಾ ಭಾರತೀಯರು, ಉಳಿದವರು ದಾಖಲೆ ಕೊಡಬೇಕೆಂಬುದಾದರೂ ಎಷ್ಟು ಸರಿ? ದುಡ್ಡಿರುವ ಮಂದಿ ಎಂತಹ ದಾಖಲೆಗಳನ್ನೂ ಕೊಂಡುಕೊಡಬಲ್ಲರು. ಬದುಕಿರುವವರಿಗೂ ದುಡ್ಡು ಕೊಟ್ಟರೆ ಸಾವಿನ ಪ್ರಮಾಣಪತ್ರ ಸಿಗುವಂತಹ ದುಷ್ಟ ವ್ಯವಸ್ಥೆಯಲ್ಲಿ ಬಡಬಗ್ಗರು, ಅನಕ್ಷರಸ್ಥರು, ಆದಿವಾಸಿಗಳು, ಬುಡಕಟ್ಟು ಜನರ ಪಾಡೇನು? ಹೊರಗಿನಿಂದ ಬಂದವರಿಗೆ ಪೌರತ್ವ ಕೊಡುತ್ತಾರೆ. ದೇಶವಾಸಿಗಳಿಗೆ ದಾಖಲೆ ಬೇಕಂತೆ! ಹೊರಗಿನಿಂದ ಬಂದವರಿಗೆಲ್ಲಾ ಪೌರತ್ವ ದಯಪಾಲಿಸಿದರೆ ಅವರಿಗೆಲ್ಲಾ ಊಟ, ವಸತಿ, ಉದ್ಯೋಗ, ಜಮೀನು ಜಹಗೀರು ಕೊಡುವಷ್ಟು ದೇಶ ಶಕ್ತವೆ. ದೇಶದ ಒಳಿತಿಗಾಗಿ ಕಾಯ್ದೆಯನ್ನು ಜಾರಿಗೆ ತರುವುದಾಗಿ ಜನರಲ್ಲಿ ಭ್ರಮೆ ಹುಟ್ಟಿಸುತ್ತಿರುವವರ ಅಂತರಂಗದಲ್ಲಿ ಒಳಿತು ಕಾಣುತ್ತಿಲ್ಲ. ಒಡೆದು ಆಳುವ ನೀತಿ ಗೋಚರವಾಗುತ್ತಿದೆ. ಪ್ರತಿವರ್ಷ 2 ಕೋಟಿ ಉದ್ಯೋಗವೆಂದರು. ಎಲ್ಲರ ಅಕೌಂಟಿಗೆ 15 ಲಕ್ಷವೆಂದರು. ನೋಟ್‍ಬ್ಯಾನ್ ಮಾಡಿ ಕಪ್ಪುಹಣ ಕೋಟಿ ಕೋಟಿ ತರುತ್ತೇವೆಂದರು. ಆದರೆ ದೇಶದ ಆರ್ಥಿಕ ಪರಿಸ್ಥಿತಿಯೇ ದಿವಾಳಿ ಎದ್ದಿದೆ. ಆರ್ಥಿಕ ಕಾರ್ಯದರ್ಶಿ ಸುಬ್ರಹ್ಮಣ್ಯ ಅವರೇ ವಿಷಾದಿಸಿದ್ದಾಯಿತು. ಆರ್‍ಬಿಐನಿಂದ ಕೋಟಿಗಟ್ಟಲೆ ಹಣ ಪಡೆದಿದ್ದಾಯಿತು. ಜಿಡಿಪಿ ದರ ಕುಸಿಯುತ್ತಿದೆ. ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಏರುತ್ತಿದೆ. ರೈತರಿಗೆ ದುಪ್ಪಟ್ಟು ಆದಾಯವೆಂದರು. ರೈತರ ಆತ್ಮಹತ್ಯೆಗಳು ನಡೆದೇ ಇವೆ. ಇದಕ್ಕೆಲ್ಲ ಪರಿಹಾರ ಹುಡುಕುವುದುನ್ನು ಬಿಟ್ಟು “ಎಲ್ಲಾ ಬಿಟ್ಟು ಮಗ ಭಂಗಿ ನೆಟ್ಟ” ಎಂಬಂತೆ ಸಿಎಎ ಎನ್‍ಸಿಆರ್ ತರುವ ತುರ್ತು ಅಗತ್ಯವೇನಿತ್ತು?

ನಡೆಯುತ್ತಿರುವ ಗಲಭೆಗಳಿಗೆ ಕಾಂಗ್ರೆಸಿಗರ ಕುಮ್ಮಕ್ಕಿದೆಯೆಂದರೆ ನಂಬಬಹುದೆ. ಕಾಂಗ್ರೆಸ್ ಎಲ್ಲಾ ಕಡೆ ಸೋತು ಅರ್ಧ ಸತ್ತಿದೆ. ಸಾವಿರಾರು ಯುವಕಯುವತಿಯರನ್ನು ಒಂದೆಡೆ ಸೇರಿಸುವ, ಹೋರಾಟ ರೂಪಿಸುವ ಶಕ್ತಿ ಅವರಿಗೆಲ್ಲಿಂದ ಬಂದೀತು. ಪ್ರಧಾನಿಯ ಹೆಸರಿಡಿದು ಸ್ಲೋಗನ್ ಹಾಕುತ್ತಿದ್ದ ಅದೇ ಯುವಶಕ್ತಿಯೇ ಇಂದು ನ್ಯಾಯಕ್ಕಾಗಿ ಬೀದಿಗಿಳಿದಿದೆ. ಅವರಿಗೆಲ್ಲಾ ಹುಸಿ ದೇಶಭಕ್ತಿ, ರಾಷ್ಟ್ರೀಯತೆ ನೆಪದಲ್ಲಿ ಕವಿದಿದ್ದ ಮಂಜು ಕರಗಿದಂತಿದೆ. ದೇಶದ ವಿಭಜನೆಯ ಕಾರ್ಯ ನೆಹರು ಕಾಲದಲ್ಲೇ ನಡೆದಿತ್ತು ಎಂದರೆ ನಂಬಬೇಕೆ. ಇತಿಹಾಸ ಓದಿದವರಿಗೆ ಗೊತ್ತಿದೆ. ಹಿಂದುತ್ವದ ಆರಾಧಕ ಸಾವರ್ಕರ್ ಮತ್ತು ಮುಸ್ಲಿಂ ಲೀಗಿನ ಜಿನ್ನಾ ಇದರ ರೂವಾರಿಗಳೆಂಬುದು ಗೊತ್ತಿದ್ದೂ ಜಾಣ ಮರವೆ? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ವಿಶ್ವಾಸ್ ಅನ್ನುವವರು ಉತ್ತರ ಪ್ರದೇಶ, ದೆಹಲಿ ಇತ್ಯಾದಿ ಕಡೆಗಳಲ್ಲಿ ವೃತ್ತ, ಬೀದಿಗಳಿಗೆ ಇಟ್ಟ ಮುಸ್ಲಿಂ ನಾಯಕರ ಹೆಸರನ್ನು ಬದಲಿಸೋದು, ಮುಸ್ಲಿಮರಿಗೆ ಸೀಟು ಕೊಡದಿರೋದು. ಮುಸಲ್ಮಾನರ ಓಟಿಲ್ಲದೇ ಗೆಲ್ಲುತ್ತೇವೆಂದು ಬೀಗುವುದು. ಅದೆಂತಹ ವಿಶ್ವಾಸ! ಸಂವಿಧಾನ ಬದಲಿಸುತ್ತೇವೆಂದು ಹೂಂಕರಿಸೋದು. ಅದನ್ನೇ ದೆಹಲಿಯಂತಹ ಸ್ಥಳದಲ್ಲೇ ಸುಡೋದು. ಗಾಂಧೀಜಿಯನ್ನು ಕೊಂದವನಿಗೆ ಗುಡಿಕಟ್ಟಲು ಹೊರಡೋದು ಎಂತಹ ವಿಕಾಸ? ಪೌರತ್ವ ಕಾಯ್ದೆ ತಿದ್ದುಪಡಿ ಗದ್ದಲದಲ್ಲಿ ಅಗತ್ಯ ದಾಖಲೆಗಳಿಲ್ಲದ ಭಾರತೀಯರೂ ಅಕ್ರಮ ವಲಸಿಗರಾಗಿ ಬಿಡುವ ಸಾಧ್ಯತೆಯಿದೆ. ಎನ್‍ಆರ್‍ಸಿ ಪೂರಕವಾಗಿಯೇ ಎನ್‍ಪಿಆರ್ ತರಲು ಸಿದ್ಧತೆಗಳು ನಡೆದಿವೆ. ಹೀಗಾಗಿಯೇ ಬಿಜೆಪಿಯನ್ನು ಬೆಂಬಲಿಸುವ ಪಾಸ್ವಾನ್, ನಿತೀಶ್‍ಕುಮಾರ್, ಜಗನ್ ಮೋಹನ್‍ರೆಡ್ಡಿ ಅಂಥವರು ಕಾಯ್ದೆ ವಿರೋಧವಾಗಿದ್ದಾರೆ. ಹತ್ತು ರಾಜ್ಯ ಗಳೇಕೆ ವಿರೋಧಿಸಿವೆ. ಕರ್ನಾಟಕ ಒಂದೇ ಹೊತ್ತಿ ಉರಿಯುತ್ತಿಲ್ಲ. ದೆಹಲಿ, ಜಾಮಿಯ, ಗುಜರಾತ್, ಉತ್ತರ ಪ್ರದೇಶ, ಬಿಹಾರ್, ಚೆನ್ನೈ, ಮಧ್ಯ ಪ್ರದೇಶ ಅನೇಕ ರಾಜ್ಯಗಳಲ್ಲಿ ಯುವಕ ಯುವತಿಯರು ಬೀದಿಗಿಳಿದು ದಂಗೆ ಎಂದಿದ್ದಾರೆ. ವಿರೋಧಿಸಿದವರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತೇವೆಂದರೆ ಭಾರತವೇನು ಇವರಪ್ಪನ ಪಿತ್ರಾರ್ಜಿತ ಆಸ್ತಿಯೇ?

ಇಂತಹ ಸಂಘರ್ಷದ ದಿನಗಳಲ್ಲಿ ಲೋಕ ಕಲ್ಯಾಣ ಮಾಡಲೆಂದೇ ಕಾವಿತೊಟ್ಟ ಮಹಾಸ್ವಾಮಿಗಳೇಕೋ ಮೌನಕ್ಕೆ ಶರಣಾಗಿದ್ದಾರೆ. ಮಠಗಳಿಗೆ ಹೆಚ್ಚು ಅನುದಾನ ಬೇಡುವ, ತಮ್ಮ ಜಾತಿಗಳಿಗೆ ಹೆಚ್ಚು ಮೀಸಲಾತಿ ನೀಡಬೇಕೆಂದು ರಾಜಕಾರಣಿಗಳೆದುರು ಬಾಯಿ ಬಾಯಿ ಬಿಡುವ ಇವರೇಕೋ ಬಾಯೇ ಬಿಡುತ್ತಿಲ್ಲ! ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಬಿಟ್ಟರೆ ವಿರೋಧ ಪಕ್ಷವಾಗಿ ಪ್ರಶ್ನೆ ಮಾಡಬೇಕಾದ ಅನೇಕ ಮಾಧ್ಯಮಗಳು ಆಡಳಿತದ ಪರವಾಗಿ ಪುಂಗಿ ಊದುತ್ತಿವೆ. ಮಾರಿಕೊಂಡಿರಲೂಬಹುದು. ನ್ಯಾಯಾಂಗವನ್ನು ಅನುಮಾನಿಸುವಂತಾಗಿದೆ. ಬಾಬ್ರಿ ಮಸೀದಿ ಕೆಡವಿದ್ದು, ಅಪರಾಧವೆನ್ನುವ ನ್ಯಾಯಾಂಗ ಶಿಕ್ಷೆ ಬಗ್ಗೆ ಚಕಾರವೆತ್ತೋಲ್ಲ. ಅನರ್ಹ ಶಾಸಕರ ಅನರ್ಹತೆ ಒಪ್ಪಿಕೊಂಡರೂ ಶಿಕ್ಷೆಯಿಂದ ಮಾಫಿ! ಸರ್ಕಾರದ ವಿರುದ್ಧ ತೀರ್ಪು ನೀಡದಿರೆ ದೇಶದ್ರೋಹಿಗಳಾಗಿ ಬಿಡುತ್ತೇವೆಂಬ ಅಧೀರತೆ ಇದ್ದೀತೆ! ಇಂದಿನ ಸಂದಿಗ್ಧದಲ್ಲಿ ಯುವಜನತೆ ಜಾಗೃತರಾಗಿರೋದು ಸಂತೋಷವೆನಿಸಿದರೂ ಪ್ರತಿಭಟನೆಗಳು ಶಾಂತಿಯುತವಾಗಿರಲಿ. ಜೀವತೆತ್ತ 20 ಜನರಲ್ಲಿ ಯಾರೊಬ್ಬರೂ ಯಾವ ಪಕ್ಷದ ಲೀಡರ್‍ಗಳಲ್ಲ ಅಮಾಯಕರು. ಇಡೀ ದೇಶ ಗಲಭೆಯ ಗೂಡಾಗೋದು ಶ್ರೇಯಸ್ಸಲ್ಲ. ದ್ವೇಷ ಅಳಿಸಿ, ದೇಶ ಉಳಿಸಬೇಕಿದೆ. ಜಾತಿಕಳೆಯ ಕಿತ್ತು ಪ್ರೀತಿಯ ಬೆಳೆ ತೆಗೆಯಬೇಕಿದೆ, ಹಾಗಾಗಲಿ ಎಂಬುದಷ್ಟೇ ನನ್ನ ಲೇಖನದ ಉದ್ದೇಶ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ದಾರ್ಮಿಕ ಕಿರುಕುಳ ನೀಡು‌ವ ದೇಶಗಳ ನಡೆ ಎದುರು ಜಗತ್ತಿನ ಮಟ್ಟದಲ್ಲಿ ಹೋರಾಟ ರೂಪಿಸಿ, ಆ ಬಗೆಯ ನಡೆಯನ್ನು ಕೊನೆಗಾಣಿಸಲು ಎಣಗಬೇಕೆ ಹೊರತು, ಕಿರುಕುಳಕ್ಕೆ ಒಳಗಾದವರನ್ನು ಕರೆಸಿಕೊಂಡು ಸಿಟಿಜನ್.ಶಿಪ್ ಕೊಡುವುದು ಈವೊತ್ತಿನ ತಳಮಳಕ್ಕೆ ಪರಿಹಾರವಾಗಲಾರದು. ತಾನು ಹುಟ್ಟಿಬೆಳೆದ ನಾಡಿನ್ನು ಬಿಟ್ಟುಬರುವುದಕ್ಕೆ, ಕಿರುಕುಳ ಕೊಡುವವರಿಗೆ ಇಂಬು ಕೊಡುವಂತಿದೆ ಸಿ.ಎ.ಎ.

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...