Homeಕರ್ನಾಟಕಕಾನ್ವೆಂಟುಗಳಿಗೂ ಸವಾಲೆಸೆದ ಅಂಗನವಾಡಿ ಕಾರ್ಯಕರ್ತೆ ಬಿ.ವಸಂತ

ಕಾನ್ವೆಂಟುಗಳಿಗೂ ಸವಾಲೆಸೆದ ಅಂಗನವಾಡಿ ಕಾರ್ಯಕರ್ತೆ ಬಿ.ವಸಂತ

- Advertisement -
- Advertisement -

ಎಲೆಮರೆ – 13

ಈಚೆಗೆ ಎಲ್.ಕೆ.ಜಿ. ಯು.ಕೆ.ಜಿಯನ್ನು ಅಂಗನವಾಡಿಯಲ್ಲೇ ಆರಂಭಿಸಿ ಎಂದು ಸಿ.ಐ.ಟಿ.ಯು ಸಂಘಟನೆಯು ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಿತು. ರಾಜ್ಯವ್ಯಾಪಿ ಗಮನ ಸೆಳೆಯಿತು. ಇದೀಗ ಸರಕಾರದ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿದೆ. ಆದರೆ ಇಲ್ಲೊಬ್ಬ ಅಂಗನವಾಡಿ ಕಾರ್ಯಕರ್ತೆ ಸರಕಾರ ಅಧಿಕೃತವಾಗಿ ಎಲ್.ಕೆ.ಜಿ. ಯು.ಕೆ.ಜಿಯನ್ನು ಅಂಗನವಾಡಿಗಳಲ್ಲಿ ಆರಂಭಿಸುವ ಮುನ್ನವೇ ಕಾನ್ವೆಂಟುಗಳಿಗೂ ಸವಾಲೆಸೆಯುವಂತೆ ಅಂಗನವಾಡಿಯನ್ನು ರೂಪಿಸಿದ್ದಾರೆ. ಈಚೆಗೆ ದೇವದುರ್ಗ ಭಾಗದ 40 ಜನ ಅಂಗನವಾಡಿ ಕಾರ್ಯಕರ್ತೆಯರ ತಂಡ ಈ ಅಂಗನವಾಡಿಯನ್ನು ಭೇಟಿ ಮಾಡಿ ನಾವೂ ಹೀಗೆ ಮಾಡಬಹುದೇ ಎಂದು ಪರಿಶೀಲಿಸಿದ್ದಾರೆ. ಈ ಭಾಗದ ಶಿಶು ಅಭಿವೃದ್ಧಿ ತಾಲೂಕು ಅಧಿಕಾರಿ ಎ.ಆರ್. ಮಧುಸೂದನ ಅವರು ಈ ಅಂಗನವಾಡಿಯ ಮಾದರಿಯನ್ನು ಇಡೀ ತಾಲೂಕಿಗೆ ವಿಸ್ತರಿಸುವ ಯೋಚನೆ ಮಾಡಿದ್ದಾರೆ. ಹಾಗಾದರೆ ಇದರ ವಿಶೇಷತೆಯೇನು?

ಜೀರೋದಿಂದ ಮೂರು ನಾಲ್ಕು ವರ್ಷದ ಮಕ್ಕಳು ಚಿಲಿಪಿಲಿಗುಟ್ಟುವ ಈ ಪುಟ್ಟ ಕೋಣೆಯಲ್ಲಿ ಟೀಚರ್ ಕೇಳುವ ಪ್ರತಿ ಪ್ರಶ್ನೆಗಳಿಗೂ ಮಕ್ಕಳು ಸ್ಪರ್ಧೆಗೆ ಬಿದ್ದಂತೆ ಪಟಪಟನೆ ಉತ್ತರಿಸುತ್ತಾರೆ. ಚಕಚಕನೆ ಇಂತಿಷ್ಟು ಪ್ಲಾಸ್ಟಿಕ್ ಕಪ್‍ಗಳನ್ನು ಜೋಡಿಸುತ್ತಾ ಸೂಪರ್ ಮಿನಿಟ್ ರಿಯಾಲಿಟಿ ಶೋನ ಅಣಕು ಮಾಡಿ ಚಪ್ಪಾಳೆ ತಟ್ಟುತ್ತಾರೆ. ಬಾಸ್ಕೆಟ್‍ಬಾಲನ್ನು ನೆಟ್‍ನಲ್ಲಿ ಮಗುವೊಂದು ಎಸೆಯುವಾಗ ಉಳಿದೆಲ್ಲರೂ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ಗಾಂಧೀಜಿ ಎಂದ ತಕ್ಷಣ ಗಾಂಧೀಜಿಗೆ ಸಂಬಂಧಿಸಿದ ಹತ್ತಾರು ಸಂಗತಿಗಳನ್ನು ಒಬ್ಬರಾದ ನಂತರ ಒಬ್ಬರಂತೆ ಪಟಪಟನೆ ಹೇಳುತ್ತಾ ಗಾಂಧಿಯ ಜೀವನ ಕಥನವನ್ನು ಅರಳಿಸುತ್ತಾರೆ. ಸ್ವಾತಂತ್ರ್ಯ ಎಂದತಕ್ಷಣ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರನ್ನು ಉಲಿಯುತ್ತಾರೆ. ಸೊಳ್ಳೆ ಎಂದ ತಕ್ಷಣ ಅದರ ಪರಿಚಯ ಹೇಳುತ್ತಲೆ ಅದರಿಂದ ಹರಡುವ ರೋಗಗಳಾವುವು, ಈ ರೋಗಗಳು ಹರಡದಂತೆ ಮನೆಯಲ್ಲಿ ಏನೇನು ಮುಂಜಾಗ್ರತೆ ವಹಿಸಬೇಕು ಎಂದು ಮಕ್ಕಳು ವಿವರಿಸುತ್ತಾರೆ. ಹೀಗೆ ಒಂದೊಂದು ಸಂಗತಿಯ ಬಗೆಗೂ ಸಾಮೂಹಿಕವಾಗಿ ಒಬ್ಬರಾದನಂತರ ಒಬ್ಬರಂತೆ ಉತ್ತರದ ಸರಪಳಿ ಹೆಣೆಯುವ ಈ ಮಕ್ಕಳು ಇಂಟರ್‍ನ್ಯಾಷನಲ್ ಎಂದು ಕರೆದುಕೊಳ್ಳುವ ಯಾವುದೇ ಖಾಸಗಿ ಕಾನ್ವೆಂಟ್ ಸ್ಕೂಲಿನಲ್ಲಿ ಓದುತ್ತಿಲ್ಲ. ಹತ್ತಾರು ಅವಕಾಶಗಳಿರುವ ಸರಕಾರಿ ಶಾಲೆಯ ಮಕ್ಕಳೂ ಅಲ್ಲ. ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಕೂಡ್ಲಿಗಿಯಿಂದ ಪಶ್ಚಿಮಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಗಜಾಪುರದ ಅಂಗನವಾಡಿ ಬಿ ಕೇಂದ್ರದ ಮಕ್ಕಳು.

ಹೌದು ಅಂಗನವಾಡಿ ಕಾರ್ಯಕರ್ತೆ ಇಷ್ಟೆಲ್ಲಾ ಪ್ರಯೋಗ ಮಾಡಿದ್ದಾರಾ? ಎಂದು ನೀವು ಈ ಪುಟ್ಟ ಶಾಲೆಯನ್ನು ಪ್ರವೇಶಿಸಿದರೆ, ಹುಬ್ಬೇರಿಸುವಂತೆ ಈ ಅಂಗನವಾಡಿ ಹತ್ತಾರು ಹೊಸ ಹೊಸ ಪ್ರಯೋಗಗಳ ಕಲಿಕಾ ಸಾಮಗ್ರಿಗಳ ಅಕ್ಷಯ ಪಾತ್ರೆಯಂತೆ ಗಮನ ಸೆಳೆಯುತ್ತದೆ. ಮಕ್ಕಳ ಸೃಜನಶೀಲತೆಯನ್ನು ಅವರದೇ ಪರಿಸರದಲ್ಲಿ ಬಳಸಿ ಬಿಸಾಡಿದ, ಮಕ್ಕಳಿಂದಲೇ ಸಂಗ್ರಹಿಸಿದ ವಸ್ತುಗಳನ್ನು ಬಳಸಿಯೇ ತಯಾರಿಸಲಾಗಿದೆ. ಮನೆಗಳಲ್ಲಿ ಲಭ್ಯವಿರುವ ಬೀಜಗಳನ್ನು ಕಲೆ ಹಾಕಿ ಸಂಗ್ರಹ ಮಾಡಲಾಗಿದೆ. ಒಂದೊಂದು ಬೀಜವನ್ನು ತೋರಿಸಿದಾಗಲೂ ಆ ಬೀಜದ ಬೆಳೆ, ಹಣ್ಣು, ಕಾಯಿ, ಬೆಳೆಯುವ ಕಾಲಮಾನ, ಬೆಳೆಯ ಅವಧಿ ಇತ್ಯಾದಿಗಳನ್ನು ಮಕ್ಕಳು ಹೇಳುತ್ತಾರೆ.

ಪ್ರತಿದಿನ ಹನ್ನೊಂದು ಗಂಟೆಯ ಹೊತ್ತಿಗೆ ಒಬ್ಬ ಮಗು ಶಾಲೆಯಿಂದ ಹೊರಗಡೆ ಬಂದು ವಾತಾವರಣವನ್ನು ಅವಲೋಕಿಸಿ, ಮಕ್ಕಳಿಗೆ ಈ ದಿನದ ಹವಾಮಾನ ಹೇಗಿದೆ ಎಂದು ವಿವರಿಸುತ್ತದೆ. ಪ್ರತೀ ಮಕ್ಕಳಿಗೂ ಅವರದೇ ಆದ ಒಂದು ಚೀಲವಿದೆ. ಆ ಮಗು ಒಂದು ವಾರದಲ್ಲಿ ಬರೆಯುವ ಡ್ರಾಯಿಂಗ್, ಬರಹದ ಪುಟಗಳನ್ನು ಆಯಾ ಮಗುವಿನ ಚೀಲದಲ್ಲಿ ಶೇಖರಿಸಲಾಗುತ್ತದೆ. ವಾರಕ್ಕೊಮ್ಮೆ ಪೋಷಕರನ್ನು ಕರೆಸಿ ಆಯಾ ಮಕ್ಕಳ ವಾರದ ಚಟುವಟಿಕೆಯನ್ನು ವಿವರಿಸಲಾಗುತ್ತದೆ. ಕನ್ನಡ ಇಂಗ್ಲಿಷ್ ಅಂಕೆಸಂಖ್ಯೆಯ ಅಕ್ಷರಗಳನ್ನು ಗುರುತಿಸುತ್ತಲೇ ಓದುವ ಪ್ರಯತ್ನ ಮಾಡುವ ಮಕ್ಕಳನ್ನು ನೋಡಿ ಪ್ರತಿ ತಂದೆತಾಯಿ ಅಥವಾ ಪೋಷಕರಿಗೆ ತಮ್ಮ ಮಗು ಏನೇನು ಕಲಿಯುತ್ತಿದೆ ಎನ್ನುವ ಸ್ಪಷ್ಟತೆ ಸಿಕ್ಕು ಖುಷಿಗೊಳ್ಳುತ್ತಾರೆ.

ಹಳ್ಳಿಯಲ್ಲಿ ಬಳಸಿ ಬಿಸಾಡುವ ಅನೇಕ ಚಿಕ್ಕಪುಟ್ಟ ವಸ್ತುಗಳೆಲ್ಲಾ ಕಲಿಕಾ ಸಾಮಗ್ರಿಗಳಾಗಿ ಅಂಗನವಾಡಿ ಸೇರುತ್ತವೆ. ದಿನಬಳಕೆಯ ವಸ್ತುಗಳ ಖಾಲಿ ಸಾಮಾನುಗಳಿಂದ ಆಯಾ ಸಾಮಗ್ರಿಯ ಬಳಕೆಯ ಬಗ್ಗೆ ಕಲಿತ ಮಕ್ಕಳು ಅದನ್ನು ಮನೆಯಲ್ಲಿ ತಂದೆತಾಯಿಯರಿಗೆ ವಿವರಿಸುತ್ತಾರೆ. ಪ್ರತೀ ವಾರ ಒಂದು ವಿಷಯ ಆಯ್ದುಕೊಂಡು ಆ ವಿಷಯದ ಬಗ್ಗೆ ಚಿತ್ರಗಳನ್ನು ತೋರಿಸುತ್ತಾ ಅವುಗಳ ಲಕ್ಷಣಗಳನ್ನು ವಿವರಿಸುತ್ತಾ ಹೋಗುತ್ತಾರೆ. ಒಂದು ಚಿತ್ರವನ್ನು ತೋರಿಸಿದ ತಕ್ಷಣ ಮಕ್ಕಳು ಆ ಚಿತ್ರಕ್ಕೊಂದು ಕತೆ ಕಟ್ಟುತ್ತಾರೆ. ಮೋಡ, ಹವಾಮಾನ, ಹೊಲಗಳಲ್ಲಿ ಬೆಳೆಯುವ ಬೆಳೆಗಳು, ಸುತ್ತಮುತ್ತಣ ಪರಿಸರ ಎಲ್ಲದರ ಬಗ್ಗೆಯೂ ಮಕ್ಕಳು ಮಾತನಾಡುತ್ತಾರೆ. ಖಾಲಿ ರಟ್ಟಿದ ಬಾಕ್ಸ್‍ಗಳನ್ನು ಬಳಸಿ ಮನೆ, ಆಸ್ಪತ್ರೆ, ಶಾಲೆಯ ಮಾದರಿಗಳನ್ನು ತಯಾರಿಸಿ ಸ್ವಚ್ಛ ಹಳ್ಳಿಯೊಂದರ ಚಿತ್ರಣವನ್ನು ಕಣ್ಣಮುಂದೆ ತರುತ್ತಾರೆ. ತೂಗುಹಾಕಿದ ಚೀಲಗಳ ಬಣ್ಣವನ್ನು ಗುರುತಿಸಿ ಆಯಾ ಬಣ್ಣದ ಹತ್ತಾರು ಸಂಗತಿಗಳನ್ನು ಜೋಡಿಸಿ ಹೇಳುತ್ತಾರೆ. ಹೀಗೆ ಮಕ್ಕಳ ಗ್ರಹಿಕೆಯನ್ನು ಸೂಕ್ಷ್ಮಗೊಳಿಸಲಾಗಿದೆ. ಮಕ್ಕಳು ಪ್ರತಿಯೊಂದರ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲಿಗಳಾಗಿದ್ದಾರೆ. ಸಮಗ್ರ ಬಾಲವಿಕಾಸ ಯೋಜನೆಯ ಪೂರ್ವ ಪ್ರಾಥಮಿಕ ಶಿಕ್ಷಣದ ಉದ್ದೇಶ ಇಲ್ಲಿ ಸಾಕಾರಗೊಂಡಿದೆ. ಇದನ್ನು ಅವಿರತ ಶ್ರಮಿಸಿ ರೂಪಿಸಿದವರು ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಬಿ.ವಸಂತ.

ಅಂಗನವಾಡಿ ಕಾರ್ಯಕರ್ತೆಯಾಗಿ ಕಳೆದ ಏಳು ವರ್ಷದಿಂದ ಕೆಲಸ ಮಾಡುವ ವಸಂತ ಅವರು ತನಗಿರುವ ಅಂಗವೈಕಲ್ಯವನ್ನು ಮರೆತು ಮಕ್ಕಳ ಜತೆ ಮಕ್ಕಳಂತೆಯೇ ಬೆರೆಯುತ್ತಾರೆ. ನಾಳೆ ಮಕ್ಕಳಿಗೆ ಯಾವ ಪ್ರಯೋಗ ಮಾಡಬೇಕು, ಹೊಸದೇನನ್ನು ಕಲಿಸಬೇಕು ಎನ್ನುವ ಯೋಚನೆಯೇ ಅವರನ್ನು ಕ್ರಿಯಾಶೀಲವಾಗಿಟ್ಟಿದೆ. `ನನಗಿನ್ನೂ ತುಂಬಾ ಕನಸುಗಳಿವೆ ಸರ್, ನಮ್ಮ ಇಲಾಖೆ ಮತ್ತು ಊರಿನ ಗ್ರಾಮಸ್ಥರಿಂದ ಒಳ್ಳೆಯ ಪ್ರೋತ್ಸಾಹವಿದೆ. ಆದರೆ ಈ ತರಹದ ಪ್ರಯೋಗಗಳಿಗೆ ಇಲಾಖೆಯಿಂದ ಹಣ ಕೊಡುವ ನಿಯಮವಿಲ್ಲ. ಹಾಗಾಗಿ ಅಗತ್ಯವಿದ್ದ ಹಣವನ್ನು ನಾವೇ ಕೈಯಿಂದ ಹಾಕಬೇಕು. ಅಥವಾ ಹಣವಿಲ್ಲದೆ ಪುಕ್ಕಟೆಯಾಗಿ ಸಿಗುವ ವಸ್ತುಗಳನ್ನೆ ಬಳಸಿ ಪ್ರಯೋಗಗಳನ್ನು ಮಾಡಬೇಕು’ ಎನ್ನುತ್ತಾರೆ.

ಪತ್ರಕರ್ತರಾದ ಗಜಾಪುರದ ಭೀಮಣ್ಣ `ಇಲ್ಲಿ ಆಟದ ಜೊತೆಗೆ ಮಕ್ಕಳ ಕಲಿಕೆ ವಿಶಿಷ್ಟವಾಗಿದೆ. ಈ ಕೇಂದ್ರ ಇತರೆ ಅಂಗನವಾಡಿಗಳಿಗೆ ಮಾದರಿಯಂತಿದೆ’ ಎನ್ನುತ್ತಾರೆ. `ನಾವು ಬಡವರು ಕಾನ್ವೆಂಟಿಗೆ ಕಳಿಸೋವಷ್ಟು ದುಡ್ಡಿಲ್ಲ ತನ್ನ ಮಗಳು ಕಾನ್ವೆಂಟಿಗೆ ಹೋಗುವ ಮಕ್ಕಳಿಗಿಂತ ಚೆನ್ನಾಗಿ ಓದ್ತಾಳೆ’ ಎಂದು ಅಂಗನವಾಡಿಯಲ್ಲಿರುವ ತನ್ನ ಮಗಳ ಬಗ್ಗೆ ಭಾಗ್ಯಮ್ಮ ಹೆಮ್ಮೆಯ ಮಾತುಗಳನ್ನಾಡುತ್ತಾರೆ. ಶಿಶು ಅಭಿವೃದ್ಧಿ ತಾಲೂಕು ಅಧಿಕಾರಿ ಎ.ಆರ್. ಮಧುಸೂದನ ಅವರು ` ಅಂಗನವಾಡಿ ಕಾರ್ಯಕರ್ತೆ ವಸಂತ ಅವರು ಪೂರ್ವ ಪ್ರಾಥಮಿಕ ಮಕ್ಕಳ ಶಿಕ್ಷಣವನ್ನು ಕಲಿಕಾ ಸಾಮಗ್ರಿಗಳನ್ನು ಬಳಸಿ, ಹಲವು ಹೊಸ ಪ್ರಯೋಗಗಳನ್ನು ಮಾಡಿ ಪರಿಣಾಮಕಾರಿಯಾಗಿ ಕಲಿಸುತ್ತಿದ್ದಾರೆ. ಈ ಮಾದರಿಯನ್ನು ತಾಲೂಕಿನ ಇತರೆ ಅಂಗನವಾಡಿಗಳಲ್ಲಿ ಅಳವಡಿಸಿಕೊಳ್ಳಲು ತಿಳಿಸಿದ್ದೇವೆ’ ಎನ್ನುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...