Homeಮುಖಪುಟನಾರದ ಪ್ರಕರಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಸರು ಉಲ್ಲೇಖಿಸಿದ ಸಿಬಿಐ

ನಾರದ ಪ್ರಕರಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಸರು ಉಲ್ಲೇಖಿಸಿದ ಸಿಬಿಐ

- Advertisement -

2016 ರ ನಾರದ ಲಂಚ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅವರ ಕಾನೂನು ಸಚಿವ ಮೊಲೊಯ್ ಘಟಕ್ ಮತ್ತು ಪಕ್ಷದ ಮುಖಂಡ ಕಲ್ಯಾಣ್ ಬ್ಯಾನರ್ಜಿ ಅವರ ಹೆಸರನ್ನು ಕೇಂದ್ರ ತನಿಖಾ ದಳ (ಸಿಬಿಐ) ತನ್ನ ಅರ್ಜಿಯಲ್ಲಿ ಸೇರಿಸಿದೆ.

ಕಲ್ಕತ್ತಾ ಹೈಕೋರ್ಟ್‌ನಲ್ಲಿ ಬುಧವಾರ ನಡೆದ ವಿಚಾರಣೆಯ ವೇಳೆ, ಈ ಪ್ರಕರಣವನ್ನು ರಾಜ್ಯದಿಂದ ವರ್ಗಾವಣೆ ಮಾಡಲು ಕೋರಿರುವ ಸಂಸ್ಥೆ, ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮತ್ತು ಈಗ ಜೈಲಿನಲ್ಲಿರುವ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದೆ.

‘ನಾರದಾ’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ ಶಾಸಕರಾದ ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್ ಮತ್ತು ಮದನ್ ಮಿತ್ರಾ ಮತ್ತು ಮಾಜಿ ಟಿಎಂಸಿ, ಬಿಜೆಪಿ ನಾಯಕ ಸೋವನ್ ಚಟರ್ಜಿ ಅವರನ್ನು ಸೋಮವಾರ ಸಿಬಿಐ ಬಂಧಿಸಿದೆ.

ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐ ಕೋರಿಕೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅನುಮೋದಿಸಿದ ಕೆಲವೇ ದಿನಗಳಲ್ಲಿ ಈ ಬಂಧನ ನಡೆದಿದೆ.

ಇದನ್ನೂ ಓದಿ: ‘ನಾರದ’: ಸುವೆಂಧು ಅಧಿಕಾರಿ ಬಂಧನ ಯಾಕಿಲ್ಲ?- ಪ್ರಕರಣದ ದೂರುದಾರ ಮ್ಯಾಥ್ಯೂ ಸ್ಯಾಮ್ಯುಯೆಲ್ ಪ್ರಶ್ನೆ

ಸಚಿವರ ಬಂಧನದ ನಂತರ, ತೃಣಮೂಲ ಕಾರ್ಯಕರ್ತರ ಒಂದು ದೊಡ್ಡ ಗುಂಪು ಸಿಬಿಐನ ಕೋಲ್ಕತಾ ಕಚೇರಿಯ ಹೊರಗೆ ಜಮಾಯಿಸಿತ್ತು. ಅಲ್ಲಿಗೆ ತೆರಳಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಥಳದಲ್ಲಿಯೇ ಧರಣಿ ನಡೆಸಿದ್ದರು. ಮಂತ್ರಿಗಳನ್ನು ಸರಿಯಾದ ಕಾರ್ಯವಿಧಾನವಿಲ್ಲದೆ ಬಂಧಿಸಲಾಗಿದೆ. ಸಿಬಿಐ ನನ್ನನ್ನು ಸಹ ಬಂಧಿಸಬೇಕಾಗುತ್ತದೆ ಎಂದು ವಾದಿಸಿದ್ದರು.

ಸಿಬಿಐ ತನ್ನ ಅರ್ಜಿಯಲ್ಲಿ, “ತನಿಖಾ ಏಜೆನ್ಸಿಯನ್ನು ಭಯಭೀತಗೊಳಿಸುವ ಮತ್ತು ಅದರ ಶಾಸನಬದ್ಧ ಕಾರ್ಯಗಳನ್ನು ಮುಕ್ತವಾಗಿ ಮತ್ತು ನಿರ್ಭಯವಾಗಿ ನಿರ್ವಹಿಸುವುದನ್ನು ತಡೆಯುವ ವಿಚಿತ್ರ ಸನ್ನಿವೇಶ ಇಲ್ಲಿ ಎದುರಾಗಿದೆ” ಎಂದು ತಿಳಿಸಿದೆ.

ಬಂಧಿತ ನಾಲ್ವರು ನಾಯಕರು ಸೋಮವಾರ ಏಳು ಗಂಟೆಗಳ ನಂತರ ಜಾಮೀನು ಪಡೆದಿದ್ದರು ಆದರೆ ಏಜೆನ್ಸಿಯ ಮೇಲ್ಮನವಿಯ ನಂತರ ಅದೇ ದಿನ ಸಂಜೆ ಅದನ್ನು ಕೊಲ್ಕತ್ತಾ ಹೈಕೋರ್ಟ್ ತಡೆಹಿಡಿಯಿತು.

ತೃಣಮೂಲ ಕಾಂಗ್ರೆಸ್ ಈ ಸಮಯದಲ್ಲಿ ಸಿಬಿಐ ಸಚಿವರ ಬಂಧನ ಮಾಡಿರುವುದನ್ನು ಪ್ರಶ್ನಿಸಿದೆ. ದೀದಿ ವರ್ಸಸ್ ಮೋದಿ ಎಂಬಂತಿದ್ದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಜಯಗಳಿಸಿದ ಕೆಲವೇ ದಿನಗಳ ನಂತರ ಸಿಬಿಐ ಈ ಕ್ರಮ ಕೈಗೊಂಡಿದೆ.

ಮಾಜಿ ತೃಣಮೂಲ ಕಾಂಗ್ರೆಸ್ ಸಚಿವರಾದ ಸುವೇಂದು ಅಧಿಕಾರಿ ಈಗ ನಂದಿಗ್ರಾಮದ ಬಿಜೆಪಿ ಶಾಸಕರಾಗಿದ್ದಾರೆ. ಆದರೆ, ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ದೂರುದಾರರು ಪ್ರಶ್ನಿಸಿದ್ದಾರೆ. ಜೊತೆಗೆ ಬಿಜೆಪಿಗೆ ಸೇರ್ಪಡೆಯಾದ ಮುಕುಲ್ ರಾಯ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಯಾಕೆ ಅನುಮತಿ ನೀಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.


ಇದನ್ನೂ ಓದಿ: ಸೋಂಕಿನಿಂದ ಸಾವು ಹೆಚ್ಚುತ್ತಿದೆ; ಕೇಂದ್ರ ಜನರ ಗಮನ ಬೇರೆಡೆ ಸೆಳೆಯುತ್ತಿದೆ: ರಾಹುಲ್ ಗಾಂಧಿ ಆಕ್ರೋಶ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಶಾಸಕರನ್ನು ಬೆನ್ನಟ್ಟಿ ಸ್ವಕ್ಷೇತ್ರದಿಂದ ಓಡಿಸಿದ ಜನತೆ

0
ಮುಂಬರುವ ಉತ್ತರ ಪ್ರದೇಶದ ಚುನಾವಣಾ ಕಣ ದಿನ ದಿನಕ್ಕೂ ರಂಗೇರುತ್ತಿದ್ದು, ಪಕ್ಷದ ಪರ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಶಾಸಕರನ್ನು ಅವರ ಸ್ವಂತ ಕ್ಷೇತ್ರ ಮುಜಾಫರ್‌ನಗರದ ಗ್ರಾಮಸ್ಥರು ಓಡಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...
Wordpress Social Share Plugin powered by Ultimatelysocial