Homeಮುಖಪುಟಸೋಂಕಿನಿಂದ ಸಾವು ಹೆಚ್ಚುತ್ತಿದೆ; ಕೇಂದ್ರ ಜನರ ಗಮನ ಬೇರೆಡೆ ಸೆಳೆಯುತ್ತಿದೆ: ರಾಹುಲ್ ಗಾಂಧಿ ಆಕ್ರೋಶ

ಸೋಂಕಿನಿಂದ ಸಾವು ಹೆಚ್ಚುತ್ತಿದೆ; ಕೇಂದ್ರ ಜನರ ಗಮನ ಬೇರೆಡೆ ಸೆಳೆಯುತ್ತಿದೆ: ರಾಹುಲ್ ಗಾಂಧಿ ಆಕ್ರೋಶ

- Advertisement -
- Advertisement -

ಕೊರೊನಾ ಸೋಂಕಿನಿಂದ ಸಾವುಗಳು ಹೆಚ್ಚಾಗುತ್ತಿದೆ, ಲಸಿಕೆಗಳು ಕಡಿಮೆಯಾಗುತ್ತಿವೆ; ಆದರೆ ಕೇಂದ್ರ ಸರ್ಕಾರವು ಜನರ ಗಮನವನ್ನು ಬೇರೆಡೆಗೆ ತಿರುಗಿಸಿ, ಸುಳ್ಳನ್ನು ಹರಡುವಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ವ್ಯಾಕ್ಸಿನೇಷನ್‌ಗಳ ಕುಸಿತ ಮತ್ತು ಕೊರೊನಾ ವೈರಸ್‌ನಿಂದಾಗಿ ಉಂಟಾಗುತ್ತಿರುವ ದೈನಂದಿನ ಸಾವಿನ ಸಂಖ್ಯೆಯಲ್ಲಿನ ಹೆಚ್ಚಳವನ್ನು ತೋರಿಸುವ ಗ್ರಾಫ್‌ಗಳನ್ನು ರಾಹುಲ್ ಗಾಂಧಿ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಗೋವಿನ ಸೆಗಣಿ, ಮೂತ್ರ ಕೊರೊನಾಗೆ ಮದ್ದಲ್ಲ ಎಂದ ಪತ್ರಕರ್ತರ ವಿರುದ್ದ NSA ಅಡಿ ಪ್ರಕರಣ ದಾಖಲು!

ಅವರು ತನ್ನ ಟ್ವೀಟ್‌ನಲ್ಲಿ, “ಲಸಿಕೆಗಳು ಕಡಿಮೆಯಾಗುತ್ತಿವೆ ಮತ್ತು ಕೊರೊನಾ ಸಾವುಗಳು ಹೆಚ್ಚುತ್ತಿವೆ. ಆದರೆ ಕೇಂದ್ರ ಸರ್ಕಾರ ಜನರ ಗಮನವನ್ನು ಬೇರೆಡೆಗೆ ತಿರುಗಿಸಿ, ಸುಳ್ಳನ್ನು ಹರಡುವ ನೀತಿಯನ್ನು ನೆಚ್ಚಿಕೊಂಡಿದೆ. ಬೊಬ್ಬೆ ಹೊಡೆದು ಸತ್ಯವನ್ನು ಮರೆಮಾಚುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದೇ ದಿನದಲ್ಲಿ ಕೊರೊನಾ ವೈರಸ್‌ನಿಂದಾಗಿ ಭಾರತದಲ್ಲಿ 4,529 ಸಾವುನೋವುಗಳಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿನಿಂದಾಗಿ ಉಂಟಾದ ಸಾವಿನ ಸಂಖ್ಯೆ 2,83,248 ಕ್ಕೆ ತಲುಪಿದೆ. ಬುಧವಾರದಂದು ದೇಶದಲ್ಲಿ 2.67 ಲಕ್ಷ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಇದರೊಂದಿಗೆ ಭಾರತದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,54,96,330 ಕ್ಕೆ ಏರಿದೆ.

ಇದನ್ನೂ ಓದಿ: ಕೊರೊನಾ ಪರಿಹಾರಕ್ಕೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಹೋರಾಟ; ಮೆ 21 ರಂದು ರಾಜ್ಯವ್ಯಾಪಿ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...