Homeಮುಖಪುಟಭಾರತ್ ಪೆಟ್ರೋಲಿಯಂ ಖಾಸಗೀಕರಣ: ಕೇಂದ್ರದ ನಿರ್ಧಾರದ ವಿರುದ್ಧ ನೌಕರರಿಂದ ಬೃಹತ್‌ ಮುಷ್ಕರಕ್ಕೆ ಸಿದ್ದತೆ

ಭಾರತ್ ಪೆಟ್ರೋಲಿಯಂ ಖಾಸಗೀಕರಣ: ಕೇಂದ್ರದ ನಿರ್ಧಾರದ ವಿರುದ್ಧ ನೌಕರರಿಂದ ಬೃಹತ್‌ ಮುಷ್ಕರಕ್ಕೆ ಸಿದ್ದತೆ

- Advertisement -
- Advertisement -

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ನ್ನು ಖಾಸಗೀಕರಣಗೊಳಿಸುವ ಕ್ರಮಕ್ಕೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಖಾಸಗಿ ಕಂಪನಿಗೆ ಮಾರಾಟ ಮಾಡುವುದನ್ನು ವಿರೋಧಿಸಿ, ನೌಕರರು ದೇಶವ್ಯಾಪಿ ಮುಷ್ಕರ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

2020 ರ ಮಾರ್ಚ್ ವೇಳೆಗೆ ಬಿಪಿಸಿಎಲ್ ಅನ್ನು ಖಾಸಗಿ ಸಂಸ್ಥೆಗೆ ಮಾರಾಟ ಮಾಡಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದ ಕೋಪಗೊಂಡಿರುವ ನೌಕರರು ದೇಶಾದ್ಯಂತ ನವೆಂಬರ್‌ 28 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಹೇಳಿದ್ದಾರೆ.

ವಿಡಿಯೋ ನೋಡಿ:

ನವೆಂಬರ್ 25 ರಂದು ಕೇರಳದ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಅವರು ಬಿಪಿಸಿಎಲ್ ಅನ್ನು ಪೆಟ್ಟಾದಿಂದ ಕೊಚ್ಚಿಯ ಅಂಬಾಲಮುಗಲ್‌ಗೆ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ, ಮೆರವಣಿಗೆ ನಡೆಸಲಿದ್ದಾರೆ. ಸಿಪಿಐ (ಎಂ) ನವೆಂಬರ್ 22 ರಂದು ಬಿಪಿಸಿಎಲ್ ಖಾಸಗೀಕರಣದ ವಿರುದ್ಧ ಕೊಚ್ಚಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಿದೆ.

ಮುಂಬೈ, ಕೊಚ್ಚಿ, ಮಧ್ಯಪ್ರದೇಶದ ಬಿನಾ ಮತ್ತು ಅಸ್ಸಾಂನ ನುಮಾಲಿಗರ್‌ಲ್ಲಿ ಬಿಪಿಸಿಎಲ್‌ಗೆ ಸೇರಿದ 4 ಸಂಸ್ಕರಣಾಗಾರಗಳಿವೆ. ಇತರ ಸಂಬಂಧಿತ ಪೆಟ್ರೋಲ್-ಡೀಸೆಲ್ ಚಿಲ್ಲರೆ ಮಾರಾಟ ಮಳಿಗೆಗಳು, ಎಲ್‌ಪಿಜಿ ವಿತರಣಾ ಕೇಂದ್ರಗಳು ಮತ್ತು ಎಲ್‌ಪಿಜಿ ಬಾಟ್ಲಿಂಗ್ ಸ್ಥಾವರ ಹೊಂದಿರುವ ಬಿಪಿಸಿಎಲ್ ಒಟ್ಟು 12,000 ಖಾಯಂ ಉದ್ಯೋಗಿಗಳು ಮತ್ತು ಸಾವಿರಾರು ಗುತ್ತಿಗೆ ಸಿಬ್ಬಂದಿಗಳನ್ನು ಹೊಂದಿದೆ.

ಕೇರಳದಲ್ಲಿ ಮಾತ್ರ, ಕೊಚ್ಚಿಯ ಬಿಪಿಸಿಎಲ್ ಸಂಸ್ಕರಣಾಗಾರದಲ್ಲಿ, ಸುಮಾರು 2,500 ಖಾಯಂ ಸಿಬ್ಬಂದಿ ಮತ್ತು ಸುಮಾರು 6,000 ಗುತ್ತಿಗೆ ನೌಕರರಿದ್ದಾರೆ. ಜತೆಗೆ ಸಂಸ್ಕರಣಾಗಾರದ ವಿವಿಧ ಯೋಜನೆಗಳಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಏರ್ ಇಂಡಿಯಾದೊಂದಿಗೆ ಬಿಪಿಸಿಎಲ್ ಅನ್ನು ಮಾರಾಟ ಮಾಡುವುದರಿಂದ ಸರ್ಕಾರಕ್ಕೆ ಒಂದು ಲಕ್ಷ ಕೋಟಿ ರೂ. ನಷ್ಟ ಉಂಟಾಗುವ ಸಾಧ್ಯತೆಯಿದೆ. ಹೆಚ್ಚು ಲಾಭದಲ್ಲಿರುವ ಬಿಪಿಸಿಎಲ್ ಅನ್ನು ಖಾಸಗೀಕರಣಗೊಳಿಸುತ್ತಿರುವುದು ಆತಂಕವನ್ನುಂಟು ಮಾಡಿದೆ.

ಬಿಪಿಸಿಎಲ್ ಅನ್ನು ಖಾಸಗಿ ಕಂಪನಿಗೆ ಮಾರಿದರೆ ಉದ್ಯೋಗ ನಷ್ಟವಾಗುವ ಭೀತಿ ಹೆಚ್ಚಿದೆ. ವಿದೇಶಿ ಅಥವಾ ಬಹುರಾಷ್ಟ್ರೀಯ ಕಂಪನಿಗಳು, ಬಿಪಿಸಿಎಲ್ ಅನ್ನು ಸ್ವಾಧೀನಪಡಿಸಿಕೊಂಡರೆ, ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಕೊಚ್ಚಿಯಲ್ಲಿರುವ ಬಿಪಿಸಿಎಲ್‌ನ ಸಂಸ್ಕರಣಾಗಾರಗಳು ಬಹು ಘಟಕಗಳಿಂದ ಕೂಡಿದೆ. ಬಹುರಾಷ್ಟ್ರೀಯ ತೈಲ ಕಂಪನಿಗಳು, ಬಿಪಿಸಿಎಲ್ ಅನ್ನು ಸ್ವಾಧೀನಪಡಿಸಿಕೊಂಡರೆ ತಮ್ಮ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿಲ್ಲ. ಏಕೆಂದರೆ ಅವುಗಳು ಅಗತ್ಯಕ್ಕಿಂತ ಹೆಚ್ಚಿನ ಸ್ಟಾಕ್ ಹೊಂದಿವೆ. ಈಗ ನಿಜವಾಗಿ ಗುರಿ ಇಟ್ಟುಕೊಂಡಿರುವುದು ಭಾರತದ ಮಾರುಕಟ್ಟೆ ತೆರೆಯುವಿಕೆಯಲ್ಲಿ. ಹೀಗಾಗಿ ಸಂಸ್ಕರಣಾಗಾರಗಳ ಅನೇಕ ಘಟಕಗಳನ್ನು ಕೇವಲ ಒಂದೇ ಘಟಕಗಳಿಗೆ ಮುಚ್ಚುವ ಹೆಚ್ಚಿನ ಅವಕಾಶಗಳಿವೆ. ಆದ್ದರಿಂದ ಇದು ದೇಶಾದ್ಯಂತ ಸಾವಿರಾರು ಜನರಿಗೆ ಉದ್ಯೋಗ ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಸಂಸ್ಕರಣಾಗಾರ ನೌಕರರ ಒಕ್ಕೂಟವನ್ನು ಪ್ರತಿನಿಧಿಸುವ ನಸೀಮುದ್ದೀನ್ ಎಸ್.ಕೆ ಹೇಳಿದರು.

ಬಿಪಿಸಿಎಲ್‌ ಖಾಸಗೀಕರಣವಾದರೆ ಮುಂದೆ ಹೊಸ ನೇಮಕಾತಿಗಳಿಗೆ ಅವಕಾಶಗಳಿರುವುದಿಲ್ಲ. ಕೇರಳದ ಕೊಚ್ಚಿ ಸಂಸ್ಕರಣಾಗಾರವು ಸಾರ್ವಜನಿಕ ವಲಯದ ಏಕೈಕ ಸಂಸ್ಥೆಯಾಗಿದೆ. ಅಲ್ಲಿ ಈಗಲೂ ಜನರನ್ನು ಸಕ್ರಿಯವಾಗಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ರಸಗೊಬ್ಬರ, ರಾಸಾಯನಿಕಗಳು ತಿರುವಾಂಕೂರು ಲಿಮಿಟೆಡ್ (ಫ್ಯಾಕ್ಟ್) ಮತ್ತು ಎಚ್‌ಎಂಟಿ ಲಿಮಿಟೆಡ್ ಸೇರಿದಂತೆ ಕೇರಳದ ಎಲ್ಲಾ ಸಾರ್ವಜನಿಕ ವಲಯದ ಕಂಪನಿಗಳು ನೇಮಕಾತಿಗಳಲ್ಲಿ ಸುಪ್ತ ಹಂತದ ಮೂಲಕ ಸಾಗುತ್ತಿವೆ ಎಂದು ಕೊಚ್ಚಿನ್ ರಿಫೈನರೀಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಪಿ ಹೇಳಿದರು.

ಕೊಚ್ಚಿ ಸಂಸ್ಕರಣಾಗಾರದಲ್ಲಿಅಲ್ಲಿನ ರಾಜ್ಯಸರ್ಕಾರ ಶೇ. 5 ಪಾಲನ್ನು ಹೊಂದಿದೆ. ಅದರಿಂದ ಫೀಡ್‌ಸ್ಟಾಕ್‌ಗಳನ್ನು ಪೆಟ್ರೋಕೆಮಿಕಲ್‌ ಪಾರ್ಕ್‌ ಸ್ಥಾಪಿಸಲು ಸರ್ಕಾರ ಇತ್ತೀಚೆಗೆ ಮನವಿ ಮುಂದಿಟ್ಟಿತ್ತು.   ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಪೆಟ್ರೋಕೆಮಿಕಲ್ ಪಾರ್ಕ್‌ನಲ್ಲಿ 25 ಸಾವಿರ ಕೋಟಿ ರೂ.ಗಳ ಹೂಡಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಖಾಸಗೀಕರಣದಿಂದಾಗಿ ಬಿಪಿಸಿಎಲ್‌ ಹಾಗೂ ನೌಕರರನ್ನು ಇದು ಅನಿಶ್ಚಿತತೆಗೆ ದೂಡಲಿದೆ ಎಂದು ಸಿಎಂ ಪಿಣರಾಯಿ ವಿಜಯನ್  ಆತಂಕ ವ್ಯಕ್ತಪಡಿಸಿದ್ದಾರೆ.

2018-19ನೇ ಸಾಲಿನಲ್ಲಿ ಬಿಪಿಸಿಎಲ್ ನಿವ್ವಳ ಲಾಭ 7,802.30 ಕೋಟಿ ರೂ. ಆಗಿತ್ತು. ಅದರಲ್ಲಿ ಕಂಪನಿಯ ಒಟ್ಟು ಸಿಎಸ್ಆರ್ ಪಾಲು 177.94 ಕೋಟಿ ರೂ. ಆಗಿತ್ತು. ಕೇರಳದಲ್ಲಿ ಮಾತ್ರ ಬಿಪಿಸಿಎಲ್ ವಿವಿಧ ಸಿಎಸ್ಆರ್ ಉಪಕ್ರಮಗಳಿಗಾಗಿ ಒಟ್ಟು 24.75 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಶಿಕ್ಷಣ ಕ್ಷೇತ್ರಕ್ಕೆ 12.16 ಕೋಟಿ ರೂ. ನೀಡಿದೆ ಎಂದು ತಿಳಿದು ಬಂದಿದೆ.

ಈಗ ಬಿಪಿಸಿಎಲ್ ಖಾಸಗೀಕರಣದ ವಿರುದ್ಧ ನಡೆಸಲು ತೀರ್ಮಾನಿಸಿರುವ ಪ್ರತಿಭಟನೆಯನ್ನು ಆಂದೋಲನವನ್ನಾಗಿ ಮಾಡಲು ನೌಕರರು ನಿರ್ಧರಿಸಿದ್ದಾರೆ. “ಇದು ಕೇವಲ ನಮ್ಮ ಉದ್ಯೋಗ ಮಾತ್ರವಲ್ಲ,  ಸಾಮಾಜಿಕ ನ್ಯಾಯದ ವಿಷಯ”ವೂ ಆಗಿದೆ. ಕಂಪನಿಯು ಖಾಸಗೀಕರಣಗೊಳಿಸಿದರೆ, ಮೀಸಲಾತಿ ಹಾಗೂ ಹುದ್ದೆಗಳ ವಿತರಣೆಯೂ ಇರುವುದಿಲ್ಲ. ಆದ್ದರಿಂದ ಜನ ರಾಜಕೀಯ ಸಂಬಂಧಗಳನ್ನು ಬಿಟ್ಟು, ಎಲ್ಲರೂ ಮುಕ್ತವಾಗಿ ಖಾಸಗೀಕರಣದ ವಿರುದ್ಧ ಒಂದಾಗುವುದು ಅತೀ ಮುಖ್ಯ ಎಂದು ಪ್ರವೀಣ್ ಕುಮಾರ್ ಹೇಳಿದರು.

ಇನ್ನು ನಷ್ಟದ ಕಾರಣಕ್ಕೆ ಮೋದಿ ಸರ್ಕಾರ ಬಿಪಿಸಿಎಲ್‌ ಮಾರಲು ಹೊರಟರೆ ಇನ್ನೊಂದು ಕಡೆ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ನಡೆಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಈಗ ವಿಶ್ವದ 6 ನೇ ಅತಿದೊಡ್ಡ ತೈಲ ಕಂಪನಿಯಾಗಿ ಬೆಳೆದು ನಿಂತಿದೆ.

ಮಂಗಳವಾರದ ವಹಿವಾಟಿನ ಮುಕ್ತಾಯದ ವೇಳೆ, ಬ್ರಿಟಿಷ್ ಎನರ್ಜಿ ಜೈಂಟ್ಸ್‌ನದು 132 ಬಿಲಿಯನ್ ಡಾಲರ್‌ ಮೌಲ್ಯವಿದ್ದರೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮೌಲ್ಯ 138 ಬಿಲಿಯನ್ ಡಾಲರ್‌ಗೇರಿದೆ. ಈ ಮೂಲಕ ರಿಲಯನ್ಸ್‌ $138 ಬಿಲಿಯನ್ ತಲುಪಿದ ಮೊದಲ ಭಾರತೀಯ ಕಂಪನಿ ಆಗಿದೆ.

ಇದು ಹೇಗೆ ಸಾಧ್ಯ? ಸರ್ಕಾರಿ ಕಂಪನಿ ಮುಳುಗಿತ್ತಿದೆ, ಖಾಸಗಿ ಕಂಪನಿ ಬೆಳೆಯುತ್ತಿದೆ? ಇದರಲ್ಲಿ ಮೋದಿಯದು ಪಾತ್ರವಿಲ್ಲವೇ? ಎಂದು ಬಹಳಷ್ಟು ಜನ ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ದೇಶದ ಸಾರ್ವಭೌಮತ್ವದ ಮೇಲಿನ ದಾಳಿ’: ಸಿಪಿಎಂ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ದೇಶದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಎಂ) ಭಾನುವಾರ ಹೇಳಿದೆ. ಕೇಂದ್ರವನ್ನು ಟೀಕಿಸಿದ ಪಕ್ಷವು, ಅಮೆರಿಕದೊಂದಿಗಿನ ಒಪ್ಪಂದವು "ಬಿಜೆಪಿ ನೇತೃತ್ವದ ಸರ್ಕಾರದ ನಾಚಿಕೆಗೇಡಿನ ಶರಣಾಗತಿ"...

ತೆಲಂಗಾಣ ಎಫ್‌ಎಸ್‌ಎಲ್‌ನಲ್ಲಿ ಬೆಂಕಿ : ಸಾಕ್ಷ್ಯ ನಾಶದ ಶಂಕೆ ವ್ಯಕ್ತಪಡಿಸಿದ ಬಿಆರ್‌ಎಸ್‌

ಹೈದರಾಬಾದ್‌ನ ನಾಂಪಲ್ಲಿಯಲ್ಲಿರುವ ತೆಲಂಗಾಣ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಟಿಎಸ್‌ಎಫ್‌ಎಸ್‌ಎಲ್‌) ಶನಿವಾರ (ಫೆ.7) ಬೆಂಕಿ ಅವಘಡ ಸಂಭವಿಸಿದ್ದು, ಪ್ರತಿಪಕ್ಷ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪ್ರಮುಖ ಪ್ರಕರಣಗಳ ಸಾಕ್ಷ್ಯ ನಾಶದ ಶಂಕೆ ವ್ಯಕ್ತಪಡಿಸಿದೆ....

ಬಿಹಾರದ ದರ್ಭಾಂಗದಲ್ಲಿ ಆರು ವರ್ಷದ ಬಾಲಕಿಯ ಹತ್ಯೆ: ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ 

ಪಾಟ್ನಾ: ಬಿಹಾರದ ದರ್ಭಾಂಗಾ ಪಟ್ಟಣದ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳದ ಬಳಿ ಭಾನುವಾರ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮೂಲಗಳ ಪ್ರಕಾರ, ಶನಿವಾರ ಸಂಜೆ...

‘ರಾಜಕೀಯ ಪ್ರೇರಿತ’: ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರಿತ್ತು ಎಂಬ ಆರೋಪ ನಿರಾಕರಿಸಿದ ಸೋನಿಯಾ ಗಾಂಧಿ

ಭಾರತದ ನಾಗರಿಕತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗಿತ್ತು ಎಂಬ ಆರೋಪದ ಮೇಲೆ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿರುವ ಅರ್ಜಿಯು 'ಸಂಪೂರ್ಣ ರಾಜಕೀಯ ಪ್ರೇರಿತ, ಕಾನೂನು ಪ್ರಕ್ರಿಯೆಯ...

ರಾಜ್ಯದಲ್ಲಿ ಮಂಜೂರಾದ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವಂತೆ, ರೈಲು ಯೋಜನೆ ತ್ವರಿತಗೊಳಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸ್ಟಾಲಿನ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಮಂಜೂರಾದ ಯೋಜನೆಗಳಿಗೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಸ್ಥಗಿತಗೊಂಡಿರುವ ಯೋಜನೆಗಳನ್ನು ಪುನರುಜ್ಜೀವನಗೊಳಿಸುವ...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿಸಿದ ರೈತ ಸಂಘಟನೆಗಳು : ರಾಷ್ಟ್ರವ್ಯಾಪಿ ಪ್ರತಿಭಟನೆ ಘೋಷಣೆ

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್‌) ಸೇರಿದಂತೆ ಹಲವಾರು ರೈತ ಸಂಘಟನೆಗಳು ಶನಿವಾರ (ಫೆ.7) ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ವಿರೋಧಿಸಿದ್ದು, ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ಘೋಷಿಸಿವೆ. ಈ...

‘ನಮ್ಮ ಹಟ್ಟಿ’ ಕೇವಲ ದೊರೈರಾಜು ಅವರ ಕಥೆಯಲ್ಲ, ಒಂದು ಸಾಂಸ್ಕೃತಿಕ ಲೋಕವನ್ನೇ ಕಟ್ಟಿಕೊಡುವ ಕೃತಿ’: ಕೋಟಿಗಾನಹಳ್ಳಿ ರಾಮಯ್ಯ 

‘ಸಾಮಾನ್ಯವಾಗಿ ಆತ್ಮಕಥನಗಳು ಅಂದರೆ ಒಬ್ಬ ವ್ಯಕ್ತಿಯ ವಿವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆದರೆ ‘ನಮ್ಮ ಹಟ್ಟಿ’ ಆತ್ಮಕಥಾನಕದಲ್ಲಿ ಒಂದು ಹಟ್ಟಿಯ ವಿವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅಲ್ಲಿರುವ ಅನೇಕ ಕುಶಲ ಕರ್ಮಿಗಳು, ಹಾಗೂ ವಿಶಿಷ್ಟ ಲೋಕವೇ...

ಪ. ಬಂಗಾಳ ಎಸ್‌ಐಆರ್ | ಮೈಕ್ರೋ ಅಬ್ಸರ್ವರ್ಸ್ ಬದಲಿಗೆ 8,505 ಗ್ರೂಪ್ ಬಿ ಅಧಿಕಾರಿಗಳನ್ನು ಒದಗಿಸುತ್ತೇವೆ : ಚು. ಆಯೋಗಕ್ಕೆ ತಿಳಿಸಿದ ಮಮತಾ ಸರ್ಕಾರ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕಾಗಿ ಮೈಕ್ರೋ ಅಬ್ಸರ್ವರ್ಸ್ ಬದಲಿಗೆ ತನ್ನ ಅಧೀನದ ಸುಮಾರು 8,505 ಗ್ರೂಪ್ ಬಿ ಅಧಿಕಾರಿಗಳನ್ನು ನಿಯೋಜಿಸಲು ಸಿದ್ಧವಿರುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ...

ಸಿಎಂ ಶರ್ಮಾ ಮುಸ್ಲಿಮರಿಗೆ ಗುಂಡಿಕ್ಕಿದಂತೆ ತೋರಿಸುವ ವಿಡಿಯೋ ಹಂಚಿಕೊಂಡ ಅಸ್ಸಾಂ ಬಿಜೆಪಿ!

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರಿಗೆ ಗುಂಡಿಕ್ಕಿದಂತೆ ತೋರಿಸುವ ವಿಡಿಯೋವನ್ನು ಅಸ್ಸಾಂ ಬಿಜೆಪಿಯ ರಾಜ್ಯ ಘಟಕ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಶನಿವಾರ (ಫೆ.7) ಹಂಚಿಕೊಂಡಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಅದನ್ನು...

ಯಾವುದೇ ಕಾರಣಕ್ಕೂ ಕೇರಳದಲ್ಲಿ ಎನ್‌ಪಿಆರ್ ಜಾರಿಯಾಗುವುದಿಲ್ಲ : ಸಿಎಂ ಪಿಣರಾಯಿ ವಿಜಯನ್

ಕೇರಳದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ (ಫೆ.7) ಪುನರುಚ್ಚರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಅವರು, "ಯಾವುದೇ ಸಂದರ್ಭದಲ್ಲೂ...