Homeಮುಖಪುಟರೈತ ಹೋರಾಟ ತಡೆಯಲು ದಾರಿಯಲ್ಲಿ ಮುಳ್ಳುಕಂಬ ನೆಡುತ್ತಿರುವ ಕೇಂದ್ರ ಸರ್ಕಾರ!

ರೈತ ಹೋರಾಟ ತಡೆಯಲು ದಾರಿಯಲ್ಲಿ ಮುಳ್ಳುಕಂಬ ನೆಡುತ್ತಿರುವ ಕೇಂದ್ರ ಸರ್ಕಾರ!

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ದ ರೈತರು ದೆಹಲಿಯ ಗಡಿಗಳಲ್ಲಿ 69 ದಿನದಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಇದುವರೆಗೂ ರೈತರ ಬೇಡಿಕೆಗಳನ್ನು ಆಲಿಸಲು ಸಿದ್ದರಿಲ್ಲದ ಕೇಂದ್ರ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ಇದೀಗ ಹೊಸ ಪ್ರಯೋಗಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಪ್ರತಿಭಟನಾ ಸ್ಥಳಕ್ಕೆ ಇನ್ನಷ್ಟು ಟ್ರಾಕ್ಟರ್‌‌ಗಳು ಸೇರದಂತೆ ದೆಹಲಿ ಪೊಲೀಸರು ದಾರಿಗಳಲ್ಲಿ ಚೂಪಾದ ಮೊಳೆಗಳನ್ನು ನೆಡುತ್ತಿದ್ದಾರೆ.

ದೆಹಲಿಯ ಸಿಂಘು, ಟಿಕ್ರಿ ಹಾಗೂ ಗಾಜಿಪುರ್‌ ಗಡಿಗಳಲ್ಲಿ ರೈತರ ಪ್ರತಿಭಟೆನೆಗಳು ತೀವ್ರವಾಗಿ ಹೆಚ್ಚುತ್ತಿದೆ. ರೈತರು ಅಲ್ಲಿಗೆ ಭಾರಿ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸುವುದು ಸೇರಿದಂತೆ, ಹಲವು ಹಂತಗಳ ಬ್ಯಾರಿಕೇಡ್ ಹಾಕಲಾಗಿದೆ. ಜೊತೆಗೆ ರಸ್ತೆಗಳಲ್ಲಿ ತಡರಾತ್ರಿ ಕಂದಕಗಳನ್ನು ಅಗೆಯಲಾಗಿದೆ. ರಸ್ತೆಯಲ್ಲಿ ಮುಳ್ಳು ಕಂಬಿಗಳನ್ನು ನೆಡುವ ಮೂಲಕ ರೈತರ ಟೈಯರ್ ಪಂಚರ್ ಮಾಡಲು ಯತ್ನಿಸುತ್ತಿದೆ.

ಇದನ್ನೂ ಓದಿ: ಪ್ರಧಾನಿಯನ್ನು ಗೌರವಿಸುತ್ತಾ, ನಮ್ಮ ಸ್ವಾಭಿಮಾನವನ್ನೂ ರಕ್ಷಿಸುತ್ತೇವೆ: ರಾಕೇಶ್ ಟಿಕಾಯತ್ ಸಹೋದರ ನರೇಶ್ ಟಿಕಾಯತ್

ದೆಹಲಿ-ಹರಿಯಾಣದ ಗಡಿಯಾದ ಸಿಂಘು ಗಡಿಯ ಮುಖ್ಯ ಹೆದ್ದಾರಿಯಲ್ಲಿ ಪೊಲೀಸರು ನಾಲ್ಕು ಹಂತಗಳ ಬ್ಯಾರಿಕೇಡ್‌‌ಗಳನ್ನು ಅಳವಡಿಸಿದ್ದರಿಂದ ಸಾರ್ವಜನಿಕರು ಸೇರಿದಂತೆ ಸಾರಿಗೆ ಸಂಚಾರಕ್ಕೆ ಅಡ್ಡಿಯಾಯಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಚಿತ್ರಗಳು ತೋರಿಸುವಂತೆ ಪ್ರತಿಭಟನಾ ಸ್ಥಳಕ್ಕೆ ಹೋಗುವ ರಸ್ತೆಗಳಲ್ಲಿ ಅನೇಕ ಕಂದಕಗಳನ್ನು ತೆಗೆಯಲಾಗಿದೆ ಎಂದು  ವರದಿಯಲ್ಲಿ ಹೇಳಿದೆ.

ಗಾಜಿಪುರ ಗಡಿಯಲ್ಲಿ ಎರಡು ಬ್ಯಾರಿಕೇಡ್‌ಗಳ ನಡುವೆ ಗೋಡೆಯೊಂದನ್ನು ನಿರ್ಮಿಸಲು ಕಾಂಕ್ರಿಟ್ ಸಿಮೆಂಟ್ ಮಿಶ್ರಣವನ್ನು ಸುರಿಯುತ್ತಿದ್ದು, ಜೊತೆಗೆ ಮುಳ್ಳುತಂತಿ ಬೇಲಿಯನ್ನು ಹಾಕಲಾಗುತ್ತಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಇದನ್ನೂ ಓದಿ: ಟಿಕಾಯತ್ ಮನವಿಗೆ ಭಾರೀ ಬೆಂಬಲ: ರೈತರೊಟ್ಟಿಗೆ ಹರಿದುಬರುತ್ತಿರುವ ಸಾವಿರಾರು ಯುವಜನರು

ವಿಧಾನಸಭಾ ಅಧಿವೇಶನದ ಫೇಸ್‌ಬುಕ್ ಲೈವ್‌►►

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...