Homeಮುಖಪುಟಟಿಕಾಯತ್ ಮನವಿಗೆ ಭಾರೀ ಬೆಂಬಲ: ರೈತರೊಟ್ಟಿಗೆ ಹರಿದುಬರುತ್ತಿರುವ ಸಾವಿರಾರು ಯುವಜನರು

ಟಿಕಾಯತ್ ಮನವಿಗೆ ಭಾರೀ ಬೆಂಬಲ: ರೈತರೊಟ್ಟಿಗೆ ಹರಿದುಬರುತ್ತಿರುವ ಸಾವಿರಾರು ಯುವಜನರು

- Advertisement -
- Advertisement -

ರಾಕೇಶ್ ಟಿಕಾಯತ್ ಮನವಿಗೆ ಓಗೊಟ್ಟು ಉತ್ತರಪ್ರದೇಶದ ರೈತರು, ವಿದ್ಯಾರ್ಥಿಗಳು, ನಾಗರೀಕರೂ ಸೇರಿದಂತೆ ಸಹಸ್ರಾರು ಸಂಖ್ಯೆಯ ಜನರು ರೈತ ಹೋರಾಟವನ್ನು ಬೆಂಬಲಿಸಿ ಗಾಜಿಪುರ ಗಡಿಯಲ್ಲಿ ಕುಳಿತಿದ್ದಾರೆ. ವಿಶೇಷವಾಗಿ ಯುವಜನತೆಯ ಉತ್ಸಾಹ ಮತ್ತು ಸ್ಪೂರ್ತಿ ಅವರ ಘೋಷಣೆಗಳ ಮೂಲಕ ಮುಗಿಲುಮುಟ್ಟುತ್ತಿದೆ.

ಈ ಕುರಿತು ಗೌರಿ ಮೀಡಿಯಾ ಟ್ರಸ್ಟ್‌ನ ಅಧ್ಯಕ್ಷರಾದ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರು ನಾನು ಗೌರಿ ತಂಡದ ಭಾಗವಾಗಿ ದೆಹಲಿ-ಉತ್ತರಪ್ರದೇಶದ ಗಡಿಯ ಗಾಜಿಪುರದಿಂದ ನೇರ ಮಾಹಿತಿ ನೀಡಿದ್ದಾರೆ.

“ಮೊನ್ನೆ ಸಿಂಘು ಗಡಿಯಲ್ಲಿ ಗದ್ದಲವಾದಾಗಿನಿಂದ ಹೊಸಬರು ತುಂಬಾ ಜನರು ಬಂದು ರೈತರ ಪ್ರತಿಭಟನೆಗೆ ಸೇರಿಕೊಳ್ಳುತಿದ್ದು, ಅವರಲ್ಲಿ ಒಂದು ರೀತಿಯ ಜೋಶ್ ಇದೆ. ಜೊತೆಗೆ, ಗದ್ದಲ, ಲಾಠಿಚಾರ್ಜ್ ಇದಾವುದಕ್ಕೂ ಬೆದರದೆ ಎನರ್ಜಿಟಿಕ್ ಆಗಿ ತಮ್ಮ ನಿಲುವನ್ನು ಬಿಟ್ಟುಕೊಡುವುದಿಲ್ಲ ಎನ್ನುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಯುವಕರು ಸೇರಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ: ರೈತರ ಪ್ರತಿಭಟನೆ: ಯುಪಿ ಸರ್ಕಾರದ ಕ್ರಮಕ್ಕೆ ಖಂಡನೆ – ಬಿಜೆಪಿ ನಾಯಕರಲ್ಲಿ ಅಸಮಾಧಾನ

“ಸಿಂಘು ಗಡಿಯಲ್ಲಿ ಸ್ವಲ್ಪಮಟ್ಟಿನ ಉದ್ವಿಗ್ನ ವಾತಾವರಣವಿದೆ. ಕಲ್ಲೂ ತೂರಾಟದಂತಹ ಅಹಿತಕರ ಘಟನೆಗಳೂ ನಡೆಯಬಹುದೆಂಬ ಕಾರಣಕ್ಕೆ ಹೊರಗಿನಿಂದ ಬರುವ ಹೊಸಬರನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಫೋಟೋ ತೆಗೆಯುವವರನ್ನು ಯಾಕೆ? ಏನು? ಅಂತೆಲ್ಲಾ ಪ್ರಶ್ನಿಸುತ್ತಾರೆ. ಆದರೆ ಗಾಜಿಪುರ ಗಡಿಯಲ್ಲಿ ಅಂತಹ ಆತಂಕದ ವಾತಾವರಣವಿಲ್ಲದೇ ಮುಕ್ತವಾಗಿದೆ. ಹೊಸಬರು ಸೇರಿದಂತೆ ಹಲವಾರು ಜನರು ಕೂಡಿ ಟೀ, ಊಟ, ನೀರು ಮುಂತಾದವುಗಳನ್ನ ಹಂಚುತ್ತಾ ಮುಕ್ತವಾಗಿ ಓಡಾಡುತ್ತಿದ್ದಾರೆ. ಹೀಗೆ ಹತ್ತಾರು ಕಿಲೋಮೀಟರ್‌ವರೆಗೂ ಮುಂದುವರೆಯುತ್ತಿದೆ” ಎಂದು ವಿವರಿಸಿದರು.

ಇಲ್ಲಿ ಸೇರಿರುವ ರೈತರು ಮತ್ತು ರೈತ ಬೆಂಬಲಿಗರೆಲ್ಲರೂ “ಮೋದಿ ಮುರ್ದಾಬಾದ್-ರಾಕೇಶ್ ಟಿಕಾಯತ್ ಜಿಂದಾಬಾದ್, ನಾವು ನಿಮ್ಮೊಂದಿಗೆ ಇದ್ದೇವೆ” ಎನ್ನುವಂತಹ ಘೋಷಣೆಗಳನ್ನು ಕೂಗುತ್ತಿದ್ದಾರೆ. ರಾಕೇಶ್ ಟಿಕಾಯತ್ ಅವರು ಕಣ್ಣಿರು ಹಾಕಿದ್ದರಿಂದಾಗಿ ಉತ್ತರಪ್ರದೇಶದ ಜನರು ಮತ್ತಷ್ಟು ಕೆರಳಿದ್ದಾರೆ. ಈ ಪ್ರತಿಭಟನೆ ಅವರ ಸ್ವಾಭಿಮಾನವೆಂಬಂತೆ ಪರಿಗಣಿಸಿದ್ದು, ಜೊತೆಗೆ ಇನ್ನಷ್ಟು ಜನರು ಸೇರಿಕೊಳ್ಳುತ್ತೆಲೇ ಇದ್ದಾರೆ. ಈ ಹೋರಾಟವನ್ನು ಮಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಸಿಂಘು ಗಡಿಯ ಒಂದು ಭಾಗದಲ್ಲಿ ದಾಂಧಲೆ ಮಾಡಿದ್ದು ಸ್ಥಳೀಯರಲ್ಲ ಬಿಜೆಪಿ ಕಾರ್ಯಕರ್ತರು!

ಕಳೆದ 2 ತಿಂಗಳಿನಿಂದ ಶಾಂತಿಯುತವಾಗಿ ನಡೆದುಕೊಂಡು ಬಂದ ರೈತರ ಪ್ರತಿಭಟನೆ ಈಗ ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಜನವರಿ 26 ರಂದು ಲಕ್ಷಾಂತರ ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ಪೆರೇಡ್ ನಡೆಸಿದ್ದರು. ಈ ವೇಳೆ ಪ್ರಚೋದಿತ ಗುಂಪೊಂದು ಕೆಂಪುಕೋಟೆಗೆ ನುಗ್ಗಿ ಸಿಖ್ ಧಾರ್ಮಿಕ ಧ್ವಜ ಹಾರಿಸಿತ್ತು. ಇದರ ಕುರಿತು ದೇಶದಾದ್ಯಂತ ಪರ-ವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆದಿತ್ತು. ಇದರ ಬೆನ್ನಲ್ಲೇ ದೆಹಲಿ-ಉತ್ತರಪ್ರದೇಶದ ಗಡಿಯಲ್ಲಿರುವ ರೈತರು ಸ್ಥಳ ಖಾಲಿ ಮಾಡಬೇಕು ಎಂದು ಆದೇಶಿಸಲಾಗಿತ್ತು.

ಮರುದಿನ ರಾತ್ರಿ ರೈತರ ಮೇಲೆ ಪೊಲೀಸರು ಹಲ್ಲೆ ನಡೆಸಲು ಯೋಜಿಸಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿತ್ತು. ಆದರೆ ರೈತ ಮುಖಂಡ ರಾಕೇಶ್ ಟಿಕಾಯತ್ ಗುರುವಾರ ರಾತ್ರಿ ಭಾವನಾತ್ಮಕ ಭಾಷಣದ ನಂತರ ಶುಕ್ರವಾರ ಕಿಸಾನ್ ಮಹಾಪಂಚಾಯತ್‌ಗೆ 10 ಸಾವಿರಕ್ಕೂ ಹೆಚ್ಚು ರೈತರು ಮುಜಪ್ಪರ್‌ನಗರದಿಂದ ಗಾಜಿಪುರ ಗಡಿಗೆ ಬಂದಿದ್ದಾರೆ.

ಇದರ ಬೆನ್ನಲ್ಲೇ ಸಿಂಘು ಗಡಿಯಲ್ಲಿ ಕೆಲವು ದುಷ್ಕರ್ಮಿಗಳ ಆಯುಧದಾರಿ ಗುಂಪೊಂದು ರೈತರ ಟೆಂಟುಗಳಿಗೆ ನುಗ್ಗಿ ದಾಂಧಲೆ ನಡೆಸಿ ಹಲ್ಲೆ ಮಾಡಿತ್ತು. ಇಲ್ಲಿ ಕಲ್ಲು ತೂರಾಟ ಸೇರಿದಂತೆ ರೈತರು, ದುಷ್ಕರ್ಮಿಗಳು ಮತ್ತು ಪೊಲೀಸರ ನಡುವೆ ಮಾರಾಮಾರಿ ನಡೆದಿತ್ತು. ಆದರೆ ದುಷ್ಕರ್ಮಿಗಳು ಗುಂಪು ಬ್ಯಾರಿಕೇಡ್ ದಾಟಿ ರೈತರ ಟೆಂಟುಗಳಿಗೆ ನುಗ್ಗುವ ತನಕ ಪೊಲೀಸರು ಕೈಕಟ್ಟಿ ನಿಂತಿದ್ದರು ಎಂದು ಆರೋಪಿಸಲಾಗಿದೆಜೊತೆಗೆ ಅಲ್ಲಿದ್ದವರು ಬಿಜೆಪಿ ಕಾರ್ಯಕರ್ತರು ಎಂದು ಆಲ್ಟ್ ನ್ಯೂಸ್ ವರದಿ ಮಾಡಿತ್ತು.


ಇದನ್ನೂ ಓದಿ: ಕೃಷಿ ಕಾಯ್ದೆಗಳ ರದ್ದತಿ: ಇಂದಿನ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...