Homeಮುಖಪುಟಇನ್ನೂ ಬಾರದ ಅಕ್ಕಿ ಬೇಳೆ - ಹುಸಿಯಾದ ಕೇಂದ್ರ ಸರ್ಕಾರದ ಭರವಸೆ

ಇನ್ನೂ ಬಾರದ ಅಕ್ಕಿ ಬೇಳೆ – ಹುಸಿಯಾದ ಕೇಂದ್ರ ಸರ್ಕಾರದ ಭರವಸೆ

ಮಾರ್ಚ್ 26ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಯಡಿ ಐದು ಕೆಜಿ ಅಕ್ಕಿ ಮತ್ತು ಒಂದು ಕಜಿ ಬೇಳೆ ನೀಡುವ ಭರವಸೆ ನೀಡಿದ್ದರು.

- Advertisement -
- Advertisement -

ಏಪ್ರಿಲ್ 15ರ ನಂತರ ತನ್ನ ಪಾಲಿನ ಪಡಿತರ ಮತ್ತು ಬೇಳೆ ನೀಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಮೌನಕ್ಕೆ ಜಾರಿದೆ. ದೇಶದ ಪಡಿತರದಾರರು ಸೇರಿದಂತೆ ಎಲ್ಲ ಕುಟುಂಬಗಳಿಗೆ ಐದು ಕೆಜಿ ಅಕ್ಕಿ ಹಾಗೂ ಒಂದು ಕೆಜಿ ಬೇಳೆಯನ್ನು ಉಚಿತವಾಗಿ ವಿತರಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಏಪ್ರಿಲ್ ತಿಂಗಳು ಕಳೆಯುತ್ತ ಬರುತ್ತಿದ್ದರೂ ಕೇಂದ್ರ ಸರ್ಕಾರ ಬೇಳೆ ಮತ್ತು ಅಕ್ಕಿ ನೀಡುವ ಸುಳಿವೂ ನೀಡುತ್ತಿಲ್ಲ. ಕೇಂದ್ರದ ಇಂತಹ ಕ್ರಮದಿಂದ ಪಡಿತರದಾರರು ಬೇಸರ ವ್ಯಕ್ತಪಡಿಸಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಭರವಸೆ ನೀಡಿದ ಮೇಲೆ ಕೇಂದ್ರ ತನ್ನ ಪಾಲಿನ ಪಡಿತರವನ್ನು ನೀಡಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ದೇಶದಲ್ಲಿ 23.6 ಕೋಟಿ ಪಡಿತರ ಚೀಟಿಗಳಿವೆ. ಈ ಕುಟುಂಬಗಳಿಗೆ ವಿತರಿಸಲು ಪ್ರತಿ ತಿಂಗಳು 2,36,000 ಟನ್ ಬೇಳೆ ಬೇಕು ಎಂಬುದನ್ನು ಸರ್ಕಾರದ ಅಂಕಿಅಂಶಗಳೇ ಹೇಳುತ್ತವೆ. ಆದರೆ ಇದುವರೆಗೆ ಎಲ್ಲಾ ರಾಜ್ಯಗಳಿಗೆ ಕೇವಲ 44,932 ಟನ್ ಬೇಳೆ ಬಿಡುಗಡೆ ಮಾಡಿದೆ ಎಂದು ವರದಿಗಳು ತಿಳಿಸಿವೆ.. ಮಾರ್ಚ್ 26ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಯಡಿ ಐದು ಕೆಜಿ ಅಕ್ಕಿ ಮತ್ತು ಒಂದು ಕಜಿ ಬೇಳೆ ನೀಡುವ ಭರವಸೆ ನೀಡಿದ್ದರು. ಸಂಕಷ್ಟದ ಸಮಯದಲ್ಲಿ ಬಡಕುಟುಂಬಗಳಿಗೆ ಪಡಿತರ ನೀಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಬೇಳೆ ನೀಡದೇ ಇರುವುದರಿಂದ  ಪಡಿರತರದಾರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸುವ ಉದ್ದೇಶಕ್ಕಾಗಿ 2020-21ನೇ ಸಾಲಿಗೆ 10 ಸಾವಿರ ಟನ್ ಬೇಳೆ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ರಾಜ್ಯದ ಮನವಿಗೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಒಂದು ಬಾರಿಯೂ ಬೇಳೆಯನ್ನು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡಿಲ್ಲ. ಇನ್ನೊಂದೆಡೆ ಕೇಂದ್ರ ಸರ್ಕಾರ ಕೊರೊನಾ ಸಂಕಟದ ಸಮಯದಲ್ಲಿ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸದೆ ಮಾತಿಗೆ ತಪ್ಪಿದೆ. ಬೇಳೆ ಮತ್ತು ಅಕ್ಕಿಯ ನಿರೀಕ್ಷೆಯಲ್ಲಿದ್ದ ಬಡಕುಟುಂಬಗಳಿಗೆ ಕೇಂದ್ರದ ಮೌನ ತಣ್ಣೀರು ಎರೆಚಿದಂತಾಗಿದೆ. ಏಪ್ರಿಲ್ 10ರ ಒಳಗೆ ರಾಜ್ಯದ ಪಾಲಿನ ಪಡಿತರ ಪಡೆದಿದ್ದ ಕುಟುಂಬಗಳು ಕೇಂದ್ರದ ಪಡಿತರಕ್ಕಾಗಿ ಕಾದುಕುಳಿತವು. ಇದಕ್ಕೆ ಕೇಂದ್ರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಲಿಲ್ಲ.

ಆಹಾರ, ನಾಗರಿಕ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ವೈಬ್‌ಸೈಟ್ ನಲ್ಲಿ ಪ್ರಕಟಿಸಿರುವಂತೆ ರಾಜ್ಯದ 30 ಜಿಲ್ಲೆಗಳಲ್ಲಿ 1,47,95,472 ಪಡಿತರ ಕುಟುಂಬಗಳಿವೆ.  ಬೆಳಗಾವಿಯಲ್ಲಿ ಹೆಚ್ಚು ಅಂದರೆ 14,30,946 ಪಡಿತರದಾರರು ಇದ್ದರೆ, ಮೈಸೂರಿನಲ್ಲಿ 7,98,187 ಕುಟುಂಬಗಳಿದ್ದು ಎರಡನೇ ಸ್ಥಾನದಲ್ಲಿದೆ. ತುಮಕೂರು ಮೂರನೇ ಸ್ಥಾನದಲ್ಲಿದ್ದು ಇಲ್ಲಿ 7,12,709 ಕುಟುಂಬಗಳಿವೆ. ಬಳ್ಳಾರಿಯಲ್ಲಿ 6,53,403 ಕುಟುಂಬಗಳಿದ್ದು ನಾಲ್ಕನೇ ಸ್ಥಾನದಲ್ಲಿದೆ. ಇಷ್ಟೊಂದು ಕುಟುಂಬಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಎರಡು ತಿಂಗಳ ಅಕ್ಕಿ ಮತ್ತು ಗೋದಿಯನ್ನು ವಿತರಿಸಿದೆ. ಆದರೆ ಕೇಂದ್ರ ಸರ್ಕಾರದ ಪಾಲು ಜನರಿಗೆ ಸಿಗಬೇಕು. ಇದಕ್ಕಾಗಿ ಪಡಿತರ ಕುಟುಂಬಗಳು ಎದುರು ನೋಡುತ್ತಿವೆ.

ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್‌ಗೆ ತಿಳಿಸಿರುವಂತೆ ಕೊರೊನ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಾಗಾಗಿ ಶೇ.96ರಷ್ಟು ವಲಸೆ ಕಾರ್ಮಿಕರು ಪಡಿತರ ಪಡೆಯಲು ಆಗಿಲ್ಲ. ಶೇ. 90ರಷ್ಟು ವಲಸೆ ಕಾರ್ಮಿಕರು ಕೂಲಿಯನ್ನೂ ಪಡೆದಿಲ್ಲ. ಶೇಕಡ 70ರಷ್ಟು ವಲಸೆ ಕಾರ್ಮಿಕರು 200 ರೂಗಿಂತಲೂ ಕಡಿಮೆ ಕೂಲಿಯನ್ನು ಪಡೆದಿದ್ದಾರೆ ಎಂದು ಹಿಂದೂ ಪತ್ರಿಕೆ ವರದಿ ಮಾಡಿದೆ. ಅಂದಹಾಗೆ ರಾಜ್ಯ ಕರ್ನಾಟಕ ಸರ್ಕಾರ ನೀಡಿರುವ ಪಡಿತರ ದಾನ್ಯಗಳನ್ನು ವಲಸೆ ಕುಟುಂಬಗಳು ಪಡೆದಿಲ್ಲ. ಹೀಗಾಗಿ ಆ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಜೊತೆಗೆ ವಲಸೆ ಕಾರ್ಮಿಕರನ್ನು ಕಳೆದ ಎರಡು ದಿನಗಳ ಹಿಂದೆ ಅವರ ಸ್ವಂತ ಸ್ಥಳಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿ ಕಳಿಸಿಕೊಡಲಾಗಿದೆ. ಮನೆಯಲ್ಲಿ ಆಹಾರಧಾನ್ಯಗಳು ಇಲ್ಲ. ಕೂಲಿಯ ಹಣವೂ ಇಲ್ಲದಂತಹ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕ ಕುಟುಂಬಗಳಿದ್ದು ಅವರ ನೆರವಿಗೆ ಸರ್ಕಾರ ಬರಬೇಕಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...