Homeಕರ್ನಾಟಕರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ಸಂವಿಧಾನ ವಿರೋಧಿ ಕೆಲಸ ಏಕೆಂದರೆ....

ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ಸಂವಿಧಾನ ವಿರೋಧಿ ಕೆಲಸ ಏಕೆಂದರೆ….

- Advertisement -
- Advertisement -

ಕರ್ನಾಟಕ ಸರಕಾರ ಪಠ್ಯಪುಸ್ತಕಗಳನ್ನು ಅಕ್ರಮವಾಗಿ ಪರಿಷ್ಕರಿಸಲು ಅನುವು ಮಾಡಿಕೊಟ್ಟಿರುವುದು ಮತ್ತು ಆ ಅಕ್ರಮಗಳನ್ನು ಈಗ ಸಕ್ರಮಗೊಳಿಸಲು ಮುಂದಾಗಿರುವುದು ಇತ್ಯಾದಿಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಇಡೀ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ನಡೆಯುತ್ತಿರುವ ಹುನ್ನಾರದ ಭಾಗವಾಗಿ ಕಾಣಿಸುತ್ತದೆ. ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಅನುಸರಿಸಿದ ಮಾರ್ಗ, ಪರಿಷ್ಕರಣೆ ಮಾಡಲು ಸರಕಾರ ಆರಿಸಿಕೊಂಡ ವ್ಯಕ್ತಿಗಳ ಹಿನ್ನೆಲೆ ಮತ್ತು ಪರಿಷ್ಕರಣೆಯ ಹೆಸರಿನಲ್ಲಿ ಪಠ್ಯಗಳಲ್ಲಿ ಮಾಡಿದ ಬದಲಾವಣೆಗಳು ಇತ್ಯಾದಿಗಳೆಲ್ಲವೂ ಒಂದಲ್ಲಒಂದು ರೀತಿಯಲ್ಲಿ ಸಂವಿಧಾನವನ್ನು ಅಣಕಿಸುವ ವಿಚಾರಗಳೇ ಆಗಿವೆ.

ಎಲ್ಲದಕ್ಕಿಂತಲೂ ಮುಖ್ಯವಾಗಿರುವ ಸಂವಿಧಾನ ವಿರೋಧಿ ನಡೆ ಎಂದರೆ ಹತ್ತನೆಯ ತರಗತಿಯ ಪರಿಷ್ಕೃತ ಕನ್ನಡ ಪಠ್ಯದಲ್ಲಿ ಆರ್.ಎಸ್.ಎಸ್ ಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಅವರ ಭಾಷಣದ ಬರಹರೂಪವನ್ನು ಸೇರಿಸಿರುವುದು. ಉಳಿದ ಬದಲಾವಣೆಗಳೆಲ್ಲಾ ಮುನ್ನೆಲೆಗೆ ಬಂದಿರುವ ಕಾರಣ ಈ ಸೇರ್ಪಡೆಯ ಬಗ್ಗೆ ನಡೆಯಬೇಕಾಗಿರುವಷ್ಟು ಚರ್ಚೆಗಳು ನಡೆಯುತ್ತಿಲ್ಲ. ಅದೇನೇ ಇರಲಿ, ಇದು ಎಲ್ಲದಕ್ಕಿಂತಲೂ ಹೆಚ್ಚು ಗಂಭೀರ ವಿಚಾರ.

ಹತ್ತನೆಯ ತರಗತಿಯ ಪರಿಷ್ಕೃತ ಕನ್ನಡ ಪಠ್ಯಪುಸ್ತಕವನ್ನು ಊಹಿಸಿಕೊಳ್ಳಿ. ಮಕ್ಕಳು ಪುಸ್ತಕ ತೆರೆದಾಗ ಮೊದಲಿಗೆ ಕಾಣಿಸಿಕೊಳ್ಳುವುದು ಸಂವಿಧಾನದ ಪ್ರಸ್ತಾವನೆ. ಮುಂದಿನ ಪುಟದಲ್ಲಿ ಸಾಮಾನ್ಯವಾಗಿ ಎಲ್ಲಾ ಪಠ್ಯಪುಸ್ತಕಗಳಲ್ಲೂ ಇರುವಂತೆ ಸಂವಿಧಾನ-ಪ್ರಣೀತ ಪ್ರತಿಜ್ಞೆ ಕಾಣಿಸಿಕೊಳ್ಳಬಹುದು – ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಮತ್ತು ಅದರ ಶ್ರೀಮಂತ ಮತ್ತು ವಿಭಿನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೇನೆ… ಪುಟ ತಿರುಗಿಸುತ್ತಾ ಹೋದಂತೆ ಓದಲು ಸಿಗುವುದು ಅರ್.ಎಸ್.ಎಸ್ ಸಂಸ್ಥಾಪಕರ ಭಾಷಣದ ಪಠ್ಯ! ದೇಶದ ಪಠ್ಯಪುಸ್ತಕಗಳ ಚರಿತ್ರೆಯಲ್ಲೇ
ಇದಕ್ಕಿಂತ ದೊಡ್ಡ ವಿರೋಧಾಭಾಸ ಎಂದೂ ಕಾಣಿಸಿರಲಾರದು. ಆರ್.ಎಸ್.ಎಸ್ ಒಂದು ದೇಶಭಕ್ತ ಸಂಘಟನೆ ಆಗಿರುವಾಗ, ಅದರ ಸ್ಥಾಪಕರ ಭಾಷಣವನ್ನು ಪಠ್ಯದಲ್ಲಿ ಸೇರಿಸಿದರೆ ತಪ್ಪೇನು ಅಂತ ಹಲವಾರು ವಾದಿಸುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಸರಿಯಾದ ಪ್ರಶ್ನೆ ಆತನ ಅನ್ನಿಸಬಹುದು. ಆದರೆ ವಿಷಯ ಅಷ್ಟೊಂದು ಸಲೀಸಾಗಿಲ್ಲ.

ಅರ್.ಎಸ್.ಎಸ್ ದೇಶಭಕ್ತ ಸಂಘಟನೆಯೇ ಇರಬಹುದು. ಆದರೆ ಆರ್.ಎಸ್.ಎಸ್‌ನವರಿಗೆ ಭಕ್ತಿ ಇರುವುದು ಅವರ ಕಲ್ಪನೆಯ ಭಾರತದ ಮೇಲೆಯೇ ಹೊರತು ಸಂವಿಧಾನದ ಮೂಲಕ ’ಭಾರತದ ಜನರಾದ ನಾವು (We the People) ರೂಪಿಸಿದ ದೇಶದ ಮೇಲಲ್ಲ. ಸಂವಿಧಾನವನ್ನು ಸಂಘ ಎಷ್ಟರಮಟ್ಟಿಗೆ ಒಪ್ಪಿದೆ ಎನ್ನುವುದರ ಬಗ್ಗೆ ಗೊಂದಲವಿದೆ. ಆ ಸಂಘಟನೆಯನ್ನು ಕಾಲಕಾಲಕ್ಕೆ ಮುನ್ನಡೆಸಿದವರು ಈ ದೇಶದ ಸಂವಿಧಾನವನ್ನು ಖಂಡಿಸಿದ್ದಾರೆ, ದೇಶದ ಜನ ವಿವಿಧ ರಾಜ್ಯಗಳ ನೆಲ-ಜಲ-ಭಾಷೆಗಳಿಗೆ ಬದ್ಧರಾಗಿರುವುದನ್ನು ವಿರೋಧಿಸಿದ್ದಾರೆ, ಅರ್ಥಾತ್ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅವರಿಗೆ ವಿರೋಧವಿದೆ. ಸಂವಿಧಾನ ಸಾರುವ ಸಮಾನತೆಯ ಬಗ್ಗೆ ಅವರಿಗೆ ಒಲವಿಲ್ಲ. ಸಂವಿಧಾನ ಎತ್ತಿಹಿಡಿಯುವ ಧರ್ಮನಿರಪೇಕ್ಷತೆಯ ನೆರಳು ಕಂಡರೆ ಅವರಿಗೆ ಆಗುವುದಿಲ್ಲ. ಸಂವಿಧಾನದ ಜೀವಾಳವಾದ ಬಹುತ್ವ ಅವರಿಗೆ ಕೂಡಿ ಬರುವುದಿಲ್ಲ. ಹೀಗೆ ಸಂವಿಧಾನದ ಮೌಲ್ಯಗಳ ಬಗ್ಗೆ ಮೂಲಭೂತ ಸಹಮತವೇ ಇಲ್ಲದ ಸಂಘಟನೆಯೊಂದರ ಸಂಸ್ಥಾಪಕರ ಬರೆಹವನ್ನು ಪಠ್ಯಪುಸ್ತಕಕ್ಕೆ ಸೇರಿಸುವ ಮೂಲಕ ಸರಕಾರ ಏನು ಮಾಡಲು ಹೊರಟಿದೆ? ಸಂವಿಧಾನದ ಪ್ರಸ್ತುತೆಗೆ ನೇರಾನೇರ ಸವಾಲು ಹಾಕುವಷ್ಟು ಧೈರ್ಯ ಆಳುವ ಪಕ್ಷಕ್ಕೆ ಇಲ್ಲ. ಆದಕಾರಣ ಸಂವಿಧಾನವನ್ನು ಎಂದೂ ಮನಸಾ ಸ್ವೀಕರಿಸದ ಸಂಘಟನೆಯೊಂದರ ಸ್ಥಾಪಕರಿಗೆ ಈ ರೀತಿಯ ಅಧಿಕೃತ ಮಾನ್ಯತೆ ದೊರಕಿಸಿಕೊಡುವ ಮೂಲಕ ಸಂವಿಧಾನವನ್ನು ಪರೋಕ್ಷವಾಗಿ ಅಮಾನ್ಯಗೊಳಿಸುವ ಮತ್ತು ಅವಮಾನಿಸುವ ಹುನ್ನಾರದ ವಾಸನೆ ಇಲ್ಲಿ ಅನುಭವಕ್ಕೆ ಬರುತ್ತದೆ. ಇದರ ಮುಂದುವರಿದ ಭಾಗವಾಗಿಯೇ ’ಅಂಬೇಡ್ಕರ್ ಸಂವಿಧಾನ ಶಿಲ್ಪಿ’ ಎನ್ನುವ ವಾಕ್ಯವನ್ನು ಜಾಣತನದಿಂದ ಕಿತ್ತುಹಾಕಲಾಗಿದೆ. ಒಮ್ಮೆ ಅಂಬೇಡ್ಕರ್ ಮತ್ತು ಸಂವಿಧಾನದ ಅವಿನಾಭಾವ ಸಂಬಂಧವನ್ನು ಜನಮನದಿಂದ ಮಾಸುವ ಹಾಗೆ ಮಾಡಿದರೆ ಮತ್ತೆ ಸಂವಿಧಾನವನ್ನು ಬೇಕಾದಂತೆ ಬದಲಿಸುವುದು ಬಲು ಸುಲಭ.

ಸಂವಿಧಾನ ಪ್ರಜ್ಞೆಗೆ ಪ್ರತಿಯಾಗಿ ಪಠ್ಯಪುಸ್ತಕ ಬದಲಾವಣೆಯ ಹಿನ್ನೆಲೆಯಲ್ಲಿ ಕೆಲಸಮಾಡುತ್ತಿರುವ ಹಿಂದುತ್ವ ಸಂಘಟನೆಗಳು ಬೆಳೆಸುವ ಪ್ರಜ್ಞೆ ಎಂತಹದ್ದಿರಬಹುದು ಎನ್ನುವುದನ್ನು ತಿಳಿಯಲು ಬಹುದೊಡ್ಡ ಸಾಕ್ಷಿ ಎಂದರೆ ಈಗ ವಿವಾದದ ಸುಳಿಯಲ್ಲಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರು. ಅವರು ನಾಡಗೀತೆಯ ವಿಕಾರ ರೂಪವನ್ನು ಮೆಚ್ಚಿ ಅನುಮೋದಿಸಿದ್ದು, ನಾಡ ಧ್ವಜವನ್ನು ಅವಹೇಳನ ಮಾಡಿದ್ದು, ಬಸವಣ್ಣನವರ ಬಗ್ಗೆ ಹಿಂದಿನ ಪಠ್ಯದಲ್ಲಿದ್ದ ನೈಜ ಚಿತ್ರಣವನ್ನು ಬದಲಿಸಿ ಬಸವಾನುಯಾಯಿಗಳ ಅಸಮಾಧಾನಕ್ಕೆ ಕಾರಣವಾಗುವ ರೀತಿಯ ಪರಿಷ್ಕರಣೆಗಳನ್ನು ಮಾಡಿದ್ದು ಇತ್ಯಾದಿಗಳೆಲ್ಲದರ ಹಿಂದಿನ ಪ್ರೇರಕ ಶಕ್ತಿಯೂ ಆ ಪ್ರಜ್ಞೆ ತಾನೇ? ಹಾಗಾಗಿಯೇ ಸಂವಿಧಾನಕ್ಕೆ ಬದ್ಧರಾಗಿ ಬಹುತ್ವದ ಸಂಸ್ಕೃತಿಯನ್ನು ಆರಾಧಿಸುವವರು ಮತ್ತು ಆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಳವಳಿಯಾಗಿ ನೀಡಬೇಕೆನ್ನುವವರು, ಈಗ ಸಂವಿಧಾನ ಕಿತ್ತೊಗೆಯುವ ಪ್ರಜ್ಞೆಯ ಮೂಲದಲ್ಲಿರುವ ವ್ಯಕ್ತಿಯ ಭಾಷಣ ಪಠ್ಯಪುಸ್ತಕಕ್ಕೆ ಸೇರಿರುವುದರಿಂದ ಆತಂಕಗೊಂಡಿದ್ದಾರೆ.

ಪರಿಷ್ಕೃತ ಪಠ್ಯಪುಸ್ತಕದಲ್ಲಿ ಯಾವುದೇ ಕಾರಣಕ್ಕೂ ಸೇರಬಾರದಾಗಿದ್ದ ಇನ್ನೊಂದು ಪಠ್ಯವಿದೆ. ಅದರ ವಸ್ತು ಏನೇ ಇರಲಿ, ಅದನ್ನು ಬರೆದ ವ್ಯಕ್ತಿಯ ಕಾರಣಕ್ಕಾಗಿ ಅದು ಪಠ್ಯಪುಸ್ತಕದಲ್ಲಿ ಸೇರಬಾರದಿತ್ತು. ಅದನ್ನು ಬರೆದಿರುವುದು ಕರ್ನಾಟಕದಲ್ಲಿ ಪ್ರಸಿದ್ಧ ವಾಗ್ಮಿ ಎಂದು ಗುರುತಿಸಿಕೊಳ್ಳುವ ಓರ್ವ ವ್ಯಕ್ತಿ. ಈ ವಾಗ್ಮಿ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಸುಳ್ಳುಗಳನ್ನು ಹಾಗೂ ತಿರುಚಿದ ಸತ್ಯಗಳನ್ನು ಯಾವುದೇ ರೀತಿಯ ಅಂಜಿಕೆ ಅಳುಕು ಇಲ್ಲದೆ ಪ್ರಚಾರ ಮಾಡುತ್ತಿದ್ದಾರೆ. ಸುಳ್ಳುಗಳನ್ನೇ ಬಳಸಿ ಒಬ್ಬ ನಾಯಕನನ್ನು ಯದ್ವಾತದ್ವಾ ವೈಭವೀಕರಿಸುತ್ತಿದ್ದಾರೆ. ಬಳಸಬಾರದ ಭಾಷೆ ಬಳಸಿ ಮತೀಯ ದ್ವೇಷ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಜನಜನಿತವಾಗಿದೆ. ಇವೆಲ್ಲಾ ಬರೀಯ ಅಪಾದನೆಗಳಲ್ಲ; ಪೂರಕವಾದ ಸಾಕ್ಷಾಧಾರಗಳು ಸಿಗುತ್ತವೆ. ಅವರ ಸುಳ್ಳುಗಳನ್ನೇ ಬಳಸಿಕೊಂಡು ತಮಾಷೆಯ ವಿಡಿಯೋಗಳನ್ನು ಮಾಡಿ ಹಂಚಲಾಗುತ್ತಿದೆ. ಅದಕ್ಕೆಂದೇ ಮೀಸಲಾದ ಯುಟ್ಯೂಬ್ ಗುಂಪುಗಳಿವೆ. ಇಂತಹ ಹಿನ್ನೆಲೆಯುಳ್ಳ ವ್ಯಕ್ತಿಯ ಬರಹವನ್ನು ಪಠ್ಯದಲ್ಲಿ ಸೇರಿಸಿರುವ ಏಕೈಕ ಕಾರಣ ಎಂದರೆ ಅವರು ದೇಶಭಕ್ತಿಯನ್ನು ಪ್ರೇರೇಪಿಸುವ ಭಾಷಣಗಳಿಗೆ ಹೆಸರುವಾಸಿ ಆಗಿದ್ದಾರೆ ಎಂಬುದಂತೆ. ಇಲ್ಲಿ ದೇಶ ಪ್ರೇಮ ಎಂದರೆ ಹಿಂದೂ ರಾಷ್ಟ್ರದ ಪ್ರತಿಪಾದನೆ ಅಥವಾ ಉಗ್ರ ಹಿಂದುತ್ವದ ಪ್ರತಿಪಾದನೆ ಎಂದು ಅರ್ಥ. ಅವರು ಮಾಡುವ ಭಾಷಣಗಳೆಲ್ಲಾ ಬಹುತೇಕ ಈ ರೀತಿಯವುಗಳೇ. ಜನರ ನಡುವೆ ದ್ವೇಷ ಸೃಷ್ಟಿಸುವ, ಜಾಣ ಸುಳ್ಳುಗಳನ್ನು ಬಿತ್ತರಿಸುವ ಮೂಲಕ ಯಾರಾದರೂ ದೇಶ ಪ್ರೇಮವನ್ನು ಸೃಷ್ಟಿಸಲು ಮುಂದಾಗುತ್ತಿದ್ದಾರೆ ಎಂದರೆ ಅವರು ಈ ದೇಶದ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ. ಆದುದರಿಂದ ಅಂತಹ ಹಿನ್ನೆಲೆಯ ವ್ಯಕ್ತಿಯ ಬರಹಗಳನ್ನು ಪಠ್ಯಕ್ಕೆ ಸೇರಿಸುವುದು ಎಂದರೆ ಅದು ಕೂಡಾ ಸಂವಿಧಾನಕ್ಕೆ ಮಾಡುವ ಅವಮಾನ ಅಂತಲೇ ಭಾವಿಸಬೇಕಾಗುತ್ತದೆ.

ಅಕ್ರಮವಾಗಿರಲಿ, ಸಕ್ರಮವಾಗಿರಲಿ. ಪರಿಷ್ಕರಣೆ ಎಂದ ಮೇಲೆ ಕೆಲವೊಂದು ವಿಷಯಗಳನ್ನು ತೆಗೆಯುವುದು, ಕೆಲವೊಂದನ್ನು ಸೇರಿಸಿಕೊಳ್ಳುವುದು ಇದ್ದದ್ದೆ. ಆದರೆ ಈಗ ಪರಿಷ್ಕರಣೆಯ ಹೆಸರಲ್ಲಿ ಪಠ್ಯದಿಂದ ಕಿತ್ತು ಹಾಕಿದ್ದನ್ನು ಗಮನಿಸಿದರೆ ಅದರ ಹಿಂದಿನ ಸಂವಿಧಾನ ವಿರೋಧಿ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಾದೇಶಿಕತೆಗೆ ಸಂಬಂಧಿಸಿದ ವಿಚಾರಗಳನ್ನು ಕಿತ್ತುಹಾಕಿರುವುದು ಅಥವಾ ಪ್ರಾದೇಶಿಕತೆ ಎಂದರೆ ಅದೇನೋ ದೊಡ್ಡ ರಾಷ್ಟ್ರ ವಿರೋಧಿ ಪರಿಕಲ್ಪನೆ ಎನ್ನುವಂತೆ ಬಿಂಬಿಸಿರುವುದು, ಪ್ರಾದೇಶಿಕ ನಾಯಕರಿಗೆ ಮತ್ತು ಪ್ರಾದೇಶಿಕ ಸಾಧುಸಂತರಿಗೆ ಸಂಬಂಧಿಸಿದ ವಿವರಗಳನ್ನು ಕೈಬಿಟ್ಟಿರುವುದು ಸಂವಿಧಾನ ಎತ್ತಿಹಿಡಿಯುವ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ವಿರೋಧಿ ಮನೋಸ್ಥಿತಿಗೆ ಸಾಕ್ಷಿ. ಅದೇ ರೀತಿ, ಒಂದು ಜಾತಿಗೆ ಸೇರಿದ ದಾರ್ಶನಿಕರನ್ನು ಬಹುವಚನ ಬಳಸಿ ಗೌರವದಿಂದ ಸಂಭೋದಿಸಿ, ಇತರ ಸಮುದಾಯಗಳಿಗೆ ಸೇರಿದ ದಾರ್ಶನಿಕರ ಹೆಸರುಗಳನ್ನೂ ಏಕವಚನ ಬಳಸಿ-ಕೇವಲವಾಗಿ ಸಂಭೋದಿಸಿದ್ದು ಸಂವಿಧಾನ ತೋರಿಸಿಕೊಡುವ ಸಮಾನತೆ ಮತ್ತು ವ್ಯಕ್ತಿ ಗೌರವಗಳ ಆಶಯಕ್ಕೆ ವಿರೋಧವಾಗಿದೆ. ಅದೇ ರೀತಿ ಕಾಲ್ಪನಿಕ ಕತೆಗಳನ್ನು ಚರಿತ್ರೆ ಅಂತ ಚಿತ್ರಿಸುವ ಮೂಲಕ, ಮನುಸ್ಮೃತಿಯನ್ನು ವೈಭವೀಕರಿಸುವ ಮೂಲಕ ಸಂವಿಧಾನ ಪ್ರತಿಪಾದಿಸುವ ವೈಜ್ಞಾನಿಕ ಮನೋಭಾವದ ಆಶಯಕ್ಕೆ ವಿರೋಧವಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಇಡೀ ಪರಿಷ್ಕರಣೆಯನ್ನು ಮಾಡುವಲ್ಲಿ ಯಾವುದೇ ರೀತಿಯ ಸೂಕ್ತ ಆಡಳಿತಾತ್ಮಕ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎನ್ನುವುದು ಕೂಡಾ ಸಂವಿಧಾನಕ್ಕೆ ಮಾಡಿದ ಅಪಚಾರ. ಸಂವಿಧಾನ ಪ್ರಕಾರ ಸರಕಾರ ತಾನು ಮಾಡುವ ಒಂದು ಸಣ್ಣ ಕೆಲಸವನ್ನು ಕೂಡಾ ಕ್ರಮಬದ್ಧವಾಗಿ, ಸೂಕ್ತ ಕಾನೂನಿನ ಹಿನ್ನೆಲೆಯಲ್ಲೇ ಮಾಡಬೇಕಾಗುತ್ತದೆ. ಆದರೆ ಈ ಸಮಿತಿಗೆ ಪರಿಷ್ಕರಣೆಯ ಜವಾಬ್ದಾರಿಯನ್ನು ಕಾನೂನು ರೀತಿಯಲ್ಲಿ ವಹಿಸದೆ ಇದ್ದರೂ ಅದು ಆ ಕೆಲಸವನ್ನು ಮಾಡಿದ್ದು ಮತ್ತು ಅದಕ್ಕೆ ಸರಕಾರ ’ಘಟನೋತ್ತರ’ ಅನುಮೋದನೆ ನೀಡುವುದು ಇತ್ಯಾದಿ ಏನನ್ನು ತೋರಿಸುತ್ತದೆ ಎಂದರೆ ಕರ್ನಾಟಕದಲ್ಲೀಗ ಆಡಳಿತ ನಡೆಯುವುದು ಸಂವಿಧಾನಾತ್ಮಕವಾಗಿ ಅಲ್ಲ, ಬೇಕಾಬಿಟ್ಟಿಯಾಗಿ ಎಂದು. ಉತ್ತರ ಪ್ರದೇಶದ ಬುಲ್ಡೋಜರ್ ಆಡಳಿತ ಇನ್ನೊಂದು ಮಾದರಿ ಇದು.


ಇದನ್ನೂ ಓದಿ: ಇದನ್ನೂ ಓದಿ: ಪಠ್ಯ ಪರಿಷ್ಕರಣೆ; ಸಂವಿಧಾನದ ಮೇಲೂ ದಾಳಿ, ಮತ್ತೊಂದು ಕಡೆ ಸಂವಿಧಾನಶಿಲ್ಪಿಯ ಮೇಲೆಯೂ!

ಇದನ್ನೂ ಓದಿ: ಪಠ್ಯಪುಸ್ತಕ ಹಗರಣ – ‘ಬರಗೂರು ಸಮಿತಿ ಹಿಂದೆ ತುಕ್ಡೆ ಗ್ಯಾಂಗ್‌’: ಸಚಿವ ಬಿಸಿ ನಾಗೇಶ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...