ಚಂಡೀಗಢದ ಮೇಯರ್ ಚುನಾವಣೆಯ ಮತದಾನದ ರದ್ದತಿಯನ್ನು ಪ್ರಜಾಪ್ರಭುತ್ವದ ಅಪಹಾಸ್ಯ ಎಂದು ಸುಪ್ರೀಂ ಕೋರ್ಟ್ ಕರೆದ ಕೆಲವೇ ಗಂಟೆಗಳ ನಂತರ, ಆಮ್ ಆದ್ಮಿ ಪಕ್ಷವು ಸೋಮವಾರ ಮತಪತ್ರಗಳನ್ನು ಅಮಾನ್ಯವೆಂದು ಘೋಷಿಸುವ ಮೊದಲು ಮತಪತ್ರಗಳನ್ನು ತಿರುಚಿದ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ. ಬಿಜೆಪಿಯ ಸರ್ವಾಧಿಕಾರಕ್ಕೆ ಈ ವಿಡಿಯೋ ಜೀವಂತ ಸಾಕ್ಷಿಯಾಗಿದೆ ಎಂದು ಪಕ್ಷ ಹೇಳಿದೆ.
‘ಈಗ ಒಪ್ಪಿಕೊಳ್ಳಿ ಬಿಜೆಪಿ, ಇದಕ್ಕಿಂತ ದೊಡ್ಡ ಪುರಾವೆ ಬೇಕೇ? ಬಿಜೆಪಿಯ ಚುನಾವಣಾ ಅಧ್ಯಕ್ಷರೆ ಬಹಿರಂಗವಾಗಿ ಮತಗಳನ್ನು ರದ್ದುಪಡಿಸುವ ಮೂಲಕ ಪ್ರಜಾಪ್ರಭುತ್ವವನ್ನು ಹೇಗೆ ನಾಶಪಡಿಸಿದರು ಎಂಬುದನ್ನು ನೋಡಿ. ಇದು ಬಿಜೆಪಿಯ ಸರ್ವಾಧಿಕಾರಕ್ಕೆ ಜೀವಂತ ಸಾಕ್ಷಿ’ ಎಂದು ಆಪ್ ಕಿಡಿಕಾರಿದೆ.
ಚುನಾವಣಾ ಅಧಿಕಾರಿಯಾಗಿದ್ದ ಅನಿಲ್ ಮಸಿಹ್ ಅವರು 8 ಮತಗಳು ಅಸಿಂಧು ಎಂದು ಘೋಷಿಸಿದ ನಂತರ, ಚಂಡೀಗಢ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿಕೂಟಕ್ಕಿದ್ದ ಬಹುಮತದ ಹೊರತಾಗಿಯೂ ಬಿಜೆಪಿಯ ಅಭ್ಯರ್ಥಿ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಗೆದ್ದರು. ಫಲಿತಾಂಶದ ನಂತರ ಚುನಾವಣಾ ಪ್ರಕ್ರಿಯೆ ವಿರುದ್ಧ ಎಎಪಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
More videos surfacing of Anil Masih, Chandigarh mayor poll presiding officer scribbling on the ballot paper sheets. He may well be now under SC scanner, key Qs: whose instructions was he working under? pic.twitter.com/ZY4xhzdW1b
— Rajdeep Sardesai (@sardesairajdeep) February 5, 2024
ಚುನಾವಣಾಧಿಕಾರಿ ಮತಪತ್ರಗಳನ್ನು ವಿರೂಪಗೊಳಿಸಿರುವುದನ್ನು ಸೋಮವಾರ ನ್ಯಾಯಾಲಯ ಗಮನಿಸಿದೆ. ಇದು ಪ್ರಜಾಪ್ರಭುತ್ವದ ಅಣಕ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
‘ಇವರು ಚುನಾವಣೆ ನಡೆಸುವುದು ಹೀಗೆಯೇ? ಇದು ಪ್ರಜಾಪ್ರಭುತ್ವದ ಅಣಕ, ಇದು ಪ್ರಜಾಪ್ರಭುತ್ವದ ಕೊಲೆ. ನಾವು ದಿಗ್ಭ್ರಮೆಗೊಂಡಿದ್ದೇವೆ. ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇದು ಚುನಾವಣಾಧಿಕಾರಿಯ ವರ್ತನೆಯೇ’ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದರು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮೂಲಕ ಬ್ಯಾಲೆಟ್ ಪೇಪರ್‌ಗಳು, ವಿಡಿಯೋಗ್ರಫಿ ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ದಾಖಲೆಯನ್ನು ಸಂರಕ್ಷಿಸಲು ಸುಪ್ರೀಂ ಕೋರ್ಟ್ ನಂತರ ಅಧಿಕಾರಿಗಳಿಗೆ ಸೂಚಿಸಿತು.
ಜನವರಿ 30ರಂದು ಬಿಜೆಪಿಯ ಪ್ರತಿಸ್ಪರ್ಧಿ ಮನೋಜ್ ಸೋಂಕರ್ ವಿರುದ್ಧ ಸೋತ ಎಎಪಿ ಅಭ್ಯರ್ಥಿ ಕುಲದೀಪ್ ಧಲೋರ್ ಅವರ ಮನವಿಯನ್ನು ಆಲಿಸಿದ ನ್ಯಾಯಾಲಯ, ಸಭಾಧ್ಯಕ್ಷರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದೆ. ಅವರ ನಡವಳಿಕೆಯಿಂದ ನಮಗೆ ದಿಗಿಲಾಯಿತು ಎಂದು ಕೋರ್ಟ್ ಆತಂಕ ವ್ಯಕ್ತಪಡಿಸಿದೆ.
‘ಪ್ರಜಾಪ್ರಭುತ್ವದಲ್ಲಿ ಸ್ಥಿರಗೊಳಿಸುವ ಏಕೈಕ ವಿಷಯವೆಂದರೆ ನಮ್ಮ ಚುನಾವಣಾ ಪ್ರಕ್ರಿಯೆಯ ಶುದ್ಧತೆ. ಆದರೆ, ಇಲ್ಲಿ ಏನಾಗುತ್ತಿದೆ? ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ನಾವು ಬಿಡುವುದಿಲ್ಲ’ ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ಫೆಬ್ರವರಿ 19 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಪೀಠವು ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರಿಗೆ ನಿರ್ದೇಶನ ನೀಡಿ ನೋಟಿಸ್ ನೀಡಿತು.
ಇದನ್ನೂ ಓದಿ;


