Homeಕರ್ನಾಟಕಚಾನೆಲ್ ಚಿತ್ರಾನ್ನ ಕಾಶಿಯ ಕೊತ್ವಾಲ, ಪ್ರತ್ಯಕ್ಷರಾದ ಸಾಧುಗಳು, ಖಬರ್ ದಾರ್ ಮೆಸೇಜ್

ಚಾನೆಲ್ ಚಿತ್ರಾನ್ನ ಕಾಶಿಯ ಕೊತ್ವಾಲ, ಪ್ರತ್ಯಕ್ಷರಾದ ಸಾಧುಗಳು, ಖಬರ್ ದಾರ್ ಮೆಸೇಜ್

- Advertisement -
- Advertisement -

4ನೇ ಹಂತದ ಮತದಾನದ ಹಿಂದಿನ ದಿನ ರಿಪ್ಲಬಿಕ್ ಟಿವಿಯಲ್ಲಿ, ‘ಸಂಡೇ ಡಿಬೇಟ್ ವಿತ್ ಅರ್ನಾಬ್ ಗೋಸ್ವಾಮಿ’ ಕಾರ್ಯಕ್ರಮದ ಟೈಟಲ್ಲೇ #ModiWaveElection…

ಚರ್ಚೆಯ ಸಂದೇಶ ಏನಾಗಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಿಯೇ ಗೋಸ್ವಾಮಿ ಕಾರ್ಯಕ್ರಮ ರೂಪಿಸಿರುತ್ತಾರಲ್ಲವಾ? ಚರ್ಚೆ ಶುರುವಾಗುತ್ತಲೇ ಮರಿ ಗೋಸ್ವಾಮಿಗಳಾಗಿರುವ ಅವರ ಅಭಿಮಾನಿಗಳು ತಮ್ಮ ಮನದಿಂಗಿತವನ್ನು ಟ್ವೀಟ್ ಮಾಡಲು ಶುರು ಮಾಡಿಬಿಡುತ್ತಾರೆ.

ಚರ್ಚೆಯಲ್ಲಿ ಬಿಜೆಪಿ ವಿರೋಧಿ ಪ್ಯಾನಲಿಸ್ಟ್ ಅರ್ಥಪೂರ್ಣವಾಗಿ ವಾದ ಮಂಡಿಸತೊಡಗಿದರೆ, ಗೋಸ್ವಾಮಿ ಚೀರಾಡಿ, ಹಾರಾಡಿ ವಿಷಯವನ್ನು ಎತ್ತೆತ್ತಲೋ ಒಯ್ದು ಬಿಡುತ್ತಾರೆ. ಮೊನ್ನೆ ರವಿವಾರವೂ ಅವರೂ ಅದನ್ನೇ ಮಾಡಿದರು. ಇದು ‘ಮೋದಿ ಅಲೆ ಚುನಾವಣೆ’ ಎಂಬ ಅವರ ನಿಲುವನ್ನು ಮುನ್ನೆಲೆಗೆ ತರಲು ಹರಸಾಹಸ ಮಾಡಿದರು….

ಮಂಡ್ಯದ ನಂತರ ನಮ್ಮ ಚಾನೆಲಗಳಿಗೆ ಆಕರ್ಷಕವಾಗಿ ಕಂಡಿದ್ದು ವಾರಣಾಸಿ. ಮೋದಿಯವರ ನಾಮಿನೇಶನ್ ಅವುಗಳ ಪಾಲಿಗೆ ‘ಸ್ವಾಮಿ-ನೇಷನ್’ ಅನಿಸಿರಬೇಕು. ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಚಾನೆಲ್ಲುಗಳಲ್ಲಿ ಎರಡು ದಿನ ವಾರಣಾಸಿಯ ಜಪ. ಪ್ರಧಾನಿಯ ನಾಮಪತ್ರ ಸಲ್ಲಿಕೆ ಓಕೆ, ಜನರಿಗೆ ಅಲ್ಲಿನ ವಾತಾವರಣ ತೋರಿಸಬೇಕು, ಅದೂ ಸರಿ. ಆದರೆ, ರಾಜಕೀಯದೊಂದಿಗೆ ಧಾರ್ಮಿಕತೆಯನ್ನು ಬೆರೆಸಿ, ವೀಕ್ಷಕರಲ್ಲಿ ಕಾಶಿ ವಿಶ್ವನಾಥನ ಬಗ್ಗೆ ಇರಬಹುದಾದ ಭಕ್ತಿಯನ್ನು ಮೋದಿಗೆ ‘ಟ್ರಾನ್ಸ್‍ಫರ್’ ಮಾಡಲು ಹೆಣಗಲಾಯಿತು.

ರಾಜ್ಯದಲ್ಲಿ ಮತದಾನ ಮುಗಿದಿದ್ದರೂ ಕನ್ನಡದ ಚಾನೆಲ್‍ಗಳೂ ಹಿಂದಿಯವರಂತೆ ಉತ್ಸುಕವಾಗಿಯೇ ನಾಮಪತ್ರ ಸಲ್ಲಿಕೆಯನ್ನು ಪ್ರಸಾರ ಮಾಡಿದರು. ಬಹುಷ: ಇದು ಪ್ಯಾಕೇಜ್‍ನ ಭಾಗವಾಗಿರಬಹುದು.

ದಿಗ್ವಿಜಯಕ್ಕೆ ಯುದ್ಧ ಗೆದ್ದ ಸಂಭ್ರಮ. ನೇರ ಪ್ರಸಾರದ ಜೊತೆಗೆ ವಿಶೇಷ ಕಾರ್ಯಕ್ರಮ ಬೇರೆ! ‘ವೈರಿಪಡೆಗೆ ನಮೋ ಖಬರ್‍ದಾರ್ ಮೆಸೇಜ್!’ – ಮೋದಿ ನಾಮಿನೇಶನ್ ಭಾಷಣ ಮಾಡುವ ಮೊದಲೇ ಈ ತರಹದ ಹೆಡ್ಡಿಂಗ್! ಗಂಗಾ ಆರತಿ ಮೂಲಕ ವಿಪಕ್ಷಗಳಿಗೆ ವಾರ್ನಿಂಗ್ ಕೊಟ್ಟರೆಂದೇ? ಅಲ್ಲಿ ಸೇರಿಸಿದ ಜನರನ್ನು ಇಟ್ಟುಕೊಂಡು ದಿಗ್ವಿಜಯ ಹೀಗೆ ಹೇಳಿತೋ ಗೊತ್ತಾಗಲಿಲ್ಲ!

ಟಿವಿ9 ಪಾಲಿಗೆ ಮೋದಿ ‘ಕಾಶಿಯ ಕೊತ್ವಾಲ’… ವಿಶ್ವನಾಥನೇ ಬಲ್ಲ ಇದರ ಮರ್ಮ! ನ್ಯೂಸ್18ನಲ್ಲಿ ವಿಶೇಷ ಕಾರ್ಯಕ್ರಮ- ‘ದಶಾಶ್ವಮೇಧ ರಹಸ್ಯ, ಗಂಗಾ ಆರತಿ (ಅವರ ಪರದೆ ಮೇಲೆ ಗಂಗಾರತಿ ಎಂದಿತ್ತು!) ವಿಸ್ಮಯ, ಪ್ರತ್ಯಕ್ಷರಾದ ಸಾಧುಗಳು’….ಸೂಪರ್ ಮಾಮ! ಪ್ರತ್ಯಕ್ಷವಾಗುವವರೆಗೆ ಸಾಧುಗಳು ಎಲ್ಲಿದ್ದರು? ಅಥವಾ ಮೇಲಿಂದ ಉದುರಿ ಬಿದ್ದರಾ?

ಬಿಟಿವಿಯವರಂತೂ ರಾಧಿಕಾ ಹಿರೇಗೌಡರ್ ಅವರನ್ನೇ ವಾರಣಾಸಿಯಲ್ಲಿ ಲ್ಯಾಂಡ್ ಮಾಡಿಸಿದ್ದರು. ರಾಧಮ್ಮರಂತೂ ‘ಏನ್ ವೈಭವ, ಹಬ್ಬದ ಸಂಭ್ರಮ, ಎಲ್ಲೆಲ್ಲೂ ಎಲ್ಲೆಲ್ಲೂ ಎಲ್ಲೆಲ್ಲೂ…ಎಲ್ಲೆಲ್ಲೂ (ನಾಲ್ಕು ದಿಕ್ಕುಗಳ ಹೊರಳಿದ್ದರಿಂದ 4 ಸಲ ಹೇಳಿದರೋ?)…ಜನ ಸ್ವ-ಇಚ್ಛೆಯಿಂದ ಪಾಲ್ಗೊಂಡು ತಾವೇ ನಗರವನ್ನು ಸಿಂಗರಿಸಿದ್ದಾರೆ…’ -ನಾನ್‍ಸ್ಟಾಪ್ ಹೊಗಳಿಕೆಯಲ್ಲೇ ಕಾಲ ಕಳೆದರು.

ಮುಂದಿನ ಹಂತದ ಚುನಾವಣೆಗಳು ಹಿಂದಿ ಬೆಲ್ಟ್‍ನಲ್ಲೇ ಜಾಸ್ತಿ. ಹೀಗಾಗಿ ಹಿಂದಿ ಚಾನೆಲ್‍ಗಳಿಗೆ ವಿಶೇಷ ಪ್ಯಾಕೇಜ್ ಇದ್ದಂತಿತ್ತು. ಝೀ ಚಾನೆಲ್ ಪಾಲಿಗೆ ಶಿವನೇ ನಾಮಿನೇಶನ್‍ಗೆ ಬಂದಂತಿತ್ತು. ಆಜ್‍ತಕ್‍ನಲ್ಲಿ ನಿರೂಪಕಿ ಮತ್ತು ವಾರಣಾಸಿಯಲ್ಲಿ ಓಡಾಡುತ್ತಿದ್ದ ವರದಿಗಾರ್ತಿಯ ನಡುವಿನ ಮಾತು ಹೇಗಿದ್ದವು ಎಂದರೆ,

-ಯಾ ಪರಿ ಮಂದಿ…ಸಂದಿಗೊಂದಿಯಲ್ಲೆಲ್ಲ ಮಂದಿ…ಅಬಬಾ….ನಾ ನೋಡೆ ಇಲ್‍ಬಿಡು ಇಂತಹ ಸಂಭ್ರಮ…

-ಹೌದು ಹೌದು ನಾವು ನೋಡ್ತಾ ಇದ್ದೇವಲ್ಲ. ನೀನೇ ಲಕ್ಕಿ ಕಣೆ…ವಾರಣಾಸಿಯಲ್ಲೇ ನಿಂತು ಇದನ್ನ ಕಣ್ತುಂಬಿಕೊಳ್ಳೋ ಭಾಗ್ಯ…

-ಧೂಮ್‍ಧಾಮ್ ಸೆ ಆಯೇಗಿ ಸರ್ಕಾರ್

ಈ ಲೈವ್ ವರದಿಯ ಪ್ರಾಯೋಜಕರು: ಬಿಗ್‍ಬಾಸ್ ಡಾಲರ್ ಬನಿಯನ್ ಮತ್ತು ಅಂಡರ್‍ವೇರ್ ಕಂಪನಿ!

‘ವೀಕೆಂಡ್ ವಿಥ್ ರಮೇಶ್’ ನೋಡಿದ ಮೇಲೆ ಅನಿಸಿದ್ದು: ಮೋದಿಯವರನ್ನು ಅತಿಥಿಯಾಗಿ ಕರೆದರೆ ಹೇಗೆ? ಓದಿದ ಸ್ಕೂಲ್, ಚಾ ಮಾರಿದ ಸ್ಟೇಷನ್, ಅವರ ಬಾಲ್ಯದ ಸಹಪಾಠಿಗಳನ್ನು ಕರೆಸಲು ಸಾಧ್ಯವಾ? ಅವರ ತಾಯಿ ಕರೆಸಬಹುದು, ಪತ್ನಿ ಬರುವುದು ಡೌಟು… ಸರ್, ಮಾವಿನ ಹಣ್ಣು ತಿಂದು ತೋರಿಸಿ ಅನ್ನೋದು…..ಇವೆಲ್ಲ ಕಷ್ಟ ಅಲ್ಲವಾ ರಮೇಶ್ ಅರವಿಂದ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....