ಠಕ್ಕರ್: ಎದುರಾಬದುರಾ! ‘ಬಾಹರ್ ಕೆ ಕಪಡೆ ಚೋಡೋ, ಜರಾ ಅಂದರ್ ದೇಖೋ ಭಾಯ್’

0

| ವಿಡಂಬನೆ: ಮಲ್ಲಿ |

ನೀವು ಸಂದರ್ಶಿಸಬೇಕಿದ್ದ ವ್ಯಕ್ತಿ ನಿಮಗೆ ಸುಲಭದಲ್ಲಿ ಸಿಗುತ್ತಾರೆ. ಆದರೆ, ಅವರ ಬಾಯಿಂದ ಸತ್ಯಗಳು ಸುಲಭದಲ್ಲಿ ಸಿಗುವುದಿಲ್ಲ. ಹಾಗಾಗಿ ಮನೋಲೋಕದಲ್ಲೇ ಇಬ್ಬರನ್ನೂ ಕೂರಿಸಿಕೊಂಡು ಸತ್ಯ ಹೊರತೆಗೆಯೋಣ ಎಂದು ಠಕ್ಕರ್ ನಿರ್ಧರಿಸಿದ್ದಾರೆ. ವಾರಕ್ಕೆರಡು ಸಂದರ್ಶನ ಗ್ಯಾರಂಟಿ.

ಮೋದಿಯೊಂದಿಗೆ ಒಂದು SUM-ದರ್ಶನ

ಅಕ್ಷಿ ಮತ್ತು ಇಂಡಿಯಾ ‘ಕಡೆ’ಯವರ ಸಂದರ್ಶನದ ನಂತರ ನಮ್ಮ ಠಕ್ಕ(ರ್) ಸ್ನೇಹಿತ ಒಂದು ಚಿಟ್‍ಚಾಟ್ ಮಾಡಿದ್ದಾನೆ….

ಠಕ್ಕರ್: ಅಕ್ಷಯ್ ನಿಮ್ಮ ಡ್ರೆಸ್ ಬಗ್ಗೆ ಕೇಳಿದಾಗ, ತಾವು ಒಳ್ಳೆ ಬಟ್ಟೆ ತೊಡುವ ತಮ್ಮ ಹಂಬಲ ಈಗ ಈಡೇರಿದೆ ಅಂದಿರಿ. ಮೂರ್ಖ ಅಕ್ಷಿ ಹಿಹಿಹಿ ಅಂದು ಬಿಟ್ಟ…

ಗುರೇಂದ್ರ ಕೌದಿ: ಅಚ್ಚಾ, ಅಕ್ಷಿ ಒಬ್ಬ ಸಿನಿಮಾ ನಟ ಅಷ್ಟೇ.. ಅವಂಗೆ ಎಲ್ಲ ಗೊತ್ತಾಗಲ್ಲ. ಬಟ್, ಇಂದಿಯಾ ‘ಕಡೆ’ ಸಂದರ್ಶನದಲ್ಲಿ ಪ್ರಶ್ನೆ ಕೇಳ್ತಾ ಇದ್ದ ಆ ಇಬ್ಬರು ಯುವತಿಯರಿಗೆ ದಿರಿಸುಗಳ ಬಗ್ಗೆ ಅದ್ಭುತ ಹೊಳವು ಇದ್ದವು. ಆದರೆ ಅಕ್ಷಿಯಂತೆ ಅವರೂ ನನ್ನ ದುಬಾರಿ ಡ್ರೆಸ್ ಬಗ್ಗೆ ಕೇಳಿಬಿಟ್ಟರು.

ಮೈ ನೆ ಇಸ್‍ಕೋ ಬೋಲಾ, ಬಾಹರ್ ಕೆ ಕಪಡೆ ಚೋಡೋ, ಅಂದರ್ ಕಿ ಬಾತ್ ಕರೋ…

ಠಕ್ಕರ್: ಸರ್ ಅವರಿಗೇನು ಗೊತ್ತು ಅಂತರಾಳದ ಮರ್ಮ, ಒಳಗಿನ ಬೇಗುದಿ… ಆದರೂ ಒಂದ್ ಪರ್ಸನಲ್ ಪ್ರಶ್ನೆ, ‘ಅಂದರ್ ಕಿ ಬಾತ್ ವೊ ಕ್ಯಾ ಹೌ ಡ್ರೆಸ್ ಕೆ ಬಾರೆ ಮೆಂ’

ಗುರೇಂದ್ರ ಕೌದಿ: ಅಂದರ್ ಕಿ ಬಾತ್ ಅಂದರ್ ಹಿ ಹೋನಾ ಭಯ್ಯಾ… ಭಯ್ಯಾ ಸಚ್‍ಮುಚ್ ಬೋಲ್ತಾ ಹೂ ಅಂದರ್ ಕುಚ್ ನಹಿ! (ಒಳಗಿನ ವಿಷ್ಯ ಒಳಗ ಇರ್ಬೇಕು ಮಾರಾಯ…ಖರೆ ಹೇಳ್ತೀನಿ, ಒಳಗ ಏನ್ ಅಂದ್ರ ಏನೂ ಇಲ್ಲ..|)

ಠಕ್ಕರ್: ಕ್ಯಾ ಸಚ್ ಬತಾಯಾ ಆಪನೆ ಸರ್! ಮಗರ್ ಏಕ್ ಬಾತ್ ಪರ್ಸನಲ್ ಸರ್, ಮೇರಾ ಅಂದರ್ ಕುಚ್ ಹೈ, ಬನಿಯನ್ ಔರ್ ಅಂಡರ್‍ವೇರ್….ಆಪ್ ಕೆ ಪಾಸ್ ವೊ ಭಿ ನಹಿಂ ಹೈ! ಸೊ ಸಿಂಪಲ್ ಸರ್ ಯು ಆರ್…( ಎಂತಹ ಸತ್ಯ ಹೇಳಿದ್ರಿ ನೀವು! ಆದ್ರ ಒಂದ್ ಪರ್ಸನಲ್ ಮಾತ್ ಐತ್ರಿ, ನಂಗ ಒಳಗ ಸಂಥಿಂಗ್ ಐತ್ರಿ, ಅಂಡರ್‍ವೇರು, ಬನಿಯನ್ನು….ನಿಮ್ಮತ್ರ ಅವೂ ಇಲ್ಲ ಅಂದ್ರ, ನೀವೆಷ್ಟು ಸಿಂಪಲ್ ಸರ್?)

ಗುರೇಂದ್ರ ಕೌದಿ: ಅಕ್ಷಿ, ಕುನ್ವಾಲ್ ಟೀಮ್‍ಗೆ ಅರ್ಥವಾಗದ್ದನ್ನು ನೀ ಕಂಡು ಹಿಡಿದೆ… ಒಳಗಿನ ಮಾತಲ್ಲವಾ? ಇಸಿ ಲಿಯೆ ಮೈ ಆಮ್ ಆದ್ಮಿಯೊ ಕಾ ಬಾತ್ ಕೊ ರಿಸ್ಪೆಕ್ಟ್ ಕರತಾ ಹೂಂ…

ಠಕ್ಕರ್: ಅಲ್ಲ ಸರ್, ಬ್ಯಾಗ್ ಚಿಕ್ಕದು ಅಂತಾ ನೀವು ಫುಲ್ ತೋಳಿನ ಶರ್ಟನ್ನೇ ಅರ್ಧ ತೋಳಿನ ಶರ್ಟಾಗಿ ಕಟ್ ಮಾಡತಾ ಇದ್ದಿರಂತೆ… ಎಂತಹ ಐಡಿಯಾ ಸರ್?

ಗುರೇಂದ್ರ ಮೋದಿ: ಹಾ ಹಾ….ಅಹಹಾ.. ಅದಕ್ಕೂ ತಲೆ ಬೇಕಲ್ವಾ?

ಠಕ್ಕರ್: ಬ್ಯಾಗ್ ಚಿಕ್ಕದು ಅನ್ನೋ ಫಾರ್ಮುಲಾ ಇಟ್‍ಕೊಂಡು ಕ್ಷಮಿತ್ ಶಾ ಅವರು, ದೇಶ ಚಿಕ್ಕದು, ಇಷ್ಟೆಲ್ಲ ಜನರಿಗೆ ಸಾಲಲ್ಲ ಅಂತ ಎನ್‍ಆರ್‍ಸಿ ಅನ್ನೋ ಕತ್ತರಿ ಬಳಸಿ ಜನರನ್ನೇ ಕಟ್ ಮಾಡೋಕೆ ಹೊಂಟಂಗಿದೆ?

ಗುರೇಂದ್ರ ಮೋದಿ: ಭಯ ಬೇಡ…ಅದೆಲ್ಲ ಆಗುತ್ತ? ಆಫ್ ದಿ ರೆಕಾರ್ಡ್ ಹೇಳ್ತೀನಿ: ರಾಮ ಮಂದಿರ ಮಾಡಿದ್ವಾ? 370 ಆರ್ಟಿಕಲ್? ಕಪ್ಪು ಹಣ? ಕಾಂಗ್ರೆಸ್ ಜೈಲು? ಇವೆಲ್ಲ ಸುಮ್ಮನೇ ಮಾರಾಯ….ಇಲೆಕ್ಷನ್‍ವರೆಗೆ ಇದೆಲ್ಲ ಆಫ್ ದಿ ರೆಕಾರ್ಡ್ ಆಗಿರಲಿ..

ಠಕ್ಕರ್: ಸರ್, ಮಾವಿನ ಹಣ್ಣಿನ ಜೊತೆ ಹಲಸಿನ ಹಣ್ಣು ಸಿಕ್ಕಿದ್ದರೆ ಏನ್ ಮಾಡ್ತಿದ್ರಿ? ಸುಮ್ಮನೆ ಕುತೂಹಲ ಅಷ್ಟೇ…

ಗುರೇಂದ್ರ ಕೌದಿ: ಯಾಕೆ ಭಯ? ಒಳ್ಳೆ ಪ್ರಶ್ನೆ. ಅಕ್ಷಯ್ ಕೂಡ ಹಿಂಗೇ ಫೇಮಸ್ ಆಗಲಿಲ್ವಾ? ಕರಡಿ ಅಂದ್ರ ಜಾಂಬುವಂತ ಅಲ್ವಾ? ಕರಡಿ ತರಹ ತಿನ್ನೋ ಶಕ್ತಿಯನ್ನ ಆ ಜಾಂಬುವಂತ ಕೊಡ್ತಿದ್ದ. ಬಟ್, ಆಗ ನೆಹರು ಕಾರಣದಿಂದಾಗಿ, ಕರಡಿ ದ್ವೇಷದಿಂದಾಗಿ ಹಲಸಿನ ಹಣ್ಣುಗಳನ್ನು ಬೆಳೆಯೋದನ್ನೇ ನಿಷೇಧಿಸಿಲಾಗಿತ್ತು.

ಠಕ್ಕರ್: ಕೊನೆ ಪ್ರಶ್ನೆ. ಅಕ್ಕೋರನ್ನ ನೀವ್ ಬಿಟ್ ಬರಬಾರದಿತ್ತು ಅಲ್ಲವಾ?

ಗುರೇಂದ್ರ ಕೌದಿ: ಅಕ್ಷಯ್, ಕುನ್ವಲ್, ಅರ್ನಾಬ್ ಈ ಪ್ರಶ್ನೆ ಕೇಳಲಿಲ್ಲ. ಅವರಿಗೆ ಸಂಘದ ‘ಸ್ವಯಂಸೇವಕ’ ಅಂದರೆ ಏನು ಅಂತಾ ಗೊತ್ತು. ನನಗೆ ಮದುವೆಯಾದ ಮೇಲೂ ಸ್ವಯಂಸೇವಕ ಆಗಿರುವುದೇ ತೃಪ್ತಿ ಕೊಡ್ತಾ ಇತ್ತು. ಮನೆಯಲ್ಲೇ ಇದ್ದುಕೊಂಡು ಸ್ವಯಂಸೇವೆಯ ಕಡೆ ಒತ್ತು ಕೊಡೋದು ತಪ್ಪಲ್ವಾ? ಅದಕ್ಕೇ ದೇಶಾಂತರ ಹೊರಟು ಬಿಟ್ಟೆ!

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here