Homeಮುಖಪುಟಇಂಡಿಯಾ ಟುಡೇಗೆ ಮೋದಿ ಸಂದರ್ಶನ: ರವೀಶ್ ಕುಮಾರ್‍ರವರಿಗೆ ಯಾಕಿಲ್ಲ?

ಇಂಡಿಯಾ ಟುಡೇಗೆ ಮೋದಿ ಸಂದರ್ಶನ: ರವೀಶ್ ಕುಮಾರ್‍ರವರಿಗೆ ಯಾಕಿಲ್ಲ?

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಈಗ ಮೂರು ಹಂತದ ಚುನಾವಣೆ ಮುಗಿದಿದೆ. ಸದ್ಯ ಇಂಟರವಲ್ ಎನ್ನುವುದಾದರೆ, ಫಸ್ಟ್ ಹಾಫ್‍ನಲ್ಲಿ ದೇಶದ ಸಮಸ್ಯೆಗಳ ಕುರಿತು ಚಕಾರ ಎತ್ತದ, ತಾವು ಕೊಟ್ಟ ಭರವಸೆ ಕುರಿತು ಮಾತೇ ಆಡದ ಪ್ರಧಾನಿ ನರೇಂದ್ರ ಮೋದಿ ಬಾಲಾಕೋಟ್ ದಾಳಿ, ಪಾಕ್ ದ್ವೇಷ, ರಾಷ್ಟ್ರದ ಸುರಕ್ಷತೆ ಎಂದೆಲ್ಲ ಭಾಷಣ ಬಿಗಿದರಷ್ಟೆ. ಸೆಕೆಂಡ್ ಹಾಫ್‍ನಲ್ಲಿ ಹಿಂದೆಲ್ಲ ಅಡಿಯಾಳಿಗಿದ್ದ ಮಾಧ್ಯಮಗಳನ್ನೆಲ್ಲಾ ಸಾರಾಸಗಟಾಗಿ ಖರೀದಿಸಿದಂತೆ ಕಾಣುತ್ತಿದೆ.

ಮೂರು ಹಂತದ ಚುನಾವಣೆ ಮುಗಿದ ನಂತರ ಭಯ ಬಿದ್ದಂತಿರುವ ಬಿಜೆಪಿಯವರು ಬೇರೆ ಹಾದಿ ಹಿಡಿದಿದ್ದಾರೆ. ಅಲ್ಲಿ ಭಾವನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತರಲು ಒದ್ದಾಡಿದ್ದಾರೆ. ಅಕ್ಷಯಕುಮಾರ್ ಸಂದರ್ಶನ ಅದರ ಭಾಗ. ಅದು ಯಾವಾಗ ಲೇವಡಿಗೆ ಒಳಗಾಯಿತೋ, ಆಗ ಅವರು ಕಾಶಿ ವಿಶ್ವನಾಥನ ಹೆಸರಲ್ಲಿ ಧಾರ್ಮಿಕವಾಗಿ ಹಿಂದೂಗಳ ಒಲವು ಪಡೆಯಲು ಎರಡು ದಿನ ‘ಹರ’ಸಾಹಸ ಮಾಡಿದ್ದಾರೆ!
ಇದೇ ವೇಳೆ, ತಾವು ಈವರೆಗೂ ಪತ್ರಿಕಾಗೋಷ್ಠಿ ನಡೆಸಿಲ್ಲ ಎಂಬ ಅಪವಾದವನ್ನು ತೊಡೆದು ಹಾಕಲು ಇಂಡಿಯಾ ಟುಡೇಯೊಂದಿಗೆ ಗಂಗಾ ನದಿಯ ತಟದಲ್ಲಿ ಒಂದೂವರೆ ತಾಸುಗಳ ಸಂದರ್ಶನ ನೀಡಿದ್ದಾರೆ. ಪ್ರಧಾನಿಯ ನಾಮಿನೇಶನ್ ನಂತರ ಅದನ್ನು ಪ್ರಮೋಟ್ ಮಾಡುತ್ತಲೇ ಇರುವ ಇಂಡಿಯಾ ಟುದೇ ಚಾನೆಲ್,‘unforgettable interview for Modi’ ಎಂದೆಲ್ಲ ಪೋಸು ಕೊಡುತ್ತಿದೆ. ಇವತ್ತು ಸಂಜೆ 7ಕ್ಕೆ ಆ ಸಂದರ್ಶನ ಪ್ರಸಾರವಾಗಲಿದ್ದು, ಅದರ ತುಣುಕುಗಳನ್ನು ಈಗ ಪ್ರದರ್ಶಿಸಲಾಗಿತ್ತಿದೆ.

‘ಇಂಡಿಯಾ ಟುಡೇ’ದ ಸಂಪಾದಕನೇ ಆಗಿರುವ ರಾಹುಲ ಕನ್ವಾಲ್ ತನ್ನ ಸಹಚರರೊಂದಿಗೆ ಈ ಸಂದರ್ಶನ ಮಾಡಿದ್ದು, ‘ಮೋದಿ ಪ್ರಶ್ನೆಗೆ ಉತ್ತರಿಸಲ್ಲ, ಪ್ರೆಸ್ ಅನ್ನು ಅವಾಯ್ಡ್ ಮಾಡ್ತಾರೆ ಎಂಬುದೆಲ್ಲ ಸುಳ್ಳು, ಅವರು ನಮ್ಮ ಪ್ರಶ್ನೆ ಮತ್ತು ಕೌಂಟರ್ ಪ್ರಶ್ನೆಗೆಲ್ಲ ಉತ್ತರಿಸಿದರು’ ಎಂದೆಲ್ಲ ಹೇಳುತ್ತಾರೆ. ನ್ಯೂಸ್ ಆ್ಯಂಕರ್ ಅಂಜನಾ ಕಶ್ಯಪ್ ಸ್ಟುಡಿಯೋದಲ್ಲಿ ಪ್ರಸಾರವಾಗಲಿರುವ ಈ ಸಂದರ್ಶನದ ಬಗ್ಗೆ ಬಿಲ್ಡ್‍ಅಪ್ ಕೊಡುತ್ತಲೇ, ಗಂಗಾ ತಟದಲ್ಲಿರುವ ರಾಹುಲ್ ಕನ್ವಲ್‍ರನ್ನು ಮಾತಾಡಸಿ, ಮೋದಿ ಮನಬಿಚ್ಚಿ ಮಾತಾಡಿದರೇ ಎಂದು ನಾಟಕೀಯ ಶೈಲಿಯಲ್ಲಿ ಪ್ರಶ್ನೆ ಮಾಡುತ್ತಾರೆ! ಅದಕ್ಕೆ ಗಂಗಾ ತಟದಿಂದ ಉತ್ತರಿಸುವ ರಾಹುಲ್ ಕನ್ವಲ್, ಮೋದಿ ಬಗ್ಗೆ ತಪ್ಪು ಅಭಿಪ್ರಾಯ ಇವೆಯಲ್ಲ, ಈ ಸಂದರ್ಶನದಿಂದ ಅವೆಲ್ಲ ದೂರವಾಗಲಿವೆ, ಮೋದಿ ಪ್ರಬುದ್ಧ ನಾಯಕ ಎಂಬಂತೆ ಹೊಗಳತೊಡಗುತ್ತಾರೆ!

7ಕ್ಕೆ ಸಂದರ್ಶನ ನೋಡೋಣ!

ಅರ್ನಾಬ್ ಕೂಗಾಡಿದ್ದು ಆಯ್ತು ಕೆಲಸ ಆಗಲಿಲ್ಲ… ಅಕ್ಷಯ್ ಬಂದ, ವರ್ಕ್‍ಔಟ್ ಆಗಲಿಲ್ಲ… ಈಗ ಇದ್ದುದರಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿದ್ದ ‘ಇಂಡಿಯಾ ಟುಡೆ’ ಯನ್ನು ಕೂಡ ಬಲೆಗೆ ಹಾಕಲಾಗಿದೆ! ಈ ಸಂದರ್ಶನವನ್ನೂ ಎಲ್ಲ ಭಾಷೆಗಳ ಪೇಯ್ಡ್ ಚಾನೆಲ್‍ಗಳೂ ಅನುವಾದಿಸಿ (ಸಬ್ ಟೈಟಲ್ ಹಾಕಿ) ಪ್ರಸಾರ ಮಾಡುವುದಂತೂ ಗ್ಯಾರಂಟಿ! ಈಗಾಗಲೇ ಅವಕ್ಕೆ ಸಂದರ್ಶನದ ಸ್ಕ್ರಿಪ್ಟ್ ಸಿಕ್ಕಿರಬಹುದು ಅಲ್ಲವೇ?

ಮೋದಿಯವರು ಅಕ್ಷಯ್ ಕುಮಾರ್‍ಗೆ ಸಂದರ್ಶನ ಕೊಟ್ಟ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ರವೀಶ್‍ಕುಮಾರ್‍ಗೂ ಸಂದರ್ಶನ ಕೊಡುತ್ತೀರಾ ಎಂಬ ಪ್ರಶ್ನೆ ವೈರಲ್ ಆಗಿದೆ. ಚೇಂಜ್.ಆರ್ಗ್‍ನಲ್ಲಿ ಸಾವಿರಾರು ಜನ ಪಿಟಿಷನ್‍ಗೆ ಸಹಿ ಮಾಡಿ ಮೋದಿಗೆ ಒತ್ತಡ ಹೇರುತ್ತಿದ್ದಾರೆ. ಆದರೆ ಅದಕ್ಕೆ ಪ್ರತಿಕ್ರಿಯಿಸದ ಮೋದಿ ಇಂಡಿಯಾ ಟುಡೇಗೆ ಸಂದರ್ಶನ ನೀಡಿ ಪಲಾಯನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈಗಷ್ಟೇ ಸೆಕೆಂಡ್ ಹಾಫ್ ಶುರು. ಈ ಭಾಗದ ನಾಟಕದಲ್ಲಿ ಮಾಧ್ಯಮಗಳೇ ದೊಡ್ಡ ಪೇಯ್ಡ್ ಅಭಿನಯಕಾರರು ಎಂಬುದು ನಾಚಿಕೆಗೇಡಿನ ವಿಷಯ! ಆದರೂ ಪೂರ್ತಿ ಸಂದರ್ಶನ ಪ್ರಸಾರವಾಗುವವರೆಗೂ ಕಾಯೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...