Homeಕರ್ನಾಟಕಚೇತನ್‌ ಬಂಧನ; ವಾಕ್ ಸ್ವಾತಂತ್ರ್ಯದ ಹರಣವೆಂದು ಜನಾಕ್ರೋಶ

ಚೇತನ್‌ ಬಂಧನ; ವಾಕ್ ಸ್ವಾತಂತ್ರ್ಯದ ಹರಣವೆಂದು ಜನಾಕ್ರೋಶ

- Advertisement -
- Advertisement -

ಕಲ್ಪಿತ ಇತಿಹಾಸ ಸೃಷ್ಟಿಗೆ ಕಾರಣವಾಗಿದ್ದ ಉರಿಗೌಡ, ನಂಜೇಗೌಡ ಎಂಬ ಪಾತ್ರಗಳ ಕುರಿತು ಉಲ್ಲೇಖಿಸುತ್ತಾ, ‘ಹಿಂದುತ್ವವನ್ನು ಸುಳ್ಳಿನ ಮೇಲೆ ಕಟ್ಟಲಾಗಿದೆ’ ಎಂದು ಪೋಸ್ಟ್‌ ಮಾಡಿದ ಹಿನ್ನೆಲೆಯಲ್ಲಿ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅವರನ್ನು ಪ್ರಕರಣದಲ್ಲಿ ಸಿಲುಕಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಸಂಬಂಧ ಆಕ್ರೋಶ ವ್ಯಕ್ತವಾಗುತ್ತಿದೆ. ಅನೇಕ ಹೋರಾಟಗಾರರು, ಚಿಂತಕರು ಚೇತನ್‌ ಬಂಧನವನ್ನು ಖಂಡಿಸಿದ್ದಾರೆ.

ಚೇತನ್‌ ಅವರ ಬಂಧನವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ವಕೀಲರಾದ ಜಿ.ಟಿ.ನರೇಂದ್ರಕುಮಾರ್‌ ಪ್ರತಿಕ್ರಿಯಿಸಿ, “ವ್ಯಕ್ತಿಯೊಬ್ಬನ ವಿರುದ್ಧ ದೂರು ನೀಡಿದಾಕ್ಷಣ ಪೊಲೀಸರು ಬಂಧಿಸುವುದು ಮತ್ತು ದಂಡಾಧಿಕಾರಿಗಳ ನ್ಯಾಯಾಲಯಗಳು ತಮ್ಮ ವಿವೇಚನಾಧಿಕಾರವನ್ನು ಬಳಸದೆ ಜೇಲಿಗಟ್ಟುವುದು- ಇವುಗಳಿಗೆ ಸುಪ್ರೀಂ ಕೋರ್ಟ್ ಅಂಕುಶ ಹಾಕಬೇಕು, ಸ್ಪಷ್ಟ ನಿರ್ದೇಶನಗಳನ್ನು ರೂಪಿಸಬೇಕು. ಇಲ್ಲದಿದ್ದರೆ ಸಂವಿಧಾನಾತ್ಮಕವಾಗಿ ಭಾರತೀಯ ಪ್ರಜೆಗಳಿಗೆ ನೀಡಲಾಗಿರುವ ಅನೇಕ ಮೂಲಭೂತ ಹಕ್ಕುಗಳಿಗೆ ಬೆಲೆ ಇಲ್ಲದಂತಾಗಿ ಮತ್ತೆ 1975 – 77 ರ ನಡುವಿನ ತುರ್ತು ಪರಿಸ್ಥಿತಿಯತ್ತ ದೇಶ ಜಾರುವ ಆತಂಕವಿದೆ” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿರಿ: ಹಿಂದುತ್ವದ ಸುಳ್ಳುಗಳ ಬಗ್ಗೆ ಪೋಸ್ಟ್: ನಟ ಚೇತನ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಹಿರಿಯ ವಕೀಲರಾದ ಸಿ.ಎಸ್‌.ದ್ವಾರಕನಾಥ್‌ ಪ್ರತಿಕ್ರಿಯಿಸಿ, “ಚೇತನ್ ಹೇಳಿರುವುದರಲ್ಲಿ ಬಂಧಿಸುವಂತದ್ದು ಏನಿದೆ? ನಾನು ಎಫ್‌ಐಆರ್‌‌ ನೋಡಿದೆ, ಅದರಲ್ಲಿ ಏನೂ ಹುರುಳಿಲ್ಲ. ಇಂತದ್ದೇ ಕ್ಷುಲ್ಲಕ ಕಾರಣಗಳಿಗೆ ಬಂಧಿಸುವುದಾದರೆ ಇಡೀ ಕರ್ನಾಟಕವನ್ನೇ ಒಂದು ಬಂದೀಖಾನೆಯಾಗಿ ಪರಿವರ್ತಿಸಬೇಕಾಗುತ್ತದೆ” ಎಂದು ಟೀಕಸಿದ್ದಾರೆ.

ಮುಂದುವರಿದು, “ಇದು ಭಾರತ ಸಂವಿಧಾನದ ಅನುಚ್ಛೇದ 19(1)(a) ಅನ್ನ ಸ್ಪಷ್ಟವಾಗಿ ಉಲ್ಲಂಘಿಸಿದೆ. ಇಲ್ಲಿ ಸ್ಪಷ್ಟವಾಗಿ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ನಟ ಚೇತನ್ ಕುರಿತು ನಮ್ಮ ವ್ಯಕ್ತಿಗತ ಭಿನ್ನಾಭಿಪ್ರಾಯಗಳು ಏನೇ ಇರಬಹುದು, ಆದರೆ ಈ‌ ಸಂದರ್ಭದಲ್ಲಿ ಎಲ್ಲಾ ಪ್ರಜಾಪ್ರಭುತ್ವವಾದಿಗಳು, ಸಂವಿಧಾನದಲ್ಲಿ ನಂಬಿಕೆಯಿರುವವರು ಚೇತನ್‌ ಜೊತೆಯಲ್ಲಿ ನಿಲ್ಲಬೇಕಿದೆ. ಸಂವಿಧಾನದ ಆಶಯಗಳನ್ನು‌ ಉಳಿಸಿಕೊಳ್ಳಬೇಕಿದೆ ಮತ್ತು ಸರ್ಕಾರದ ಸಂವಿಧಾನ ವಿರೋಧಿ ಪ್ಯಾಸಿಸಂ ಧೋರಣೆಯನ್ನು ಖಂಡಿಸಬೇಕಿದೆ” ಎಂದು ಒತ್ತಾಯಿಸಿದ್ದಾರೆ.

ಲಿಂಗಾಯತ ಸಮುದಾಯದ ಮುಖಂಡರಾದ ಸಿದ್ದಪ್ಪ ಮೂಲಗೆಯವರು ಪ್ರತಿಕ್ರಿಯಿಸಿದ್ದು, “ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯೆಂದು ಹೇಳಿಕೊಳ್ಳುವ ಜಾಗತಿಕ ಲಿಂಗಾಯತ ಮಹಾಸಭೆಯು ಸಮುದಾಯದ ನಟ ಚೇತನ್ ಬಂಧನವನ್ನು ಇಂದಾದರೂ ಖಂಡಿಸುತ್ತದೆಯೋ? ಅಥವಾ ಬಿಜೆಪಿ ಮೇಲಿನ ಪ್ರೀತಿ ಖಂಡಿಸದಂತೆ ತಡೆಯುತ್ತದೆಯೋ?” ಎಂದು ಪ್ರಶ್ನಿಸಿದ್ದಾರೆ.

ಚಿಂತಕರಾದ ಆದಿತ್ಯ ಜೆ.ಬಿದನೂರು ಪೋಸ್ಟ್‌ ಮಾಡಿದ್ದು, “ಈ ಕೆಳಗಿನ ಪೋಸ್ಟಿಗಾಗಿ ಚೇತನ್ ಅಹಿಂಸಾನನ್ನು ಬಂಧಿಸಲಾಗಿದೆ ಅನ್ನುವುದಾದರೆ, ಅದು ಉರಿಗೌಡ-ನಂಜೇಗೌಡ ವಿಚಾರದಲ್ಲಿ ಸಂಘ ಪರಿವಾರಕ್ಕೆ ಆದ ಹಿನ್ನಡೆಯನ್ನು ಮರೆಮಾಚುವ, ‘ಚುನಾವಣೆಯ ಸಮಯದಲ್ಲಿ ಹಿಂದುತ್ವದ ಝೋಂಭೀ ಪಡೆ ಮತ್ತು ಆಡಿಯನ್ಸಿನ ಮತಾಂಧತೆ, ಉತ್ಸಾಹವನ್ನು ಈವರೆಗಿನ ಮೊಮೆಂಟಮ್‌ನಲ್ಲೇ ಮೇಂಟೇನ್ ಮಾಡುವ ಕಾರ್ಯಾಚಾರಣೆ ಅಷ್ಟೇ. ಯಾಕೆಂದರೆ, ಈ ಕೆಳಗಿನವು ಹಿಂದುತ್ವಕ್ಕೆ ಸಂಬಂಧಿಸಿದಂತೆ ಬೇಸಿಕ್ ಫ್ಯಾಕ್ಟುಗಳು. ಒಪೀನಿಯನ್ ಕೂಡ ಅಲ್ಲ! ಎಫ್ಐಆರ್ ರದ್ದು ಮಾಡದೇ ಅಥವಾ ಕೊನೆಯಪಕ್ಷ ಜಾಮೀನು ಮಂಜೂರು ಮಾಡದೇ ಕಸ್ಟಡಿಗೆ ಕೊಡಲಾಗಿದೆ ಅಂದರೆ, ಇದು ಶುದ್ಧ ಪೊಲಿಟಿಕಲ್ ಕೇಸು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಬರಹಗಾರ ಅಕ್ರಂ ಪೀರ್‌‌ ಈ ಕುರಿತು ಪೋಸ್ಟ್‌ ಮಾಡಿದ್ದು, “ಬಿಜೆಪಿಯ ಸುಳ್ಳುಗಳ ಬಗ್ಗೆ ಪೋಸ್ಟ್ ಹಾಕಿದ್ದಕ್ಕೆ ದೂರು ಕೊಟ್ಟ ತಕ್ಷಣ ನಟ ಚೇತನ್ ಅವರನ್ನು ಪೊಲೀಸರು ಅರೆಸ್ಟ್ ಮಾಡ್ತಾರೆ, ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನ ಅಂತ ಆದೇಶ ನೀಡ್ತಾರೆ. ಲೋಕಾಯುಕ್ತ ದಾಳಿ ವೇಳೆ ಕೋಟಿಗಟ್ಟಲೆ ಅಕ್ರಮ‌ ಹಣದ ಜೊತೆ ಸಿಕ್ಕಿಹಾಕಿಕೊಂಡ ಶಾಸಕ ಮಾಡಾಳ್ ವಿರೂಪಾಕ್ಷರನ್ನು ಪೊಲೀಸರು ಬಂಧಿಸಲ್ಲ. ಕೋರ್ಟ್ ನಿರೀಕ್ಷಣಾ ಜಾಮೀನು ಕೊಡುತ್ತದೆ. ಸುಳ್ಯದ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರತೀಕಾರವಾಗಿ ಸುರತ್ಕಲ್‌ನ ಮುಸ್ಲಿಂ ಯುವಕ ಫಾಜಿಲ್‌ನ ಹತ್ಯೆ ಮಾಡಿದ್ದೇವೆ ಎಂದು ಘಂಟಾಘೋಷವಾಗಿ ಮೈಕ್ ಮುಂದೆ ಕಿರುಚಿ ಹೇಳಿದ ಶರಣ್ ಪಂಪ್‌ವೆಲ್‌ ವಿರುದ್ಧ ಫಾಜಿಲ್ ತಂದೆಯೇ ದೂರು ಕೊಟ್ಟರೂ ಬಂಧನವಾಗಿಲ್ಲ. ಎಲ್ಲಿದೆನ್ಯಾಯ?” ಎಂದು ಕೇಳಿದ್ದಾರೆ.

ಡಿವೈಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್‌ ಕಾಟಿಪಳ್ಳ ಪ್ರತಿಕ್ರಿಯಿಸಿ, “ನಟ ಚೇತನ್ ಬಂಧನ ಖಂಡನೀಯ. ಬಿಜೆಪಿಯ ಸಿದ್ದಾಂತವನ್ನು ಪ್ರಶ್ನಿಸಿದರೆ, ಟೀಕಿಸಿದರೆ ಜೈಲಿಗೆ ಹಾಕುವುದಾದರೆ ಪ್ರಜಾಪ್ರಭುತ್ವ ಎಲ್ಲಿ ಉಳಿಯಿತು? ಚೇತನ್ ಫೇಸ್ ಬುಕ್ ಪೋಸ್ಟ್‌ನಲ್ಲಿ ಬಂಧನ ನಡೆಸುವಂತಹ ವಿಚಾರ ಏನಿತ್ತು ಎಂದು ಮುಖ್ಯಮಂತ್ರಿಗಳು ಜನತೆಗೆ ವಿವರಿಸಲಿ. ಬಿಜೆಪಿ ಇಡೀ ದೇಶವನ್ನು ಜೈಲಾಗಿ ಪರಿವರ್ತಿಸುತ್ತಿದೆ. ಬಾಯಿ ತೆರೆದರೆ ಇಲ್ಲಿ ಜೈಲು ಭಾಗ್ಯ. ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಚೇತನ್ ಬಂಧನವನ್ನು ಖಂಡಿಸುತ್ತದೆ. ಬಿಡುಗಡೆಗೆ ಆಗ್ರಹಿಸುತ್ತದೆ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...