Homeಮುಖಪುಟದೆಹಲಿ ಜನರ ಹಣಕಾಸಿನ ಹೊರೆ ಇಳಿಸಿದ ಸಿಎಂ ಕೇಜ್ರಿವಾಲ್..!

ದೆಹಲಿ ಜನರ ಹಣಕಾಸಿನ ಹೊರೆ ಇಳಿಸಿದ ಸಿಎಂ ಕೇಜ್ರಿವಾಲ್..!

- Advertisement -
- Advertisement -

ಅಧಿಕೃತ ಪೈಪ್ ನೀರು ಮತ್ತು ಒಳಚರಂಡಿ ಸಂಪರ್ಕವಿಲ್ಲದ ದೆಹಲಿ ನಿವಾಸಿಗಳಿಗೆ ಸಹಾಯ ಮಾಡಲು ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಕೈಗೊಂಡಿರುವ ಈ ಕ್ರಮದಿಂದ ನೀರಿನಿಂದ ಮತ್ತು ಗಾಳಿಯಿಂದ ಹರಡುವ ರೋಗಗಳ ಪ್ರಕರಣಗಳನ್ನು ತಗ್ಗಿಸುತ್ತದೆ ಎಂದು ಹೇಳಲಾಗಿದೆ. ಶುದ್ಧ ನೀರನ್ನು ಮನೆ ಮನೆಗೂ ತಲುಪಿಸುವ ಯೋಜನೆಗೆ ಇದು ಪೂರಕವಾಗಿದೆ. ಇಷ್ಟು ದಿನ ಲಕ್ಷಗಟ್ಟಲೇ ಹಣ ಸುರಿಯುತ್ತಿದ್ದ ಜನರು ಕಡಿಮೆ ಹಣದಲ್ಲಿ ನೀರಿನ ಸಂಪರ್ಕ ವ್ಯವಸ್ಥೆ ಹೊಂದಬಹುದು ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜಲಮಂಡಳಿ ಹೊಸ ನೀರು ಮತ್ತು ಒಳಚರಂಡಿ ಸಂಪರ್ಕದ ಶುಲ್ಕದ ಮೂಲ ಮೊತ್ತವನ್ನು 1/50 ಕ್ಕೆ ಇಳಿಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಅಂದರೆ 200 ಚದರ ಮೀಟರ್ ಪ್ರದೇಶಕ್ಕೆ 1,14,110 ರೂ. ಕಟ್ಟುವ ಬದಲು ಕೇವಲ 2310 ರೂ. ಕಟ್ಟುವ ಸೌಲಭ್ಯ ದೊರೆತಿದೆ.

ಸರಿಸುಮಾರು ಶೇ. 18ರಷ್ಟು ಜನ ಇದರ ಪ್ರಯೋಜನ ಪಡೆಯಲಿದ್ದಾರೆ. ದೆಹಲಿಯ ಸುಮಾರು 6 ಲಕ್ಷ ಕುಟುಂಬಗಳು ಪ್ರಸ್ತುತ ಕೊಳವೆ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಹೊಂದಿಲ್ಲ. ಈ ಮನೆಗಳು ಹೆಚ್ಚಾಗಿ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿವೆ.

ದೆಹಲಿ ಜಲ ಮಂಡಳಿಯ ಅಧ್ಯಕ್ಷರೂ ಆಗಿರುವ ಸಿಎಂ ಕೇಜ್ರಿವಾಲ್ ಅವರು ಹೊಸ ನೀರು ಮತ್ತು ಒಳಚರಂಡಿ ಸಂಪರ್ಕಕ್ಕಾಗಿ ಅಭಿವೃದ್ಧಿ ಮತ್ತು ಮೂಲಸೌಕರ್ಯ ಶುಲ್ಕವನ್ನು ಮನ್ನಾ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಾಗ ಮೀಟರ್‌ಗೆ 500 ರೂ. ಇದ್ದಿದ್ದನ್ನು 100 ರೂ.ಗೆ ಇಳಿಸಿದರು. ಆದಾಗ್ಯೂ, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ವೆಚ್ಚ ಕಡಿತ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಭವ್ಯ ದೇಗುಲ ನಿರ್ಮಾಣವಾಗಲಿ ಎಂದು ಕಾಂಗ್ರೆಸ್‌ ಬಯಸುತ್ತದೆ: ಸಚಿನ್ ಪೈಲಟ್

ನೀರಿನ ಪೈಪ್‌ಲೈನ್‌ ಮೂಲಕ ಅಕ್ರಮ ಎಸಗುತ್ತಿದ್ದವರಿಗೆ ಇದು ಕಡಿವಾಣ ಹಾಕಿದೆ. ನಿರ್ದಿಷ್ಟ ಪ್ರದೇಶಗಳಲ್ಲಿ ಡಿಜೆಬಿ ನೀರಿನ ಪೈಪ್‌ಲೈನ್‌ಗಳನ್ನು ಹಾಕಿದ್ದರೂ, ಹೆಚ್ಚಿನ ಅಭಿವೃದ್ಧಿ ಮತ್ತು ಮೂಲಸೌಕರ್ಯ ಶುಲ್ಕದಿಂದಾಗಿ ಹೆಚ್ಚಿನ ನಿವಾಸಿಗಳು ಇನ್ನೂ ಸಂಪರ್ಕವನ್ನು ಪಡೆದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಪೈಪ್‌ಲೈನ್‌ಗಳು, ನೀರು ಸಂಸ್ಕರಣಾ ಘಟಕಗಳು ಮತ್ತು ಪಂಪಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಈ ಅವಶ್ಯಕತೆಗಳಲ್ಲಿ ಹೂಡಿಕೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಆಪ್ ಅಧಿಕಾರಾವಧಿಯಲ್ಲಿ, 2014 ರಿಂದ 1,047 ಚದರ ಕಿ.ಮೀ ವ್ಯಾಪ್ತಿಯಲ್ಲಿ ನೀರಿನ ಪೈಪ್‌ಲೈನ್‌ಗಳನ್ನು ಹೊಂದಿರುವವರ ಸಂಖ್ಯೆ ಶೇ. 58 ರಿಂದ ಶೇ. 93ಕ್ಕೆ ಏರಿಕೆಯಾಗಿದೆ. ಕಡಿತಗೊಳಿಸಿದ ಶುಲ್ಕಗಳು ದೆಹಲಿಯಲ್ಲಿ ಲೆಕ್ಕವಿಲ್ಲದ ಅಥವಾ ಆದಾಯರಹಿತ ನೀರನ್ನು ತಗ್ಗಿಸುತ್ತವೆ ಹಲವು ಜನ ಅಕ್ರಮ ಸಂಪರ್ಕವನ್ನು ಬಿಟ್ಟಿದ್ದಾರೆ.

ಪ್ರಸ್ತುತ ನೀರಿನ ಅಭಿವೃದ್ಧಿ ಶುಲ್ಕ ಪ್ರತಿ ಚದರ ಮೀಟರ್‌ಗೆ 440 ರೂ. ಮತ್ತು ಒಳಚರಂಡಿ ಅಭಿವೃದ್ಧಿ ಶುಲ್ಕ, ಚದರ ಮೀಟರ್‌ಗೆ 494 ರೂ. ಇದೆ. ಈಗ ಎಲ್ಲಾ ದೆಹಲಿ ಜಲ ಮಂಡಳಿ ಗ್ರಾಹಕರು ಆ ಆರೋಪಗಳಿಂದ ಮುಕ್ತರಾಗಿದ್ದಾರೆ. ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಮೂಲಸೌಕರ್ಯವನ್ನು ಖಾತ್ರಿಪಡಿಸಿಕೊಳ್ಳಲು ದೆಹಲಿ ಜಲ ಮಂಡಳಿಯು ಜಿಟಿ ರಸ್ತೆಯಲ್ಲಿ (ಶಹದ್ರಾ) ಹೆಚ್ಚುವರಿ ಭೂಗತ ಜಲಾಶಯ ಮತ್ತು ಬೂಸ್ಟರ್ ಪಂಪಿಂಗ್ ಸ್ಟೇಷನ್‌ನಂತಹ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂದು ಸಿಎಂ ಘೋಷಿಸಿದ್ದಾರೆ.

ಬಡ ಪ್ರದೇಶಗಳಾದ ಪುನರ್ವಸತಿ ವಸಾಹತುಗಳು, ಕೊಳೆಗೇರಿಗಳು ಮತ್ತು ಜೆಜೆ ಕ್ಲಸ್ಟರ್‌ಗಳು ದೆಹಲಿಯವರಿಗೆ ಕೊಳವೆ ನೀರು ಮತ್ತು ಆರೋಗ್ಯಕರ ಒಳಚರಂಡಿ ವ್ಯವಸ್ಥೆ ಹೊಂದಿಲ್ಲದ ಪ್ರದೇಶಗಳಾಗಿವೆ. ದೂರದಿಂದ ಕೊಳಕು ನೀರನ್ನು ತಂದು ಹಲವು ದಿನಗಳವರೆಗೆ ಸಂಗ್ರಹಿಸಿಡುತ್ತಾರೆ. ಹೀಗಾಗಿ ರೋಗ-ರುಜಿನ ಹೆಚ್ಚಿದೆ. ಸರಿಯಾದ ಪೈಪ್‌ಲೈನ್‌ ಅಥವಾ ನೀರು ಮತ್ತು ಒಳಚರಂಡಿ ವ್ಯವಸ್ಥೆಯಿದ್ದರೆ ರೋಗಗಳ ಪ್ರಕರಣಗಳನ್ನು ತಗ್ಗಿಸುತ್ತದೆ.

ದೆಹಲಿ ಜಲ ಮಂಡಳಿಯು ಸೋನಿಯಾ ವಿಹಾರ್ ಮತ್ತು ರಾಜೀವ್ ನಗರದಲ್ಲಿ 110 ಕಿ.ಮೀ ಹೊಸ ಒಳಚರಂಡಿ ಮಾರ್ಗ ನಿರ್ಮಿಸಲಿದೆ. ರಾಜಧಾನಿಯ ಅನೇಕ ಪ್ರದೇಶಗಳ ಕಿರಿದಾದ ಬೀದಿಗಳನ್ನು ತೆರವುಗೊಳಿಸಲು ಡಿಜೆಬಿ ಹೊಸ ಒಳಚರಂಡಿ ಶುಚಿಗೊಳಿಸುವ ಯಂತ್ರಗಳನ್ನು ನಿಯೋಜಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೇಜ್ರೀವಾಲರ ಈ ಕ್ರಮ ಸ್ವಾಗತಾರ್ಹ. ಆಡಳಿತಾರೂಢರು ಮನಸ್ಸು ಮಾಡಿದರೆ ಇಂತಹ ಜನಪರ ಕಾರ್ಯಗಳನ್ನು ಜಾರಿಗೊಳಿಸಬಹುದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ.

LEAVE A REPLY

Please enter your comment!
Please enter your name here

- Advertisment -

ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆ ಪ್ರಶ್ನಿಸಿ ಸಿಬಿಐ ಅರ್ಜಿ; ಪ್ರತಿಕ್ರಿಯಿಸಲು ಕೇಜ್ರಿವಾಲ್-ಸಿಸೋಡಿಯಾಗೆ ಸಮಯ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರ ತಮ್ಮ ಬಿಡುಗಡೆಯನ್ನು ಪ್ರಶ್ನಿಸಿ ಸಿಬಿಐ ಅರ್ಜಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ದೆಹಲಿ...

ಪ್ರಶ್ನೆಗಳಿಗೆ ಉತ್ತರಿಸದ ಸಚಿವರು: ಸದನ ಮುಂದೂಡಿದ ಸ್ಪೀಕರ್ ಯು.ಟಿ ಖಾದರ್

ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಸೋಮವಾರ (ಮಾ.16) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ಸದನವನ್ನು ಮುಂದೂಡಿಕೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ವಿಧಾನಸಭೆಯಲ್ಲಿ...

‘ಆಪರೇಷನ್ ಸಿಂಧೂರ್’ ಕುರಿತ ಪೋಸ್ಟ್: ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ಹರಿಯಾಣ ಸರ್ಕಾರ

'ಆಪರೇಷನ್ ಸಿಂಧೂರ್' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧದ ಈ ಪ್ರಕರಣಗಳನ್ನು ಕೈಬಿಟ್ಟಿರುವುದಾಗಿ ಹರಿಯಾಣ...

ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಆಧಾರ್ ಮೂಲಕ ‘ಇ-ಕೆವೈಸಿ’ ಮಾಡಿಸಿಕೊಳ್ಳುವಂತೆ ಸರ್ಕಾರದ ಸೂಚನೆ

ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಸುವ 330 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಅನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ...

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದ ಚು. ಆಯೋಗ

ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ತನ್ನ ಆಟ ಶುರು ಮಾಡಿದೆ. ರಾಜ್ಯದ ಸರ್ಕಾದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳ...

ಉತ್ತರ ಪ್ರದೇಶ| ಪಾಕ್ ಸಂಪರ್ಕದ ಆರೋಪ; ಮಹಿಳೆ ಸೇರಿದಂತೆ 6 ಜನರ ಬಂಧನ

ಪಾಕಿಸ್ತಾನದ ದೇಶದ ಕೋಡ್‌ನಲ್ಲಿ ನೋಂದಾಯಿಸಲಾದ ವಿದೇಶಿ ಸಂಖ್ಯೆಯೊಂದಿಗೆ ಭದ್ರತಾ ಕಚೇರಿಗಳು, ತನಿಖಾ ಸಂಸ್ಥೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಚಿತ್ರೀಕರಿಸಿ ಹಂಚಿಕೊಂಡ ಆರೋಪದ ಮೇಲೆ ಗಾಜಿಯಾಬಾದ್‌ನಲ್ಲಿ ಮಹಿಳೆ...

ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ : ಚಿನ್ಮಯಿ ಶ್ರೀಪಾದ, ಟಿಎಂ ಕೃಷ್ಣ ಸೇರಿ ಹಲವರಿಂದ ಟೀಕೆ

ಲಿಂಗತಾರತಮ್ಯ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ತಮಿಳು ಸಾಹಿತಿ ವೈರಮುತ್ತು ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಘೋಷಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.  ಸಾಹಿತ್ಯ ಕ್ಷೇತ್ರದಲ್ಲಿನ ಅವರ ಕೊಡುಗೆಯನ್ನು ಪರಿಗಣಿಸಿ...

ಡ್ರೋನ್ ದಾಳಿಯ ನಂತರ ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ ಅವಘಡ; ವಿಮಾನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ, ದುಬೈ ಅಧಿಕಾರಿಗಳ ಪ್ರಕಾರ, ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ."ದುಬೈ ಅಂತರಾಷ್ಟ್ರೀಯ ವಿಮಾನ...

ಕಾನ್ಶಿ ರಾಮ್‌ಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ರಾಹುಲ್ ಗಾಂಧಿ

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸ್ಥಾಪಿಸಿದ ದಲಿತ ಐಕಾನ್ ಕಾನ್ಶಿ ರಾಮ್‌ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ...

ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಹತ್ತು ರಾಜ್ಯಗಳ 37 ಸ್ಥಾನಗಳನ್ನು ಒಳಗೊಂಡ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ಸೋಮವಾರ (ಮಾ.16) ಮತದಾನ ನಡೆಯುತ್ತಿದೆ. ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದ್ದು, 26 ಅಭ್ಯರ್ಥಿಗಳು ಈಗಾಗಲೇ...