Homeಮುಖಪುಟಮಹಾರಾಷ್ಟ್ರದಲ್ಲಿನ ರಾಜ್ಯಪಾಲರು ಅಮಿತ್ ಶಾರವರ ಹಿಟ್‌ಮ್ಯಾನ್ ಆಗಿದ್ದಾರೆ: ಕಾಂಗ್ರೆಸ್‌ನ 10 ಪ್ರಶ್ನೆಗಳು

ಮಹಾರಾಷ್ಟ್ರದಲ್ಲಿನ ರಾಜ್ಯಪಾಲರು ಅಮಿತ್ ಶಾರವರ ಹಿಟ್‌ಮ್ಯಾನ್ ಆಗಿದ್ದಾರೆ: ಕಾಂಗ್ರೆಸ್‌ನ 10 ಪ್ರಶ್ನೆಗಳು

- Advertisement -
- Advertisement -

“ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಸಂವಿಧಾನವನ್ನು ಮಟ್ಟಹಾಕಲಾಯಿತು ಮತ್ತು ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಮಾಡುವ ಬದಲು ಅಮಿತ್ ಷಾಗೆ ಹಿಟ್‌ಮ್ಯಾನ್ ಆಗಿ ಕಾರ್ಯನಿರ್ವಹಿಸಿದರು” ಎಂದು ಕಾಂಗ್ರೆಸ್ ನ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ತೆರವುಗೊಳಿಸಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, NCPಯ ಅಜಿತ್ ಪವಾರ್ ಅವರ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಖಂಡಿಸಿರುವ ಅವರು ಕಾಂಗ್ರೆಸ್‌ ಪರವಾಗಿ ಬಿಜೆಪಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳೆಂದರೆ

1. ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಳ್ಳಲಾಗುವುದು ಮತ್ತು ಬಿಜೆಪಿ ಸರ್ಕಾರ ರಚಿಸಲಾಗುವುದು ಎಂದು  ಯಾವಾಗ ನಿರ್ಧರವಾಯಿತು?

2. ಎಷ್ಟು ಬಿಜೆಪಿ-ಎನ್‌ಸಿಪಿ ಶಾಸಕರು ದೇವೇಂದ್ರ ಫಡ್ನವೀಸ್ ಅವರನ್ನು ಬೆಂಬಲಿಸಿದ್ದಾರೆ?

3. ಒಂದು ಗಂಟೆಯಲ್ಲಿ ರಾಜ್ಯಪಾಲರು ಅದು ರಾತ್ರಿ ವೇಳೆ ಹೇಗೆ ಬೆಂಬಲ ಪತ್ರ ಪರಿಶೀಲಿಸಿದರು?

4. ರಾಷ್ಟ್ರಪತಿಗಳ ಆಡಳಿತವನ್ನು ಯಾವ ಸಮಯದಲ್ಲಿ ತೆಗೆದುಹಾಕಲಾಯಿತು?

5. ಕೇಂದ್ರ ಸಚಿವ ಸಂಪುಟ ಯಾವ ಸಮಯಕ್ಕೆ ಸಭೆ ಸೇರಿತು, ಅಲ್ಲಿದ್ದವರು ಯಾರು? ರಾಷ್ಟ್ರಪತಿಗಳ ಆಡಳಿತವನ್ನು ತೆಗೆದುಹಾಕುವಂತೆ ಅವರು ಯಾವ ಸಮಯದಲ್ಲಿ ರಾಜ್ಯಪಾಲರಿಗೆ ತಿಳಿಸಿದರು?

6. ರಾಷ್ಟ್ರಪತಿ ಆಡಳಿತವನ್ನು ತೆಗೆದುಹಾಕಲು ಕೇಂದ್ರ ಸಚಿವ ಸಂಪುಟ ಯಾವ ಸಮಯಕ್ಕೆ ರಾಜ್ಯಪಾಲರಿಗೆ ಪತ್ರ ಕಳುಹಿಸಿದೆ?

7. ಅದನ್ನು ಯಾವಾಗ ಸ್ವೀಕರಿಸಲಾಯಿತು?

8. ರಾಜ್ಯಪಾಲರು ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರನ್ನು ಯಾವ ಸಮಯದಲ್ಲಿ ಕರೆದರು, ಅವರು ಯಾವ ಸಮಯದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು? ಒಂದು ಖಾಸಗಿ ಸುದ್ದಿ ಚಾನೆಲ್ ಹೊರತುಪಡಿಸಿ, ಡಿಡಿ ಅಥವಾ ಬೇರೆ ಯಾವುದೇ ಮಾಧ್ಯಮ ಸಂಸ್ಥೆಗಳು, ನಾಗರಿಕರು, ಮಹಾರಾಷ್ಟ್ರದ ಮುಖ್ಯ ನ್ಯಾಯಮೂರ್ತಿಗಳು ಅಲ್ಲಿಲ್ಲ. ಯಾರನ್ನೂ ಏಕೆ ಕರೆಯಲಿಲ್ಲ?

9. ಪ್ರಮಾಣವಚನದ ಹೊರತಾಗಿಯೂ, ಫಡ್ನವಿಸ್ ಯಾವಾಗ ಸರ್ಕಾರ ರಚಿಸುತ್ತಾರೆ ಎಂದು ರಾಜ್ಯಪಾಲರು ಏಕೆ ಹೇಳಲಿಲ್ಲ?

10. ಫಡ್ನವೀಸ್ ಸರ್ಕಾರವು ಬಹುಮತವನ್ನು ಸಾಬೀತುಪಡಿಸಲು ಸಮಯವಿದ್ದರೂ ರಾಜ್ಯಪಾಲರು ಇನ್ನೂ ಏಕೆ ಕೇಳುತ್ತಿಲ್ಲ?

ಈ ಹತ್ತು ಪ್ರಶ್ನೆಗಳನ್ನು ಕಾಂಗ್ರೆಸ್‌ ಕೇಳಿದ್ದು ಬಿಜೆಪಿಯಿಂದ ಉತ್ತರವನ್ನು ಬಯಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...