Homeಕರ್ನಾಟಕಖಚಿತವಾದ ಆತ್ಮಹತ್ಯೆ: ನೇತ್ರಾವತಿ ಹಿನ್ನೀರಿನಲ್ಲಿ ಎಸ್.ಎಂ ಕೃಷ್ಣ ಅಳಿಯ ಸಿದ್ಧಾರ್ಥ ಮೃತದೇಹ ಪತ್ತೆ

ಖಚಿತವಾದ ಆತ್ಮಹತ್ಯೆ: ನೇತ್ರಾವತಿ ಹಿನ್ನೀರಿನಲ್ಲಿ ಎಸ್.ಎಂ ಕೃಷ್ಣ ಅಳಿಯ ಸಿದ್ಧಾರ್ಥ ಮೃತದೇಹ ಪತ್ತೆ

- Advertisement -
- Advertisement -

ತೀವ್ರ ಆತಂಕ ಮೂಡಿಸಿದ್ದ ಎಸ್.ಎಂ ಕೃಷ್ಣ ಅಳಿಯ ಸಿದ್ಧಾರ್ಥರವರ ನಾಪತ್ತೆ ಪ್ರಕರಣಕ್ಕೆ ತೆರೆಬಿದ್ದಿದ್ದು ಅದು ಆತ್ಮಹತ್ಯೆ ಎಂಬುದು ಬಹುತೇಕ ಖಚಿತವಾಗಿದೆ. ತೀವ್ರ ಶೋಧದ ನಂತರ ಅವರ ಮೃತದೇಹ ಆಕಸ್ಮಿಕವಾಗಿ ಪತ್ತೆಯಾಗಿದ್ದು ಅವರು ಕುಟುಂಬದವರು ಅವರದೇ ದೇಹ ಎಂದು ಖಚಿತಪಡಿಸಿದ್ದಾರೆ.

ಸೋಮವಾರ ರಾತ್ರಿ ಕಣ್ಮರೆಯಾಗಿದ್ದ ಸಿದ್ಧಾರ್ಥ್ ರವರು ಜಪ್ಪಿನಮೊಗರು ಬಳಿ ಆತ್ಮಹತ್ಯೆಗೆ ಪ್ರಯತ್ನಿಸಿರಬಹುದು ಎಂಬ ದಟ್ಟ ಅನುಮಾನಗಳು ನಿಜವಾಗಿದೆ. 36 ಗಂಟೆಗಳ ತೀವ್ರ ಶೋಧ ನಡೆಯುತ್ತಿರುವಾಗಲೇ ಸ್ಥಳೀಯ ಮೀನುಗಾರರು ಮೀನುಗಾರಿಕೆಗೆಂದು ತೆರಳಿದ್ದಾಗ, ಹೊಯ್ಗೆ ಬಜಾರ್ ನ ಅಳಿವೆ ಬಾಗಿಲ ಬಳಿ ಬುಧವಾರ ಬೆಳಿಗ್ಗೆ 6.30ಕ್ಕೆ ಅವರ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಮೃತದೇಹವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಿದೆ. ನಂತರ ಮುಂದಿನ ವಿಧಿ ವಿಧಾನಗಳ ಬಗ್ಗೆ ಕುಟುಂಬದವರು ನಿರ್ಧಾರ ಮಾಡಲಿದ್ದಾರೆ. ಸಿದ್ಧಾರ್ಥ್ ರವರ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಚಟ್ನಹಳ್ಳಿಯ ಚೇತನಹಳ್ಳಿ ಎಸ್ಟೇಟ್ ನಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

ಕಳಚದ ಶೂ: ಜೇಬಿನಲ್ಲಿದ್ದ ಮೊಬೈಲ್

ಸಿದ್ಧಾರ್ಥ್ ರವರು ನಾಪತ್ತೆಯಾದಾಗಿನಿಂದಲೂ ಹಲವಾರು ಉಹಾಪೋಹಗಳು ಸೃಷ್ಟಿಯಾಗಿದ್ದವು. ಇದು ಅಪಹರಣವಿರಬಹುದೇ? ಬೇಕಂತಲೇ ತಪ್ಪಿಸಿಕೊಂಡಿದ್ದಾರೆಯೇ? ಅವರಿಗೆ ಈಜು ಬರುತ್ತಿರಲಿಲ್ಲವೇ? ನೀರಿನ ಸೆಳೆತ ತುಂಬಾ ಜೋರಿರುವುದರಿಂದ ಮೃತದೇಹ ಸಿಗಲಾರದು, ಶಾರ್ಕ್ ಮೀನುಗಳು ಉಳಿಸುವುದಿಲ್ಲ ಎಂದೆಲ್ಲಾ ಮಾತುಗಳು ಕೇಳಿಬಂದಿದ್ದವು.

ಸಿದ್ಧಾರ್ಥ್ ರವರ ಮೃತದೇಹ ಆ ಎಲ್ಲಾ ಹೇಳಿಕೆಗಳನ್ನು ತಲೆಕೆಳಗು ಮಾಡಿದೆ. ಮೇಲ್ನೋಟಕ್ಕೆ ಕಾಣುವಂತೆ ಮೃತದೇಹಕ್ಕೆ ದೊಡ್ಡ ಅಪಾಯಗಳು ಆಗಿಲ್ಲ. ಸುಲಭವಾಗಿ ಗುರುತಿಸಬಹುದಾಗಿದೆ. ಅವರು ಹಾಕಿದ್ದ ಶೂಗಳು ಕಳಚದೇ ಹಾಗೆ ಇವೆ. ಜೇಬಿನಲ್ಲಿ ಹಳೆಯ ಮೊಬೈಲ್ ಪತ್ತೆಯಾಗಿದೆ.

ಇದನ್ನೂ ಓದಿ: ಎಸ್.ಎಂ ಕೃಷ್ಣರ ಅಳಿಯ, ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಿಗೂಢ ನಾಪತ್ತೆ: ವಾಸ್ತವದಲ್ಲಿ ನಡೆದಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...