Homeಮುಖಪುಟಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

- Advertisement -
- Advertisement -

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ.

ಅರ್ಧ ಗಂಟೆಯಲ್ಲಿ ಮುಗಿದು ಹೋಗುವ ಧಮ್ಮಮ್‌, ಹಿಂಸೆಯಾಚೆ ಅವಿತಿರುವ ಪ್ರೀತಿ ಮತ್ತು ಕಾರುಣ್ಯವನ್ನು ಶೋಧಿಸುವ ಪ್ರಯತ್ನ ಮಾಡಿದೆ. ಮನುಷ್ಯನ ಜಾತಿ ಅಹಂಕಾರದ ಕುರಿತು ಗಂಭೀರವಾದ ಚರ್ಚೆಗೆ ಅವಕಾಶ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಧಮ್ಮಮ್‌’ ಸ್ಟ್ರೀಮ್ ಆಗುತ್ತಿರುವ ಹೊತ್ತಿನಲ್ಲಿಯೇ ತಮಿಳುನಾಡಿನ ಶಿವಗಂಗೈ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿಶೇಷ ನ್ಯಾಯಾಲಯವು, ಮೂವರು ದಲಿತರ ತ್ರಿವಳಿ ಹತ್ಯೆಗೆ ಸಂಬಂಧಿಸಿದಂತೆ 27 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸುದ್ದಿ ಬಂತು. ದಲಿತರ ಆರ್ಥಿಕ ಸ್ವಾವಲಂಬನೆಯೇ ಸವರ್ಣೀಯರ ಅಸಹನೆಗೆ ಕಾರಣವಾಗಿತ್ತು. ಅಗಮುಡಿಯಾರ್ (ಪ್ರಬಲವಾದ ತೇವರ್ ಜಾತಿ ಸಮೂಹದ ಒಂದು ಭಾಗ) ಸಮುದಾಯದವರ ಮನೆಯ ಮುಂದೆ ದಲಿತ ಯುವಕನೊಬ್ಬ ಜೋರಾಗಿ ಫೋನಿನಲ್ಲಿ ಮಾತನಾಡಿದ ಎಂಬುದಷ್ಟೇ ಸವರ್ಣೀಯರ ಅಹಂಗೆ ಪೆಟ್ಟು ನೀಡಿತ್ತು. ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಅಗಮುಡಿಯಾರರು ಮೂವರು ದಲಿತರನ್ನು ಕೊಂದು, ಐವರನ್ನು ಭೀಕರವಾಗಿ ಗಾಯಗೊಳಿಸಿದ್ದರು. ಈ ಪ್ರಕರಣದಲ್ಲಿ 27 ಅಪರಾಧಿಗಳಿಗೆ ಇತ್ತೀಚೆಗಷ್ಟೇ ಶಿಕ್ಷೆ ನೀಡಲಾಗಿದೆ. ಪ.ರಂಜಿತ್ ಅವರ ‘ಧಮ್ಮಮ್‌’ ಕೂಡ ಶಿವಗಂಗೈ ಪ್ರಕರಣವನ್ನು ಕೊಂಚ ನೆನಪಿಸುತ್ತದೆ.

ವಿಶಾಲವಾದ ಗದ್ದೆ ಬಯಲು. ಸುತ್ತಲು ಹಸಿರು. ನಡುವೆ ಇನ್ನೂ ನಾಟಿ ಮಾಡದಿರುವ ಗದ್ದೆ. ಅಲ್ಲೊಬ್ಬ ಶೋಷಿತ ಸಮುದಾಯದ ವ್ಯಕ್ತಿ. ಆತನ ಹೆಸರು ‘ಗುಣ’. ಬದುವಿನಲ್ಲಿ ಬುದ್ಧನ ವಿಗ್ರಹ. ಆ ಶೋಷಿತನ ಪುಟ್ಟ ಮಗಳು ‘ಕೇಮ’.

ಬುದ್ಧನ ಮೇಲೆ ಹತ್ತಿ ನಿಂತು ಹಕ್ಕಿಯಂತೆ ಹಾರುತ್ತೇನೆಂಬ ಸೂಚನೆಗಳನ್ನು ನೀಡುತ್ತಿರುವ ಮಗುವಿಗೆ, “ದೇವರ ಮೇಲೆ ನಿಲ್ಲಬಾರದು. ಕೆಳಗಿಳಿ” ಎಂದು ಗುಣ ಎಚ್ಚರಿಸುತ್ತಾನೆ. “ದೇವರೇ ಇಲ್ಲವೆಂದು ಬುದ್ಧ ಹೇಳಿದ್ದಾನೆ. ಆತನನ್ನು ದೇವರು ಅನ್ನುತ್ತೀಯಲ್ಲ” ಎಂದು ಅಪ್ಪನಿಗೆ ಮಗಳು ತಿರುಗೇಟು ನೀಡುತ್ತಾಳೆ. ಅಪ್ಪಾ ಕಕ್ಕಾಬಿಕ್ಕಿ. ಪ್ರಶ್ನಿಸುವ ರೂಪಕವೇ ಬುದ್ಧ. ಹಳೆಯ ಕಾಲಕ್ಕೆ ಜೋತು ಬಿದ್ದಿರುವ ಅಪ್ಪನ ಎದುರು, ಹೊಸದಾರಿಯ ಹುಡುಕಾಟದಲ್ಲಿರುವ ಮಗು!

ಇದನ್ನೂ ಓದಿರಿ: ಡಬ್‌‌ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್‌ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!

ಈ ಶೋಷಿತ ಸಮುದಾಯದ ಹೊಸತಲೆಮಾರಲ್ಲಿ ಅನ್ಯಾಯವನ್ನು ಪ್ರಶ್ನಿಸುವ, ನ್ಯಾಯೋಚಿತವಾಗಿ ಸಿಡಿದೇಳುವ ಗುಣ ಮನೆಮಾಡಿದೆ. ಇದನ್ನು ಇನ್ನೊಂದು ಬದಿಯಲ್ಲಿರುವವರು ತಮ್ಮ ಅಹಂಕಾರಕ್ಕೆ ಪೆಟ್ಟೆಂದು ಭಾವಿಸುತ್ತಾರೆ. ದಲಿತನ ಸಣ್ಣ ಪ್ರತಿರೋಧವೂ ಬಲಾಢ್ಯರಲ್ಲಿ ದೊಡ್ಡ ಅಸಹನೆಯನ್ನು ಹುಟ್ಟಿಹಾಕಿಬಿಡುತ್ತದೆ. ಸವರ್ಣೀಯರು ಎಸಗುವ ದೌರ್ಜನ್ಯದಲ್ಲಿ ನಿತ್ಯವೂ ನಲುಗುತ್ತಿರುವ ದಲಿತ ಎಲ್ಲ ಹಿಂಸೆಗಳಾಚೆಗೆ ಜಿಗಿದು ಪ್ರೀತಿ, ಮಮತೆ, ಕಾರುಣ್ಯವನ್ನು ಶೋಷಕ ಸಮುದಾಯಕ್ಕೂ ತೋರುವ ಗುಣವೇ ಬೌದ್ಧತತ್ವ.

ಮತ್ತೆ ಮತ್ತೆ ಕಿರಿಕಿರಿ ಮಾಡುತ್ತಲೇ ಇರುವ ಬಲಾಢ್ಯ ಜಾತಿಯ ಸೇಕರ, ದಲಿತನಾದ ಗುಣನನ್ನು ಕಿಚಾಯಿಸುತ್ತಲೇ ಇದ್ದಾನೆ.‌ ದಲಿತನೊಬ್ಬ ಭೂಮಿ ಉಳುಮೆ ಮಾಡುತ್ತಿರುವುದೇ ಈ ಬಲಾಢ್ಯನ ಅಸಹನೆಯ ಮೂಲ ಎಂದು ಬಿಡಿಸಿ ಹೇಳಬೇಕಿಲ್ಲ. ದಲಿತನ ಪುಟ್ಟ ಮಗಳು ಕೇಮ ಆ ಗದ್ದೆಯ ಬದುವಿಯಲ್ಲಿ ಆಟವಾಡುತ್ತಿದ್ದಾಳೆ. ಯಾವುದೇ ಹಿಂಸೆ ನೀಡುವ ಗುರಿ ಇಲ್ಲವಾದರೂ ಆ ಮೀನನ್ನು ಹಿಡಿಯುವ ವ್ಯರ್ಥ ಪ್ರಯತ್ನದಲ್ಲಿ ಆ ಮಗು ತೊಡಗಿದೆ.

ಕಾಲು ಕೆರೆದು ಜಗಳ ಮಾಡಲೆತ್ನಿಸುತ್ತಿರುವ ಸೇಕರ, ಬದುವಿನಲ್ಲಿ ನಡೆದು ಬರುವಾಗ ಕೇಮ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾಳೆ. ಕಿರಿದಾದ ಬದು. ಪಕ್ಕಕ್ಕೆ ಹೆಜ್ಜೆ ಇಟ್ಟರೆ ಕೆಸರು. ತಾನು ಮೊದಲು ನಡೆದು ಬಂದ ಕಾರಣ, ನನಗೆ ಅತ್ತ ಹೋಗಲು ದಾರಿ ನೀಡಬೇಕು ಎಂದು ಕೇಮ ವಾದಿಸುತ್ತಾಳೆ. ಇದನ್ನು ಸಹಿಸದ ಸೇಕರ, ಹಿಂದೆ ಹೋಗುವಂತೆ ಮಗುವನ್ನು ಗದರುತ್ತಾನೆ. ಗುಣ ಕೂಡ ಇದನ್ನು ಗಮನಿಸುತ್ತಾ, ಮುಂದಾಗುವ ಅನಾಹುತವನ್ನು ಊಹಿಸಿ, ಹಳೆಯ ತಲೆಮಾರಿನ ವರಸೆಯನ್ನೂ ತೋರುತ್ತಾ, ‘ಕೇಮ ಬದಿಗೆ ಸರಿಯಮ್ಮ’ ಎನ್ನುತ್ತಾನೆ. ಆದರೆ ಮಗು, “ನಾನು ಮೊದಲು ಬಂದಿದ್ದು, ನಾನೇಕೆ ಜಾಗ” ಬಿಡಲಿ ಎಂದು ನ್ಯಾಯೋಚಿತವಾಗಿ ಪ್ರಶ್ನಿಸುತ್ತದೆ.

ಸೇಕರ ಮುಂದೆ ನುಗ್ಗಲು ಬಂದಾಗ, ಆತನನ್ನು ಗದ್ದೆಯ ಕೆಸರಿಗೆ ನೂಕಿ ಕೇಮ ಮುಂದೆ ಸಾಗುತ್ತಾಳೆ. ಆತನ ಬಿಳಿ ಬಟ್ಟೆಗೆ ಕೆಸರು ಮೆತ್ತಿಕೊಳ್ಳುತ್ತದೆ. ಇದನ್ನೆಲ್ಲ ನೋಡುತ್ತಿದ್ದ ಗುಣ, ಮಗಳನ್ನು ಕಾಪಾಡಲು ಬಂದಾಗ ಆಕಸ್ಮಿಕವಾಗಿ ಬಲಾಢ್ಯನ ರಕ್ತ ಹರಿಯುತ್ತದೆ. ಸೇಕರನ ಮನೆಗೆ ವಿಷಯ ತಿಳಿದು ಆತನ ತಂದೆ, ಕಿರಿಯ ಮಗ ಹಾಗೂ ಹಿರಿಯ ಮಗ ಅಲ್ಲಿಗೆ ಧಾವಿಸುತ್ತಾರೆ.

ಸಾವು, ಬದುಕಿನ ನಡುವೆ ಸೇಕರ ಹೊರಳಾಡುತ್ತಿದ್ದರೂ ಆತನನ್ನು ರಕ್ಷಿಸದೆ ಗುಣನ ಹೆಣ ಉರುಳಿಸಬೇಕೆಂಬುದು ಹಪಾಹಪಿಸುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲೆತ್ನಿಸುವ ದಲಿತ ಅನಿವಾರ್ಯವಾಗಿ ಮಿಕ್ಕವರನ್ನೂ ಗಾಯಗೊಳಿಸಿ ಬಚಾವಾಗುತ್ತಾನೆ. ಆದರೆ ಕೇಮ ತನ್ನ ಅಪ್ಪನಲ್ಲಿ, ಸಾವು ಬದುಕಿನ ನಡುವೆ ಹೊರಳಾಡುತ್ತಿರುವ ಸೇಕರನ್ನು ಆಸ್ಪತ್ರೆಗೆ ಕರೆದೊಯ್ಯೋಣ ಎನ್ನುತ್ತದೆ. ಇದೇ ಕಾರುಣ್ಯ. ಶೋಷಿತ ಸಮುದಾಯದ ಆದಿಮ ಗುಣವದು.

ಇದನ್ನೂ ಓದಿರಿ: ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

ಯಾರನ್ನೂ ನೋಯಿಸದ, ಅನ್ಯಾಯವನ್ನು ಪ್ರಶ್ನಿಸಿದ ಮಾತ್ರಕ್ಕೆ ದಲಿತ ಸಮುದಾಯ ತಾನೇ ನೋಯುವ ಸಂಕಟ ಇದೆಯಲ್ಲ- ಅದಕ್ಕೆ ಶತಶತಮಾನಗಳ ಚರಿತ್ರೆ ಇದೆ. ಇದರ ಜೊತೆಗೆ ಶೋಷಕ ಸಮುದಾಯದ ಆತ್ಮವಿಮರ್ಶೆಯ ಅಗತ್ಯವನ್ನು ಇಲ್ಲಿ ತೆರೆದಿರುವ ಪ್ರಯತ್ನವನ್ನು ಪ.ರಂಜಿತ್ ಮಾಡಿದ್ದಾರೆ. ಗುದ್ದಾಡಿ ಹೈರಾಣಾಗಿರುವ ಗುಣನ ಮೇಲೆ ಮುಗಿ ಬೀಳಲು ಹೋಗುವ ಸಹೋದರನನ್ನು ಇನ್ನೊಬ್ಬ ಸಹೋದರ ತಡೆಯುವುದು ಕೂಡ ಮನಃ ಪರಿವರ್ತನೆಯ ದಾರಿಯೂ ಹೌದು.

ಶೋಷಿತನ ಕಾರುಣ್ಯವನ್ನು, ಶೋಷಕನ ಮನಃಪರಿವರ್ತನೆಯನ್ನು ರೂಪಕವಾಗಿ ತೆರೆದಿರುವ ಪ್ರಯತ್ನವನ್ನು ಪ.ರಂಜಿತ್ ಮಾಡಿರುವುದು ‘ಧಮ್ಮಮ್‌’ನ ಹೆಗ್ಗಳಿಕೆ. ಧಮ್ಮದ ತಾತ್ವಿಕತೆಯನ್ನು ಹೊಸ ಕಾಲದ ವಿದ್ಯಮಾನಗಳೊಂದಿಗೆ ವಿವರಿಸುವ ಪ್ರಯತ್ನವೂ ಇದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...