Homeಕರ್ನಾಟಕ‘ನಿಂಗೆ ಬಿಟ್ಟಿ ಎಜುಕೇಷನ್‌ ಬೇಕಾ?’ ಎಂದಿದ್ದ ಡಿಸಿ ವಿರುದ್ಧ ಸಿಎಂಗೆ ದೂರು

‘ನಿಂಗೆ ಬಿಟ್ಟಿ ಎಜುಕೇಷನ್‌ ಬೇಕಾ?’ ಎಂದಿದ್ದ ಡಿಸಿ ವಿರುದ್ಧ ಸಿಎಂಗೆ ದೂರು

- Advertisement -
- Advertisement -

“ನಿಂಗೆ ಬಿಟ್ಟಿ ಎಜುಕೇಷನ್‌ ಬೇಕಾ? ಫೀಸ್‌ ಕಟ್ಟೋಕೆ ಆಗೋದಿಲ್ವಾ? ಸುಮ್ನೆ ಕೂತ್ಕೋಳಯ್ಯ, ಎಷ್ಟು ಮಾತಾಡ್ತೀಯಾ”- ನ್ಯಾಯಕೇಳಲು ಬಂದವರ ಬಳಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೀಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಾಗಿದೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ದೂರು ನೀಡಲಾಗಿದೆ.

ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ಕೇಳಿ ಪೀಡಿಸಿದರೆ ಜಿಲ್ಲಾ ವ್ಯಾಪ್ತಿಯಲ್ಲಿನ ‘ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ’ಕ್ಕೆ ದೂರು ನೀಡಬಹುದು. ಈ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಗಳೇ ಅಧಿಕಾರಿಯಾಗಿರುತ್ತಾರೆ. ಪೋಷಕರು ದೂರು ನೀಡಲು ಬಂದಾಗ ಜಿಲ್ಲಾಧಿಕಾರಿ ತಮ್ಮ ಜವಾಬ್ದಾರಿ ಮರೆತು ವರ್ತಿಸಿದ್ದಾರೆ ಎನ್ನಲಾಗಿದೆ.

ಪಾಲಕರು ದೂರನ್ನು ವಿಚಾರಿಸುವ ವೇಳೆ, “ನಿಂಗೆ ಬಿಟ್ಟಿ ಎಜುಕೇಷನ್‌ ಬೇಕಾ, ಫೀಸ್‌ ಕಟ್ಟೋಕೆ ಆಗಲ್ವಾ? ಸುಮ್ನೆ ಕೂತ್ಕೊಳಯ್ಯ ಎಷ್ಟು ಮಾತಾಡ್ತೀಯಾ? ಶುಲ್ಕ ಕಟ್ಟು, ಇಲ್ಲವಾದರೆ ಸರ್ಕಾರಿ ಶಾಲೆಗೆ ಮಗುವನ್ನು ಸೇರಿಸು” ಎಂದು ಗದರಿಸಿರುವುದಾಗಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ.

ಶ್ರೀ ವಾಣಿ ಎಜುಕೇಷನ್‌ ಸೆಂಟರ್‌ ವಿರುದ್ಧ ಪ್ರಾಧಿಕಾರಕ್ಕೆ ಜಿ.ರವಿಕುಮಾರ್‌, ಲಕ್ಷ್ಮಿನಾರಾಯಣ ಮತ್ತು ಡಾ.ಅರುಣ್‌ಕುಮಾರ್‌‌ ದೂರು ನೀಡಲು ಬಂದಾಗ ಘಟನೆ ನಡೆದಿದೆ. ಸೆಪ್ಟೆಂಬರ್‌‌ ತಿಂಗಳಲ್ಲಿ ಘಟನೆ ನಡೆದಿದ್ದು, ಮಾನವ ಹಕ್ಕುಗಳ ಆಯೋಗದ ಸದಸ್ಯ ಆರ್‌.ಕೆ.ದತ್ತ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟೀಸ್‌ ಜಾರಿಗೊಳಿಸಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ಆಯೋಗವು ಸರ್ಕಾರಕ್ಕೆ ಸೂಚನೆ ನೀಡಿದೆ.

ದೂರು ಈಗ ಮುಖ್ಯಮಂತ್ರಿಯವರಿಗೂ ತಲುಪಿದ್ದು, ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆಯು ಒತ್ತಾಯಿಸಿದೆ.

‘ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಬಗ್ಗೆ ದಾಖಲಾಗಿದ್ದ ದೂರುಗಳನ್ನು ಪರಿಶೀಲಿಸಲು ಆ.5ರಂದು ಜಿಲ್ಲಾಧಿಕಾರಿ ಸಭೆ ನಡೆಸಿದ್ದರು. ದೂರು ಸಲ್ಲಿಸಿದ್ದ ಪೋಷಕರ ವಿರುದ್ಧ ಜಿಲ್ಲಾಕಾರಿ ಧಮಕಿ ಹಾಕಿದ್ದಾರೆ. ಯಾವ ಡಿಪಾರ್ಟ್‌ಮೆಂಟ್ ನಿಂದು, ನಿಂಗೆ ಬಿಟ್ಟಿ ಎಜುಕೇಷನ್ ಬೇಕಾ, ಫೀಸ್ ಕಟ್ಟೋಕೆ ಆಗಲ್ವಾ, ನಿಂಗೆ ಸಂಬಳ ಕೊಡೊದು ಯಾಕೆ, ಸಂಬಳ ಕಟ್ ಮಾಡಿಸ್ತೀನಿ, ಡಾಕ್ಟರ್ ಅಂತೀಯ ಎಷ್ಟು ಸಂಬಳ, ನಿನ್ನ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎಂದೆಲ್ಲಾ ಏಕ ವಚನದಲ್ಲೇ ನಿಂದಿಸಿದ್ದಾರೆ’ ಎಂದು ವೇದಿಕೆಯು ದೂರಿನಲ್ಲಿ ಉಲ್ಲೇಖಿಸಿದೆ.

‘ಸಿಸಿಟಿವಿ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿದ್ದು, ಪರಿಶೀಲನೆ ನಡೆಸಿ ಪೋಷಕರನ್ನು ನಿಂದಿಸಿ ಬೆದರಿಕೆ ಹಾಕಿರುವ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಂಘಟನೆ ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ

ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿರುವ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ‘ಪ್ರತಿನಿತ್ಯ ನೂರಾರು ಜನ ಸಂಪರ್ಕ ಮಾಡುತ್ತಾರೆ. ಯಾವ ಹಂತದಲ್ಲೂ ಯಾರಿಗೂ ಅವಮಾನವಾಗುವಂತೆ ವರ್ತಿಸಿಲ್ಲ. ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಆಗಿದ್ದರೆ ಪರಿಶೀಲಿಸುತ್ತೇವೆ. ಎರಡು ವರ್ಷದಿಂದ ಶುಲ್ಕವನ್ನೇ ಪಾವತಿಸದ ಪೋಷಕರಿಗೆ ಬಾಕಿ ಶುಲ್ಕ ಪಾವತಿಸಿ ಬನ್ನಿ ಎಂದಷ್ಟೇ ಹೇಳಿದ್ದೇನೆ. ಯಾವ ಪೋಷಕರನ್ನೂ ನಿಂದಿಸಿಲ್ಲ’ ಎಂದು ತಿಳಿಸಿದ್ದಾರೆ.


ಇದನ್ನೂ ಓದಿರಿ: ಹಳೆಯ ಪ್ರಕರಣ ಕೆದಕಿದ ಯುಪಿ ಪೊಲೀಸರು: ಸಿಎಎ ವಿರೋಧಿ ನಾಲ್ವರು ಪ್ರತಿಭಟನಾಕಾರರ ಬಂಧನ; ಜಾಮೀನು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಕಾಲದ ಸಂದೇಶ ಓದಿದ ಪತ್ನಿ

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...