ಚಿತ್ರದುರ್ಗದಲ್ಲಿ ರೈತರ ಪ್ರತಿಭಟನೆ

ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿದೆ. ಆದರೆ ಕೇಂದ್ರಕ್ಕೆ ಅನುಗುಣವಾಗಿ ಕರ್ನಾಟಕ ರಾಜ್ಯವು ಎಪಿಎಂಸಿ ಮತ್ತು ಭುಸುಧಾರಣ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ವಾಪಸ್ ಪಡೆದುಕೊಳ್ಳಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ. ಅದಕ್ಕಾಗಿ ನವೆಂಬರ್ 26 ರಂದು ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಕರೆ ನೀಡಲಾಗಿದೆ.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರರವರು ಮಾತನಾಡಿ, “ನರೇಂದ್ರ ಮೋದಿಯವರು ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಆದರೆ ಎಂಎಸ್‌ಪಿ ಬಗ್ಗೆ, ವಿದ್ಯುಚ್ಛಕ್ತಿ ಮಸೂದೆ ಅವರು ಮಾತನಾಡಿಲ್ಲ. ಗಡಿಗಳಲ್ಲಿ ಹುತಾತ್ಮರಾದ 670ಕ್ಕೂ ಹೆಚ್ಚು ರೈತರ ಬಗ್ಗೆ, ಅವರಿಗೆ ಪರಿಹಾರ ಕೊಡುವ ಚಕಾರವೆತ್ತಿಲ್ಲ. ಇನ್ನು ರಾಜ್ಯ ಸರ್ಕಾರವೂ ತನ್ನ ಕಾಯ್ದೆಗಳನ್ನು ವಾಪಸ್ ಪಡೆಯಬೇಕಾಗಿತ್ತು. ಅದಕ್ಕಾಗಿ ನಾವು ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಿದ್ದೇವೆ. ಹಾಗಾಗಿ ಎಲ್ಲಾ ಪ್ರಯಾಣಿಕರು ಅಂದು ಹಗಲಿನ ಪ್ರಯಾಣವನ್ನು ಜನತೆ ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್‌ರವರು ಮಾತನಾಡಿ, “ಕೇಂದ್ರದ ಕರಾಳ ಕಾಯ್ದೆಗಳು ಸಂಸತ್ತಿನಲ್ಲಿ ರದ್ದುಗೊಳ್ಳಬೇಕಿದೆ. ಜೊತೆಗೆ ಎಂಎಸ್‌ಪಿ ಜಾರಿಗೆ ಕಾನೂನು ಬೇಕೆಂದು ಆಗ್ರಹಿಸಿ ಚಳವಳಿ ಮುಂದುವರೆಯಲಿದೆ. ಕರ್ನಾಟಕ ಸರ್ಕಾರ ತಿದ್ದುಪಡಿ ಮಾಡಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ನವೆಂಬರ್ 26 ರಂದು ಹೆದ್ದಾರಿ ಬಂದ್ ನಡೆಯಲಿದೆ. ಸಾರ್ವಜನಿಕರು ಅಂದು ಪ್ರಯಾಣ ಮಾಡದೇ ರೈತ ಹೋರಾಟಕ್ಕೆ ಬೆಂಬಲಿಸಿಬೇಕು” ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನ ಮೌರ್ಯ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆಯಿಂದ ಬೈಕ್ ಮತ್ತು ಕಾರು ರ್ಯಾಲಿ ಆರಂಭ. ವಿವಿಧ ಜಿಲ್ಲೆಗಳ ಹೆದ್ದಾರಿ ಬಂದ್ ಹೋರಾಟಗಳಲ್ಲಿಗೆ ಸೇರಿಕೊಳ್ಳುವುದು

ಕರ್ನಾಟಕ ರಾಜ್ಯದಲ್ಲಿ ನಡೆಯುವ ಹೆದ್ದಾರಿ ಬಂದ್ ವಿವರ ಈ ಕೆಳಗನಂತಿದೆ.

 1. ಶ್ರೀರಂಗಪಟ್ಟಣ – ರಾಷ್ಟ್ರೀಯ ಹೆದ್ದಾರಿ
 2. ತುಮಕೂರು – ಟೋಲ್ ಪ್ಲಾಜ
 3. ಚಿಕ್ಕಬಳ್ಳಾಪುರ ಜಿಲ್ಲೆ – ಚದಲಪುರ ಹಳೆ ಡಿಸಿ ಕಛೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ,
 4. ರಾಮನಗರ – ರಾಷ್ಟ್ರೀಯ ಹೆದ್ದಾರಿ
 5. ಚಾಮರಾಜನಗರ – ರಾಷ್ಟ್ರೀಯ ಹೆದ್ದಾರಿ
 6. ಗುಂಡ್ಲುಪೇಟೆ – ರಾಷ್ಟ್ರೀಯ ಹೆದ್ದಾರಿ
 7. ಕೊಡಗು (ಎಲ್ಲಾ ತಾಲ್ಲೂಕುಗಳಿಂದ ಕೊಡಗಿಗೆ ಬೈಕ್ ರ್ಯಾಲಿ)
 8. ಹಾಸನ
 9. ಶಿವಮೊಗ್ಗ – ಬಸ್ ಸ್ಟ್ಯಾಂಡ್ ಸರ್ಕಲ್
 10. ಚಿತ್ರದುರ್ಗ
 11. ಬಳ್ಳಾರಿ
 12. ಹೊಸಪೇಟೆ – ಕೊಪ್ಫಳ ರಾಷ್ಟ್ರೀಯ ಹೆದ್ದಾರಿ, ಗಣೇಶ್‌ಗುಡಿ ಹತ್ತಿರ
 13. ರಾಯಚೂರು – ಹೊರಭಾಗದಲ್ಲಿ ರುವ ಸಾತ್ ಮೈಲ್.
 14. ಸಿಂಧನೂರು- ನಗರದಲ್ಲಿನ ಮುಖ್ಯ ರಸ್ತೆ.
 1. ಬೆಳಗಾವಿ –
 2. ವಿಜಯಪುರ –
 3. ಗುಲ್ಬರ್ಗಾ –
 4. ಯಾದಗಿರಿ –
 5. ದಾವಣಗೆರೆ – ಜಯದೇವ ಸರ್ಕಲ್ ನಿಂದ ಎಸಿ ಕಚೇರಿಯವರೆಗೆ ಟ್ರ್ಯಾಕ್ಟರ್ ರ್ಯಾಲಿ.

ಇದನ್ನೂ ಓದಿ; ಚಾರಿತ್ರಿಕ ರೈತ ಹೋರಾಟಕ್ಕೆ ಒಂದು ವರ್ಷ: ನ.26ರ ಕಾರ್ಯಕ್ರಮಗಳು ಇಂತಿವೆ

LEAVE A REPLY

Please enter your comment!
Please enter your name here