Homeಮುಖಪುಟ’ಭಿಕ್ಷೆ ಬೇಡಿದವರಿಗೆ ಕ್ಷಮೆ ಸಿಕ್ಕಿದೆ..ಕೆಚ್ಚೆದೆಯಿಂದ ಹೋರಾಡಿದವರಿಗೆ ಸ್ವಾತಂತ್ರ್ಯ ಸಿಕ್ಕಿದೆ: ಕಂಗನಾಗೆ ಕಾಂಗ್ರೆಸ್ ತಿರುಗೇಟು

’ಭಿಕ್ಷೆ ಬೇಡಿದವರಿಗೆ ಕ್ಷಮೆ ಸಿಕ್ಕಿದೆ..ಕೆಚ್ಚೆದೆಯಿಂದ ಹೋರಾಡಿದವರಿಗೆ ಸ್ವಾತಂತ್ರ್ಯ ಸಿಕ್ಕಿದೆ: ಕಂಗನಾಗೆ ಕಾಂಗ್ರೆಸ್ ತಿರುಗೇಟು

ಕಂಗನಾ ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿದೆ

- Advertisement -
- Advertisement -

“ಭಾರತಕ್ಕೆ 2014 ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು, 1947 ರಲ್ಲಿ ಸಿಕ್ಕಿದ್ದು ಭಿಕ್ಷೆ” ಎಂಬ ಬಾಲಿವುಡ್ ನಟಿ ಪದ್ಮಶ್ರೀ ಕಂಗನಾ ರಣಾವತ್ ಹೇಳಿಕೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯ ಪಕ್ಷಗಳ ನಾಯಕರು ಸೇರಿದಂತೆ ಜನ ಸಾಮಾನ್ಯರು ನಟಿಯ ವಿರುದ್ಧ ಕಿಡಿ ಕಾರಿದ್ದಾರೆ.

ಕಂಗನಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ವೀರ ಸಾವರ್ಕರ್ ಅವರ ಕ್ಷಮಾದಾನ ಅರ್ಜಿಗಳನ್ನು ಉಲ್ಲೇಖಿಸಿ, ಭಿಕ್ಷೆ ಬೇಡಿದವರಿಗೆ ಕ್ಷಮೆ ಸಿಕ್ಕಿದೆ ಎಂದು ಆಕ್ರೋಶ ಹೊರಹಾಕಿದೆ.

ಬುಧವಾರ (ನ.10) ಖಾಸಗಿ ಟೆಲಿವಿಷನ್ ಚಾನೆಲ್ ಟೈಮ್ಸ್ ನೌ ಆಯೋಜಿಸಿದ್ದ ಕಾನ್ಕ್ಲೇವ್‌ನಲ್ಲಿ ಭಾಗವಹಿಸಿದ್ದ ನಟಿ ಕಂಗನಾ ರಣಾವತ್ ಹಿಂದಿಯಲ್ಲಿ ಮಾತನಾಡುತ್ತಾ, “ಅದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಬಂದಿದೆ” ಎಂದಿದ್ದರು.

ಕಂಗನಾ ಹೇಳಿಕೆಗೆ ಬಿಜೆಪಿ ಸಂಸದ ವರುಣ್ ಗಾಂಧಿ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಸೇರಿದಂತೆ ಅನೇಕ ಮಂದಿ ಆಕ್ರೋಶ ಹೊರಹಾಕಿದ್ದರು. ಈಗ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿ ನಟಿಯ ಹೇಳಿಕೆಗೆ ಕಿಡಿ ಕಾರಿದೆ.

ಇದನ್ನೂ ಓದಿ: ದೇಶದ ಸ್ವಾತಂತ್ಯ್ರದ ಕುರಿತು ವಿವಾದಾತ್ಮಕ ಹೇಳಿಕೆ: ನಟಿ ಕಂಗನಾ ವಿರುದ್ದ ದೂರು ದಾಖಲು

’ಭಿಕ್ಷೆ ಬೇಡಿದವರಿಗೆ ಕ್ಷಮೆ ಸಿಕ್ಕಿದೆ..ಕೆಚ್ಚೆದೆಯಿಂದ ಹೋರಾಡಿದವರಿಗೆ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಟ್ವೀಟ್ ಮಾಡಿದೆ.

ಇನ್ನು ನಟಿ ಕಂಗನಾರ ಅದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ ಎಂಬ ದೇಶದ್ರೋಹ ಹೇಳಿಕೆ ಹಿನ್ನೆಲೆ ಆಕೆಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹಿಂಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಒತ್ತಾಯಿಸಿದ್ದಾರೆ.

ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು “ಪ್ರಧಾನಿ ಅವರು ತಮ್ಮ ಮೌನವನ್ನು ಮುರಿಯಬೇಕು. ಅವರು ನಟಿ ಕಂಗನಾ ರಣಾವತ್ ಅವರ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ದೇಶಕ್ಕೆ ತಿಳಿಸಬೇಕು. ಒಪ್ಪಿಕೊಳ್ಳೂವುದಿಲ್ಲ ಎಂದರೆ ಅಂತಹವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಇತ್ತೀಚೆಗೆ ಕಂಗನಾ ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ದೇಶದ ಕಾನೂನು, ಭಾರತದ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ಇಂತಹ ವ್ಯಕ್ತಿ ಪದ್ಮಶ್ರೀಯಂತಹ ಶ್ರೇಷ್ಠ ಪ್ರಶಸ್ತಿಗೆ ಅರ್ಹರಲ್ಲ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಬರೆದಿದ್ದಾರೆ.

ಆಮ್ ಆದ್ಮಿ ಪಕ್ಷ(ಎಎಪಿ)ದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಪ್ರೀತಿ ಮೆನನ್, ಕಂಗನಾ ರಣಾವತ್ ನೀಡಿರುವ ದೇಶದ್ರೋಹಿ ಮತ್ತು ಪ್ರಚೋದಕ ಹೇಳಿಕೆಗಳಿಗಾಗಿ ಸೆಕ್ಷನ್ 504, 505 ಮತ್ತು 124A ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿ, “ಒಮ್ಮೆ ಮಹಾತ್ಮಾ ಗಾಂಧಿಯವರ ತ್ಯಾಗ ಮತ್ತು ತಪಸ್ಸಿಗೆ ಅವಮಾನ, ಕೆಲವೊಮ್ಮೆ ಅವರ ಕೊಲೆಗಾರನಿಗೆ ಗೌರವ. ಈಗ ಹುತಾತ್ಮ ಮಂಗಲ್ ಪಾಂಡೆಯಿಂದ ಹಿಡಿದು ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ತಿರಸ್ಕಾರ. ಇಂತಹ ಆಲೋಚನೆಯನ್ನು ನಾನು ಹುಚ್ಚುತನ ಎನ್ನಲೋ…ದೇಶದ್ರೋಹ ಎನ್ನಲೋ…” ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: 1947 ರಲ್ಲಿ ದೇಶಕ್ಕೆ ಸಿಕ್ಕಿದು ಸ್ವತಂತ್ರವಲ್ಲ ಭಿಕ್ಷೆ ಎಂಬ ಕಂಗನಾ ಹೇಳಿಕೆ: ಇದು ಹುಚ್ಚುತನವೋ..ದೇಶದ್ರೋಹವೋ- ವರುಣ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. 2020ರಲ್ಲಿನ ಪದ್ಮಶ್ರೀ ಕಂಗನಾ ಕಷ್ಟಪಟ್ಟು ಪಡೆದದ್ದೊ ಅಥವಾ, ಯಾರೋ ಕೊಟ್ಟ ಬಿಕ್ಷೆಯೊ? ಸ್ವಾತಂತ್ರಕ್ಕಾಗಿ ಹಿರಿಯರು ಪಟ್ಟ ಕಷ್ಟ ಮತ್ತು ಬಲಿದಾನ ಅರಿಯದವರು ಮತ್ತು ಕ್ಷುಲ್ಲಕವಾಗಿ ನೋಡುವ ಎಲ್ಲರೂ ಮುಂಚೂಣಿಗೆ ಬಂದಿರುವ ಕಾಲ ಇದು. ಸಮಾಜದಲ್ಲಿ ಮೂರೂ ಬಿಟ್ಟವರು ಇಂದು ಮುಖ್ಯ!

  2. Beedi Nayigu adaradde aada yogyathe irutthe. Adakinthalu keelu Abhivyakti hondiruvavaru INDIPENDENT INDIA da bagge heegeye sadaakala Mathana
    duthiruthare allave!!?

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...