Homeಮುಖಪುಟ1947 ರಲ್ಲಿ ದೇಶಕ್ಕೆ ಸಿಕ್ಕಿದು ಸ್ವತಂತ್ರವಲ್ಲ ಭಿಕ್ಷೆ ಎಂಬ ಕಂಗನಾ ಹೇಳಿಕೆ: ಇದು ಹುಚ್ಚುತನವೋ..ದೇಶದ್ರೋಹವೋ- ವರುಣ್...

1947 ರಲ್ಲಿ ದೇಶಕ್ಕೆ ಸಿಕ್ಕಿದು ಸ್ವತಂತ್ರವಲ್ಲ ಭಿಕ್ಷೆ ಎಂಬ ಕಂಗನಾ ಹೇಳಿಕೆ: ಇದು ಹುಚ್ಚುತನವೋ..ದೇಶದ್ರೋಹವೋ- ವರುಣ್ ಗಾಂಧಿ ಪ್ರಶ್ನೆ

- Advertisement -
- Advertisement -

2014 ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. 1947 ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ವಿವಾದಿತ ಹೇಳಿಕೆ ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಕಟ್ಟಾ ಬೆಂಬಲಿಗರಲ್ಲಿ ಒಬ್ಬರಾದ ನಟಿ ಕಂಗನಾ ರಣಾವತ್ ವಿರುದ್ಧ ವಾಗ್ದಾಳಿ ನಡೆಸಿರುವ ವರುಣ್ ಗಾಂಧಿ, ಇಂತಹ ಆಲೋಚನೆಯನ್ನು ನಾನು ಹುಚ್ಚುತನ ಎನ್ನಬೇಕೋ…ದೇಶದ್ರೋಹ ಎನ್ನಬೇಕೋ..? ಎಂದು ಪ್ರಶ್ನಿಸಿದ್ದಾರೆ.

ನಟಿ ಕಂಗನಾ ರಣಾವತ್ ಟೈಮ್ಸ್ ನೌ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಹಿಂದಿಯಲ್ಲಿ “ಅದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಬಂದಿದೆ” ಎಂದು ಹೇಳಿದ್ದರು. ಈ ವಿಡಿಯೋದ ಕಿರು ತುಣುಕನ್ನು ಪೋಸ್ಟ್ ಮಾಡಿರುವ ವರುಣ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಧನುಷ್, ಮನೋಜ್ ಬಾಜಪೇಯಿ, ಕಂಗನಾ ರಣಾವತ್‌ಗೆ ಅತ್ಯುತ್ತಮ ನಟ,ನಟಿಯ ಗರಿ

“ಒಮ್ಮೆ ಮಹಾತ್ಮಾ ಗಾಂಧಿಯವರ ತ್ಯಾಗ ಮತ್ತು ತಪಸ್ಸಿಗೆ ಅವಮಾನ, ಕೆಲವೊಮ್ಮೆ ಅವರ ಕೊಲೆಗಾರನಿಗೆ ಗೌರವ. ಈಗ ಹುತಾತ್ಮ ಮಂಗಲ್ ಪಾಂಡೆಯಿಂದ ಹಿಡಿದು ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ತಿರಸ್ಕಾರ. ಇಂತಹ ಆಲೋಚನೆಯನ್ನು ನಾನು ಹುಚ್ಚುತನ ಎನ್ನಲೋ…ದೇಶದ್ರೋಹ ಎನ್ನಲೋ…” ಎಂದು ಪ್ರಶ್ನಿಸಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಗುಜರಾತ್‌ ಶಾಸಕ ಜಿಗ್ನೇಶ್ ಮೇವಾನಿ, 2014 ರ ನಂತರ  ನಟಿ ಕಂಗನಾ ರಣಾವತ್ ಅವರಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರು ಅನುಭವಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

“ಆರ್ಟಿಕಲ್ 19 ರ ಮೂಲಕ ಖಾತರಿಪಡಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಬುಲ್ಶಿಟ್ ಹೇಳಿಕೆಗಳನ್ನೂ ನೀಡಲು ಅವಕಾಶ ನೀಡುತ್ತದೆ. 2014 ರ ನಂತರ ನಟಿ ಕಂಗನಾ ರಣಾವತ್ ಅವರಷ್ಟು ಆರ್ಟಿಕಲ್ 19 ಅನ್ನು ಯಾವ ಭಾರತೀಯ ಪ್ರಜೆಯೂ ಅನುಭವಿಸಿಲ್ಲ” ಎಂದು ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶ: `ಒಂದು ಜಿಲ್ಲೆ, ಒಂದು ಉತ್ಪನ್ನ’ ಕಾರ್ಯಕ್ರಮಕ್ಕೆ ಕಂಗನಾ ರಾಯಭಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...