Homeಮುಖಪುಟ67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಧನುಷ್, ಮನೋಜ್ ಬಾಜಪೇಯಿ, ಕಂಗನಾ ರಣಾವತ್‌ಗೆ ಅತ್ಯುತ್ತಮ ನಟ,ನಟಿಯ ಗರಿ

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಧನುಷ್, ಮನೋಜ್ ಬಾಜಪೇಯಿ, ಕಂಗನಾ ರಣಾವತ್‌ಗೆ ಅತ್ಯುತ್ತಮ ನಟ,ನಟಿಯ ಗರಿ

ಹಿರಿಯ ನಟ ರಜನಿಕಾಂತ್ ಅವರಿಗೆ 51 ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ.

- Advertisement -
- Advertisement -

2019 ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕಳೆದ ಮಾರ್ಚ್ 22 ರಂದು ನವದೆಹಲಿಯಲ್ಲಿ ಪ್ರಕಟಿಸಲಾಗಿತ್ತು. ಕೊರೊನಾ ಕಾರಣದಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿರಲಿಲ್ಲ. ಇಂದು (ಅ.25) ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.

ಕಳೆದ ವರ್ಷ ಅಸಹಜ ಸಾವಿಗೀಡಾದ ನಟ ಸುಶಾಂತ್ ಸಿಂಗ್ ರಜ‌ಪೂತ್ ಅಭಿನಯದ ಚಿಚೋರೆ ಚಲನಚಿತ್ರ ಅತ್ಯುತ್ತಮ ಹಿಂದಿ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಕನ್ನಡದ ಮನೋಜ್ ಕುಮಾರ್ ನಿರ್ದೇಶನದ ಅಕ್ಷಿ ಕನ್ನಡದ ಉತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ತಮಿಳು ಚಿತ್ರ ಪ್ರಶಸ್ತಿಯನ್ನು ಅಸುರನ್ ಪಡೆದಿದೆ.

ಅಸುರನ್ ತಮಿಳು ಚಿತ್ರದ ನಟನೆಗಾಗಿ ಧನುಷ್ ಮತ್ತು ಭೋಂಸ್ಲೆ ಚಿತ್ರಕ್ಕಾಗಿ ನಟ ಮನೋಜ್ ಬಾಜಪೇಯಿ ಉತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮಣಿಕರ್ಣಿಕಾ ಮತ್ತು ಪಂಗಾ ಚಿತ್ರಗಳ ಅಭಿನಯಕ್ಕಾಗಿ ಅತ್ಯತ್ತಮ ನಟಿ ಪ್ರಶಸ್ತಿಯನ್ನು ಕಂಗನಾ ರಣಾವತ್ ಪಡೆದುಕೊಂಡಿದ್ದಾರೆ.

ಸೂಪರ್ ಡಿಲಕ್ಸ್ ಚಿತ್ರದ ಅಭಿನಯಕ್ಕಾಗಿ ವಿಜಯ್ ಸೇತುಪತಿ ಅತ್ಯುತ್ತಮ ಪೋಷಕ ನಟ ಮತ್ತು ಪಲ್ಲವಿ ಜೋಶಿ ದಿ ತಾಷ್ಕೆಂಟ್ ಫೈಲ್ಸ್ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ. ಮಲಯಾಳಂ ಭಾಷೆಯ Marakkar Arabikadalinte Simham ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. 

ಇದನ್ನೂ ಓದಿ: ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ‘ಗ್ರೇಟ್‌ ಇಂಡಿಯನ್ ಕಿಚನ್‌’ ಅತ್ಯುತ್ತಮ ಸಿನಿಮಾ

ಸಿಕ್ಕಿಂ ರಾಜ್ಯವನ್ನು ಅನ್ನು ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯವೆಂದು ಘೋಷಿಸಲಾಗಿದೆ. ನೇತಾಜಿ ಸುಭಾಷ್ ಬೋಸ್ ಆಧಾರಿತ ಗುಮ್ನಾಮಿ ಅತ್ಯುತ್ತಮ ಬಂಗಾಳಿ ಚಲನಚಿತ್ರ ಮತ್ತು ಅತ್ಯುತ್ತಮ ಚಿತ್ರಕಥೆಯನ್ನು ಗೆದ್ದಿದ್ದಾರೆ. ಈ ವರ್ಷ ಭಾರತದಿಂದ ಆಸ್ಕರ್ ಪ್ರವೇಶ ಪಡೆದಿದ್ದ ಜಲ್ಲಿಕಟ್ಟು ಅತ್ಯುತ್ತಮ ಛಾಯಾಗ್ರಹಣ ಗೌರವಕ್ಕೆ ಪಾತ್ರವಾಗಿದೆ.

ಪ್ರಶಸ್ತಿ ಪಟ್ಟಿ ಹೀಗಿದೆ.

ಅತ್ಯುತ್ತಮ ಚಲನಚಿತ್ರ: Marakkar Arabikadalinte Simham (ಮಲಯಾಳಂ)

ಅತ್ಯುತ್ತಮ ನಿರ್ದೇಶನ: ಬಹಟ್ಟರ್ ಹುರೈನ್

ಅತ್ಯುತ್ತಮ ನಟಿ: ಕಂಗನಾ ರಾಣಾವತ್ (ಮಣಿಕರ್ಣಿಕಾ, ಪಂಗಾ)

ಅತ್ಯುತ್ತಮ ನಟ: ಮನೋಜ್ ಬಾಜಪೇಯಿ (ಭೋಂಸ್ಲೆ) ಮತ್ತು ಧನುಷ್ ( ಅಸುರನ್)

ಅತ್ಯುತ್ತಮ ಪೋಷಕ ನಟಿ:  ಪಲ್ಲವಿ ಜೋಶಿ (ದಿ ತಾಷ್ಕೆಂಟ್ ಫೈಲ್ಸ್)

ಅತ್ಯುತ್ತಮ ಪೋಷಕ ನಟ: ವಿಜಯ ಸೇತುಪತಿ (ಸೂಪರ್ ಡಿಲಕ್ಸ್)

ಅತ್ಯುತ್ತಮ ಮಕ್ಕಳ ಚಿತ್ರ: ಕಸ್ತೂರಿ (ಹಿಂದಿ)

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ: ಹೆಲೆನ್ (ಮಲಯಾಳಂ)

ವಿಶೇಷವಾಗಿ ಉಲ್ಲೇಖಿತ ಸಿನಿಮಾಗಳು: ಬಿರಿಯಾನಿ (ಮಲಯಾಳಂ), ಜೊನಕಿ ಪೊರುವಾ (ಅಸ್ಸಾಮೀಸ್), ಲತಾ ಭಗವಾನ್ ಕರೇ (ಮರಾಠಿ), ಪಿಕಾಸೊ (ಮರಾಠಿ)

ಅತ್ಯುತ್ತಮ ತುಳು ಚಿತ್ರ: ಪಿಂಗರಾ

ಅತ್ಯುತ್ತಮ ಪಾನಿಯಾ ಚಿತ್ರ: ಕೆಂಜೀರಾ

ಅತ್ಯುತ್ತಮ ಮಿಶಿಂಗ್ ಚಿತ್ರ: ಅನು ರುವಾಡ್

ಅತ್ಯುತ್ತಮ ಖಾಸಿ ಚಲನಚಿತ್ರ: Lewduh

ಅತ್ಯುತ್ತಮ ಹರಿಯಾಣಿ ಚಿತ್ರ: ಚೋರಿಯನ್ ಚೋರೊನ್ ಸೆ ಕಾಮ್ ನಹಿ ಹೋತಿ

ಅತ್ಯುತ್ತಮ ಛತ್ತೀಸ್‌ಗಢ ಚಲನಚಿತ್ರ: ಭೂಲನ್ ದಿ ಮೇಜ್

ಅತ್ಯುತ್ತಮ ತೆಲುಗು ಚಲನಚಿತ್ರ: ಜರ್ಸಿ

ಅತ್ಯುತ್ತಮ ತಮಿಳು ಚಿತ್ರ: ಅಸುರನ್

ಅತ್ಯುತ್ತಮ ಪಂಜಾಬಿ ಚಲನಚಿತ್ರ: ರಬ್ ಡಾ ರೇಡಿಯೋ 2

ಅತ್ಯುತ್ತಮ ಒಡಿಯಾ ಚಿತ್ರ: ಸಲಾ ಬುಧರ್ ಬದ್ಲಾ ಮತ್ತು ಕಲಿರಾ ಅತಿತಾ

ಅತ್ಯುತ್ತಮ ಮಣಿಪುರಿ ಚಿತ್ರ: ಈಗಿ ಕೋನಾ

ಅತ್ಯುತ್ತಮ ಮಲಯಾಳಂ ಚಿತ್ರ: ಕಳ್ಳಾ ನೋಟಂ

ಅತ್ಯುತ್ತಮ ಮರಾಠಿ ಚಿತ್ರ: ಬಾರ್ಡೋ

ಅತ್ಯುತ್ತಮ ಕೊಂಕಣಿ ಚಲನಚಿತ್ರ: ಕಾಜ್ರೊ

ಅತ್ಯುತ್ತಮ ಕನ್ನಡ ಚಿತ್ರ: ಅಕ್ಷಿ

ಅತ್ಯುತ್ತಮ ಹಿಂದಿ ಚಲನಚಿತ್ರ: ಚಿಚೋರೆ

ಅತ್ಯುತ್ತಮ ಬಂಗಾಳಿ ಚಲನಚಿತ್ರ: ಗುಮ್ನಾಮಿ

ಅತ್ಯುತ್ತಮ ಅಸ್ಸಾಮೀಸ್ ಚಲನಚಿತ್ರ: ರೋನುವಾ- ಹೂ ನೆವರ್‌ ಸರೆಂಡರ್‌

ಅತ್ಯುತ್ತಮ ಸಾಹಸ: ಅವನೇ ಶ್ರೀಮನ್ನಾರಾಯಣ (ಕನ್ನಡ)

ಅತ್ಯುತ್ತಮ ನೃತ್ಯ ಸಂಯೋಜನೆ: ಮಹರ್ಷಿ (ತೆಲುಗು)

ಅತ್ಯುತ್ತಮ ಸ್ಪೆಷಲ್ ಎಫೆಕ್ಟ್: Marakkar Arabikadalinte Simham (ಮಲಯಾಳಂ)

ವಿಶೇಷ ತೀರ್ಪುಗಾರರ ಪ್ರಶಸ್ತಿ: Oththa Seruppu Size-7 (ತಮಿಳು)

ಅತ್ಯುತ್ತಮ ಸಾಹಿತ್ಯ: ಕೋಲಾಂಬಿ (ಮಲಯಾಳಂ)

ಅತ್ಯುತ್ತಮ ಸಂಗೀತ ನಿರ್ದೇಶನ ಹಾಡುಗಳು: ವಿಶ್ವಾಸಂ (ತಮಿಳು)

ಸಂಗೀತ ನಿರ್ದೇಶನ: Jyeshthoputro

ಅತ್ಯುತ್ತಮ ಮೇಕಪ್ : ಹೆಲೆನ್ (ಮಲಯಾಳಂ)

ಇನ್ನು ಹಿರಿಯ ನಟ ರಜನಿಕಾಂತ್ ಅವರಿಗೆ 51 ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ.


ಇದನ್ನೂ ಓದಿ: ಒಬ್ಬ ಹಿಂದೂವಾಗಿ ನನಗೆ ನಾಚಿಕೆಯಾಗುತ್ತಿದೆ!: ಮುಸ್ಲಿಮರ ಮೇಲಿನ ದಾಳಿಗೆ ನಟಿ ಸ್ವರಾ ಭಾಸ್ಕರ್‌ ಪ್ರತಿಕ್ರಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೂಡಾ ಹಗರಣ ಆರೋಪ : ಸಿಎಂ ಸಿದ್ದರಾಮಯ್ಯ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ...

0
ಆಪಾದಿತ ಮೂಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಇವರ ಸಹೋದರ ಬಿ.ಎಂ ಮಲ್ಲಿಕಾರ್ಜುನಸ್ವಾಮಿ,...