ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳದಿಂದ ಬಸವಳಿದಿರುವ ಜನ ಸಾಮಾನ್ಯರಿಗೆ ಮತ್ತೊಂದು ಆಘಾತ ಉಂಟಾಗಿದೆ. ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್ ಬೆಲೆಯನ್ನು ಆಗಸ್ಟ್ 17 ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ 25 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಇದರಿಂದ ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿ ಮತ್ತು ಮುಂಬೈನಲ್ಲಿ 859.50 ರೂಪಾಯಿ ಆಗಿದೆ. ನಿನ್ನೆಯವರೆಗೆ ಪ್ರತಿ ಸಿಲಿಂಡರ್ ಬೆಲೆ 834 ರೂಪಾಯಿ 50 ಪೈಸೆಯಾಗಿತ್ತು. ಪ್ರಸ್ತುತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ಗೆ 886 ರೂ. ಆಗಿದೆ. ಈ ಹಿಂದೆ ಜುಲೈ 1 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನ 25 ರೂಪಾಯಿ 50 ಪೈಸೆಗೆ ಹೆಚ್ಚಿಸಲಾಗಿತ್ತು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರದ ಮೂಲಕ ದೇಶದಲ್ಲಿ ಎಲ್‌ಪಿಜಿ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಮತ್ತೆ ಬರೆ: ಪ್ರತಿ ಸಿಲಿಂಡರ್‌ಗೆ 25.5 ರೂಪಾಯಿ ಹೆಚ್ಚಳ
ಸ್ಥಳೀಯ ತೆರಿಗೆಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಅಡುಗೆ ಅನಿಲ ದರಗಳು ಬದಲಾಗುತ್ತವೆ. ಸಾಮಾನ್ಯವಾಗಿ, ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದ. ಯಾವುದೇ ಬದಲಾವಣೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಜಾರಿಗೆ ತರಲಾಗುತ್ತದೆ. 2021 ವರ್ಷದ ಆರಂಭದಲ್ಲಿ ಜನವರಿಯಲ್ಲಿ, ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 694 ಇತ್ತು.
ಎಲ್‌ಪಿಜೆ ಸಿಲಿಂಡರ್ ಬೆಲೆ ಏರಿಕೆಯನ್ನು ಕಾಂಗ್ರೆಸ್ ಖಂಡಿಸಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ, ತಮ್ಮ ಟ್ವಿಟರ್‌ನಲ್ಲಿ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವನ್ನು ಟೀಕಿಸಿದ್ದಾರೆ.
1 जुलाई को रसोई गैस पर मोदी जी की सरकार ने 25 रू बढ़ाया और 17 अगस्त को फिर 25रू बढ़ा दिए।
उज्ज्वला का सपना दिखाकर, हर महीने रसोई गैस के दाम बढ़ाकर भाजपा सरकार की उगाही योजना फल-फूल रही है। pic.twitter.com/2eV3ZzLcqT
— Priyanka Gandhi Vadra (@priyankagandhi) August 18, 2021
ಕರ್ನಾಟಕ ಕಾಂಗ್ರೆಸ್ ಕೂಡ ತನ್ನ ಟ್ವಿಟರ್ ಖಾತೆಯಲ್ಲಿ, “ಅಡುಗೆ ಅನಿಲದ ಬೆಲೆ ಒಂದೇ ತಿಂಗಳ ಅಂತರದಲ್ಲಿ ಮತ್ತೊಮ್ಮೆ 25 ರೂ. ಏರಿಕೆಯಾಗಿದೆ, ಸಾವಿರದ ಗಡಿ ತಲುಪಿದೆ. ಬೆಲೆ ಏರಿಕೆಯಿಂದ LPG ಗ್ರಾಹಕರು ಕಡಿಮೆಯಾಗಿದ್ದನ್ನು ಮನಗಂಡು ಮತ್ತಷ್ಟು ಗ್ರಾಹಕರನ್ನ ಸೆಳೆದು ಕೊಡಲು “ಉಜ್ವಲ 2.0″ ಎಂದಿದ್ದರು ಅನಿಲ ಕಂಪೆನಿಗಳ ಮಾರ್ಕೆಟಿಂಗ್ ಏಜೆಂಟ್ ಪ್ರಧಾನಿ ನರೇಂದ್ರ ಮೋದಿ ಅವರು! ಇದೇನಾ ಅಚ್ಛೆ ದಿನ್ ಬಿಜೆಪಿ..?” ಎಂದು ಆಕ್ರೋಶ ಹೊರಹಾಕಿದೆ.
ಅಡುಗೆ ಅನಿಲದ ಬೆಲೆ ಒಂದೇ ತಿಂಗಳ ಅಂತರದಲ್ಲಿ ಮತ್ತೊಮ್ಮೆ ₹25 ಏರಿಕೆಯಾಗಿದೆ ಸಾವಿರದ ಗಡಿ ತಲುಪಿದೆ.
ಬೆಲೆ ಏರಿಕೆಯಿಂದ LPG ಗ್ರಾಹಕರು ಕಡಿಮೆಯಾಗಿದ್ದನ್ನು ಮನಗಂಡು ಮತ್ತಷ್ಟು ಗ್ರಾಹಕರನ್ನ ಸೆಳೆದು ಕೊಡಲು "ಉಜ್ವಲ 2.0" ಎಂದಿದ್ದರು ಅನಿಲ ಕಂಪೆನಿಗಳ ಮಾರ್ಕೆಟಿಂಗ್ ಏಜೆಂಟ್ @narendramodiಅವರು!
ಇದೇನಾ ಅಚ್ಛೆ ದಿನ್ @BJP4Karnataka? pic.twitter.com/XkFqbrG9cS
— Karnataka Congress (@INCKarnataka) August 18, 2021
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಇದೇ ಸಮಯದಲ್ಲಿ ಎಲ್‌ಪಿಜಿ ದರ ಕೂಡ ಹೆಚ್ಚಳವಾಗಿದೆ. ದೇಶದಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂಪಾಯಿ ದಾಟಿದೆ.
ಇದನ್ನೂ ಓದಿ: ಜನರಿಂದ ಲೂಟಿ ಮಾಡಿ, ಕೇವಲ ‘ಇಬ್ಬರ’ ವಿಕಾಸ: ಎಲ್‌ಪಿಜಿ ದರ ಏರಿಕೆ ವಿರುದ್ದ ರಾಹುಲ್ ಆಕ್ರೋಶ



ಜನಕ್ಕೆ ಬುದ್ಧಿ ಬರಲಿ. ಬಿಜೆಪಿ ಗೆ ಫುಲ್ ಮೆಜಾರಿಟಿ ಕೊಟ್ಟಾರ. ಅನುಭವಿಸಲಿ