Homeಮುಖಪುಟಎಲ್‌ಪಿಜಿ ಸಿಲಿಂಡರ್‌ ಬಳಕೆದಾರರಿಗೆ ಮತ್ತೆ ಬರೆ: ಪ್ರತಿ ಸಿಲಿಂಡರ್‌ಗೆ 25.5 ರೂಪಾಯಿ ಹೆಚ್ಚಳ

ಎಲ್‌ಪಿಜಿ ಸಿಲಿಂಡರ್‌ ಬಳಕೆದಾರರಿಗೆ ಮತ್ತೆ ಬರೆ: ಪ್ರತಿ ಸಿಲಿಂಡರ್‌ಗೆ 25.5 ರೂಪಾಯಿ ಹೆಚ್ಚಳ

- Advertisement -
- Advertisement -

ಕೊರೊನಾ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವ ದೇಶದ ಜನರು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಈಗಾಗಲೇ ಸಂಕಟ ಅನುಭವಿಸುತ್ತಿದ್ದಾರೆ. ಹಲವಾರು ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ 100 ರೂಪಾಯಿಗಳ ಗಡಿ  ದಾಟಿದೆ. ಇದೀಗ, ಅಡುಗೆ ಅನಿಲದ ಬೆಲೆಯನ್ನು ಮತ್ತೆ 25.5 ರೂ ಏರಿಕೆ ಮಾಡಲಾಗಿದೆ.

ಮೆಟ್ರೋ ಸಿಟಿಗಳಾದ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆ 25.5 ರೂ ಏರಿಕೆಯಾಗಿದ್ದು, ಈ ಬೆಲೆ ಜುಲೈ 01 (ಇಂದಿನಿಂದ) ರಿಂದಲೇ ಜಾರಿಗೆ ಬರಲಿದೆ. ಹೀಗಾಗಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ (14.2 ಕೆಜಿ)ಗೆ ರೂ. 834.50 ಆಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.

ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ತುಂಬಾ ತುಟ್ಟಿಯಾಗಿದ್ದು, 850.50 ರೂ ಇದೆ. ಕಳೆದ ಆರು ತಿಂಗಳಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 140 ರೂ ಗಳಷ್ಟು ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.ಉಳಿದಂತೆ, 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನೂ 76 ರೂಪಾಯಿಗೆ ಏರಿಸಲಾಗಿದೆ.

ಇದನ್ನೂ ಓದಿ: ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾದ ನವಜೋತ್ ಸಿಂಗ್ ಸಿಧು

ಪ್ರತಿ ತಿಂಗಳ ಮೊದಲ ದಿನ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಮೇ 1 ರಂದು ಅನಿಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.

ಈ ಹಿಂದೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಹೆಚ್ಚಿಸಲಾಗಿತ್ತು. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕೊನೆಯ ಪರಿಷ್ಕರಣೆ ಏಪ್ರಿಲ್‌ನಲ್ಲಿ ಮಾಡಲಾಗಿತ್ತು, ಸಿಲಿಂಡರ್‌ ದರ 10 ರೂ. ಕಡಿತಗೊಳಿಸಲಾಗಿತ್ತು.

ಏಪ್ರಿಲ್ ಆರಂಭದಲ್ಲಿ 10 ರೂಗಳನ್ನು ಕಡಿಮೆ ಮಾಡಿದ ನಂತರ, ದೇಶೀಯ ಬೆಲೆ ದೆಹಲಿಯಲ್ಲಿ ಎಲ್‌ಪಿಜಿ 809 ರೂ.ಗೆ ಏರಿದೆ. ಒಟ್ಟಾರೆ ಇತ್ತೀಚಿನ ಏರಿಕೆಯೊಂದಿಗೆ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 2021 ರಲ್ಲಿ 140.50 ರೂಪಾಯಿಗಳಾಗಿವೆ.


ಇದನ್ನೂ ಓದಿ: ಮಧ್ಯಪ್ರದೇಶ: ಒಂದೇ ಕುಟುಂಬದ ಐವರನ್ನು ಕೊಲೆಗೈದು 8 ಅಡಿ ಆಳದ ಗುಂಡಿಯಲ್ಲಿ ಹೂತಿದ್ದ ಕೊಲೆಗಡುಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಪಿಡಿಪಿ-ಬಿಜೆಪಿ ಮೈತ್ರಿಯು ಅಖಂಡವಾಗಿ ಉಳಿದಿದೆಯೇ..?’; ಮುಫ್ತಿ ವಿರುದ್ಧ ಒಮರ್ ಅಬ್ದುಲ್ಲಾ ಕಿಡಿ

0
ಅನಂತನಾಗ್ ರಜೌರಿ ಸಂಸದೀಯ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಮತ ನೀಡುವಂತೆ, ಬಿಜೆಪಿ ಪ್ರಮುಖ ನಾಯಕರೊಬ್ಬರು ತಮ್ಮ ಪಹಾರಿ ಸಮುದಾಯದ ಸದಸ್ಯರನ್ನು ಕೇಳಿದ್ದು, ಮಾಜಿ ಮುಖ್ಯಮಂತ್ರಿ...