ರಾಜ್ಯದಲ್ಲಿಯೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ನಿಯಂತ್ರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ನಾಳೆ (ಸೋಮವಾರ) ತಜ್ಞರ ಮತ್ತು ಅಧಿಕಾರಿಗಳ ಸಭೆ ಕರೆದಿದ್ದಾರೆ.
ಈ ಕುರಿತು ಮಾತನಾಡಿರುವ ಅವರು “ಸಾಂಕ್ರಾಮಿಕ ರೋಗವು ನಿಯಂತ್ರಣದಲ್ಲಿಲ್ಲ ಎಂದು ತೋರುತ್ತಿದೆ. ಜನರು ಮತ್ತೊಂದು ಲಾಕ್‌ಡೌನ್ ಬೇಡ ಎಂದು ಅಂದುಕೊಂಡಿದ್ದರೆ, ಕೊರೊನಾ ನಿಯಮಗಳನ್ನು ಪಾಲಿಸಿ ಸರ್ಕಾರದ ಜೊತೆಗೆ ಸಹಕರಿಸಬೇಕು” ಎಂದಿದ್ದಾರೆ.
ಈಗಾಗಲೇ ರಾಜ್ಯದ ಸುತ್ತಲಿನ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ರಾಜ್ಯದಲ್ಲಿಯೂ ಕೊರೊನಾ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ ಕನ್ನಡಿಗರದ್ದು, ವಿವಾದದಲ್ಲಿ ಮೋದಿ ಸೇರಿದಂತೆ ಯಾರ ಮಧ್ಯಸ್ಥಿತಿಕೆಯೂ ಬೇಡ: ಕುಮಾರಸ್ವಾಮಿ
“ನಾನು ಜನರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸರ್ಕಾರದೊಂದಿಗೆ ಕೊರೊನಾ ತಡೆಗೆ ಸಹಕಾರ ನೀಡಿ ಎಂದು. ಜನರು ಸಹಕರಿಸಿದರೆ ಲಾಕ್ ಡೌನ್ ಇಲ್ಲದೆ ನಾವು ಕೊರೊನಾ ನಿಯಂತ್ರಿಸಬಹುದು ಎಂಬ ವಿಶ್ವಾಸವಿದೆ” ಎಂದು ಬಿಎಸ್‌ವೈ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಹೊಸ ಕೊರೊನಾ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ.
ಕಳೆದ ವರ್ಷ ಮಾರ್ಚ್‌ನಲ್ಲಿ ವಿಧಿಸಲಾಗಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿವಿಧ ಹಂತಗಳಲ್ಲಿ, ಹಲವು ಮಾರ್ಗಸೂಚಿಗಳನ್ನು ಅನುಸರಿಸಲು ತಿಳಿಸಿ ಲಾಕ್‌ಡೌನ್ ಸಡಿಲಿಸಲಾಯಿತು. ಪ್ರಸ್ತುತ ರಾಜ್ಯದಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ.
ಜನವರಿ 22 ರ ನಂತರ ಮೊದಲ ಬಾರಿಗೆ ಕರ್ನಾಟಕದಲ್ಲಿ ದೈನಂದಿನ ಕೊರೊನಾ ಪ್ರಕರಣಗಳು ಕಳೆದ ಶನಿವಾರ 900 ಪ್ರಕರಣ ದಾಟಿದೆ. ಇದರಲ್ಲಿ 630 ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯಲ್ಲಿಯೇ ಕಂಡು ಬಂದಿವೆ.
ʼಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬರದಂತೆ ತೋರುತ್ತಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ನಾಳೆ ತಜ್ಞರ ಸಭೆ ಕರೆದಿದ್ದೇನೆʼ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನನಗೆ ರಕ್ಷಣೆ ಕೊಡಿ ಎಂದ ಯುವತಿ – ವೀಡಿಯೋ…



ಕೋರೋನ ನಿಯಂತ್ರಿಸಲು ಸಾಧ್ಯವಾಗದಿದ್ದಲ್ಲಿ ಯಡೀಯೂರಪ್ಪನವರೇ ಕುರ್ಚಿ ಬಿಟ್ಟು ಮನೆಗೆ ಹೋಗಿ ಅದಲ್ಲದೆ ಸಾರ್ವಜನಿಕರನ್ನು ಬೆದರಿಸುವ ನಿಮ್ಮ ನಡತೆ ನಿಮ್ಮ ಅಧಿಕಾರಿಗಳು ಮತ್ತು ನಿಮ್ಮ ಮನೆಯಯವರಲ್ಲಿ ತೋರಿಸಿದರೆ ಸಾಕು