Homeಮುಖಪುಟಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಪ್ರಕರಣ: ಸಹಾಯಕ ಪೊಲೀಸ್ ಇನ್ಸ್‌‌ಪೆಕ್ಟರ್‌‌ ಎನ್‌ಐಎ ವಶಕ್ಕೆ

ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಪ್ರಕರಣ: ಸಹಾಯಕ ಪೊಲೀಸ್ ಇನ್ಸ್‌‌ಪೆಕ್ಟರ್‌‌ ಎನ್‌ಐಎ ವಶಕ್ಕೆ

ಫೆಬ್ರವರಿ 25 ರಂದು ಮುಖೇಶ್ ಅಂಬಾನಿಯ ಮುಂಬೈಯ ಮನೆಯ ಬಳಿ ಸ್ಫೋಟಕ ತುಂಬಿದ ಕಾರನ್ನು ವಶಪಡಿಸಲಾಗಿತ್ತು.

- Advertisement -
- Advertisement -

ಮುಖೇಶ್‌ ಅಂಬಾನಿ ಮನೆಯ ಬಲಿ ಸ್ಪೋಟಕಗಳು ತುಂಬಿದ್ದ ಕಾರಿನ ಮಾಲಿಕ ಮನ್ಸುಖ್ ಹಿರೆನ್ ಸಾವಿನ ಪ್ರಕರಣದಲ್ಲಿ, ಅಪರಾಧ ಗುಪ್ತಚರ ಘಟಕದಲ್ಲಿ (ಸಿಐಯು) ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಸಚಿನ್ ವಾಜ್ ಅವರನ್ನು ಮಾರ್ಚ್ 25 ರವರೆಗೆ ಕೇಂದ್ರ ತನಿಖಾ ಏಜೆನ್ಸಿ (ಎನ್‌ಐಎ) ವಶಕ್ಕೆ ನೀಡಲಾಗಿದೆ.

ಪ್ರಕರಣದಲ್ಲಿ ಸಚಿನ್ ವಾಜ್ ಹೆಸರು ಕೇಳಿ ಬಂದ ನಂತರ, ಅವರನ್ನು ಮುಂಬೈ ಪೊಲೀಸ್ ಪ್ರಧಾನ ಕಚೇರಿಯಲ್ಲಿನ ನಾಗರಿಕ ಸೌಲಭ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. ಫೆಬ್ರವರಿ 25 ರಂದು ಮುಖೇಶ್ ಅಂಬಾನಿಯ ಮುಂಬೈಯ ಮನೆಯ ಬಳಿ ಸ್ಫೋಟಕ ತುಂಬಿದ ಕಾರನ್ನು ವಶಪಡಿಸಲಾಗಿತ್ತು.

ಸಚಿನ್ ಶನಿವಾರದಂದು ಥಾಣೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಅಂಬಾನಿ ಮನೆ ಬಳಿ ಸ್ಫೋಟಕ – ಕಾರಿನ ಮಾಲೀಕ ಶವವಾಗಿ ಪತ್ತೆ!

ಈ ವಿಷಯವು ಸಂಕ್ಷಿಪ್ತವಾಗಿ ಮಾರ್ಚ್ 12 ರಂದು ವಿಚಾರಣೆಗೆ ಬಂದಿತ್ತು. ಆದರೆ ನ್ಯಾಯಾಲಯವು ಸಚಿನ್‌ಗೆ ಯಾವುದೇ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 19 ಕ್ಕೆ ಮುಂದೂಡಿದೆ.

ಅಂಬಾನಿ ಮನೆಯ ಹೊರಗೆ ಸ್ಫೋಟಕಗಳೊಂದಿಗೆ ಪತ್ತೆಯಾಗಿದ್ದ ವಾಹನದ ಮಾಲೀಕ ಹಿರೆನ್ ಮಾರ್ಚ್ 5 ರಂದು ಥಾಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ವಾಜ್‌ ವಿರುದ್ಧ ಆರೋಪಗಳು ಕೇಳಿಬಂದ ನಂತರ, ಅಪರಾಧ ಗುಪ್ತಚರ ಘಟಕದಲ್ಲಿ (ಸಿಐಯು) ಹಿರೆನ್ ಸಾವಿನ ತನಿಖೆಯ ನೇತೃತ್ವ ವಹಿಸಿದ್ದ ಅವರನ್ನು ಮುಂಬೈ ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ನಾಗರಿಕ ಸೌಲಭ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು.

ಇದನ್ನೂ ಓದಿ: ಅಂಬಾನಿ ಮನೆ ಹತ್ತಿರ ಇದ್ದ ವಾಹನದಲ್ಲಿ ಜಿಲೆಟಿನ್ ಸ್ಫೋಟಕ ಪತ್ತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಳಿಪಟ-2: ಯೋಗರಾಜ ಭಟ್ರ ಲಾಜಿಕ್‌ಗಳನ್ನು ‘ದೇವ್ಲೆ’ ಬಲ್ಲ!

ನೀವು ಬರಹಗಾರರಾಗಿದ್ದೀರಾ? ಹೌದಾದರೆ, ನೀವು ಆರಂಭಿಕ ದಿನಗಳಲ್ಲಿ ಬರೆದ ಒಂದು ಬರಹವನ್ನು ಮತ್ತೆ ಓದಿ ನೋಡಿ. ಎಷ್ಟೊಂದು ಪೇವಲವಾಗಿ ಬರೆದಿದ್ದೇನಲ್ಲ ಅಂತ ನಿಮಗೆಯೇ ಅನಿಸಲೂಬಹುದು. ಕಾಲ ಉರುಳಿದಂತೆ, ನಮ್ಮ ಅನುಭವಗಳು ದಟ್ಟವಾದಂತೆ ಬರವಣಿಗೆಯೂ...