Homeಮುಖಪುಟಕಾರ್ಖಾನೆಗಳಿಗೆ ಕೊರೊನಾ ಜ್ವರ, ಕಾರ್ಮಿಕರಿಗೆ ಬರೆ!

ಕಾರ್ಖಾನೆಗಳಿಗೆ ಕೊರೊನಾ ಜ್ವರ, ಕಾರ್ಮಿಕರಿಗೆ ಬರೆ!

ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚುಹೆಚ್ಚಾಗಿ ಕಾರ್ಮಿಕ ಸಂಘಗಳನ್ನು ಒಳಗೊಳ್ಳಬೇಕಾದ ಸಮಯದಲ್ಲಿ ಅವುಗಳನ್ನು ದೂರಮಾಡಿ, ದಮನಕಾರಿ ಕಾನೂನುಗಳನ್ನು ತರುವ ಪ್ರಯತ್ನಗಳನ್ನು ಮೋದಿ ಸರಕಾರ ಮಾಡುತ್ತಿದೆ. ದಶಕಗಳಿಂದ ಬೆವರು- ನೆತ್ತರು ಹರಿಸಿ ಕಟ್ಟಿದ ಕಾರ್ಮಿಕ ಚಳವಳಿಯೇ ಇಂದು ಕೊರೋನ ನೆಪದಲ್ಲಿ ಅಪಾಯಕ್ಕೀಡಾಗಿದೆ

- Advertisement -
- Advertisement -

ನರೇಂದ್ರ ಮೋದಿ ಸರಕಾರವು ಕೊರೊನಾ ನೆಪದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ ಎಂಟು ಗಂಟೆಗಳಿಂದ 12 ಗಂಟೆಗಳಿಗೆ ಹೆಚ್ಚಿಸುವ ಕಾನೂನುಗಳನ್ನು ರಾಜ್ಯ ಸರಕಾರಗಳ ಮೂಲಕ ಹಿಂದಿನ ಬಾಗಿಲಿನಿಂದ ತರುತ್ತಿದೆ. ಈ ಕಾನೂನುಗಳಲ್ಲಿ ಹಲವು ದೋಷಗಳೂ, ಮಾಲಕರು ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದಾದ ರಂಧ್ರಗಳೂ ಇವೆ. ಅದಲ್ಲದೇ ಈ ಕರಾಳ ನಿರ್ಧಾರದ ಸಾಮಾಜಿಕ, ಅರೋಗ್ಯ ಮತ್ತಿತರ ವಿಷಯಗಳ ಮೇಲಾಗುವ ಪರಿಣಾಮಗಳು ಏನು? ಓದಿ…

ಮೂಲ: ಕೆ.ಆರ್. ಶ್ಯಾಮ ಸುಂದರ್

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಸರಕಾರವು ಕಾರ್ಮಿಕರ ಕೆಲಸದ ಅವಧಿಯನ್ನು- 1921ರಲ್ಲಿಯೇ ಅಂತರರಾಷ್ಟ್ರೀಯವಾಗಿ ಒಪ್ಪಿತವಾದ ದಿನಕ್ಕೆ ಎಂಟು ಗಂಟೆಗಳ ಕೆಲಸದ ನಿಯಮವನ್ನು ಬದಿಗೊತ್ತಿ, ರಾಜ್ಯ ಸರಕಾರಗಳ ಮೂಲಕ ಹಿಂಬಾಗಿಲಿನಿಂದ 12 ಗಂಟೆಗಳಿಗೆ ಏರಿಸುವುದರ ಕೆಲವು ಪರಿಣಾಮಗಳನ್ನು ಇಲ್ಲಿ ನೋಡೋಣ.

ಮೊತ್ತಮೊದಲಾಗಿ, 12 ಗಂಟೆಗಳ ಕೆಲಸದ ಅವಧಿಗೆ ನೀಡಲಾಗಿರುವ ಕಾನೂನು ಸಮರ್ಥನೆಗಳಲ್ಲಿಯೇ ಹಲವಾರು ಲೋಪದೋಷಗಳಿವೆ. ಕಾರ್ಖಾನೆಗಳ ಕಾಯಿದೆ, 1948ರ ವಿಧಿ 51ರ ಪ್ರಕಾರ ಯಾವುದೇ ಕಾರ್ಮಿಕ ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬಾರದು. ಅದರಂತೆ, ವಿಧಿ 54 ರ ಪ್ರಕಾರ ದಿನಕ್ಕೆ ಒಂಭತ್ತು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಅವಕಾಶ ನೀಡಬಾರದು. ವಿರಾಮವೂ ಸೇರಿದಂತೆ ಇಡೀ ಕಾಲಾವಧಿಯು ಹತ್ತೂವರೆ ಗಂಟೆಗಳನ್ನು ಮೀರಬಾರದು ಎಂದು ವಿಧಿ 56 ಹೇಳುತ್ತದೆ. ವಿಧಿ 51 ಮತ್ತು 54 ಅನ್ವಯಿಸುವಂತೆ ಹೆಚ್ಚುವರಿ ಕೆಲಸದ ಅವಧಿಗೆ ಸಾಮಾನ್ಯ ಅವಧಿಗಿಂತ ದುಪ್ಪಟ್ಟು ಸಂಬಳ ನೀಡಬೇಕು ಎಂದು ವಿಧಿ 59 ಹೇಳುತ್ತದೆ.

ಈಗ ರಾಜ್ಯ ಸರಕಾರಗಳು ಕೆಲಸದ ಅವಧಿಯನ್ನು ವಿಸ್ತರಿಸುವುದಕ್ಕೆ ನೀಡಿರುವ ಕಾರಣಗಳು ಅಥವಾ ಸಬೂಬುಗಳು ಕೆಲವಿವೆ. ಕೊರೊನಾ ಸಾಂಕ್ರಾಮಿಕ ಪಿಡುಗಿನ ಕಾರಣದಿಂದ “ಕಾರ್ಮಿಕರ ಕೊರತೆ” ಉಂಟಾಗಿರುವುದು! ಮಾನವ ಶಕ್ತಿಯ ಅಗತ್ಯವನ್ನು “33 ಶೇಕಡಾದಷ್ಟು” ಇಳಿಸುವುದು ಮತ್ತು ಕಾರ್ಮಿಕರ ಓಡಾಟವನ್ನು ಕಡಿಮೆ ಮಾಡುವುದು (ರಾಜಸ್ಥಾನ), ಸುರಕ್ಷತೆ ಮತ್ತು ಸಾಮಾಜಿಕ ಅಂತರ ಕಾಯುವುದಕ್ಕಾಗಿ (ಗುಜರಾತ್). ಹಿಮಾಚಲ ಪ್ರದೇಶ ತನ್ನ ನಿರ್ಧಾರಕ್ಕೆ ಯಾವುದೇ ಕಾರಣ ನೀಡಿಲ್ಲ. (ಲಕ್ಷಾಂತರ ಜನರು ಒಂದು ದಿನದ ಕೆಲಸಕ್ಕೆ ತಹತಹಿಸುತ್ತಿರುವ ಕಾಲದಲ್ಲಿ ಈ ಹೇಳಿಕೆಗಳು ದುರುದ್ದೇಶಪೂರಿತ ಎಂಬುದು ಸ್ಪಷ್ಟವಾಗುತ್ತದೆ.)

(ಯಂತ್ರದ ಬಿಡಿಭಾಗವಾದ ಮಾನವ: ಚಾರ್ಲಿ ಚಾಪ್ಲಿನ್‌ನ “ಮೋಡರ್ನ್ ಟೈಮ್ಸ್”)

ಎಲ್ಲರೂ ಗರಿಷ್ಟ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆ ಮತ್ತು ವಾರಕ್ಕೆ 72 ಗಂಟೆಗಳಿಗೆ ಏರಿಸಿರುವಾಗ, ರಾಜಸ್ಥಾನ ಮತ್ತು ಪಂಜಾಬ್ ಹೆಚ್ಚುವರಿ ಸಂಬಳ ಅಥವಾ ಓವರ್ ಟೈಮ್ (ಓಟಿ) ಬಗ್ಗೆ ಸ್ಪಷ್ಟವಾಗಿ ಮಾತಾಡಿವೆ. ಓಟಿಯು ಕಾರ್ಖಾನೆಗಳ ಕಾಯಿದೆಯ ವಿಧಿ 59ರಲ್ಲಿ ಹೇಳಿದಂತೆ ಮಾಮೂಲಿ ಸಂಬಳದ ಎರಡರಷ್ಟು ಇರುವುದೆಂದು ಪಂಜಾಬಿನ ಅಧಿಸೂಚನೆಯು ಸ್ಪಷ್ಟಪಡಿಸಿದೆ. ಆದರೆ, ಗುಜರಾತ್ ಮಾತ್ರ ಈಗಿರುವ ದರದಲ್ಲೇ ಹೆಚ್ಚುವರಿ ಸಂಬಳ ನೀಡುವುದಾಗಿ ಹೇಳಿದೆ. ಉದಾಹರಣೆಗೆ ಎಂಟು ಗಂಟೆಗಳ ಕೆಲಸಕ್ಕೆ 80 ರೂ. ಮಜೂರಿ ಆಗಿದ್ದರೆ, 12 ಗಂಟೆಗಳಿಗೆ 120 ರೂ. ನೀಡಲಾಗುವುದು. ವಾಸ್ತವವಾಗಿ ವಿಧಿ 59ರ ಪ್ರಕಾರ 160 ರೂ. ನೀಡಬೇಕು. ಅಂದರೆ, ಕಾರ್ಮಿಕರಿಗೆ 40 ರೂ. ಮೋಸ.


ಇದನ್ನೂ ಓದಿ:  12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ


ಗುಜರಾತ್ ಮತ್ತು ಹಿಮಾಚಲ ಪ್ರದೇಶ ಸರಕಾರಗಳು ವಿಧಿ 5 ಮತ್ತು ಪಂಜಾಬ್ ಸರಕಾರ ವಿಧಿ 65ರ ಅವಕಾಶಗಳನ್ನು ಬಳಸಿದ್ದರೆ, ರಾಜಸ್ಥಾನ ಸರಕಾರವು ಯಾವುದೇ ನಿಯಮಗಳನ್ನು ಉಲ್ಲೇಖಿಸದೆ, ಕಾರ್ಮಿಕರ ಭವಿಷ್ಯವನ್ನು ಮಾಲಕರ ಕೈಗೆಕೊಟ್ಟಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳು “ಸಾರ್ವಜನಿಕ ತುರ್ತುಸ್ಥಿತಿ”ಯಲ್ಲಿ ಬಳಸಬಹುದಾದ ವಿಧಿ 5ನ್ನು ಅಕಾರಣವಾಗಿ ಬಳಸಿ ಕಾರ್ಮಿಕರನ್ನು ವಂಚಿಸುತ್ತಿವೆ. ಈ ವಿಧಿಯು ಬಾಲಕಾರ್ಮಿಕರಿಗೆ ಸಂಬಂಧಪಟ್ಟ ವಿಧಿ 67ನ್ನು ಹೊರತುಪಡಿಸಿ, ಕಾರ್ಖಾನೆಗಳ ಕಾಯಿದೆಯ ಯಾವುದೇ ಅಥವಾ ಎಲ್ಲಾ ವಿಧಿಗಳಿಂದ ಕಾರ್ಖಾನೆಗಳಿಗೆ ವಿನಾಯಿತಿ ನೀಡುತ್ತದೆ.

ಈ ಕ್ರಮವು ಪ್ರಶ್ನಾರ್ಹವಾಗಿದೆ. “ಸಾರ್ವಜನಿಕ ತುರ್ತುಸ್ಥಿತಿ” ಎಂದರೆ, “ಭಾರತದ ಅಥವಾ ಅದರ ಭೂಭಾಗದ ಯಾವುದೇ ಪ್ರದೇಶವು ಯುದ್ಧ ಅಥವಾ ಬಾಹ್ಯ ಆಕ್ರಮಣ, ಇಲ್ಲವೇ ಆಂತರಿಕ ಕ್ಷೋಭೆಯಿಂದ ಬೆದರಿಕೆಗೆ ಒಳಗಾದ ಕಾರಣದಿಂದ ಉಂಟಾಗುವ ಗಂಭೀರ ತುರ್ತುಸ್ಥಿತಿ” ಎಂದು ಅರ್ಥ. (26.10.1976ರಿಂದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪರಿಚಯಿಸಲಾದ ನಿಯಮ).

ಆದರೆ, ಕೊರೊನಾ ದಿಂದ ಉಂಟಾಗಿರುವ ಕೊರೊನಾ ಬಿಕ್ಕಟ್ಟು- ಜೈವಿಕವಾದ ಆರೋಗ್ಯ ಸಮಸ್ಯೆಯ ಪರಿಣಾಮವಾಗಿದ್ದು, ಯಾವುದೇ ರೀತಿಯಲ್ಲಿ ಕಾರ್ಖಾನೆಗಳ ಕಾಯಿದೆಯ ವಿಧಿ 5ರಲ್ಲಿ ನೀಡಲಾದ “ಸಾರ್ವಜನಿಕ ತುರ್ತುಸ್ಥಿತಿ” ಅಥವಾ ಭಾರತದ ಭದ್ರತೆಗೆ ಅಪಾಯ ಒಡ್ಡಬಲ್ಲ ನೆಲೆಯಲ್ಲಿ “ಆಂತರಿಕ ಕ್ಷೋಭೆ”ಯ ವ್ಯಾಖ್ಯೆಯ ಅಡಿಯಲ್ಲಿ ಬರುವುದಿಲ್ಲ.

ದಶಕಗಳಿಂದ ಬೆವರು- ನೆತ್ತರು ಹರಿಸಿ ಕಟ್ಟಿದ ಕಾರ್ಮಿಕ ಚಳವಳಿಯೇ ಇಂದು ಕೊರೋನ ನೆಪದಲ್ಲಿ ಅಪಾಯಕ್ಕೀಡಾಗಿದೆ

ಕಾರ್ಖಾನೆಗಳ ಕಾಯಿದೆಯ ವಿಧಿ 65(2) ರಾಜ್ಯ ಸರಕಾರಗಳಿಗೆ ಶರತ್ತುಗಳಿಗೆ ಒಳಪಟ್ಟು ಕೆಲವು ವಿಧಿಗಳನ್ನು ಬದಲಿಸುವ ಅಧಿಕಾರಗಳನ್ನು ನೀಡಿದೆ. ಆದರೆ, ಯಾವುದೇ ಕಾರಣಕ್ಕೆ ಕೆಲಸದ ಅವಧಿಯು ವಾರಕ್ಕೆ 60 ಗಂಟೆಗಳನ್ನು ಮೀರಬಾರದು ಎಂಬುದು ಈ ಶರತ್ತುಗಳಲ್ಲಿ ಒಂದು. ಪಂಜಾಬ್ ಸರಕಾರ ಮಾತ್ರ ಓಟಿಗೆ ಸಂಬಂಧಿಸಿ ವಿಧಿ 69ನ್ನು ಸರಿಯಾಗಿ ಅನುಸರಿಸಿದೆ. ಆದರೆ, ಎಲ್ಲಾ ಸರಕಾಗಳು ತಮ್ಮ ಅಧಿಸೂಚನೆಗಳಲ್ಲಿ ಕೆಲಸದ ಅವಧಿಯನ್ನು 72 ಗಂಟೆಗಳಿಗೆ ಏರಿಸಿರುವುದು ಎಲ್ಲಾ ನಿಯಮಗಳನ್ನು ಮೀರಿರುವುದರಿಂದ ಪ್ರಶ್ನಾರ್ಹವಾಗಿದೆ.

 

ಇದರ ಹೊರತಾಗಿ, ಕಾರ್ಮಿಕರ ಆರೋಗ್ಯ, ಉತ್ಪಾದಕತೆ ಉಳಿದ ಕಾರ್ಮಿಕರಿಗೆ ಉದ್ಯೋಗಾವಕಾಶಗಳ ವಂಚನೆ, ಗಂಭೀರವಾದ ಕೈಗಾರಿಕಾ ಸಂಬಂಧ ಇತ್ಯಾದಿಯಾಗಿ ಹಲವಾರು ಪ್ರಶ್ನೆಗಳಿವೆ.

ಕಾರ್ಮಿಕರ ಕೊರತೆ, “ಸಾಮಾಜಿಕ ಅಂತರ” ಕಾಯ್ದುಕೊಳ್ಳುವುದರ ಅಗತ್ಯ ಇತ್ಯಾದಿಗಳನ್ನು ನೆಪವಾಗಿ ನೀಡಲಾಗುತ್ತಿದೆ. ವಾಸ್ತವವಾಗಿ ಸರಕಾರ ಆದೇಶಿಸಿರುವ ಹೆಚ್ಚುವರಿ ಸುರಕ್ಷಾ ಕ್ರಮಗಳ ವೆಚ್ಚವನ್ನು ಮಾಲಕರ ಹೆಗಲಿನಿಂದ ಇಳಿಸಿ, ಕಾರ್ಮಿಕರ ಹೆಗಲಿಗೆ ಹೊರಿಸುವ ಹುನ್ನಾರವಿದು. ಅದಕ್ಕಾಗಿ ಕಾರ್ಮಿಕರು ಎಂಟು ಗಂಟೆಯ ಸಂಬಳಕ್ಕೆ 12 ಗಂಟೆ ದುಡಿಯುವಂತೆ ಮಾಡಿ, ಕೊರೋನ ಹೆಸರಲ್ಲಿ ಕಾರ್ಮಿಕರ ರಕ್ತ ಹೀರಲಾಗುತ್ತಿದೆ.(ಹನ್ನೆರಡು ಗಂಟೆಗಳ ಕೆಲಸ: ಯಾಂತ್ರೀಕೃತ ಬದುಕಿನ ವಿಸ್ತರಣೆ)

ಕಾರ್ಮಿಕರ ಕೊರತೆ ನಿಜವಾಗಿಯೂ ಇರುವ ಕಡೆಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಮಾಲಕರು ಮತ್ತು ಕಾರ್ಮಿಕರು ಚರ್ಚಿಸಿ ಈಗಿರುವ ಕಾರ್ಖಾನೆಗಳ ಕಾಯಿದೆ ಪ್ರಕಾರವೇ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ, ಇಂತಹಾ ಯಾವುದೇ ಪರಿಗಣನೆಯನ್ನೂ ಮಾಡದೆ, ಕಾನೂನಿನಲ್ಲಿರುವ ತುರ್ತು ಅವಕಾಶಗಳನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.

ಇನ್ನೂ ಪ್ರಮುಖವಾದ ವಿಷಯವೆಂದರೆ, ಈ 12 ಗಂಟೆಗಳ ಕೆಲಸದ ಅವಧಿಯು ಕಾರ್ಮಿಕರಿಗಿರುವ ಬೇಡಿಕೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ 30 ಮಂದಿ ಕಾರ್ಮಿಕರು ಎಂಟು ಗಂಟೆಗಳ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನು 20 ಕಾರ್ಮಿಕರು 12 ಗಂಟೆಗಳ ಎರಡು ಪಾಳಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗಾದರೆ, ಉಳಿದ 10 ಮಂದಿ ಕಾರ್ಮಿಕರಿಗೆ ಕೆಲಸವಿಲ್ಲವೆಂದು ಅರ್ಥ. ಈ 30 ಕಾರ್ಮಿಕರಿಗೆ ಸರದಿಯಂತೆ ಕೆಲಸ ಹಂಚುವುದಿದ್ದರೂ ಮೂರನೇ ಒಂದರಷ್ಟು ಕಾರ್ಮಿಕರು ಮನೆಯಲ್ಲಿಯೇ ಉಳಿಯಬೇಕಾಗುತ್ತದೆ. 30 ಕಾರ್ಮಿಕರಲ್ಲಿ 20 ಮಂದಿಯ ಆಯ್ಕೆ ಮಾಡುವಾಗಲೂ ತಾರತಮ್ಯ ಮಾಡಬಹುದು, ಒತ್ತಡ ಹೇರಬಹುದು. ಇಂತಹಾ ಹಲವು ವಾಸ್ತವಿಕ ಪರಿಸ್ಥಿತಿಗಳನ್ನು ಕಲ್ಪಿಸಿಕೊಳ್ಳಬಹುದು.

ಇದರ ಹೊರತಾಗಿಯೂ ಇನ್ನೂ ಅನೇಕ ವಾಸ್ತವಿಕ ವಿಷಯಗಳಿವೆ. ಕೆಲಸದ ಅವಧಿಯ ಹೆಚ್ಚಳ ಮತ್ತು ಯಾಂತ್ರಿಕ ಕೆಲಸದಿಂದ ದೈಹಿಕ ಮತ್ತು ಮಾನಸಿಕ ದಣಿವು ಹೆಚ್ಚುತ್ತದೆ. ಇದು ಆರೋಗ್ಯದ ಮೇಲೆ ಮಾತ್ರವಲ್ಲ ಉತ್ಪಾದಕತೆರ ಮೇಲೆಯೂ ಪರಿಣಾಮ ಬೀರುತ್ತದೆ. ಕೆಲಸದ ಸಮಯದಲ್ಲಿ ತಪ್ಪುಗಳು ಮತ್ತು ಅಪಘಾತಗಳೂ ಸಂಭವಿಸಬಹುದು. ಈ ಕೆಲಸದ ಅವಧಿಗೆ ಮನೆಯಿಂದ ಕೆಲಸದ ಸ್ಥಳಕ್ಕೆ ಹೋಗಿ, ಹಿಂತಿರುಗುವ ಸಮಯ ಮತ್ತು ಜಂಜಾಟವೂ ಸೇರಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಮನೆಯ ಕೆಲಸವನ್ನೂ, ಮಕ್ಕಳ ಲಾಲನೆಪಾಲನೆಯನ್ನೂ ಮಾಡಬೇಕಾದ ಮಹಿಳೆಯರ ಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ.

ಇಷ್ಟಲ್ಲದೇ ಕಾರ್ಖಾನೆಗಳು ಪುನರಾರಂಭವಾಗದಿರುವುದು, ಕಾರ್ಮಿಕರ ಕಡಿತ, ಕೆಲಸ ಕಡಿತ, ವೇತನ ಕಡಿತ ಮುಂತಾದ ಹಲವಾರು ಸಮಸ್ಯೆಗಳು ಕಾರ್ಮಿಕರನ್ನು ಎದುರುನೋಡುತ್ತಿದ್ದು, ಆ ಕುರಿತೇ ಪ್ರತ್ಯೇಕ ಲೇಖನವೊಂದನ್ನು ಬರೆಯಬಹುದು. ಒಟ್ಟಿನಲ್ಲಿ ದಶಕಗಳಿಂದ ಬೆವರು- ನೆತ್ತರು ಹರಿಸಿ ಕಟ್ಟಿದ ಕಾರ್ಮಿಕ ಚಳವಳಿಯೇ ಇಂದು ಕೊರೋನ ನೆಪದಲ್ಲಿ ಅಪಾಯಕ್ಕೀಡಾಗಿದೆ. ಏಕೆಂದರೆ, ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚುಹೆಚ್ಚಾಗಿ ಕಾರ್ಮಿಕ ಸಂಘಗಳನ್ನು ಒಳಗೊಳ್ಳಬೇಕಾದ ಸಮಯದಲ್ಲಿ ಅವುಗಳನ್ನು ದೂರಮಾಡಿ, ದಮನಕಾರಿ ಕಾನೂನುಗಳನ್ನು ತರುವ ಪ್ರಯತ್ನಗಳನ್ನು ಮೋದಿ ಸರಕಾರ ಮಾಡುತ್ತಿದೆ.

(ಲೇಖಕ ಕೆ. ಆರ್. ಶ್ಯಾಮ್ ಸುಂದರ್ ಅವರು ಜೆಮ್ಶೆಡ್‌ಪುರದ ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕರು.)


ಇದನ್ನೂ ಓದಿ: ಕಾರ್ಮಿಕರು 12 ಗಂಟೆ ದುಡಿಯಬೇಕೆಂಬುದು ಅನ್ಯಾಯದ ನಿರ್ಧಾರ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...