ಕೊರೊನಾ ಕಾರಣದಿಂದ ರಂಗಭೂಮಿಯ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಕೆಲವು ತಂಡಗಳು ಆನ್‌ಲೈನ್ ಮೂಲಕ ತಮ್ಮ ನಾಟಕವನ್ನು ಪ್ರದರ್ಶಿಸುವ ಪ್ರಯೋಗಗಳನ್ನು ಮಾಡುತ್ತಿವೆ. ಇದೀಗ ಸಾಣೇಹಳ್ಳಿ ಪ್ರತಿಷ್ಟಿತ ರಂಗಶಿಕ್ಷಣ ಕೇಂದ್ರವು 7 ದಿನಗಳ ಆನ್‌ಲೈನ್ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಂಡಿದೆ.
ನವೆಂಬರ್ 1 ರಿಂದ 7ರವರೆಗೆ ನಡೆಯುವ ಈ ನಾಟಕೋತ್ಸವದಲ್ಲಿ ಶಿವಸಂಚಾರ-ಸಾಣೇಹಳ್ಳಿಯ ತಂಡದಿಂದ ವಚನ ಗೀತೆ, ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡು-ನುಡಿಗೆ ಸಂಬಂಧಿಸಿದ ಉಪನ್ಯಾಸಗಳು ಮತ್ತು ಪ್ರಸ್ತುತ ತಲ್ಲಣಗಳಿಗೆ ಸಂಬಂಧಿಸಿದಂತೆ ವಿಚಾರ ಮಾಲಿಕೆ ಹಾಗೂ ನಾಟಕ ಪ್ರದರ್ಶನದಂತಹ ವಿವಿಧ ಕಾರ್ಯಕ್ರಮಗಳು ಇರಲಿವೆ.


ಕೊರೊನಾ ಕಾರಣದಿಂದ ಸ್ಥಗಿತಗೊಂಡಿರುವ ಎಲ್ಲಾ ಕ್ಷೇತ್ರಗಳೂ ಇಂದಿ ಸ್ವಲ್ಪಮಟ್ಟಿಗೆ ಪುನಃಶ್ಚೇತನಗೊಳ್ಳುವತ್ತ ಸಾಗುತ್ತಿವೆ. ರಂಗಭೂಮಿಯೂ ಇದರಿಂದ ಹೊರತಾಗಿಲ್ಲ. ಆನ್‌ಲೈನ್ ಅಭಿನಯ ತರಗತಿಗಳಿಂದ ಹಿಡಿದು, ಆನ್‌ಲೈನ್ ಮೂಲಕವೇ ನಾಟಕಗಳ ಪ್ರದರ್ಶನ ನೀಡುವ ಹಂತಕ್ಕೆ ಬಂದಿದೆ.


ಇದನ್ನೂ ಓದಿ:ಪಾರಿಜಾತಾ ಬಳಗದಿಂದ ರಂಗಭೂಮಿಯ ‘ರೀಥಿಂಕಿಂಗ್’ ಅಭಿಯಾನ
ವಿಶ್ವದಾದ್ಯಂತ ಕೊರೊನಾ ವೈರಸ್ ತನ್ನ ಕಬಂದ ಬಾಹುಗಳನ್ನು ಚಾಚಿದ್ದು, ಸೋಂಕಿನ ಜೊತೆಗೆ ಜನ ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟದಿಂದ ಪಡಬಾರದ ಪಾಡು ಪಡುತ್ತಿದ್ದಾರೆ. ಇದರ ಜೊತೆಗೆ ಕೆಲಸ ಗೊತ್ತಿದ್ದರೂ ಸಹ ಕೆಲಸ ಇಲ್ಲದ ಸ್ಥಿತಿಯಲ್ಲಿ ಅನೇಕರಿದ್ದಾರೆ. ಹಾಗಾಗಿ ಕಳೆದ ಆರೇಳು ತಿಂಗಳುಗಳಿಂದ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳು ಸ್ಥಬ್ಧಗೊಂಡಿವೆ. ಇದಕ್ಕೆ ರಂಗಭೂಮಿಯೂ ಹೊರತಾಗಿಲ್ಲ. ಕೊರೊನಾ ನಿವಾರಣೆಯ ನಂತರ ರಂಗಮಂದಿರಗಳು ತೆರೆದರೂ, ಮೊದಲಿನಂತೆ ಪ್ರೇಕ್ಷಕರು ಬರುವುದು ಸಧ್ಯದ ಪರಿಸ್ಥಿತಿಯಲ್ಲಿ ಕೊಂಚ ಕಷ್ಟವೇ.


ಕಲಾವಿದರು, ರಂಗಕರ್ಮಿಗಳು ತಮ್ಮ ಕಲೆಯನ್ನೇ ನಂಬಿ ಬದುಕುತ್ತಿದ್ದಾರೆ. ಆದರೆ ಕಲಾಕ್ಷೇತ್ರಗಳನ್ನು ಮುಚ್ಚಿರುವುದರಿಂದ ಕಲಾವಿದರು ಮತ್ತು ರಂಗತಂಡಗಳು ಹೊಸ ಹೊಸ ಪ್ರಯತ್ನಗಳನ್ನು ಮಾಡುವ ತಯಾರಿಯಲ್ಲಿದ್ದಾರೆ. ಇದರ ಭಾಗವಾಗಿಯೇ ಈ ರಾಷ್ಟ್ರೀಯ ರಂಗೋತ್ಸವ.
ಇದನ್ನೂ ಓದಿ:ಬಾದಲ್ ಸರ್ಕಾರ್‌ರವರ ‘ಏವಂ ಇಂದ್ರಜಿತ್’: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ
ಕೊರೊನಾ ಕಾಲಘಟ್ಟದಲ್ಲಿ ಜನರು ಹೊಸ ಹುರುಪಿನೊಟ್ಟಿಗೆ ಹೆಜ್ಜೆಯಿಡಲು ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ ಹಾಗೂ ನಾಟಕಗಳನ್ನು ಮಿಸ್ ಮಾಡಿಕೊಳ್ಳುತ್ತಿರುವವರಿಗಾಗಿಯೇ ಇಂತಹದೊಂದು ಪ್ರಯತ್ನ ನಡೆಯುತ್ತಿದೆ. ಮೊಬೈಲ್/ಲ್ಯಾಪ್ ಟಾಪ್/ಕಂಪ್ಯೂಟರ್/ಆಂಡ್ರಾಯ್ಡ್ ಟಿವಿಯಲ್ಲಿ ಮನೆಯಲ್ಲಿಯೇ ಕುಳಿತು ನಾಟಕ ವೀಕ್ಷಿಸಬಹುದು.

ಈ ಉತ್ಸವದ ಸಂಪೂರ್ಣ ಕಾರ್ಯಕ್ರಮಗಳನ್ನು, www.shivasanchara.org ಅಥವಾ ಶಿವಸಂಚಾರ-ಸಾಣೇಹಳ್ಳಿ ಫೇಸ್‌ಬುಕ್ ಗ್ರೂಪ್ ಅಥವಾ ಮತ್ತೆ ಕಲ್ಯಾಣ ಫೆಸ್‌ಬುಕ್ ಪೇಜ್ ಅಥವಾ shiva sanchara ಯೂಟ್ಯೂಬ್ ಚಾನೆಲ್‌ನಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಸಮಕಾಲೀನ ರಾಜಕೀಯ ಸಂದರ್ಭಕ್ಕೆ ಸಿನೆಮಾ ಮತ್ತು ರಂಗಭೂಮಿಯ ಪ್ರತಿಕ್ರಿಯೆ: ಬಿ.ಸುರೇಶ್


