Homeಮುಖಪುಟಅಮೆರಿಕ ಚುನಾವಣೆ: ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ತಮಿಳುನಾಡಿನಿಂದ ಶುಭ ಹಾರೈಕೆ!

ಅಮೆರಿಕ ಚುನಾವಣೆ: ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ತಮಿಳುನಾಡಿನಿಂದ ಶುಭ ಹಾರೈಕೆ!

ಕಮಲಾ ತಮ್ಮ 5ನೇವಯಸ್ಸಿನಲ್ಲಿ ತುಲಸೇಂದ್ರಪುರಂಗೆ ಭೇಟಿ ನೀಡಿದರು ಮತ್ತು ಚೆನ್ನೈನ ಕಡಲತೀರಗಳಲ್ಲಿ ತನ್ನ ಅಜ್ಜನೊಂದಿಗೆ ಓಡಾಡಿದ್ದನ್ನ ಇತ್ತಿಚೆಗೆ ನೆನಪಿಸಿಕೊಂಡಿದ್ದರು.

- Advertisement -
- Advertisement -

ಅಮೆರಿಕ ಚುನಾವಣೆ ನವೆಂಬರ್‌ 3ರಂದು ನಡೆಯಲಿದೆ. ಅಮೆರಿಕದಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿ ಸಾಗಿದೆ. ಆದರೆ ಭಾರತದ ಇಲ್ಲೊಂದು ಹಳ್ಳಿಯಲ್ಲೂ ಅಮೆರಿಕದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ದೊಡ್ಡ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಹೌದು, ದಕ್ಷಿಣ ಭಾರತದ ತಮಿಳುನಾಡಿನ ತುಲಸೇಂದ್ರಪುರಂ ಗ್ರಾಮಕ್ಕೆ ಭೇಟಿ ನೀಡುವವರನ್ನು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಹ್ಯಾರಿಸ್ ಅವರ ಬ್ಯಾನರ್‌ಗಳು ಸ್ವಾಗತಿಸಲಿವೆ. ನವೆಂಬರ್‌ 3 ರಂದು ನಡೆಯಲಿರುವ ಚುನಾವಣೆಯಲ್ಲಿ ಹ್ಯಾರಿಸ್ ಗೆಲುವು ಸಾಧಿಸಲಿ ಎಂದು ಅಲ್ಲಿನ ಜನತೆ ಹಾರೈಸಿದ್ದಾರೆ.

ಚೆನ್ನೈ ನಗರದಿಂದ ಸುಮಾರು 320 ಕಿ.ಮೀ ದೂರದಲ್ಲಿರುವ ಈ ಗ್ರಾಮ ಕಮಲಾ ಹ್ಯಾರಿಸ್ ಅಜ್ಜ ಪಿ.ವಿ. ಗೋಪಾಲನ್ ಶತಮಾನಕ್ಕೂ ಹಿಂದೆ ಜನಿಸಿದ ಊರು. ದಕ್ಷಿಣ ಏಷ್ಯಾದ ಮೊದಲ ಯುಎಸ್ ಸೆನೆಟರ್ ಎನಿಸಿಕೊಂಡಿರುವ ಕಮಲಾ ಹ್ಯಾರಿಸ್‌ ಅವರ ಸಾಧನೆ ಬಗ್ಗೆ ತುಲಸೇಂದ್ರಪುರಂ ನಿವಾಸಿಗಳು ಹೆಮ್ಮೆಯಿಂದ ಮಾತನಾಡುತ್ತಾರೆ. ಚುನಾವಣಾ ಫಲಿತಾಂಶಕ್ಕಾಗಿ ಅಮೆರಿಕನ್ನರಂತೆ ಇಲ್ಲಿನ ಜನರು ಕಾಯುತ್ತಿದ್ದಾರೆ.

ಹತ್ತಾರು ಬ್ಯಾನರ್‌ಗಳ ಪೈಕಿ “ತುಲಸೇಂದ್ರಪುರಂನಿಂದ ಅಮೆರಿಕಕ್ಕೆ” ಎಂಬ ಘೋಷಣೆ ಕೂಡ ಒಂದು ಬ್ಯಾನರ್‌ನಲ್ಲಿ ಕಾಣಿಸಿಕೊಂಡಿದೆ. “ನಾವು, ತುಲಸೇಂದ್ರಪುರಂ ಗ್ರಾಮಸ್ಥರು, ಅಮೆರಿಕದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಚುನಾವಣಾ ಯಶಸ್ಸನ್ನು ಬಯಸುತ್ತೇವೆ. ಏಕೆಂದರೆ ಅವರ ಪೂರ್ವಜರು ತುಲಸೇಂದ್ರಪುರಂ ಮೂಲದವರು” ಎಂದು ಬರೆಯಲಾಗಿದೆ.


ಇದನ್ನೂ ಓದಿ: ಅಮೆರಿಕ ಚುನಾವಣೆ: ಅಭ್ಯರ್ಥಿಗಳ ಚರ್ಚೆಯಲ್ಲಿ ಇರಲಿದೆ ಮ್ಯೂಟ್ ಬಟನ್!


ಹ್ಯಾರಿಸ್ ಅವರ ಅಜ್ಜ ಪಿ.ವಿ. ಗೋಪಾಲನ್ ಮತ್ತು ಅವರ ಕುಟುಂಬ ಸುಮಾರು 90 ವರ್ಷಗಳ ಹಿಂದೆ ತುಲಸೇಂದ್ರಪುರಂನಿಂದ ಚೆನ್ನೈಗೆ ವಲಸೆ ಹೋಗಿದ್ದರು. ಕಮಲಾ ಹ್ಯಾರಿಸ್‌ ಅವರ ತಾಯಿ ತಮಿಳುನಾಡಿನವರಾದರೇ, ಅವರ ತಂದೆ, ಜಮೈಕಾದವರು. ಈ ಇಬ್ಬರೂ ಅಧ್ಯಯನಕ್ಕಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದರು.

ಕಮಲಾ ತಮ್ಮ 5ನೇವಯಸ್ಸಿನಲ್ಲಿ ತುಲಸೇಂದ್ರಪುರಂಗೆ ಭೇಟಿ ನೀಡಿದರು ಮತ್ತು ಚೆನ್ನೈನ ಕಡಲತೀರಗಳಲ್ಲಿ ತನ್ನ ಅಜ್ಜನೊಂದಿಗೆ ಓಡಾಡಿದ್ದನ್ನ ಇತ್ತಿಚೆಗೆ ನೆನಪಿಸಿಕೊಂಡಿದ್ದರು. ಗೋಪಾಲನ್ ಅವರ ಮನೆ ಈಗ ಗ್ರಾಮದಲ್ಲಿ ಅಸ್ತಿತ್ವದಲ್ಲಿಲ್ಲ. ಮನೆ ಇದ್ದ ಸ್ಥಳ ಪಾಳು ಬಿದ್ದಿದೆ.

ಗ್ರಾಮದ 200 ಕ್ಕೂ ಹೆಚ್ಚು ಕೃಷಿ ಕುಟುಂಬಗಳ ಮೇಲ್ವಿಚಾರಣೆಯನ್ನು ನಿರ್ವಹಿಸುವ ತುಲಸೇಂದ್ರಪುರಂ ಗ್ರಾಮ ಸಮಿತಿಯ ಮುಖ್ಯಸ್ಥ ಎಂ.ಗುರುನಾಥನ್ ಅವರ ನಿರ್ದೇಶನದ ಮೇರೆಗೆ ಈ ಬ್ಯಾನರ್‌ಗಳನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಚುನಾವಣಾ ದಿನದಂದು ಸ್ಥಳೀಯ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಯೋಜಿಸುತ್ತಿರುವುದಾಗಿಯೂ ಗುರುನಾಥನ್  ಹೇಳುತ್ತಾರೆ. “ಅವರು ಗೆಲ್ಲುತ್ತಾರೆ ಎಂದು ನಮಗೆ ವಿಶ್ವಾಸವಿದೆ. “ಆಕೆಯ ಕಾರಣದಿಂದಾಗಿ ನಮ್ಮ ಗ್ರಾಮವು ಜಾಗತಿಕ ಖ್ಯಾತಿಯನ್ನು ಪಡೆದಿದೆ. ಅವರು ನಮ್ಮ ಹೆಮ್ಮೆ” ಎಂದು ಸಂತಸ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ‘ಕಮಲಾ ಹ್ಯಾರಿಸ್ ಕಮ್ಯುನಿಸ್ಟ್‌’ – ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...