Homeಅಂಕಣಗಳುನಮ್ಮ ನ್ಯಾಯ ವ್ಯವಸ್ಥೆಯ ನ್ಯಾಯ ಮತ್ತು ಅನ್ಯಾಯ

ನಮ್ಮ ನ್ಯಾಯ ವ್ಯವಸ್ಥೆಯ ನ್ಯಾಯ ಮತ್ತು ಅನ್ಯಾಯ

- Advertisement -
- Advertisement -

 ಗೌರಿ ಲಂಕೇಶ್
14 ಜನವರಿ, 2014 (`ಕಂಡಹಾಗೆ’ ಸಂಪಾದಕೀಯದಿಂದ) |

ನಾನು ಕೋರ್ಟಿಗೆ ಹೋದಾಗಲೆಲ್ಲಾ ಅಲ್ಲಿಗೆ ಬರುವ ತರಹೇವಾರಿ ಜನರನ್ನು ಗಮನಿಸುತ್ತಾ ಕಾಲ ಕಳೆಯುತ್ತೇನೆ. ಹಲವೊಮ್ಮೆ ನನ್ನ ಕುತೂಹಲ ಕೆರಳಿಸಿದವರನ್ನು ಮಾತನಾಡಿಸುತ್ತೇನೆ. ಆಗ ವಿಚಿತ್ರ ರೀತಿಯ ಜನಗಳ, ಸಮಸ್ಯೆ ಬದುಕುಗಳ ಕಿರುನೋಟ ನನಗೆ ದೊರಕುತ್ತದೆ.
ಇತ್ತೀಚೆಗೆ ಕೋರ್ಟ್ ಹಾಲ್ ಒಂದರಲ್ಲಿ ನನ್ನ ಪಕ್ಕ ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕೂತಿದ್ದರು. ಅವರ ಮುಖದಲ್ಲಿ ಆತಂಕ, ಜಿಗುಪ್ಸೆ ತುಂಬಿತ್ತು. ಆಕೆಯೊಂದಿಗೆ ಮಾತನಾಡಿದಾಗ ಗೊತ್ತಾಗಿದ್ದು, ಅವರ ಮನೆಯನ್ನು ಅದ್ಯಾರಿಗೋ ಬಾಡಿಗೆ ಮೇಲೆ ನೀಡಿದ್ದರಂತೆ. ಆದರೆ ಬಾಡಿಗೆದಾರ ಎಂತೆಂತಹದ್ದೋ ತಕರಾರುಗಳನ್ನು ಎತ್ತಿ ಇವರ ವಿರುದ್ದ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದನಂತೆ. ಅ ವ್ಯಾಜ್ಯ ಐದಾರು ವರ್ಷ ನಡೆದು ಇನ್ನೇನು ತೀರ್ಪು ಬರಬೇಕು ಎನ್ನುವಾಗ ತಾನು ಬಾಡಿಗೆ ನೀಡುವುದಾಗಿ ಈ ಮಹಿಳೆಯ ಗಂಡನನ್ನು ಕರೆದನಂತೆ, ಆತನನ್ನು ಭೇಟಿಯಾಗಲೂ ಹೋದ ಗಂಡ ಎರಡು ದಿನವಾದರೂ ಮನೆಗೆ ಹಿಂದಿರುಗಲಿಲ್ಲ. ಬದಲಾಗಿ ಆತನ ಹೆಣ ಬೆಂಗಳೂರಿನ ಕೆರೆಯೊಂದರಲ್ಲಿ ಸಿಕ್ಕಿತು. ಬಾಡಿಗೆದಾರನೇ ಕೊಲೆ ಮಾಡಿಸಿದ್ದಾನೆಂದು ಈಕೆ ಪೊಲೀಸರಿಗೆ ದೂರು ನೀಡಿದರು. ಆದರೆ ಬಾಡಿಗೆದಾರನೊಂದಿಗೆ ಶಾಮೀಲಾದ ಪೊಲೀಸರು ಕೊಲೆಗಡುಕ ಸಿಕ್ಕಿಲ್ಲವೆಂದು ವರದಿ ಸಲ್ಲಿಸಿದರು. ಆಗ ಮಹಿಳೆ ಬಾಡಿಗೆದಾರ ಮತ್ತು ಪೊಲೀಸರ ವಿರುದ್ದ ನ್ಯಾಯಾಲಯದ ಮೊರೆಹೋದರು.
ಇದೆಲ್ಲಾ ನಡೆದು ಬರೋಬ್ಬರಿ 16 ವರ್ಷಗಳಾಗಿವೆ. ಈ ಮಧ್ಯೆ ಈಕೆಯ ಮಕ್ಕಳು ಬೆಳೆದು ನಿಂತಿದ್ದಾರೆ. ಪೊಲೀಸ್ ಅಧಿಕಾರಿ ನಿವೃತ್ತಿ ಪಡೆದು ತನ್ನ ಮನೆ ಸೇರಿದ್ದಾನೆ. ಬಾಡಿಗೆದಾರ ಇನ್ನೂ ಅದೇ ಮನೆಯಲ್ಲಿ ವಾಸಿಸುತ್ತಿದ್ದಾನೆ. ಆದರೆ ಈ ಮಹಿಳೆಯ ಅರ್ಜಿ ಅಂದು ಎಲ್ಲಿತ್ತೋ ಇವತ್ತಿಗೂ ಅಲ್ಲೇ ಇದೆ. ಆಕೆಗೆ ಬಾಡಿಗೆಯೂ ಬಂದಿಲ್ಲ. ಆಸ್ತಿಯೂ ವಾಪಸ್ಸಾಗಿಲ್ಲ, ನ್ಯಾಯವಂತೂ ಸಿಕ್ಕಿಲ್ಲ, ಈ ವ್ಯಾಜ್ಯ ಮ್ಯಾಜಿಸ್ಟ್ರೇಟರ ನಂತರ ಹೈಕೋರ್ಟಿಗೆ ಹೋಗಿ ಅಂತ್ಯಗೊಳ್ಳುವುದು ಇನ್ನು ಎಷ್ಟು ವರ್ಷಕ್ಕೋ?
ಇನ್ನೊಂದು ವಿಚಿತ್ರ ಪ್ರಕರಣ. ಸುಮಾರು 45 ಪ್ರಾಯದ ಈಕೆ ರಾಜ್ಯ ಸರ್ಕಾರಿ ನೌಕರಿಯಲ್ಲಿದ್ದಾರೆ. ಈಕೆಯ ಗಂಡ ಕೇಂದ್ರ ಸರ್ಕಾರದ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದಾನೆ. ಈಕೆ ಮದುವೆಯಾದ ಕೆಲ ವರ್ಷಗಳಲ್ಲೇ ಗಂಡ ಮತ್ತೊಬ್ಬಳನ್ನು ಮದುವೆಯಾದಾಗ ಈಕೆ ಆತನನ್ನು ತೊರೆದು ತಾನಾಯಿತು ತನ್ನ ಪಾಡಾಯಿತು ಎಂದು ಏಕಾಂಗಿ ಜೀವನ ಸಾಗಿಸಲಾರಂಭಿಸಿದಳು. ಆದರೆ ಗಂಡನ ಕಾಟ ಮುಂದುವರೆಯಿತು. ಆತ ಸರ್ಕಾರಿ ನೌಕರನಾದ್ದರಿಂದ ತನ್ನ ಎರಡನೇ ಪತ್ನಿಯ ಬಗ್ಗೆ ದಾಖಲಿಸುವಂತಿಲ್ಲ. ಆದ್ದರಿಂದ ಎರಡನೇ ಪತ್ನಿಯೊಂದಿಗೆ ಮಕ್ಕಳಾದಾಗ ಆತ ಆಸ್ಪತ್ರೆಯಲ್ಲಿ ತಾಯಿಯ ಹೆಸರು ನಮೂದಿಸಬೇಕಿದ್ದ ಜಾಗದಲ್ಲಿ ತನ್ನ ಮೊದಲನೆ ಹೆಂಡತಿಯ ಹೆಸರನ್ನೇ ದಾಖಲಿಸಿದ್ದ. ಇದು ಮೊದಲನೇ ಪತ್ನಿಗೆ ಗೊತ್ತಾದಾಗ ಆಕೆ ಕೆಂಡಾಮಂಡಲವಾದಳು. ತನ್ನ ಬದುಕನ್ನು ಹಾಳು ಮಾಡಿ ಏಕಾಂಗಿಯಾಗಿ ಸದ್ದಿಲ್ಲದೇ ತನ್ನದಲ್ಲದ ಮಕ್ಕಳನ್ನು ತನ್ನ ತಲೆಗೆ ಕಟ್ಟುತ್ತಿರುವ ನಾಳೆ ತನ್ನ ಚೂರುಪಾರು ಆಸ್ತಿಗೂ ಆತನ ಎರಡನೇ ಪತ್ನಿಯ ಮಕ್ಕಳು ತಾವೇ ವಾರಸುದಾರರು ಎಂದು ವಾದಿಸಿದರೆ ಏನು ಗತಿ ಎಂದು ಚಿಂತಿಸಿ ಗಂಡನ ವಿರುದ್ದ ನ್ಯಾಯಾಲಯದ ಮೆಟ್ಟಿಲನ್ನು ಏರಿದಳು. ಆ ಮಕ್ಕಳು ತನ್ನ ಮಕ್ಕಳಲ್ಲ, ಅವರುಗಳ ತಾಯಿ ತಾನಲ್ಲ ಎಂಬ ತೀರ್ಪು ಕೋರಿದಳು.
ಆಕೆ ಇಂಥದ್ದೊಂದು ಅರ್ಜಿ ಸಲ್ಲಿಸಿ, ಈಗ ಹನ್ನೊಂದು ವರ್ಷಗಳಾಗಿವೆ. ಆದರೆ ಅರ್ಜಿ ಮಾತ್ರ ಮುಂದಕ್ಕೆ ಹೋಗದೇ ಎಲ್ಲಿದೆಯೋ ಅಲ್ಲೇ ಇದೆ. ಇದನ್ನೆಲ್ಲಾ ಹೇಳಿದಕ್ಕೆ ಕಾರಣವಿದೆ. ಇವತ್ತು 21 ಹೈಕೋರ್ಟ್‍ಗಳ ಮುಂದೆ ಮೂವತ್ತು ಲಕ್ಷಕ್ಕಿಂತಲೂ ಹೆಚ್ಚು ಕೇಸುಗಳಿವೆ. ಇನ್ನು ಇತರೆ ನ್ಯಾಯಾಲಯಗಳ ಮುಂದೆ ಸುಮಾರು ಮೂರು ಕೋಟಿ ಕೇಸುಗಳಿವೆ. ಅಷ್ಟೇ ಅಲ್ಲ ದೇಶದಾದ್ಯಂತ ಕನಿಷ್ಠ ಮೂರು ಸಾವಿರ ಜಡ್ಜ್‍ಗಳ ಕೊರತೆ ಇದೆ. ಹೀಗಿರುವಾಗ ಈ ಲಕ್ಷಾಂತರ ಕೇಸುಗಳು ಇತ್ಯರ್ಥವಾಗುವುದೆಂದು? ಜನಸಾಮಾನ್ಯರಿಗೆ ನ್ಯಾಯ ಸಿಗುವುದೆಂದು?
ನಮ್ಮ ನ್ಯಾಯ ವ್ಯವಸ್ಥೆಯ ಒಂದು ಮಗ್ಗಲು ಇದಾದರೆ ಇನ್ನೊಂದು ಮಗ್ಗಲು ನಮ್ಮ ಜೈಲಿನಲ್ಲಿರುವ ಎರಡೂವರೆ ಲಕ್ಷ ವಿಚಾರಣಾಧೀನ ಬಂಧಿಗಳು. ಅವರಲ್ಲಿ ಬಹಳಷ್ಟು ಜನ ಐದು ವರ್ಷಕ್ಕಿಂತಲೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ.
ಒಂದು ಅಂದಾಜಿನ ಪ್ರಕಾರ ಬಹಳಷ್ಟು ವಿಚಾರಣಾಧೀನ ಖೈದಿಗಳ ವಿರುದ್ದದ ಕೇಸುಗಳು ಸಾಬೀತಾಗದೆ ಕೊನೆಗೆ ಅವರು ನಿರಪರಾಧಿಗಳು ಎಂದು ಬಿಡುಗಡೆ ಹೊಂದುತ್ತಾರೆ. ಆದರೆ ಅಷ್ಟರ ಮಟ್ಟಿಗೆ ಅವರ ಬದುಕಿನ ಹಲವಾರು ವರ್ಷಗಳು ಜೈಲಿನಲ್ಲೇ ಕಳೆದು ಹೋಗಿರುತ್ತದಲ್ಲದೇ, ಅವರು ಬಿಡುಗಡೆಗೊಂಡು ಹೊರಬರುವ ಹೊತ್ತಿಗೆ ಸಮಾಜದಲ್ಲಿನ ಅವರ ಮಾನ ಮತ್ತು ಬದುಕಿನ ಅವಕಾಶಗಳು ನಾಶವಾಗಿರುತ್ತವೆ. ಹಾಗೆಯೇ ಬಹಳಷ್ಟು ಪ್ರಕರಣಗಳಲ್ಲಿ ವಿಚಾರಣಾಧೀನ ಖೈದಿಯೇ ಆತನ ಸಂಸಾರದ ಆರ್ಥಿಕ ಸ್ತಂಭವಾಗಿರುವುದರಿಂದ ಆತ ಜೈಲಿನಲ್ಲಿರುವಾಗ ಆ ಸಂಸಾರವೇ ಛಿದ್ರಗೊಂಡಿರುತ್ತದೆ. ಇದೆಲ್ಲದರ ಅರ್ಥ ಕೊನೆಗೂ ವಿಚಾರಣಾಧೀನ ಖೈದಿಗೆ ನ್ಯಾಯ ಸಿಕ್ಕರೂ ಅನ್ಯಾಯವಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...