Homeಅಂತರಾಷ್ಟ್ರೀಯಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಪ್ರಯೋಗ: ಸ್ವಯಂಸೇವಕ ಸಾವು

ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಪ್ರಯೋಗ: ಸ್ವಯಂಸೇವಕ ಸಾವು

ಜಾನ್ಸನ್ & ಜಾನ್ಸನ್ ಕಂಪನಿ ಕೂಡ ಅಧ್ಯಯನದಲ್ಲಿ ಭಾಗವಹಿಸಿದ ಒಬ್ಬರಿಗೆ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

- Advertisement -
- Advertisement -

ಇಂಗ್ಲೆಂಡ್​ನ ಔಷಧ ತಯಾರಕ ಸಂಸ್ಥೆ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಕೊರೊನಾ ಲಸಿಕೆ ಕ್ಲಿನಿಕಲ್ ಪ್ರಯೋಗದ ವೇಳೆಯಲ್ಲಿ ಬ್ರೆಜಿಲ್‌ನ ಸ್ವಯಂ ಸೇವಕರೊಬ್ಬರು ಮೃತಪಟ್ಟಿದ್ದಾರೆ.

ಬ್ರೆಜಿಲಿಯನ್ ಆರೋಗ್ಯ ಪ್ರಾಧಿಕಾರ ಅನ್ವೀಸಾ ಬುಧವಾರ ಸಾವಿನ ಕುರಿತು ತಿಳಿಸಿದೆ. ಅಲ್ಲದೆ, ಪ್ರಕರಣದ ತನಿಖೆಯ ಮಾಹಿತಿಯನ್ನು ಅದು ಪಡೆದುಕೊಂಡಿರುವುದಾಗಿ ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಕ್ಲಿನಿಕಲ್‌ ಪ್ರಯೋಗದ‌ ವೇಳೆ ಸಂಭವಿಸಿದ ‌ಸಾವಿನ ನಂತರವೂ ಲಸಿಕೆ ಪರೀಕ್ಷೆ ಮುಂದುವರಿಯುತ್ತಿರುವುದಾಗಿ ಪ್ರಾಧಿಕಾರ ತಿಳಿಸಿದೆ.

ಪ್ರಯೋಗದಲ್ಲಿ ಭಾಗಿಯಾದವರ ಮಾಹಿತಿಯನ್ನ ಗೌಪ್ಯವಾಗಿಡಬೇಕೆಂಬ ಕಾರಣ ನೀಡಿ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಲಾಗಿದೆ. ಲಸಿಕೆಯ 3 ನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆ ನೆರವಾಗಿರುವ ಸಾವೊ ಪಾಲೊನ ಫೆಡರಲ್ ವಿಶ್ವವಿದ್ಯಾಲಯ ಸಾವಿನ ಕುರಿತು ಪ್ರತಿಕ್ರಿಯಿಸಿದ್ದು, ವಾಲಂಟಿಯರ್‌ ಬ್ರೆಜಿಲ್‌ನವರೇ. ಆದರೆ, ಆ ವ್ಯಕ್ತಿಯ ವಿವರಗಳನ್ನು ಹೇಳಲಾಗದು ಎಂದಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪ್ರಯೋಗ ನಿಲ್ಲಿಸಿದ ಅಸ್ಟ್ರಾಜೆನೆಕಾ ಕಂಪನಿ

ಕೊರೊನಾ ಸೋಂಕಿನಿಂದ ಮೃತಪಟ್ಟ ಸ್ವಯಂಸೇವಕ ಪ್ರಾಯೋಗಿಕ ಲಸಿಕೆ ಪಡೆದಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ, ಆದರೆ ತಜ್ಞರ ಪ್ರಕಾರ, ಪ್ರಾಯೋಗಿಕ ಲಸಿಕೆ ಪಡೆದ ನಂತರ ಸ್ವಯಂಸೇವಕರು ಸಾವನ್ನಪ್ಪಿದ್ದರೆ, ಕಂಪನಿಯು ಸುರಕ್ಷತೆಗೆ ಗಮನಕೊಟ್ಟು ಪ್ರಯೋಗ ನಿಲ್ಲಿಸಬಹುದೆಂದು ಹೇಳಿದ್ದಾರೆ ಎಂದು ಓ ಗ್ಲೋಬೊ ಎಂಬ ಬ್ರೆಜಿಲ್ ಪತ್ರಿಕೆ ವರದಿ ಮಾಡಿದೆ.

ಅಸ್ಟ್ರಾಜೆನೆಕಾ ಕಂಪನಿಯ ವಕ್ತಾರ ಬ್ರೆಂಡನ್ ಮೆಕ್‌ವೊಯ್, ವೈದ್ಯಕೀಯ ಗೌಪ್ಯತೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ ಅಗತ್ಯವಿರುವ ಎಲ್ಲ ಪರಿಶೀಲನಾ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆ ಎಂದು ಹೇಳಿದರು. “ಪ್ರಯೋಗದಲ್ಲಿ ಭಾಗವಹಿಸುವ ಸ್ವಯಂಸೇವಕರನ್ನು ಒಳಗೊಂಡು, ಲಸಿಕೆ-ಸಂಬಂಧಿತ ಯಾವುದೇ ತೊಡಕುಗಳ ಕಳವಳವಿಲ್ಲದೆ, ಎಲ್ಲವೂ ನಿರೀಕ್ಷೆಯಂತೆ ಮುಂದುವರಿಯುತ್ತಿದೆ” ಎಂದು ತಿಳಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ಅಧ್ಯಯನಕ್ಕೆ ಸ್ಥಳೀಯ ಪಾಲುದಾರರಾಗಿ ಸೇವೆ ಸಲ್ಲಿಸಿದ ಬ್ರೆಜಿಲ್‌ನ ವೈದ್ಯಕೀಯ ಸಂಶೋಧನಾ ಕೇಂದ್ರವಾದ ಇನ್‌ಸ್ಟಿಟ್ಯೂಟೊ ಡಿ’ಓರ್ ತನ್ನ ಹೇಳಿಕೆಯಲ್ಲಿ, ’ಸುಮಾರು 8,000 ಬ್ರೆಜಿಲಿಯನ್ನರು ಪ್ರಯೋಗದಲ್ಲಿ ಭಾಗವಹಿಸಿದ್ದಾರೆ. ಯಾವುದೇ ಸುರಕ್ಷತಾ ಸಮಸ್ಯೆಗಳು ವರದಿಯಾಗಿಲ್ಲ’ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಇಂದಿನ ಪ್ರಧಾನಿ ಮೋದಿ ಭಾಷಣಕ್ಕೆ ಡಿಸ್‌ಲೈಕ್‌ಗಳ ಸುರಿಮಳೆ: ಸಂಖ್ಯೆ ಮರೆಮಾಚಿದ ಬಿಜೆಪಿ

ಅಸ್ಟ್ರಾಜೆನೆಕಾ ಲಸಿಕೆಯನ್ನು ಖರೀದಿಸಿ, ಬ್ರೆಜಿಲ್‌ನ ಬಯೋಮೆಡಿಕಲ್ ಸಂಶೋಧನಾ ಕೇಂದ್ರ ಫಿಯೋಕ್ರೂಜ್​ನಲ್ಲಿ ಉತ್ಪಾದನೆ ಮಾಡಲು ಬ್ರೆಜಿಲ್ ಸರ್ಕಾರ ಯೋಜನೆ ಮಾಡಿದೆ. ಇನ್ನೊಂದೆಡೆ, ಚೀನಾದ ಸಿನೋವ್ಯಾಕ್ ಲಸಿಕೆಯನ್ನು ಸಾವೊ ಪಾಲೊದ ಸಂಶೋಧನಾ ಕೇಂದ್ರ ಬುಟಾಂಟನ್‌ನಲ್ಲಿ ಪರೀಕ್ಷಿಸಲಾಗುತ್ತಿದೆ.

ಪ್ರಾಯೋಗಿಕ ಲಸಿಕೆ ಪಡೆದವರಲ್ಲಿ ಕೆಲವರು ಅನಾರೋಗ್ಯದಿಂದ ಅನಾರೋಗ್ಯಕ್ಕೆ ಒಳಗಾದ ನಂತರ ಅಸ್ಟ್ರಾಜೆನೆಕಾ ತನ್ನ ಜಾಗತಿಕ ಪ್ರಯೋಗಗಳನ್ನು ನಿಲ್ಲಿಸಿದ ಕೆಲವೇ ವಾರಗಳ ನಂತರ ಈ ಸಾವು ಸಂಭವಿಸಿದೆ. ಆದರೆ, ಕೆಲವೇ ದಿನಗಳಲ್ಲಿ, ಅಸ್ಟ್ರಾಜೆನೆಕಾ ಯುನೈಟೆಡ್ ಕಿಂಗ್‌ಡಂನಲ್ಲಿ ತನ್ನ ಪ್ರಯೋಗಗಳನ್ನು ಪುನರಾರಂಭಿಸಿತ್ತು.

ಜಾನ್ಸನ್ & ಜಾನ್ಸನ್ ಕಂಪನಿ ಕೂಡ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ವಿವರಿಸಲಾಗದ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡ ಕಾರಣ ಮೂರನೇ ಮತ್ತು ಅಂತಿಮ ಹಂತದ ಕ್ಲಿನಿಕಲ್ ಪ್ರಯೋಗವನ್ನು ಅ.12ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.


ಇದನ್ನೂ ಓದಿ: ಕೊರೊನಾ ನಂತರ 1.10 ಕೋಟಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ- ಯುನೆಸ್ಕೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...