Homeಕರೋನಾ ತಲ್ಲಣ‘ಮುಂದಿನ 4 ವಾರ ಕೇರಳಕ್ಕೆ ನಿರ್ಣಾಯಕ’ - ಕೊರೊನಾ ಬಗ್ಗೆ ಎಚ್ಚರಿಕೆ ನೀಡಿದ ವೀಣಾ ಜಾರ್ಜ್‌

‘ಮುಂದಿನ 4 ವಾರ ಕೇರಳಕ್ಕೆ ನಿರ್ಣಾಯಕ’ – ಕೊರೊನಾ ಬಗ್ಗೆ ಎಚ್ಚರಿಕೆ ನೀಡಿದ ವೀಣಾ ಜಾರ್ಜ್‌

- Advertisement -
- Advertisement -

ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮುಂಬರುವ ನಾಲ್ಕು ವಾರಗಳು ರಾಜ್ಯಕ್ಕೆ ಬಹಳ ನಿರ್ಣಾಯಕವಾಗಲಿದೆ ಎಂದು ಜನರಿಗೆ ಸೋಮವಾರ ಎಚ್ಚರಿಕೆ ನೀಡಿದ್ದಾರೆ. “ಆರ್ಥಿಕ ಚಟುವಟಿಕೆಗಳು ನಡೆಯಬೇಕಾಗಿರುವುದರಿಂದ ಲಾಕ್‌ಡೌನ್ ಅನ್ನು ಸಾರ್ವಕಾಲಿಕವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ. ಜೀವನ ಮತ್ತು ಜೀವನೋಪಾಯ ಎರಡನ್ನೂ ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ವೀಣಾ ಜಾರ್ಜ್ ಹೇಳಿದ್ದಾರೆ.

‘‘ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳು ನಿರ್ವಹಣೆಯಾಗುವಂತೆ ಖಚಿತಪಡಿಸಿಕೊಳ್ಳಲು ನಾವು ಸ್ಪಷ್ಟಪಡಿಸಿದ್ದೇವೆ. ಕೆಲವು ಕಡೆ ಅವುಗಳನ್ನು ಪಾಲಿಸಲಾಗಿದೆ, ಆದರೆ ಅನೇಕ ಸ್ಥಳಗಳಲ್ಲಿ ನಾವು ಬಯಸಿದ ರೀತಿಯಲ್ಲಿ ನಡೆಯಲಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಾತಿ ಆಧಾರಿತ ಜನಗಣತಿಯಿಂದ ವಿವಿಧ ವರ್ಗದವರಿಗೆ ಕಲ್ಯಾಣ ಯೋಜನೆ ಜಾರಿಗೆ ಸಹಾಯ: ತೇಜಸ್ವಿ ಯಾದವ್

“ಡೆಲ್ಟಾ ರೂಪಾಂತರದ ಪತ್ತೆಯಾಗುತ್ತಿರುವುದು ನಮ್ಮ ಕಳವಳಕ್ಕೆ ಕಾರಣ. ಇದರ ಜೊತೆಗೆ ಮೂರನೇ ಅಲೆಯನ್ನು ಕೂಡಾ ನಿರೀಕ್ಷಿಸಲಾಗಿದೆ. ಆದ್ದರಿಂದ ಮುಂಬರುವ ವಾರಗಳು ಬಹಳ ನಿರ್ಣಾಯಕವಾಗಲಿವೆ” ಎಂದು ವೀಣಾ ಜಾರ್ಜ್ ಹೇಳಿದ್ದಾರೆ.

ಕೇರಳದಲ್ಲಿ 10 ದಿನಗಳ ಓಣಂ ಹಬ್ಬಗಳು ಭಾನುವಾರ ಮುಕ್ತಾಯಗೊಂಡಿದೆ. ಹಬ್ಬದ ವಾರ ಶುರುವಾಗುವ ಮೊದಲೇ ದೇಶದ 50% ಕೊರೊನಾ ಪ್ರಕರಣ ಕೇರಳ ರಾಜ್ಯವೊಂದರಲ್ಲೆ ವರದಿಯಾಗುತ್ತಿತ್ತು.

“ಮೂರನೇ ಅಲೆಯ ಸಾಧ್ಯತೆಯನ್ನು ಪರಿಗಣಿಸಿ, ಆರೋಗ್ಯ ಮೂಲಸೌಕರ್ಯವನ್ನು ಪರಿಷ್ಕರಿಸಲಾಗಿದೆ. ನಾವು ಪ್ರಸ್ತುತ 870 ಟನ್ ಆಕ್ಸಿಜನ್ ಸ್ಟಾಕ್ ಮತ್ತು 33 ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದ್ದೇವೆ” ಎಂದು ವೀಣಾ ಜಾರ್ಜ್ ಹೇಳಿದ್ದಾರೆ.

“ಸಾಧ್ಯವಾದಷ್ಟು ಜನರನ್ನು ಒಳಗೊಳ್ಳಲು ಲಸಿಕೆ ಅಭಿಯಾನವನ್ನು ವೇಗಗೊಳಿಸುವುದು ನಮ್ಮ ಗುರಿಯಾಗಿದೆ. ಲಸಿಕೆಗಳನ್ನು ಅನೇಕರು ತೆಗೆದುಕೊಂಡಿದ್ದರೂ, ಡೆಲ್ಟಾ ರೂಪಾಂತರವು ಬೇಗನೆ ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಎಲ್ಲರೂ ಜಾಗರೂಕರಾಗಿರಬೇಕು ಮತ್ತು ಎಲ್ಲಾ ಸುರಕ್ಷತಾ ನಿಯಮಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ” ಆರೋಗ್ಯ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಲಿಗಢ ಮುಸ್ಲಿಂ ವಿವಿ ಆವರಣದಲ್ಲಿ ಗುಂಡಿಕ್ಕಿ ಶಿಕ್ಷಕನ ಹತ್ಯೆ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು)ದ ಶಿಕ್ಷಕರೊಬ್ಬರನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ (ಡಿ.24) ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಭೀತಿ ಮೂಡಿಸಿದೆ. ಮೃತರನ್ನು ಎಎಂಯುನ ಎಬಿಕೆ ಯೂನಿಯನ್ ಹೈಸ್ಕೂಲ್‌ನ ಶಿಕ್ಷಕ...

ಮತ್ತೊಬ್ಬ ವಲಸೆ ಕಾರ್ಮಿಕನ ಗುಂಪು ಹತ್ಯೆ : ಆರು ಜನರ ಬಂಧನ

ಬುಧವಾರ (ಡಿ.24) ಒಡಿಶಾದ ಸಂಬಾಲ್‌ಪುರದಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ 30 ವರ್ಷದ ವಲಸೆ ಕಾರ್ಮಿಕರೊಬ್ಬರನ್ನು ಗುಂಪು ಹತ್ಯೆ ಮಾಡಲಾಗಿದೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್...

ಉನ್ನಾವೋ ಅತ್ಯಾಚಾರ ಪ್ರಕರಣ : ಕುಲದೀಪ್ ಸೆಂಗಾರ್ ಶಿಕ್ಷೆ ಅಮಾನತು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್‌ನ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಇಬ್ಬರು ಮಹಿಳಾ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು...

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಪಹಾಸ್ಯ : ಮಾಧ್ಯಮಗಳ ಮುಂದೆ ವ್ಯಂಗ್ಯವಾಗಿ ನಕ್ಕ ಯುಪಿ ಸಚಿವ

ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟಿಸಿದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಓಂ ಪ್ರಕಾಶ್ ರಾಜ್‌ಭರ್ ಅಪಹಾಸ್ಯ ಮಾಡಿದ್ದು, "ಆಕೆಯ ಮನೆ ಉನ್ನಾವೋದಲ್ಲಿರುವಾಗ ದೆಹಲಿಯಲ್ಲಿ ಏಕಿದ್ದಾಳೆ?"...

ಹತ್ಯೆಯ ಕೆಲವೇ ಗಂಟೆಗಳ ಮೊದಲು ನಾನು ಹಮಾಸ್ ಮುಖ್ಯಸ್ಥರನ್ನು ಭೇಟಿಯಾಗಿದ್ದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಟೆಹ್ರಾನ್‌ನಲ್ಲಿ ಹಮಾಸ್‌ನ ಮಾಜಿ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಅವರನ್ನು ಭೇಟಿಯಾಗಿದ್ದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಹಿರಂಗಪಡಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ಅಧ್ಯಕ್ಷ...

ಕರ್ನಾಟಕ ಜನಶಕ್ತಿ ಸಕ್ರಿಯ ಕಾರ್ಯಕರ್ತೆ, ಹೋರಾಟದ ಒಡನಾಡಿ ಕೆ.ಪದ್ಮಾ ಇನ್ನಿಲ್ಲ

ಹಿರಿಯ ಹೋರಾಟಗಾರ್ತಿ, ಕರ್ನಾಟಕ ಜನಶಕ್ತಿ ಸಂಘಟನೆಯ ಸಕ್ರಿಯ ಕಾರ್ಯಕರ್ತೆ ಕೆ ಪದ್ಮಾ ಅವರು ಹೋರಾಟದ ಬದುಕನ್ನು ಮುಗಿಸಿದ್ದಾರೆ. ಬುಧವಾರ ರಾತ್ರಿ, ಬೆಂಗಳೂರಿನಲ್ಲಿ ಕೊನೆಯುಸಿಳೆದಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ತಮ್ಮನ್ನು ಬಾಧಿಸುತ್ತಿದ್ದ...

ದೇಶದ ಹಲವೆಡೆ ಕ್ರೈಸ್ತರ ಮೇಲೆ ಮತಾಂಧ ಕೋಮುವಾದಿಗಳ ದಾಳಿ : ಕ್ರಿಸ್‌ಮಸ್ ಆಚರಣೆಗೆ ಅಡ್ಡಿ

ಪ್ರತಿ ವರ್ಷದಂತೆ ಈ ವರ್ಷವೂ ಡಿಸೆಂಬರ್ ತಿಂಗಳಲ್ಲಿ, ವಿಶೇಷವಾಗಿ ಡಿಸೆಂಬರ್ 25ರಂದು ಇಡೀ ಜಗತ್ತು ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿದೆ. ಏಸು ಕ್ರಿಸ್ತನ ಜನ್ಮದಿನದ ಪ್ರಯುಕ್ತ ಜನರು ಗಡಿಗಳನ್ನು ಮೀರಿ ಪರಸ್ಪರ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಈ...

ಹರಿಯಾಣ| ಕಳ್ಳತನ ಆರೋಪದ ಮೇಲೆ 12 ವರ್ಷದ ದಲಿತ ಬಾಲಕನಿಗೆ ಚಿತ್ರಹಿಂಸೆ; ಕಟ್ಟಿಹಾಕಿ ದೌರ್ಜನ್ಯ

12 ವರ್ಷದ ದಲಿತ ಬಾಲಕನ ಮೇಲೆ ಕಳ್ಳತನದ ಶಂಕೆಯಿಂದ ಹಲವಾರು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಅಕ್ರಮ ಬಂಧನದಲ್ಲಿಟ್ಟ ಆರೋಪದ ಮೇಲೆ ಕುಟುಂಬವೊಂದರ 10 ಸದಸ್ಯರ ವಿರುದ್ಧ ಹರಿಯಾಣದ ಪಲ್ವಾಲ್‌ನಲ್ಲಿ ಪೊಲೀಸರು ಪ್ರಕರಣ...

ಉನ್ನಾವೋ ಅತ್ಯಾಚಾರಿಯ ಶಿಕ್ಷೆ ಅಮಾನತು : ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋಗಲು ಮುಂದಾದ ಸಿಬಿಐ

ಉನ್ನಾವೋ ಅತ್ಯಾಚಾರ ಅಪರಾಧಿಯ ಶಿಕ್ಷೆ ಅಮಾನತಿನಲ್ಲಿಟ್ಟ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೇಂದ್ರ ತನಿಖಾ ದಳ (ಸಿಬಿಐ) ಮುಂದಾಗಿದೆ ಎಂದು ಬುಧವಾರ (ಡಿ.24) ವರದಿಯಾಗಿದೆ. ಸಿಬಿಐ ಈ ಪ್ರಕರಣದ ತನಿಖೆ...

ಚಿತ್ರದುರ್ಗ | ಹೊತ್ತಿ ಉರಿದ ಖಾಸಗಿ ಬಸ್​​​​ : 10ಕ್ಕೂ ಹೆಚ್ಚು ಜನರು ಸಜೀವ ದಹನ, ಹಲವರಿಗೆ ಗಾಯ

ಖಾಸಗಿ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದ ಪರಿಣಾಮ 10ಕ್ಕೂ ಹೆಚ್ಚು ಜನರು ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಗುರುವಾರ (ಡಿ.25) ನಡೆದಿದೆ. ರಾಷ್ಟ್ರೀಯ ಹೆದ್ದಾರಿ...